ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಶ್ರೀ ಸತ್ಯನಾರಾಯಣ ಪೂಜೆ

ಶ್ರೀ ಸತ್ಯನಾರಾಯಣ ಪೂಜೆ ಮಾಡುತ್ತಿರುವ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಪೌರೋಹಿತ್ಯದಲ್ಲಿ ಶ್ರೀ. ದಾಮೋದರ ವಝೆ ಗುರುಜಿ

ಪರಾತ್ಪರ ಗುರು ಡಾ. ಆಠವಲೆಯವರಿಗೆ ಆರೋಗ್ಯಪೂರ್ಣ ದೀರ್ಘಾಯುಷ್ಯ ಲಭಿಸಬೇಕು, ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಅಡಚಣೆಗಳು ದೂರವಾಗಬೇಕು ಮತ್ತು ಸನಾತನದ ಸಾಧಕರ ರಕ್ಷಣೆಯಾಗಬೇಕು, ಎಂದು ಸಂಕಲ್ಪ ಮಾಡಲಾಯಿತು

ರಾಮನಾಥಿ (ಗೋವಾ) – ಪರಾತ್ಪರ ಗುರು ಡಾ. ಆಠವಲೆಯವರಿಗೆ ಆರೋಗ್ಯಪೂರ್ಣ ದೀರ್ಘಾಯುಷ್ಯ ಲಭಿಸಬೇಕು, ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಅಡಚಣೆಗಳು ದೂರವಾಗಬೇಕು ಮತ್ತು ಸನಾತನದ ಸಾಧಕರ ರಕ್ಷಣೆಯಾಗಬೇಕು, ಇದಕ್ಕಾಗಿ ಮಯನ್ ಮಹರ್ಷಿಗಳ ಆಜ್ಞೆಗನುಸಾರ ಇಲ್ಲಿಯ ಸನಾತನದ ಆಶ್ರಮದಲ್ಲಿ ಚೈತ್ರ ಹುಣ್ಣಿಮೆಯಂದು, ಅಂದರೆ ಹನುಮಾನ ಜಯಂತಿಯಂದು (೧೯ ಏಪ್ರಿಲ್ ರಂದು) ಶ್ರೀ ಸತ್ಯನಾರಾಯಣ ಪೂಜೆ ಮಾಡಲಾಯಿತು. ಸನಾತನದ ಸದ್ಗುರು(ಸೌ.) ಬಿಂದಾ ಸಿಂಗಬಾಳ ಇವರು ಸಂಕಲ್ಪ ಮಾಡಿ ಈ ಪೂಜೆ ಮಾಡಿದರು. ಸನಾತನ ಪುರೋಹಿತ ಪಾಠಶಾಲೆಯ ಶೇ. ೬೧ ಆಧ್ಯಾತ್ಮಿಕ ಮಟ್ಟದ ಸಂಚಾಲಕರಾದ ಶ್ರೀ. ದಾಮೋದರ ವಝೆ ಗುರೂಜಿಯವರು ಪೌರೋಹಿತ್ಯ ಮಾಡಿದರು. ಈ ಮಂಗಲ ಪ್ರಸಂಗದಲ್ಲಿ ಸನಾತನದ ಸಂತರನ್ನೊಳಗೊಂಡು ಆಶ್ರಮದಲ್ಲಿನ ಸಾಧಕರು ಉಪಸ್ಥಿತರಿದ್ದರು.

