ಪ್ರೇಮಭಾವ ಮತ್ತು ಪರಾತ್ಪರ ಗುರು ಡಾಕ್ಟರರ ಬಗ್ಗೆ ಅನನ್ಯ ಭಾವ ಈ ಗುಣಗಳಿಂದಾಗಿ ‘ಸನಾತನದ ೮೬ ನೇ ವ್ಯಷ್ಟಿ ಸಂತಪದವಿ’ ಯಲ್ಲಿ ವಿರಾಜಮಾನರಾದ ಪೂ. (ಶ್ರೀಮತಿ) ಶಾಲಿನಿ ಮಾಯೀಣಕರ ಅಜ್ಜಿ (೯೨ ವರ್ಷ) !

ಪೂ. (ಶ್ರೀಮತಿ) ಶಾಲಿನಿ ಮಾಯೀಣಕರ

ಶ್ರೀಮತಿ ಶಾಲಿನಿ ಮಾಯೀಣಕರ ಅಜ್ಜಿಯವರು (೯೨ ವರ್ಷ) ಕಳೆದ ೨೭ ವರ್ಷಗಳಿಂದ ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆ ಮಾಡುತ್ತಿದ್ದಾರೆ. ಸದ್ಯ ಅವರು ಅವರ ಮಗಳಾದ ಸೌ. ಮೇಧಾ ವಿಲಾಸ ಜೋಶಿ ಇವರೊಂದಿಗೆ ನಂದನಗದ್ದಾ, ಕಾರವಾರದಲ್ಲಿರುತ್ತಾರೆ. ಅವರು ಗುರುಚರಿತ್ರೆಯನ್ನು ಪಠಿಸುವುದು, ದತ್ತಮಾಲಾ ಮಂತ್ರವನ್ನು ಪಠಿಸುವುದು, ಹಾಗೂ ಪ್ರಾರ್ಥನೆ ಮತ್ತು ಸಮಷ್ಟಿಗಾಗಿ ದಿನವಿಡಿ ನಾಮಜಪ ಮಾಡುವುದು, ಇಂತಹ ಸಾಧನೆ ಮಾಡುತ್ತಾರೆ. ಅಜ್ಜಿಯವರ ಆನಂದಾವಸ್ಥೆ ಹಾಗೂ ಅವರ ಮನೆಯಲ್ಲಿ ಅರಿವಾಗುತ್ತಿರುವ ಪರಿವರ್ತನೆ ಇವುಗಳ ಬಗ್ಗೆ ಸಾಧಕರು ಮತ್ತು ಅಜ್ಜಿಯವರ ಕುಟುಂಬದವರಿಗೆ ಅರಿವಾದ ವೈಶಿಷ್ಟ್ಯಪೂರ್ಣ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ಗುಣವೈಶಿಷ್ಟ್ಯಗಳು

೧ ಅ. ಸತತ ಆನಂದದಲ್ಲಿರುವುದು : ‘ಅಜ್ಜಿಯವರು ಪ್ರತಿಕ್ಷಣ ಶಾಂತ ಮತ್ತು ಆನಂದದಲ್ಲಿರುತ್ತಾರೆ. ಅಜ್ಜಿಯವರಿಗೆ ಮೂಲವ್ಯಾಧಿಯ ಮತ್ತು ಮೊಣಕಾಲು ನೋವಿನ ತೊಂದರೆಯಿದೆ; ಆದರೆ ಅವರು ಯಾವಾಗಲೂ ಆನಂದದಲ್ಲಿರುತ್ತಾರೆ’.

