ಸಾತ್ತ್ವಿಕ, ಸಹನಶೀಲ ವೃತ್ತಿ ಮತ್ತು ನಿರಪೇಕ್ಷ ಪ್ರೀತಿ ಮುಂತಾದ ದೈವೀ ಗುಣಗಳುಳ್ಳ ಶ್ರೀಮತಿ ಶಾಲಿನಿ ಮಾಯಿಣಕರಅಜ್ಜಿ (೯೨ ವರ್ಷ) ಸಂತಪದವಿಯಲ್ಲಿ ವಿರಾಜಮಾನ !

ಪೂ.(ಶ್ರೀಮತಿ) ಶಾಲಿನಿ ಮಾಯಿಣಕರ ಅಜ್ಜಿಯವರೊಂದಿಗೆ ಎಡದಿಂದ ಮರಿಮೊಮ್ಮಗಳು ಕು. ಅನನ್ಯಾ ಜೋಶಿ, ಮಗಳ ಸೊಸೆ ಸೌ. ದಿವ್ಯಾ ಜೋಶಿ, ಪೂ. ಅಜ್ಜಿಯವರ ಹಿರಿಯ ಮಗಳು ಸೌ. ಮೇಧಾ ಜೋಶಿ, ದ್ವಿತೀಯ ಮಗಳು ಸೌ. ಸುಧಾ ಜೋಶಿ, ಕಿರಿಯ ಮಗಳು ಸೌ. ಅನುರಾಧಾ ಪುರೋಹಿತ ಮತ್ತು ಮೊಮ್ಮಗಳು ಕು. ಸೋನಲ ಜೋಶಿ

ನಮ್ರತೆ, ನಿರಪೇಕ್ಷ ಪ್ರೀತಿ ಮತ್ತು ಆಸಕ್ತಿರಹಿತ ವೃತ್ತಿ ಇವುಗಳಿಂದಾಗಿ ‘ಸಂಸಾರದಲ್ಲಿದ್ದು ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಬಹುದು, ಎಂಬುದರ ಉತ್ತಮ ಉದಾಹರಣೆ ಅಂದರೆ ಶ್ರೀಮತಿ ಶಾಲಿನಿ ಮಾಯಿಣಕರ ಅಜ್ಜಿ !

ಮೂಲತಃ ಸಾತ್ತ್ವಿಕ ವೃತ್ತಿ ಮತ್ತು ಕಡಿಮೆ ಅಹಂ ಇರುವ ಶ್ರೀಮತಿ ಮಾಯಿಣಕರ ಅಜ್ಜಿಯವರು ಸಂಸಾರದಲ್ಲಿನ ಪ್ರತಿಯೊಂದು ಕಠಿಣ ಪ್ರಸಂಗಗಳನ್ನು ಸಹನಶೀಲತೆಯಿಂದ ಎದುರಿಸಿದರು. ಪ್ರತಿಯೊಂದು ಪ್ರಸಂಗವನ್ನು ಅವರು ‘ಈಶ್ವರೇಚ್ಛೆ ಎಂದು ಸ್ವೀಕರಿಸಿದರು ಮತ್ತು ‘ಅಧ್ಯಾತ್ಮವನ್ನು ಪ್ರತ್ಯಕ್ಷ ಕೃತಿಯಲ್ಲಿ ಹೇಗೆ ತರಬೇಕು ? ಎಂಬ ಬೋಧನೆ ಎಲ್ಲರ ಮುಂದಿಟ್ಟರು. ‘ದೇಹ ಸಂಸಾರದಲ್ಲಿದ್ದರೂ ಚಿತ್ತ ಚರಣಗಳಲ್ಲಿ, ಎಂಬ ಸ್ಥಿತಿ ಇರುವ ಅಜ್ಜಿಯವರ ಸಾಧನೆ ಅಂತರ್ಮನದಲ್ಲಿ ಆಗುತ್ತಿತ್ತು. ಅವರ ಮುಖದ ಮೇಲಿನ ಭಾವ, ಪ್ರೀತಿ ಮತ್ತು ನಿರ್ಮಲ ಆನಂದ ಈ ಎಲ್ಲ ವಿಷಯಗಳು ಅವರಲ್ಲಿನ ಸಂತತ್ವದ ದರ್ಶನ ಮಾಡಿಸುತ್ತವೆ. ಕಾರವಾರದ ಸಾಧಕರು, ಹಾಗೆಯೇ ಅಜ್ಜಿಯವರ ಕುಟುಂಬದವರಿಗೂ ಪ್ರಶಂಸೆ ಮಾಡಿದಷ್ಟು ಕಡಿಮೆ; ಏಕೆಂದರೆ ಅವರಿಗೆ ಅಜ್ಜಿಯವರಲ್ಲಾದ ಹಾಗೆಯೇ ಅವರ ನಿವಾಸಸ್ಥಳದಲ್ಲಾದ ಬದಲಾವಣೆಗಳನ್ನು ಸರಿಯಾಗಿ ಗುರುತಿಸಲು ಬಂತು.

