ಬಾಂಗ್ಲಾದೇಶದಲ್ಲಿ ಲೈಂಗಿಕ ಶೋಷಣೆಯ ದೂರನ್ನು ಹಿಂಪಡೆಯದ ಕಾರಣ ವಿದ್ಯಾರ್ಥಿನಿಯನ್ನು ಜೀವಂತ ಸುಟ್ಟರು

ಢಾಕಾ – ಇಲ್ಲಿಂದ ೧೬೦ ಕಿ.ಮೀ. ದೂರದಲ್ಲಿರುವ ಒರ್ವ ೧೯ ವರ್ಷ ವಯಸ್ಸಿನ ವಿದ್ಯಾರ್ಥಿನಿ ಮುಖ್ಯೋಪಧ್ಯಾಪಕರ ವಿರುದ್ಧ ಲೈಂಗಿಕ ಶೋಷಣೆಯ ದೂರು ನೀಡಿದ್ದಳು. ಈ ದೂರನ್ನು ಹಿಂಪಡೆಯದ ಕಾರಣ ಈ ಹುಡುಗಿಯನ್ನು ಜೀವಂತ ಸುಟ್ಟು ಹಾಕಿರುವ ಘಟನೆ ನಡೆದಿದೆ.

೧. ಈ ವಿದ್ಯಾರ್ಥಿನಿ ಒಂದು ಮದರಸಾದಲ್ಲಿ ಕಲಿಯುತ್ತಿದ್ದಳು. ಮಾರ್ಚ್ ೨೭ ರಂದು ಮುಖ್ಯೋಪಧ್ಯಾಪಕರು ಅವಳನ್ನು ತನ್ನ ಕ್ಯಾಬೀನ್‌ಗೆ ಕರೆದು ಅಯೋಗ್ಯ ಪದ್ಧತಿಯಲ್ಲಿ ಅವಳನ್ನು ಸ್ಪರ್ಶ ಮಾಡಲು ಪ್ರಯತ್ನಿಸಿದಾಗ ಅವಳು ಅಲ್ಲಿಂದ ಓಡಿ ಹೋದಳು. ಅವಳು ಪಾಲಕರಿಗೆ ಈ ಘಟನೆಯನ್ನು ಹೇಳಿದಾಗ ಅವರು ಪೊಲೀಸರಲ್ಲಿ ದೂರು ದಾಖಲಿಸಿದರು. ಅನಂತರ ಪೊಲೀಸರು ಮುಖ್ಯೋಪಧ್ಯಾಪಕರನ್ನು ಬಂಧಿಸಿದರು. ಆಗ ಕೆಲವರು ಪೊಲೀಸ್ ಠಾಣೆಯ ಹೊರಗಿದ್ದು ಮುಖ್ಯೋಪಧ್ಯಾಪಕರನ್ನು ಬಿಡುಗಡೆ ಮಾಡಬೇಕೆಂದು ವಿನಂತಿಸುತಿದ್ದರು.

೨. ಎಪ್ರಿಲ್ ೬ ರಂದು ಈ ವಿದ್ಯಾರ್ಥಿನಿಯನ್ನು ಇನ್ನೊಬ್ಬಳು ವಿದ್ಯಾರ್ಥಿನಿ ಸುಳ್ಳು ಹೇಳಿ ಒಂದು ಕಟ್ಟಡದ ಮೇಲ್ಚಾವಣಿಗೆ ಕರೆದುಕೊಂಡು ಹೋದಳು. ಅಲ್ಲಿ ಬುರ್ಖಾ ಧರಿಸಿರುವ ೪-೫ ಜನರು ಅವಳಿಗೆ ಮುಖ್ಯೋಪಧ್ಯಾಪಕರ ವಿರುದ್ಧದ ದೂರನ್ನು ಹಿಂಪಡೆಯಲು ಹೇಳಿದರು. ಅವಳು ನಿರಾಕರಿಸಿದಾಗ ಅವರು ಎಣ್ಣೆ ಸುರಿದು ಅವಳನ್ನು ಸುಟ್ಟು ಹಾಕಿದರು. ಅದರಲ್ಲಿ ಅವಳ ಮೇಲೆ ಚಿಕಿತ್ಸೆ ನಡೆಯುತ್ತಿರುವಾಗಲೇ ಮೃತ ಪಟ್ಟಳು.

೩. ಮೃತ್ಯುವಿನ ಮೊದಲು ಅವಳು ಪೊಲೀಸರಿಗೆ ಈ ವಿಷಯವನ್ನು ಹೇಳಿದ್ದಳು. ಅನಂತರ ೧೫ ಜನರನ್ನು ಬಂಧಿಸಲಾಯಿತು. ಇದರಲ್ಲಿ ಮುಖ್ಯೋಪಧ್ಯಾಪಕರನ್ನು ಬಿಡುಗಡೆಗೊಳಿಸಬೇಕೆಂದು ಹೇಳಿದ ವಿದ್ಯಾರ್ಥಿಗಳು ಕೂಡ ಇದ್ದಾರೆ. ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಇವರು ಪೀಡಿತ ಹುಡುಗಿಯ ಕುಟುಂಬವರನ್ನು ಭೇಟಿಯಾಗಿ ಆರೋಪಿಗೆ ಕಠಿಣ ಶಿಕ್ಷೆ ನೀಡಲಾಗುವುದು, ಎಂದು ಆಶ್ವಾಸನೆ ನೀಡಿದ್ದಾರೆ.

Kannada Weekly | Offline reading | PDF