೧ ಆ. ೯೨ ವರ್ಷ ವಯಸ್ಸಾದರೂ ದೃಷ್ಟಿ ಉತ್ತಮವಾಗಿರುವುದು : ‘ಅಜ್ಜಿಯವರಿಗೆ ೯೨ ವರ್ಷ ವಯಸ್ಸಾಗಿದೆ, ಅವರಿಗೆ ಕನ್ನಡಕ ಇದೆ, ಆದರೂ ಅವರು ಗುರುಚರಿತ್ರೆ ಪಠಣ ಹಾಗೂ ಇತರ ಕೃತಿ ಮಾಡುವಾಗ ಕನ್ನಡಕದ ಉಪಯೋಗ ಮಾಡುವುದಿಲ್ಲ.’ – ಶ್ರೀ. ನಾಗಾರಾಮ ಚೌಧರಿ (ಸಾಧಕ), ಕಾರವಾರ

೧ ಇ. ಪ್ರೇಮಭಾವ

೧. ‘ಅಜ್ಜಿಯವರಲ್ಲಿ ಬಹಳ ಪ್ರೇಮಭಾವವಿದೆ. ಅವರು ನನಗೆ ತಿಂಡಿ ಕೊಡುತ್ತಾರೆ ಮತ್ತು ನನ್ನೊಂದಿಗೆ ಪ್ರೀತಿಯಿಂದ ಮಾತನಾಡುತ್ತಾರೆ.’ – ಕು. ಅನನ್ಯಾ ರಾಧೇಶ ಜೋಶಿ (ಮರಿಮಗಳು, ಅಜ್ಜಿಯವರ ಮಗಳ ಮೊಮ್ಮಗಳು) (೧೪ ವರ್ಷ) ಕಾರವಾರ.

೨. ‘ಈ ಬಾರಿ ನಾನು ಅಜ್ಜಿಯವರನ್ನು ಭೇಟಿಯಾಗಲು ಹೋಗಿದ್ದೆನು ಮತ್ತು ನನಗೆ ‘ಅಜ್ಜಿಯವರೊಂದಿಗೆ ಮಾತನಾಡುತ್ತಲೇ ಇರಬೇಕು’, ಎಂದೆನಿಸಿತು. ಅವರ ಮಾತುಗಳಲ್ಲಿ ಬಹಳ ಪ್ರೇಮವಿದೆ. ಅವರ ಮನೆಯಲ್ಲಿ ‘ಸಮಯ ಹೇಗೆ ಹೋಗುತ್ತದೆ’, ಎಂದು ತಿಳಿಯುವುದಿಲ್ಲ. ‘ಅಜ್ಜಿಯವರ ಸತ್ಸಂಗದಲ್ಲಿರಬೇಕು’, ಎಂದು ನನಗನಿಸುತ್ತಿತ್ತು. – ಶ್ರೀ. ಕಾಶಿನಾಥ ಪ್ರಭು

೩. ‘ಒಂದು ಬಾರಿ ನಾನು ೩ ವರ್ಷಗಳ ನಂತರ ಅಜ್ಜಿಯವರನ್ನು ಭೇಟಿಯಾಗಲು ಹೋಗಿದ್ದೆನು, ಆದರೂ ಅಜ್ಜಿಯವರಿಗೆ ನನ್ನ ಹೆಸರು ತಕ್ಷಣ ನೆನಪಾಯಿತು. ನನ್ನನ್ನು ನೋಡಿದ ನಂತರ ಅವರು, “ನಮ್ಮ ರಾಮನು ಬಂದಿದ್ದಾನೆ”ಎಂದು ಹೇಳಿದರು. ಅವರನ್ನು ಭೇಟಿಯಾಗಲು ಹೋದಾಗ ಅವರು ಪ್ರತಿಬಾರಿ ಇತರ ಸಾಧಕರ ಬಗ್ಗೆ ಕೇಳುತ್ತಾರೆ. ಸಾಧಕರ ಹೆಸರು ಹೇಳಿ ಅವರ ಬಗ್ಗೆ ಕೇಳುತ್ತಾರೆ ಮತ್ತು ಕಾಳಜಿ ಮಾಡುತ್ತಾರೆ.

೧ ಈ. ಅನಾಸಕ್ತ ಸ್ವಭಾವ : ಅಜ್ಜಿಯವರಲ್ಲಿ ಆಸಕ್ತಿ ಅತ್ಯಂತ ಕಡಿಮೆಯಿದೆ. ‘ತಮಗಾಗಿ ಏನಾದರೂ ತೆಗೆದುಕೊಳ್ಳಬೇಕು’, ಎಂದು ಅವರಿಗೆ ಎಂದಿಗೂ ಅನಿಸುವುದಿಲ್ಲ.