ಕಡಿಮೆ ಅಹಂ, ನಿರಪೇಕ್ಷ ಪ್ರೀತಿ ಮುಂತಾದ ಗುಣಗಳಿಂದಾಗಿ ಅಜ್ಜಿಯವರು ಶೇ. ೭೧ ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ ಮತ್ತು ಅವರು ಸನಾತನದ ೮೬ ನೇ ಸಂತರಾಗಿದ್ದಾರೆ. ಪೂ. ಮಾಯಿಣಕರ ಅಜ್ಜಿಯವರ ಮುಂದಿನ ಪ್ರಗತಿ ಹೀಗೆಯೇ ಶೀಘ್ರಗತಿಯಲ್ಲಿ ಆಗುತ್ತದೆ, ಎಂದು ನನಗೆ ಖಚಿತವಿದೆ. – (ಪರಾತ್ಪರ ಗುರು) ಡಾ. ಆಠವಲೆ

ಕಾರವಾರ – ಕರ್ನಾಟಕದ ಒಂದು ನಿಸರ್ಗರಮ್ಯ ನಗರವೆಂದರೆ ಕಾರವಾರ ! ಕಾರವಾರದಲ್ಲಿ ೧೯೯೭ ರಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರು ಪರಾತ್ಪರ ಗುರು ಡಾ. ಆಠವಲೆಯವರ ‘ಗುರುಕೃಪಾಯೋಗಾನುಸಾರ ಸಾಧನೆಯ ಕುರಿತು ಮಾರ್ಗದರ್ಶನದ ಸತ್ಸಂಗದ ಆಯೋಜನೆ ಮಾಡಲಾಗಿತ್ತು. ಆಗ ಪರಾತ್ಪರ ಗುರುಗಳು ಯಾವ ರೀತಿ ಸಾಧನೆಯ ಬೀಜ ಬಿತ್ತಿದರೋ, ಅದು ಇಂದು ವಟವೃಕ್ಷವಾಗಿದೆ. ಸಾಧಕರು ಮತ್ತು ಸಂತರು ಅಂದರೆ ಈ ವಟವೃಕ್ಷದ ಫಲಗಳೇ ಆಗಿರುತ್ತಾರೆ. ಪರಾತ್ಪರ ಗುರುಗಳ ಮಾರ್ಗದರ್ಶನಕ್ಕನುಸಾರ ಸಾಧಕರು ತನು, ಮನ ಮತ್ತು ಧನ ಇವುಗಳ ತ್ಯಾಗ ಮಾಡಿ ಮನೆಮನೆಗಳಲ್ಲಿ ಸಾಧನೆಯ ಪ್ರಸಾರ ಮಾಡಿದರು. ಅದರಲ್ಲಿ ಅನೇಕ ಕುಟುಂಬಗಳು ಸಂಸ್ಥೆಯ ಕಾರ್ಯದೊಂದಿಗೆ ಜೋಡಿಸಲ್ಪಟ್ಟವು. ಅನೇಕರು ತಳಮಳದಿಂದ ಮತ್ತು ಭಾವಪೂರ್ಣವಾಗಿ ಸಾಧನೆ ಮಾಡಿ ಅಧ್ಯಾತ್ಮದಲ್ಲಿ ಪ್ರಗತಿ ಮಾಡಿಕೊಂಡರು. ಈ ಕಾರವಾರಕ್ಕೆ ೨೩.೪.೨೦೧೯ ರಂದು ಪೂ. (ಶ್ರೀಮತಿ) ಶಾಲಿನಿ ಮಾಯಿಣಕರ ಅಜ್ಜಿಯವರ(೯೨ ವರ್ಷ) ರೂಪದಲ್ಲಿ ಓರ್ವ ಸಂತರತ್ನ ಲಭಿಸಿತು. ಇಲ್ಲಿಯ ಒಂದು ಸತ್ಸಂಗ ಸಮಾರಂಭದಲ್ಲಿ ಪೂ. ಮಾಯಿಣಕರ ಅಜ್ಜಿಯವರು ೮೬ ನೇ ಸಂತರು ಎಂದು ಸನಾತನದ ಕರ್ನಾಟಕ ರಾಜ್ಯದ ಧರ್ಮಪ್ರಸಾರಕರಾದ ಪೂ. ರಮಾನಂದ ಗೌಡರವರು ಘೋಷಣೆ ಮಾಡಿದರು. ಈ ಆನಂದವಾರ್ತೆಯನ್ನು ಘೋಷಿಸುತ್ತಿದ್ದಂತೆ ಎಲ್ಲ ಸಾಧಕರ ಕೈಗಳು ತನ್ನಿಂದತಾನೇ ಜೋಡಿಸಲ್ಪಟ್ಟವು ಮತ್ತು ಅವರಿಂದ ಕೃತಜ್ಞತೆ ವ್ಯಕ್ತವಾಯಿತು. ಅನಂತರ ಪೂ. ರಮಾನಂದ ಅಣ್ಣನವರು ಪೂ. ಅಜ್ಜಿಯವರಿಗೆ ಪುಷ್ಪಹಾರ ಹಾಕಿ, ಶಾಲು, ಶ್ರೀಫಲ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಪ್ರತಿಮೆಯನ್ನು ಕೊಟ್ಟು ಅವರ ಸನ್ಮಾನ ಮಾಡಿದರು.