ಶ್ರೀ ಸತ್ಯನಾರಾಯಣ ಪೂಜೆಯ ಸಮಯಕ್ಕೆ ಈಶ್ವರನ ಅಸ್ತಿತ್ವದ ಬಗ್ಗೆ ಬಂದ ಅನುಭವ

೧. ಪೂಜೆಯನ್ನು ಪ್ರಾರಂಭಿಸುವ ಮೊದಲು ಭಗವಾನ ಶ್ರೀ ಸತ್ಯನಾರಾಯಣನ ಪ್ರತಿಮೆಗೆ (ಚಿತ್ರಕ್ಕೆ) ಪುಷ್ಪಹಾರ ಅರ್ಪಣೆ ಮಾಡಿ ಅದರ ಮಧ್ಯಭಾಗದಲ್ಲಿ ಚೆಂಡು ಹೂವುಗಳನ್ನು ಏರಿಸಲಾಗಿತ್ತು. ಸದ್ಗುರು (ಸೌ.) ಬಿಂದಾ ಸಿಂಗಬಾಳರು ಪೂಜೆಯ ಸಂಕಲ್ಪ ಮಾಡುತ್ತಿರುವಾಗ ಈ ಹೂವು ತಾನಾಗಿಯೇ ಕೆಳಗೆ ಬಿತ್ತು. ಇದರಿಂದ ‘ಸಂಕಲ್ಪಪೂರ್ತಿ ಯಾಗುತ್ತದೆ’, ಎಂಬ ಅನುಭವ ಭಗವಾನ ಸತ್ಯನಾರಾಯಣನು ನೀಡಿರುವುದಾಗಿ ಎಲ್ಲರಿಗೆ ಅನಿಸಿತು.

೨. ಭಗವಾನ ಸತ್ಯನಾರಾಯಣನ ಷೋಡಶೋಪಚಾರ ಪೂಜೆಯ ಅಂತರ್ಗತ ಸದ್ಗುರು(ಸೌ.) ಬಿಂದಾತಾಯಿಯವರು ಮೂರ್ತಿಗೆ ಮೊಸರಿನಿಂದ ಸ್ನಾನ ಮಾಡಿಸುತ್ತಿದ್ದರು. ಆಗ ಮೂರ್ತಿಯ ಚರಣಗಳ ಸ್ಥಾನದಲ್ಲಿ ಸಂಗ್ರಹವಾಗಿದ್ದ ಮೊಸರಿಗೆ ಭಗವಾನ ವಿಷ್ಣುವಿನ ಕೈಯಲ್ಲಿನ ‘ಗದೆ’ಯಂತಹ ಆಕಾರ ಬಂದಿತ್ತು. ಇದರಿಂದ ‘ಭಗವಾನ ಶ್ರೀವಿಷ್ಣುವಿನ ಮಾರಕ ಶಕ್ತಿಯು ಸಾಧಕರ ಮೇಲಿನ ಸಂಕಟಗಳನ್ನು ದೂರ ಮಾಡುತ್ತಿದೆ’, ಎಂದು ಅನುಭವ ಸಾಧಕರಿಗೆ ಬಂತು.

೩. ಭಗವಾನ ವಿಷ್ಣುವಿಗೆ, ಅಂದರೆ ಶ್ರೀ ಸತ್ಯನಾರಾಯಣನಿಗೆ ತುಳಸಿಪತ್ರವು ಪ್ರಿಯವಿದೆ. ಆದುದರಿಂದ ಷೋಡಶೋಪಚಾರ ಪೂಜೆಯಲ್ಲಿ ಅವನಿಗೆ ೧೦೮ ಸಲ ತುಳಸಿಪತ್ರಗಳ ಅರ್ಪಣೆ ಮಾಡಲಾಯಿತು. ಸದ್ಗುರು(ಸೌ.) ಬಿಂದಾತಾಯಿಯವರು ತುಳಸಿಪತ್ರ ಅರ್ಪಣೆ ಮಾಡುವ ಮೊದಲೇ ಅವರು ಮುಡಿದ ಜಡೆಯಲ್ಲಿನ ಹೂವು ಕೆಳಗೆ ಬಿತ್ತು, ಇದು ವೈಶಿಷ್ಟ್ಯಕರವಾಗಿದೆ. ‘ಶ್ರೀ ಸತ್ಯನಾರಾಯಣನ ಪೂಜೆಗೆ ಲಕ್ಷ್ಮಿ, ಗಣೇಶ, ನವಗ್ರಹ ಮತ್ತು ಅಷ್ಟದಿಕ್ಪಾಲಕರು ಉಪಸ್ಥಿತವಾಗಿರುತ್ತಾರೆ’, ಎಂದು ಶಾಸ್ತ್ರ ಹೇಳುತ್ತದೆ. ಮಹರ್ಷಿಗಳು ಹೇಳಿದಂತೆ ಸದ್ಗುರು (ಸೌ.) ಬಿಂದಾತಾಯಿಯವರು ಶ್ರೀ ಮಹಾಲಕ್ಷ್ಮಿ ಸ್ವರೂಪವಾಗಿರುವುದರಿಂದ ದೇವಿಯು ಅವರ ಮೂಲಕ ಆಶೀರ್ವಾದ ನೀಡಿರುವುದಾಗಿ ಉಪಸ್ಥಿತ ಸಾಧಕರಿಗೆ ಅನಿಸಿತು.

