ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರ ನೇಪಾಳ ಪ್ರವಾಸ

ಕಾಠಮಂಡೂವಿನಲ್ಲಿ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರಿಗೆ ‘ವಿಶ್ವ ಜ್ಯೋತಿಷ್ಯ ಮಹಾಸಂಘದ ವತಿಯಿಂದ ‘ಧರ್ಮಾಲಂಕಾರ ಪ್ರಶಸ್ತಿ ನೀಡಿ ಸನ್ಮಾನ

‘ಜರೊ ಕಿಲೋ ಪ್ರತಿಷ್ಠಾನ ನೇಪಾಳದ ಕಾರ್ಯಕರ್ತರಿಗಾಗಿ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರಿಂದ ಹಿಂದೂ ರಾಷ್ಟ್ರದ ವಿಷಯದಲ್ಲಿ ಮಾರ್ಗದರ್ಶನ

೧. ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರನ್ನು ‘ಧರ್ಮಾಲಂಕಾರ ಪ್ರಶಸ್ತಿ ನೀಡಿ ಸನ್ಮಾನ ಮಾಡುತ್ತಿರುವುದು, ೨. ನೇಪಾಳ ಸರಕಾರದ ಪಂಚಾಂಗ ನಿಯಾಮಕ ಸಮಿತಿಯ ಅಧ್ಯಕ್ಷ ಶ್ರೀ. ರಾಮಚಂದ್ರ ಗೌತಮ
೩. ‘ವಿಶ್ವ ಜ್ಯೋತಿಷ್ಯ ಮಹಾಸಂಘದ ಅಧ್ಯಕ್ಷ ಡಾ. ಲೋಕರಾಜ ಪೌಡೇಲ ಮತ್ತು ಇತರ ಗಣ್ಯರು.

 

೧. ಸದ್ಗುರು (ಡಾ.) ಚಾರುದತ್ತ ಪಿಂಗಳೆ, ೨. ಡಾ. ನಿರ್ಮಲಮಣಿ ಅಧಿಕಾರಿ, ೩. ಶ್ರೀ. ಗುರುರಾಜ ಪ್ರಭು, ೪. ಕು. ಸಾನು ಥಾಪಾ ಮತ್ತು ‘ಜರೋ ಕಿಲೋ ಪ್ರತಿಷ್ಠಾನ ನೇಪಾಳದ ಕಾರ್ಯಕರ್ತರು

ಕಾಠಮಂಡೂ – ೧೨.೪.೨೦೧೯ ರಂದು ಇಲ್ಲಿನ ‘ಜರೊ ಕಿಲೋ ಪ್ರತಿಷ್ಠಾನ ನೇಪಾಳದ ಸಂಸ್ಥಾಪಕ ಅಧ್ಯಕ್ಷ ಡಾ. ನಿರ್ಮಲಮಣಿ ಅಧಿಕಾರಿ ತಮ್ಮ ಕಾರ್ಯಕರ್ತರಿಗಾಗಿ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರ ಮಾಗದರ್ಶನವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಡಾ. ನಿರ್ಮಲಮಣಿ ಅಧಿಕಾರಿಯವರು, “ಇಂದು ಕೆಲವು ಹಿಂದೂಗಳು ಘೋಷಣೆ ಕೂಗುತ್ತಿರುತ್ತಾರೆ. ಅದರಲ್ಲಿ ಕೆಲವರ ಮನಸ್ಸಿನಲ್ಲಿ ಸಂವೇದನೆ ಇದೆ; ಆದರೆ ಹಿಂದೂ ಧರ್ಮದ ಜ್ಞಾನವಿಲ್ಲ. ಹೇಗೆ ಗಂಗಾಮಾತೆ ಅವತರಿಸುವಾಗ ಭಗೀರಥನು ಅವಳಿಗಾಗಿ ದಾರಿ ಮಾಡಿಕೊಟ್ಟನೊ, ಹಾಗೆ ಹಿಂದೂ ರಾಷ್ಟ್ರ ಸ್ಥಾಪನೆಯಾದ ನಂತರ ಅದನ್ನು ನಡೆಸಲು ಯೋಗ್ಯವಾದ ಪೀಳಿಗೆಯ ಆವಶ್ಯಕತೆಯಿದೆ ಹಾಗೂ ಈ ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿದೆ. ಸನಾತನ ಆಶ್ರಮಕ್ಕೆ ಹೋಗುವ ಯೋಗ ಬಂದಾಗ ನಾನು ಸ್ವತಃ ಅದನ್ನು ಅನುಭವಿಸಿದ್ದೇನೆ. ಅನೇಕ ಸಂಘಟನೆಗಳು ಮತ್ತು ಜನರು ಹಿಂದುತ್ವದ ಕಾರ್ಯ ಮಾಡಲು ಬರುತ್ತಾರೆ; ಆದರೆ ಅವರ ಉದ್ದೇಶ ಶುದ್ಧವಿರುವುದಿಲ್ಲ. ಏನಾದರೂ ರಾಜಕೀಯ ಲಾಭವನ್ನು ಗಳಿಸುವುದೇ ಅವರ ಉದ್ದೇಶವಿರುವುದು ಗಮನಕ್ಕೆ ಬರುತ್ತದೆ. ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರಲ್ಲಿ ಧರ್ಮಬಾಂಧವರ ಬಗ್ಗೆ ಇರುವ ಪ್ರೇಮದಿಂದಾಗಿ ಅವರು ನಮಗೆ ಸಹಾಯ ಮಾಡಲು ಬರುತ್ತಿದ್ದಾರೆ, ಎಂಬುದನ್ನು ನಾನು ಸ್ವತಃ ಅನುಭವಿಸಿದ್ದೇನೆ, ಎಂದರು.