ಈ ರೀತಿ ಆಯಿತು ಶ್ರೀಮತಿ ಶಾಲಿನಿ ಮಾಯಿಣಕರ ಅಜ್ಜಿಯವರು ಸಂತಪದವಿ ಪ್ರಾಪ್ತ ಮಾಡಿಕೊಂಡ ಘೋಷಣೆ !

ಕಾರವಾರದ ಸಾಧಕರಿಗೆ ಆಕಸ್ಮಿಕವಾಗಿ ‘ಒಂದು ಸತ್ಸಂಗ ಸಮಾರಂಭವನ್ನು ತಕ್ಷಣ ಆಯೋಜಿಸಬೇಕಿದೆ ಎಂಬ ಸಂದೇಶ ಬಂತು. ಕಾರವಾರದಲ್ಲಿ ಗುರುಪೂರ್ಣಿಮೆ ಮಹೋತ್ಸವವನ್ನು ಬಿಟ್ಟರೆ ಹೀಗೆ ಸತ್ಸಂಗ ಸಮಾರಂಭವು ತುಂಬಾ ವರ್ಷಗಳ ನಂತರ ಆಗಲಿಕ್ಕಿತ್ತು. ಸಂದೇಶ ಬರುತ್ತಿದ್ದಂತೆಯೇ ಸಾಧಕರು ಸತ್ಸಂಗ ಸಮಾರಂಭದ ಸಿದ್ಧತೆಗೆ ಪ್ರಾರಂಭ ಮಾಡಿದರು ಮತ್ತು ಅತ್ಯಂತ ಕಡಿಮೆ ಸಮಯದಲ್ಲಿ ಸಿದ್ಧತೆಯೂ ಪೂರ್ಣವಾಯಿತು. ‘ಈ ಸತ್ಸಂಗ ಸಮಾರಂಭದಲ್ಲಿ ನಮಗೆ ಏನು ಕಲಿಯಲು ಸಿಗಲಿದೆ ? ಪ.ಪೂ. ಡಾಕ್ಟರರು ನಮಗೆ ಯಾವ ರೀತಿಯ ಆನಂದ ನೀಡಲಿದ್ದಾರೆ ?, ಎಂಬ ಕುತೂಹಲ ಎಲ್ಲ ಸಾಧಕರ ಮನಸ್ಸಿನಲ್ಲಿ ಇತ್ತು. ಕಾರವಾರ, ಶಿರಸಿ, ಶಿವಮೊಗ್ಗ ಮುಂತಾದ ಕಡೆಗಳಿಂದಲೂ ಸಾಧಕರು ಈ ಸಮಾರಂಭಕ್ಕೆ ಸೇರಿದ್ದರು. ಸತ್ಸಂಗದಲ್ಲಿ ಸನಾತನದ ಕರ್ನಾಟಕ ಧರ್ಮಪ್ರಸಾರಕರಾದ ಪೂ. ರಮಾನಂದ ಗೌಡರವರ ಮಾರ್ಗದರ್ಶನವಾಯಿತು. ಪೂ. ರಮಾನಂದ ಅಣ್ಣನವರ ಮಾರ್ಗದರ್ಶನದಿಂದ ಗುರುಪೂರ್ಣಿಮೆಯ ಸಲುವಾಗಿ ಪರಿಶ್ರಮಪಟ್ಟು ಸಾಧನೆ ಮಾಡಬೇಕೆಂಬ ಪ್ರೇರಣೆ ಸಾಧಕರಿಗೆ ದೊರಕಿತು. ಕೆಲವು ಸಾಧಕರು ಗುರುಪಾದುಕಾ ಪೂಜೆಯ ಸಮಾರಂಭದ ಸಮಯಕ್ಕೆ ಅವರಿಗೆ ಬಂದ ಅನುಭೂತಿಗಳನ್ನು ಹೇಳಿದರು. ಅನಂತರ ಪೂ. ರಮಾನಂದ ಅಣ್ಣನವರು ಸತ್ಸಂಗ ಸಮಾರಂಭದಲ್ಲಿ ಮೊದಲನೇ ಸಾಲಿನಲ್ಲಿ ಕುಳಿತಿದ್ದ, ಮುಖದ ಮೇಲೆ ಸಾತ್ತ್ವಿಕ ಮತ್ತು ಮುಗ್ಧ ಭಾವವಿರುವ ಶ್ರೀಮತಿ ಶಾಲಿನಿ ಮಾಯಿಣಕರ ಅಜ್ಜಿಯವರಿಗೆ ವ್ಯಾಸಪೀಠದ ಮೇಲೆ ಬರಲು ವಿನಂತಿಸಿದರು. ಎಲ್ಲರ ಕುತೂಹಲವು ಮುಗಿಲುಮುಟ್ಟಿತು. ಪೂ.ರಮಾನಂದ ಅಣ್ಣನವರು ಈಗ ಏನು ಹೇಳುತ್ತಾರೆ, ಎಂಬುದರ ಕಡೆಗೆ ಎಲ್ಲರ ಗಮನವಿತ್ತು. ಏನಾದರೊಂದು ಆನಂದವಾರ್ತೆ ಸಿಗಬಹುದು ಎಂದು ಕುತೂಹಲವಿತ್ತು. ಪೂ. ರಮಾನಂದ ಅಣ್ಣನವರು ಎಲ್ಲರಿಗೂ ‘ವ್ಯಾಸಪೀಠದ ಮೇಲೆ ಕುಳಿತಿದ್ದ ಶ್ರೀಮತಿ ಮಾಯಿಣಕರ ಅಜ್ಜಿಯವರ ಕಡೆಗೆ ನೋಡಿ ಏನು ಅನಿಸುತ್ತದೆ ? ಎಂದು ಅನುಭವಿಸಲು ಹೇಳಿದರು. ಒಬ್ಬೊಬ್ಬರಾಗಿ ಸಾಧಕರು ಹೇಳತೊಡಗಿದರು. ಅಜ್ಜಿಯವರ ಕಡೆಗೆ ನೋಡಿದಾಗ ನಿರಪೇಕ್ಷ ಪ್ರೇಮ, ಭಾವ, ಚೈತನ್ಯ, ಆನಂದಗಳ ಅರಿವಾಗುತ್ತಿರುವುದಾಗಿ ಸಾಧಕರು ಹೇಳಿದರು. ಅನಂತರ ಪೂ. ರಮಾನಂದಅಣ್ಣನವರು ಶ್ರೀಮತಿ ಮಾಯಿಣಕರ ಅಜ್ಜಿಯವರು ಸನಾತನದ ೮೬ ನೇ ಸಂತರಾದರೆಂದು ಹೇಳಿದರು ಮತ್ತು ಸಭಾಗೃಹದಲ್ಲಿ ಆನಂದ ಲಹರಿಗಳೇ ಹರಡಿರುವಂತೆ ತೋರುತ್ತಿತ್ತು. ಉಪಸ್ಥಿತರ ಮುಖಗಳು ಹರ್ಷದಿಂದ ತುಂಬಿ ತುಳುಕುತ್ತಿತ್ತು ಮತ್ತು ಕೈಗಳು ಕೃತಜ್ಞತೆಯಿಂದ ಜೋಡಿಸಲ್ಪಟ್ಟವು.