೪. ಶ್ರೀ ಸತ್ಯನಾರಾಯಣ ವ್ರತದ ಕಥೆ (ಐದು ಅಧ್ಯಾಯ)ಯನ್ನು ಹೇಳಿದ ನಂತರ ಅದರ ಸಾರಾಂಶವನ್ನು ಹೇಳುವಾಗ ಶ್ರೀ. ದಾಮೋದರ ವಝೆ ಗುರೂಜಿಯವರು ‘ಎಲ್ಲ ಸಾಧಕರು ಶರಣಾಗತ ಭಾವವನ್ನು ಹೆಚ್ಚಿಸಲು ಪ್ರಯತ್ನಿಸಬೇಕು’, ಎಂದು ಹೇಳಿದರು. ಅದೇ ಸಮಯ ಆಶ್ರಮದಲ್ಲಿನ ಧ್ಯಾನಮಂದಿರದಲ್ಲಿ ಆರತಿಯ ಸಮಯದ ಶಂಖನಾದವಾಯಿತು. ಇದರಿಂದ ಶ್ರೀ ಸತ್ಯನಾರಾಯಣನೇ ಸಾಧಕರಿಗೆ ಈ ಸಂದೇಶ ನೀಡಿರುವುದಾಗಿ ಸದ್ಗುರು(ಸೌ.) ಬಿಂದಾತಾಯಿ ಸಿಂಗಬಾಳ ಅವರಿಗೆ ಅನಿಸಿತು. ಶ್ರೀ. ನಿಷಾದ ದೇಶಮುಖ ಇವರು ಪೂಜೆಯ ವೇಳೆಯಲ್ಲಿ ಸಾಧಕರಿಗೆ ದೈವೀ ಅನುಭವ ದೊರಕುತ್ತಿರುವ ಬಗ್ಗೆ ಹೇಳುತ್ತಿರುವಾಗ ಶ್ರೀ ಸತ್ಯನಾರಾಯಣ ದೇವತೆಯ ಪೂಜೆಗಾಗಿ ಮಾಡಿದ ಹೂವಿನ ರಚನೆಯಿಂದ ಒಂದು ಚೆಂಡು ಹೂವು ಕೆಳಗೆ ಬಿತ್ತು. ಇದರಿಂದ ದೇವರು ಶರಣಾಗತ ಭಾವವು ವೃದ್ಧಿಯಾಗಲು ಎಲ್ಲ ಸಾಧಕರಿಗೆ ಆಶೀರ್ವಾದ ನೀಡಿರುವುದಾಗಿ ಉಪಸ್ಥಿತರಿಗೆ ಅನಿಸಿತು.

೫. ಪೂಜೆಯ ಕೊನೆಯಲ್ಲಿ ಸದ್ಗುರು (ಸೌ.) ಬಿಂದಾತಾಯಿ ಶ್ರೀ ಸತ್ಯನಾರಾಯಣ ದೇವರಿಗೆ ನೈವೇದ್ಯ ಅರ್ಪಣೆ ಮಾಡುವಾಗ ಪೂಜೆಗಾಗಿ ಮಾಡಿದ ರಚನೆಯಲ್ಲಿಂದ ಒಂದು ಹೂವು ನೈವೇದ್ಯದ ತಟ್ಟೆಯಲ್ಲಿ ಬಿತ್ತು. ಇದರಿಂದ ಭಗವಾನ ಶ್ರೀ ಸತ್ಯನಾರಾಯಣನು ಸಾಧಕರು ಮಾಡಿದ ಪ್ರತಿಯೊಂದು ಪ್ರಾರ್ಥನೆಯನ್ನು ಸ್ವೀಕರಿಸಿರುವುದಾಗಿ ಅನುಭವ ನೀಡಿದನು ಎಂದು ಉಪಸ್ಥಿರಿಗೆ ಅನಿಸಿತು.