ಕಾಠಮಂಡೂ – ೧. ಸದ್ಗುರು (ಡಾ.) ಚಾರುದತ್ತ ಪಿಂಗಳೆ, ೨. ಡಾ. ನಿರ್ಮಲಮಣಿ ಅಧಿಕಾರಿ, ೩. ಶ್ರೀ. ಗುರುರಾಜ ಪ್ರಭು, ೪. ಕು. ಸಾನು ಥಾಪಾ ಮತ್ತು ‘ಜರೋ ಕಿಲೋ ಪ್ರತಿಷ್ಠಾನ ನೇಪಾಳದ ಕಾರ್ಯಕರ್ತರು ಹಿಂದೂ ಸಂಘಟನೆಯ ಕಾರ್ಯಕ್ಕಾಗಿ ‘ಧರ್ಮಾಲಂಕಾರ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನೇಪಾಳ ಸರಕಾರದ ಪಂಚಾಂಗ ನಿಯಾಮಕ ಸಮಿತಿಯ ಅಧ್ಯಕ್ಷ ಶ್ರೀ. ರಾಮಚಂದ್ರ ಗೌತಮ ಮತ್ತು ‘ವಿಶ್ವ ಜ್ಯೋತಿಷ್ಯ ಮಹಾಸಂಘದ ಅಧ್ಯಕ್ಷ ಡಾ. ಲೋಕರಾಜ ಪೌಡೆಲ ಇವರ ಸಹಿತ ನೇಪಾಳ, ಭಾರತ, ಜಪಾನ್ ಮತ್ತು ಅಮೇರಿಕಾದಲ್ಲಿನ ಪ್ರತಿನಿಧಿಗಳು ಉಪಸ್ಥಿತರಿದ್ದರು ಜ್ಯೋತಿಷ್ಯವು ವೇದದ ಆರನೇ ಅಂಗವಾಗಿದೆ ಹಾಗೂ ಈ ಜ್ಯೋತಿಷ್ಯಶಾಸ್ತ್ರವನ್ನು ಜಗತ್ತಿನಾದ್ಯಂತ ಹಬ್ಬಿಸುವ ಉಲ್ಲೇಖನೀಯ ಕಾರ್ಯವನ್ನು ಮಾಡುತ್ತಿರುವುದಕ್ಕಾಗಿ ಸದ್ಗುರು (ಡಾ.) ಪಿಂಗಳೆಯವರು ‘ವಿಶ್ವ ಜ್ಯೋತಿಷ್ಯ ಮಹಾಸಂಘವನ್ನು ಶ್ಲಾಘಿಸಿದರು.

Kannada Weekly | Offline reading | PDF