೧ ಉ. ಪರಾತ್ಪರ ಗುರು ಡಾಕ್ಟರರ ಬಗೆಗಿನ ಭಾವ

೧. ನಾನು ಯಾವಾಗ ಅಜ್ಜಿಯವರನ್ನು ಭೇಟಿಯಾಗಲು ಹೋಗುತ್ತೇನೋ, ಆಗ ಅವರು ನನಗೆ ಯಾವಾಗಲೂ, “ಪ.ಪೂ. ಗುರುದೇವರು ಹೇಗಿದ್ದಾರೆ ? ಅವರು ಆರಾಮಿದ್ದಾರಲ್ಲ ? ಸದ್ಯ ನೀನು ರಾಮನಾಥಿ ಆಶ್ರಮಕ್ಕೆ ಹೋದರೆ, ಅವರಿಗೆ ನನ್ನ ಬಗ್ಗೆ ಹೇಳು, ‘ಈಗ ನಾನು ಮುದುಕಿಯಾಗಿದ್ದೇನೆ”, ಎಂದು ಹೇಳುತ್ತಾರೆ. ಅವರು ಸತತ ಗುರುದೇವರ ಸ್ಮರಣೆಯಲ್ಲಿರುತ್ತಾರೆ.

೨. ಅಜ್ಜಿಯವರಿಗೆ ‘ಪರಾತ್ಪರ ಗುರು ಡಾಕ್ಟರರೇ ಅವರ ತಾಯಿ-ತಂದೆ ಇದ್ದಾರೆ’, ಎಂದೆನಿಸುತ್ತದೆ. ‘ಅವರೇ ನನ್ನ ಸರ್ವಸ್ವವಾಗಿದ್ದಾರೆ. ಅವರೇ ದೇವರಾಗಿದ್ದಾರೆ’, ಎಂದು ಅವರು ಹೇಳುತ್ತಾರೆ.

೩. ನಾನು ಅಜ್ಜಿಯವರಿಗೆ, “ಅಜ್ಜಿ, ನಿಮ್ಮ ಛಾಯಾಚಿತ್ರ ತೆಗೆಯುವುದಿದೆ. ನೀವು ಬೇರೆ ಸೀರೆ ಉಟ್ಟುಕೊಳ್ಳಿರಿ”, ಎಂದು ಹೇಳಿದೆನು. ಆಗ ಅವರು “ಇರಲಿ ಬಿಡು ಗುರುದೇವರಿಗೆ ಎಲ್ಲವೂ ಗೊತ್ತೇ ಇದೆ”, ಎಂದು ಹೇಳಿದರು. – ಶ್ರೀ. ನಾಗಾರಾಮ ಚೌಧರಿ (ಸಾಧಕ), ಕಾರವಾರ

