ಕರ್ಮ, ಜ್ಞಾನ ಮತ್ತು ಭಕ್ತಿ ಇವುಗಳ ಸುಸಂಗಮವಾಗಿರುವ ಬೆಳಗಾವಿಯ ಡಾ. ನೀಲಕಂಠ ದೀಕ್ಷಿತ (೯೦ ವರ್ಷ) ಇವರು ಸನಾತನದ ೮೭ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಯಜಮಾನರನ್ನು ‘ಗುರು ಎಂದು ತಿಳಿದು ‘ಸಾಧನೆಯೆಂದು ಅವರ ಸೇವೆಯನ್ನು ಮಾಡುವ ಸೌ. ವಿಜಯಾ ದೀಕ್ಷಿತ (೮೬ ವರ್ಷಗಳು) ಇವರು ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟ ಪ್ರಾಪ್ತಮಾಡಿಕೊಂಡರು !

ಪೂ. (ಡಾ.) ನೀಲಕಂಠ ದೀಕ್ಷಿತ ಮತ್ತು ಸೌ. ವಿಜಯಾ ದೀಕ್ಷಿತ ಇವರೊಂದಿಗೆ ೧. ಅವರ ಮೊಮ್ಮಗ ಶ್ರೀ. ಸತ್ಯಕಾಮ ಕಣಗಲೇಕರ, ೨. ಅಳಿಯ ಶ್ರೀ. ಯಶವಂತ ಕಣಗಲೇಕರ, ೩. ಮಗಳು ಸೌ. ಅಂಜಲಿ ಕಣಗಲೇಕರ ಮತ್ತು ೪. ಮೊಮ್ಮಗ ಡಾ. ಅಂಜೇಶ ಕಣಗಲೇಕರ

 

ಪೂ. (ಡಾ.) ನೀಲಕಂಠ ದೀಕ್ಷಿತ ಮತ್ತು ಸೌ. ವಿಜಯಾ ದೀಕ್ಷಿತ ಇವರೊಂದಿಗೆ ಎಡದಿಂದ ೧. ಅವರ ಹಿರಿಯ ಸೊಸೆ ಸೌ. ಅನಘಾ ಜಯಂತ ದೀಕ್ಷಿತ ಮತ್ತು ೨. ಕಿರಿಯ ಸೊಸೆ ಸೌ. ಸ್ಮಿತಾ ಪ್ರಸಾದ ದೀಕ್ಷಿತ

ಜೀವನದ ಪ್ರತಿಕ್ಷಣ ವ್ರತಸ್ಥ ಜೀವನ ನಡೆಸಿದ ಪೂ. (ಡಾ.) ನೀಲಕಂಠ ದೀಕ್ಷಿತ ಮತ್ತು ‘ಸಾಧನೆಯೆಂದು ಪತಿಸೇವೆಯನ್ನು ಮಾಡುವ ಸೌ. ವಿಜಯಾ ದೀಕ್ಷಿತ ಇವರು ‘ಆದರ್ಶ ಗುರು-ಶಿಷ್ಯರಿದ್ದಾರೆ !

‘ಬೆಳಗಾವಿಯಲ್ಲಿನ ಡಾ. ನೀಲಕಂಠ ಅಮೃತ ದೀಕ್ಷಿತ ಇವರ ಇಡೀ ಜೀವನ ಆದರ್ಶಮಯವಾಗಿದೆ. ಜೀವಮಾನ ವಿಡಿ ತತ್ತ್ವನಿಷ್ಠೆಯಿಂದ ವರ್ತಿಸಿ ರೋಗಿಗಳ ಸೇವೆಯನ್ನು ಮಾಡುವ ಮತ್ತು ಕೆಲವು ಪ್ರಸಂಗಗಳಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ಮಾಡುವ ಡಾ. ದೀಕ್ಷಿತ ಅಜ್ಜನವರು ಪ್ರಸ್ತುತ ವೈದ್ಯಕೀಯ ಸೇವೆ ಮಾಡುವವರೆದುರು ದೊಡ್ಡ ಆದರ್ಶವನ್ನಿಟ್ಟಿದ್ದಾರೆ. ಚಿಕ್ಕಂದಿನಿಂದಲೇ ಸಂತರ ಸಾನ್ನಿಧ್ಯದಲ್ಲಿದ್ದುದರಿಂದ ಸಾಧನೆ ಪ್ರಾರಂಭಿಸಲು ಅವರಲ್ಲಿ ಸಂಸ್ಕಾರ ನಿರ್ಮಾಣವಾದಂತಾಯಿತು. ಅವರ ವೈಶಿಷ್ಟ್ಯವೆಂದರೆ ಅವರು ಸಂತರ ಸೇವೆಯನ್ನು ಮನಃಪೂರ್ವಕವಾಗಿ ಮಾಡಿ ಸಂತಸಂಗದ ಲಾಭ ಪಡೆದುಕೊಂಡರು. ಆದ್ದರಿಂದ ‘ನಿಷ್ಕಾಮ ಕರ್ಮಯೋಗ ಸಾಧಿಸುವಾಗ ಅಜ್ಜನವರ ‘ಜ್ಞಾನಯೋಗ ಮತ್ತು ‘ಭಕ್ತಿಯೋಗ ಈ ಮಾರ್ಗಗಳಿಂದಲೂ ಸಾಧನೆಯಾಗತೊಡಗಿತು. ಈ ವಯಸ್ಸಿನಲ್ಲಿಯೂ ಅವರಿಗಿರುವ ಜ್ಞಾನಗ್ರಹಣದ ಒಲವು ಮತ್ತು ಅವರ ಜಿಜ್ಞಾಸೆ ಪ್ರಶಂಸನೀಯವಾಗಿದೆ. ಅಜ್ಜನವರು ಯಾವಾಗಲೂ ನಿರ್ವಿಚಾರ ಸ್ಥಿತಿಯಲ್ಲಿರುತ್ತಾರೆ ಮತ್ತು ಅಖಂಡ ಭಾವಾವಸ್ಥೆಯಲ್ಲಿರುತ್ತಾರೆ. ಅಜ್ಜನವರ ದೇಹದಲ್ಲಿ ದೈವೀ ಪರಿವರ್ತನೆಯಾಗಿದ್ದು ಅವರ ಅಸ್ತಿತ್ವದಿಂದಾಗಿ ಅವರ ಮನೆಯಲ್ಲಿಯೂ ಪರಿವರ್ತನೆಯಾಗಿದೆ. ‘ಕರ್ಮ, ‘ಜ್ಞಾನ ಮತ್ತು ‘ಭಕ್ತಿ, ಇವುಗಳ ಸುಸಂಗಮವಾಗಿರುವ ಡಾ. ನೀಲಕಂಠ ಅಮೃತ ದೀಕ್ಷಿತ ಇವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಿದ್ದು ಅವರು ಸನಾತನದ ೮೭ ನೇ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.