ಅಹಂ ಕಡಿಮೆ ಇರುವ ಪೂ. (ಶ್ರೀಮತಿ) ಮಾಯಿಣಕರಅಜ್ಜಿ !

೨೦೧೭ ರಲ್ಲಿ ರಾಮನಾಥಿ, ಗೋವಾದ ಸನಾತನ ಆಶ್ರಮದಲ್ಲಿ ಶ್ರೀಮತಿ ಮಾಯಿಣಕರ ಅಜ್ಜಿಯವರು ಪರಾತ್ಪರ ಗುರು ಡಾಕ್ಟರರನ್ನು ಭೇಟಿಯಾಗಿದ್ದರು. ಆಗ ಅವರು ಅವರಿಗೆ ತಲೆಬಾಗಿ ನಮಸ್ಕಾರ ಮಾಡುತ್ತಿರುವಾಗ, ಪ.ಪೂ. ಡಾಕ್ಟರರು, “ಅಜ್ಜಿ ನೀವು ನನಗೆ ನಮಸ್ಕಾರ ಮಾಡುವ ಅವಶ್ಯಕತೆ ಇಲ್ಲ. ಯಾರಲ್ಲಿ ಅಹಂ ಇರುತ್ತದೆ ಅವರು, ಬಾಗಿ ನಮಸ್ಕಾರ ಮಾಡುವುದು, ಇದು ಅವರ ಅಹಂ ಕಡಿಮೆಯಾಗುವುದಕ್ಕೆ ಅವಶ್ಯಕ ಇರುತ್ತದೆ; ಆದರೆ ನಿಮ್ಮ ಸ್ಥಿತಿ ಅದರ ಆಚೆಗೆ ಇದೆ. ನಿಮ್ಮೊಳಗೆ ಮೊದಲಿನಿಂದಲೇ ತುಂಬಾ ಕಡಿಮೆ ಅಹಂ ಇದೆ, ಎಂದರು. – ಕು. ಸೋನಲ ಜೋಶಿ (ಪೂ. ಅಜ್ಜಿಯವರ ಮೊಮ್ಮಗಳು), ಫೋಂಡಾ, ಗೋವಾ.

ಪೂ. (ಶ್ರೀಮತಿ) ಮಾಯಿಣಕರ ಅಜ್ಜಿಯವರ ಕುರಿತು ಅವರ ಕುಟುಂಬದವರು ವ್ಯಕ್ತಪಡಿಸಿದ ಮನೋಗತ

೧. ‘ತಾಯಿ ಅಂದರೆ ಪ್ರೀತಿಯ (ನಿರಪೇಕ್ಷ ಪ್ರೇಮ) ಮಹಾಸಾಗರವಿದೆ. – ಸೌ. ಮೇಧಾ ಜೋಶಿ (ಪೂ. ಅಜ್ಜಿಯವರ ಹಿರಿಯ ಮಗಳು), ಕಾರವಾರ

೨. ‘ತಾಯಿಯು ಚಿಕ್ಕಂದಿನಿಂದಲೂ ನಮ್ಮ ಮೇಲೆ ಉತ್ತಮ ಸಂಸ್ಕಾರ ಮಾಡಿದರು. – ಸೌ. ಸುಧಾ ಜೋಶಿ (ಪೂ. ಅಜ್ಜಿಯವರ ದ್ವಿತೀಯ ಮಗಳು), ವಾಸ್ಕೋ, ಗೋವಾ.

೩. ‘ಇಂದು ನನಗೆ ಇಷ್ಟೊಂದು ಆನಂದವಾಗಿದೆ, ಎಂದರೆ ತಾಯಿಯ ಕುರಿತು ಮಾತನಾಡಲು ನನ್ನ ಬಳಿ ಶಬ್ದಗಳೇ ಇಲ್ಲ. – ಸೌ. ಅನುರಾಧಾ ಪುರೋಹಿತ (ಪೂ. ಅಜ್ಜಿಯವರ ಕಿರಿಯ ಮಗಳು), ಫೋಂಡಾ, ಗೋವಾ.