೨. ಅಜ್ಜಿಯವರ ನಿವಾಸ ಸ್ಥಾನದಲ್ಲಿ ಅರಿವಾದ ಪರಿವರ್ತನೆ

೨ ಅ. ಎಲ್ಲೆಡೆ ಉಷ್ಣ ವಾತಾವರಣವಿದ್ದರೂ ಮನೆಯಲ್ಲಿ ಶೀತಲತೆ ಹಾಗೂ ಆನಂದ ಮತ್ತು ಶಾಂತಿಯ ಅರಿವಾಗಿ ಇತರರಿಗೂ ಅದರ ಅನುಭೂತಿ ಬರುವುದು : ‘ಕಾರವಾರದಲ್ಲಿ ಬಹಳ ಬಿಸಿಲು ಮತ್ತು ಉಷ್ಣ ವಾತಾವರಣವಿದೆ, ಆದರೂ ನಮಗೆ ನಮ್ಮ ಮನೆ ಬಹಳ ಶೀತಲವೆನಿಸುತ್ತದೆ ಹಾಗೂ ಮನೆಯಲ್ಲಿ ಆನಂದ ಮತ್ತು ಶಾಂತಿಯ ಅರಿವಾಗುತ್ತದೆ. ನನ್ನ ಸೊಸೆ (ಸೌ. ದಿವ್ಯಾ ರಾಧೇಶ ಜೋಶಿ) ಮತ್ತು ಮೊಮ್ಮಗಳು (ಕು. ಅನನ್ಯ ರಾಧೇಶ ಜೋಶಿ) ಇವರಿಬ್ಬರಿಗೂ ಹಾಗೆ ಅನಿಸುತ್ತದೆ. ಮನೆಗೆ ಬಂದ ಸಂಬಂಧಿಕರಿಗೂ ‘ಇಲ್ಲಿಗೆ ಬಂದರೆ ಶಾಂತ ಮತ್ತು ಶೀತಲವೆನಿಸುತ್ತದೆ’, ಎಂದು ಅವರು ಹೇಳುತ್ತಾರೆ. ಒಂದು ಬಾರಿ ನಮ್ಮ ಮನೆಗೆ ಯಾವಾಗಲೂ ಬರುವ ಓರ್ವ ವ್ಯಾಪಾರಿ ಬಂದಿದ್ದರು. ಅವರಿಗೆ ಮನೆಯಲ್ಲಿ ಬದಲಾವಣೆಯ ಅರಿವಾಯಿತು. ಆದ್ದರಿಂದ ಅವರು ನನಗೆ, “ನೀವು ಮನೆಯಲ್ಲಿ ಏನಾದರೂ ಬದಲಾವಣೆ ಮಾಡಿದ್ದಿರೇನು ? ಹಿಂದಿನ ತುಲನೆಯಲ್ಲಿ ಮನೆಯಲ್ಲಿ ಈಗ ಶಾಂತ ಮತ್ತು ಶೀತಲವೆನಿಸುತ್ತಿದೆ’, ಎಂದು ಹೇಳಿದರು. – ಸೌ. ಮೇಧಾ ವಿಲಾಸ ಜೋಶಿ (ಅಜ್ಜಿಯವರ ಮಗಳು), ಕಾರವಾರ.

೨ ಆ. ಅಜ್ಜಿಯವರ ಸಾನ್ನಿಧ್ಯದಲ್ಲಿ ಉಪಾಯವಾಗುವುದು : ‘ನಾನು ಈ ತಿಂಗಳಲ್ಲಿ ೨ ಬಾರಿ ಅಜ್ಜಿಯವರನ್ನು ಭೇಟಿಯಾಗಲು ಅವರ ಮನೆಗೆ ಹೋಗಿದ್ದೆನು. ಆಗ ನನಗೆ ‘ಅವರ ಮನೆಯಲ್ಲಿನ ವಾತಾವರಣ ಶಾಂತ, ಶೀತಲ ಮತ್ತು ಆನಂದಿಯಾಗಿದೆ’, ಎಂದೆನಿಸುತ್ತಿತ್ತು. ಅಜ್ಜಿಯವರು ಶಾಂತ ಮತ್ತು ಆನಂದಿ ಇದ್ದರು. ಅಲ್ಲಿನ ಸಭೆಯ ಕಕ್ಷೆಯಲ್ಲಿ ಕುಳಿತಾಗ ನನ್ನ ಮೇಲೆ ಉಪಾಯವಾಗುತ್ತಿತ್ತು. ನಂತರ ನಾನು ಮನೆಗೆ ತಿರುಗಿ ಬಂದೆನು. ಆಗ ನನ್ನ ಭಾವಜಾಗೃತಿಯಾಗುತ್ತಿತ್ತು ಮತ್ತು ನನ್ನ ಮೇಲೆ ಉಪಾಯವಾಗುತ್ತಿತ್ತು.’ – ಶ್ರೀ. ನಾಗಾರಾಮ ಚೌಧರಿ