ಪೂ. ದೀಕ್ಷಿತ ಅಜ್ಜನವರ ಸಾಧನೆಯ ಪ್ರವಾಸದಲ್ಲಿ ಅವರ ಪತ್ನಿ ಸೌ. ವಿಜಯಾ ನೀಲಕಂಠ ದೀಕ್ಷಿತ ಇವರು ಅವರಿಗೆ ಅಮೂಲ್ಯ ಸಾಂಗತ್ಯಯನ್ನು ನೀಡಿದ್ದಾರೆ. ಅವರ ವೈಶಿಷ್ಟ್ಯವೆಂದರೆ ಅವರು ೧೦ ರಿಂದ ೧೫ ವರ್ಷಗಳ ಮೊದಲೇ ಅಜ್ಜನವರ ಸಂತವೃತ್ತಿಯನ್ನು ಗುರುತಿಸಿದರು ಮತ್ತು ಅವರನ್ನು ‘ಗುರುವೆಂದು ತಿಳಿದು ಅವರ ಸೇವೆ ಮಾಡಿದರು. ಆಯುಷ್ಯದಲ್ಲಿನ ಪ್ರತಿಯೊಂದು ಕ್ಷಣ ವ್ರತಸ್ಥ ಜೀವನವನ್ನು ನಡೆಸುವ ಪೂ. ದೀಕ್ಷಿತ ಅಜ್ಜನವರು ಮತ್ತು ಅಜ್ಜಿಯವರು ‘ಆದರ್ಶ ಗುರು-ಶಿಷ್ಯರಾಗಿದ್ದಾರೆ. ಇಂತಹ ಉದಾಹರಣೆ ತೀರಾ ವಿರಳವೇ ಆಗಿದೆ ! ಪತಿಸೇವೆಯನ್ನೂ ‘ಸಾಧನೆಯೆಂದು ಮಾಡುವ ಸೌ. ದೀಕ್ಷಿತಅಜ್ಜಿಯವರ ಆಧ್ಯಾತ್ಮಿಕ ಉನ್ನತಿಯೂ ಶೀಘ್ರವಾಗಿ ಆಗುತ್ತಿದ್ದು ಅವರು ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಿದ್ದಾರೆ. ಇವರಿಬ್ಬರೂ ಮಾಡಿದ ಉತ್ತಮ ಸಂಸ್ಕಾರಗಳಿಂದಾಗಿ ಅವರ ಕುಟುಂಬ ಹಾಗೂ ಅವರ ಮಗಳ ಕಣಗಲೇಕರ ಕುಟುಂಬದವರೆಲ್ಲ ಸಾಧನಾನಿರತವಾಗಿದೆ. ‘ಪೂ. ದೀಕ್ಷಿತ ಅಜ್ಜನವರು ಮತ್ತು ಸೌ. ದೀಕ್ಷಿತ ಅಜ್ಜಿ ಇವರಿಬ್ಬರ ಮುಂದಿನ ಪ್ರಗತಿ ಹೀಗೆ ಶೀಘ್ರ ಗತಿಯಲ್ಲಾಗುವುದು, ಎಂದು ನನಗೆ ಖಾತ್ರಿಯಿದೆ. – (ಪರಾತ್ಪರ ಗುರು) ಡಾ. ಆಠವಲೆ

ಬೆಳಗಾವಿ – ಇಲ್ಲಿ ೨೫.೪.೨೦೧೯ ರಂದು ನಡೆದ ಸತ್ಸಂಗ ಸಮಾರಂಭದಲ್ಲಿ ಡಾ. ನೀಲಕಂಠ ಅಮೃತ ದೀಕ್ಷಿತ ಇವರು ಸನಾತನದ ೮೭ ನೇ ಸಂತರಾದ ಬಗ್ಗೆ ಮತ್ತು ಅವರ ಪತ್ನಿ ಸೌ. ವಿಜಯಾ ನೀಲಕಂಠ ದೀಕ್ಷಿತ ಇವರು ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಂಡರೆಂದು ಘೋಷಿಸಲಾಯಿತು. ಈ ಕಾರ್ಯಕ್ರಮಕ್ಕೆ ಸನಾತನದ ಕರ್ನಾಟಕ ರಾಜ್ಯ ಧರ್ಮಪ್ರಸಾರಕ ಪೂ. ರಮಾನಂದ ಗೌಡ ಮತ್ತು ಬೆಳಗಾವಿಯಲ್ಲಿನ ಸನಾತನದ ೫೬ ನೇ ಸಂತ ಪೂ. ಶಂಕರ ಗುಂಜೇಕರ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಪೂ. (ಡಾ.) ದೀಕ್ಷಿತ ಅಜ್ಜನವರ ಸನ್ಮಾನವನ್ನು ಪೂ. ರಮಾನಂದ ಅಣ್ಣನವರು ಮಾಡಿದರು ಮತ್ತು ಸೌ. ವಿಜಯಾ ದೀಕ್ಷಿತ ಇವರ ಸತ್ಕಾರವನ್ನು ಪೂ. ಗುಂಜೇಕರ ಮಾಮಾ ಇವರು ಮಾಡಿದರು. ಬೆಳಗಾವಿಯ ಅನಗೋಳದಲ್ಲಿನ ಪೂ. (ಡಾ.) ನೀಲಕಂಠ ದೀಕ್ಷಿತ ಇವರ ಮನೆಯಲ್ಲಿ ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನಡೆದ ಈ ಮಹೋತ್ಸವ ಲಾಭವನ್ನು ಬೆಳಗಾವ ಜಿಲ್ಲೆಯಲ್ಲಿನ ಸಾಧಕರು ಗಣಕೀಯ ತಂತ್ರಾಂಶದ ಮಾಧ್ಯಮದಿಂದ ಪಡೆದರು.