೪. ‘ಅಜ್ಜಿಯವರಿಗೆ ಪ.ಪೂ. ಡಾಕ್ಟರರ ಮೇಲೆ ಅಪಾರ ಭಕ್ತಿ ಇದೆ. ‘ಪರೇಚ್ಛೆಯಿಂದ ಹೇಗೆ ವರ್ತಿಸಬೇಕು, ಎಂಬುದನ್ನು ನಾವು ಅಜ್ಜಿಯಿಂದ ಕಲಿತೆವು. ಅವಳು ಸತತ ಮನಸ್ಸಿನ ತ್ಯಾಗ ಮಾಡಿದ್ದಾಳೆ. ಪ್ರತಿಸಲ ಅವಳು ನಮಗೆ ಸಾಧನೆಗಾಗಿ ಪ್ರೋತ್ಸಾಹ ನೀಡಿದಳು, ಆದುದರಿಂದ ನನಗೆ ಪೂರ್ಣವೇಳೆ ಸಾಧನೆ ಮಾಡಲು ಪ್ರೇರಣೆ ದೊರಕಿತು. – ಕು. ಸೋನಲ ಜೋಶಿ (ಪೂ. ಅಜ್ಜಿಯವರ ಮೊಮ್ಮಗಳು), ಫೋಂಡಾ, ಗೋವಾ.

ಪೂ. (ಶ್ರೀಮತಿ) ಶಾಲಿನಿ ಮಾಯಿಣಕರ ಅಜ್ಜಿಯವರು ಸನ್ಮಾನ ಸಮಾರಂಭದ ಪ್ರಸಂಗದಲ್ಲಿ ಸಾಧಕರಿಗೆ ನೀಡಿದ ಸಂದೇಶ !

ಪೂ. ಅಜ್ಜಿಯವರು ಸಾಧಕರಿಗೆ ಮಾರ್ಗದರ್ಶನವನ್ನು ‘ಗುರುದೇವರಿಗೆ ನಮಸ್ಕಾರ, ಪರಮ ಪೂಜ್ಯರಿಗೆ ನಮಸ್ಕಾರ, ಎಂದು ಹೇಳಿ ಪ್ರಾರಂಭಿಸಿದರು, “ಪ.ಪೂ. ಡಾಕ್ಟರರ ಮನಸ್ಸಿನಲ್ಲಿ ಸಾಧಕರ ಬಗ್ಗೆ ಯಾವ ಪ್ರೇಮವಿದೆ, ಅದನ್ನು ನಾವು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪರಮಪೂಜ್ಯರು ನಮ್ಮ ದೇವರಿದ್ದಾರೆ. ಪರಮ ಪೂಜ್ಯರು ಯಾವ ಸಾಧನೆ ಮಾಡಲು ಹೇಳುತ್ತಾರೆ, ಅದನ್ನು ಸಾಧಕರು ಮಾಡುತ್ತಿರಬೇಕು. ಪರಮ ಪೂಜ್ಯರು ಹೇಳಿದಂತೆ ಸಾಕಷ್ಟು ನಾಮಜಪ ಮಾಡಬೇಕು. ೯೨ ವರ್ಷದ ಪೂ. ಅಜ್ಜಿಯವರಿಗೆ ಮಾತನಾಡುವಾಗ ದಣಿವಾಗುತ್ತಿತ್ತು. ಅವರ ಧ್ವನಿ ಅಸ್ಪಷ್ಟವಾಗಿತ್ತು; ಆದರೆ ಅವರಲ್ಲಿನ ಕೃತಜ್ಞತಾಭಾವವು ಎಲ್ಲರಿಗೆ ಅರಿವಾಗುತ್ತಿತ್ತು. ಅವರು ಉಚ್ಚರಿಸಿದ ಪ್ರತಿಯೊಂದು ವಾಕ್ಯವು ‘ಪರಮಪೂಜ್ಯ ಈ ಶಬ್ದಗಳಿಂದ ಆರಂಭವಾಗುತ್ತಿತ್ತು. ಗುರುಸ್ಮರಣೆಯು ಅವರ ಉಸಿರು ಉಸಿರಿನಲ್ಲಿ ತುಂಬಿದೆ ಎಂಬುದು ಇದರಿಂದ ತಿಳಿಯುತ್ತಿತ್ತು.

Kannada Weekly | Offline reading | PDF