೨ ಇ. ಅಜ್ಜಿಯವರ ಅಸ್ತಿತ್ವದಿಂದಾಗಿ ಮನೆಯಲ್ಲಿ ಮತ್ತು ಕುಟುಂಬದವರಲ್ಲಿ ಸಕಾರಾತ್ಮಕ ಪರಿವರ್ತನೆಯಾಗುವುದು, ಅಜ್ಜಿಯವರ ದಾರಿ ಕಾಯುವಾಗ ಧ್ಯಾನಾವಸ್ಥೆ ಅನುಭವಿಸುವುದು ಮತ್ತು ಅಜ್ಜಿಯವರು ಹೊರಗೆ ಬಂದ ನಂತರ ಸುಗಂಧ ಬರುವುದು : ‘ನಾನು ಅಜ್ಜಿಯವರ ಮನೆಗೆ ಸುಮಾರು ೧ ವರ್ಷದ ಹಿಂದೆ ಮೊದಲ ಬಾರಿಗೆ ಹೋಗಿದ್ದೆನು ಮತ್ತು ಈಗ ಈ ಬಾರಿ ಮತ್ತೊಮ್ಮೆ ಹೋದೆನು. ಈ ಬಾರಿ ನನಗೆ ‘ಅಜ್ಜಿಯವರ ಮನೆಯಲ್ಲಿ ಬಹಳ ಪರಿವರ್ತನೆಯಾಗಿದೆ’, ಎಂದೆನಿಸಿತು. ಮನೆಯಲ್ಲಿನ ವಾತಾವರಣ ಸಕಾರಾತ್ಮಕವೆನಿಸುತ್ತಿತ್ತು ಮತ್ತು ‘ಮನೆಯಲ್ಲಿನ ವ್ಯಕ್ತಿಗಳಲ್ಲಿಯೂ ಸಕಾರಾತ್ಮಕ ಪರಿವರ್ತನೆಯಾಗಿದೆ’ ಎಂದು ನನ್ನ ಗಮನಕ್ಕೆ ಬಂದಿತು. ‘ಅಜ್ಜಿಯವರ ಅಸ್ತಿತ್ವದಿಂದಾಗಿಯೇ ಈ ಪರಿವರ್ತನೆಯಾಗಿದೆ’, ಎಂದು ನನಗನಿಸಿತು. ನಾನು ಅಜ್ಜಿಯವರ ದಾರಿ ಕಾಯುತ್ತಾ ಕುಳಿತಿರುವಾಗ ನನಗೆ ಧ್ಯಾನ ತಾಗಿದ ಹಾಗೆ ಆಯಿತು. ಅಜ್ಜಿಯವರು ಹೊರಗೆ ಬಂದರು. ಆಗ ನನಗೆ ಸುಗಂಧದ ಅನುಭೂತಿ ಬಂದಿತು.’ – ಶ್ರೀ. ಕಾಶಿನಾಥ ಪ್ರಭು, ಪ್ರಸಾರಸೇವಕರು

೨ ಈ. ‘ಅಜ್ಜಿಯವರ ಮನೆಯಲ್ಲಿ ಬಹಳ ಚೈತನ್ಯದ ಅರಿವಾಗುತ್ತಿತ್ತು ಮತ್ತು ‘ಅವರು ಸತತ ಆನಂದಾವಸ್ಥೆಯಲ್ಲಿದ್ದಾರೆ’, ಎಂದು ಅರಿವಾಯಿತು.’ – ಶ್ರೀ. ಸೋಮೇಶ ಗುರವ ಮತ್ತು ಶ್ರೀ. ಸಾಗರ ಕುರ್ಡೇಕರ (ಸಾಧಕ), ಕಾರವಾರ, ಉತ್ತರ ಕನ್ನಡ.

೨ ಉ. ‘ಅಜ್ಜಿಯವರನ್ನು ನೋಡಿ ಪ.ಪೂ. ಗುರುದೇವರ ಬಹಳ ನೆನಪಾಯಿತು. ಅವರ ಮನೆಯಲ್ಲಿ ಬಹಳ ಶಾಂತವೆನಿಸುತ್ತಿತ್ತು.’ – ಸೌ. ಉಷಾ ಶಶಿಧರ

Kannada Weekly | Offline reading | PDF