೬. ಪೂಜೆಯ ಕೊನೆಯಲ್ಲಿ ಸದ್ಗುರು (ಸೌ.) ಬಿಂದಾತಾಯಿಯವರು ಯಾವ ಆಸನದ ಮೇಲೆ ನಿಂತು ಆರತಿ ಮಾಡುತ್ತಿದ್ದರೊ, ಆ ಆಸನದ ಮೇಲೆ ಅವರ ಕಾಲುಗಳಿಂದ ಬಂದ ದ್ರವದಿಂದ ದೈವೀ ಆಕೃತಿಗಳು ಮೂಡಿದವು. (ಈ ಸಂದರ್ಭದಲ್ಲಿ ಶಾಸ್ತ್ರ ಮತ್ತು ಸವಿಸ್ತಾರವಾದ ಮಾಹಿತಿಯನ್ನು ಬೇಗನೆ ಪ್ರಕಟಿಸಲಾಗುವುದು.)

ಕ್ಷಣಚಿತ್ರಗಳು

ಕೇವಲ ಕಥೆ ಹೇಳದೆ ಅದಕ್ಕನುಸಾರ ಆಚರಣೆ ಮಾಡಿ ಎಲ್ಲರೆದುರು ಆದರ್ಶ ನಿರ್ಮಿಸಿದ ಸನಾತನ ಪುರೋಹಿತ ಪಾಠ ಶಾಲೆಯ ಸಂಚಾಲಕರಾದ ಶ್ರೀ. ದಾಮೋದರ ವಝೆ ಗುರೂಜಿ

‘ಸತ್ಯನಾರಾಯಣ ವ್ರತದ ಕಥೆಯಲ್ಲಿ ೫ ಅಧ್ಯಾಯಗಳು ಇರುತ್ತವೆ. ಈ ಕಥೆಯಲ್ಲಿ ನಿಷ್ಠೆಯಿಂದ ದೇವಭಕ್ತಿ ಮಾಡುವ ಮತ್ತು ಭಕ್ತಿ ಮಾಡುವಾಗ ಅದರಲ್ಲಿ ಮಾನವಿ ಸ್ವಭಾವದಿಂದ ಕೆಲವು ಕೊರತೆಗಳು ಉಳಿದಿದ್ದರೆ, ಅದಕ್ಕಾಗಿ ಭಗವಂತನಿಗೆ ಅಂತಃಕರಣದಿಂದ ಕ್ಷಮೆಯಾಚನೆ ಮಾಡುವ ಮಹತ್ವವನ್ನು ಹೇಳಲಾಗಿದೆ. ಅದಕ್ಕನುಸಾರ ಕಥೆ ಹೇಳುವಾಗ ಆಗಿರುವ ತಿಳಿದು ಅಥವಾ ತಿಳಿಯದೇ ಮಾಡಿದ ತಪ್ಪುಗಳಿಗೆ ಪುರೋಹಿತ ಶ್ರೀ. ದಾಮೋದರ ವಝೆ ಗುರೂಜಿಯವರು ಭಗವಾನ ಶ್ರೀ ಸತ್ಯನಾರಾಯಣನ ಕ್ಷಮೆ ಕೇಳಿದರು. ಕಲಿತಿರುವುದನ್ನು ತಕ್ಷಣ ಆಚರಣೆಯಲ್ಲಿ ತರುವುದು, ಇದು ಸಾಧಕತ್ವದ ಲಕ್ಷಣವಿದೆ. ಈ ಕೃತಿಯಿಂದ ಶ್ರೀ. ವಝೆ ಗುರೂಜಿಯವರು ಎಲ್ಲ ಸಾಧಕರ ಮುಂದೆ ಆದರ್ಶ ಇಟ್ಟಿದ್ದಾರೆ. ಕಥೆಯನ್ನು ಆಲಿಸುವಾಗ ಆಗಿರುವ ತಿಳಿದು ಅಥವಾ ತಿಳಿಯದೇ ಮಾಡಿದ ತಪ್ಪುಗಳ ಕುರಿತು ಉಪಸ್ಥಿತ ಸಾಧಕರು ಭಗವಾನ ಶ್ರೀ ಸತ್ಯನಾರಾಯಣನಿಗೆ ಸಾಮೂಹಿಕವಾಗಿ ಕ್ಷಮೆ ಕೋರಿದರು.’

Kannada Weekly | Offline reading | PDF