ಹೀಗಾಯಿತು ಡಾ. ನೀಲಕಂಠ ದೀಕ್ಷಿತ ಅಜ್ಜನವರ ಸಂತಪದವಿ ಮತ್ತು ಅವರ ಪತ್ನಿ ಸೌ. ವಿಜಯಾ ದೀಕ್ಷಿತ ಅಜ್ಜಿಯವರು ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಂಡ ಘೋಷಣೆ

ಬೆಳಗಾವಿಯ ಡಾ. ದೀಕ್ಷಿತ ಇವರ ಮನೆಯಲ್ಲಿ ಸತ್ಸಂಗದ ಸಿದ್ಧತೆ ಪ್ರಾರಂಭವಾಯಿತು. ಸತ್ಸಂಗ ಸಮಾರಂಭದಲ್ಲಿ ಯಾವ ಮಾರ್ಗದರ್ಶನ ದೊರಕುವುದು, ಎಂಬ ಜಿಜ್ಞಾಸೆ ವಯೋವೃದ್ಧ ದೀಕ್ಷಿತ ದಂಪತಿಗಳೊಂದಿಗೆ ಬೆಳಗಾವದಲ್ಲಿನ ಎಲ್ಲ ಸಾಧಕರಿಗೂ ಇತ್ತು. ‘ಗುರುದೇವರ ಎಷ್ಟು ಕೃಪೆ, ನಮಗೆ ಸತ್ಸಂಗ ಮಹೋತ್ಸವದ ಸ್ಥಳಕ್ಕೆ ಹೋಗಲು ಪ್ರವಾಸದ ಕಷ್ಟವಾಗಬಾರದೆಂದು; ಪರಮದಯಾಳು ಶ್ರೀಗುರುಗಳು ಇರುವ ಮನೆಯಲ್ಲಿಯೇ ಸತ್ಸಂಗಸಮಾರಂಭದ ಆಯೋಜನೆ ಮಾಡಿದರು, ಇದಕ್ಕಾಗಿ ಅತ್ಯಂತ ಕೃತಜ್ಞತೆಯು ದೀಕ್ಷಿತ ದಂಪತಿಗಳ ಮುಖದಲ್ಲಿ ಪ್ರತಿಕ್ಷಣ ಅರಿವಾಗುತ್ತಿತ್ತು. ನೋಡನೋಡುತ್ತಾ ಸತ್ಸಂಗ ಸಮಾರಂಭ ಪ್ರಾರಂಭವಾಗುವ ಸಮಯವಾಯಿತು. ಗಾಲಿಕುರ್ಚಿಯಲ್ಲಿ (‘ವಿಲಚೆರ್’ನಲ್ಲಿ) ಕುಳಿತ ಡಾ. ದೀಕ್ಷಿತಅಜ್ಜನವರ ಎಡಗಡೆಗೆ ಅವರೊಂದಿಗೆ ನೆರಳಿನಂತಿದ್ದು ಅವರ ಸೇವೆ ಮಾಡುವ ಅವರ ಪತ್ನಿ ಸೌ. ವಿಜಯಾ ದೀಕ್ಷಿತ ಕುಳಿತಿದ್ದರು. ಪೂ. ರಮಾನಂದ ಗೌಡ ಇವರು ಡಾ. ದೀಕ್ಷಿತ ಇವರ ಬಲಗಡೆಗೆ ಬಂದು ಕುಳಿತರು. ಅವರೊಂದಿಗೆ ಕೆಲವು ನಿಮಿಷ ಅನೌಪಚಾರಿಕ ಮಾತನಾಡಿದ ನಂತರ ಪೂ.ರಮಾನಂದ ಅಣ್ಣನವರು ‘ಪ.ಪೂ. ಡಾಕ್ಟರರು ನಮಗಾಗಿ ಒಂದು ವಿಶೇಷ ಉಡುಗೊರೆ ಕಳುಹಿಸಿದ್ದಾರೆ. ಅದನ್ನು ನೋಡೋಣ ! ಎಂದು ಹೇಳಿದರು ಮತ್ತು ‘ಗೋವಾದಲ್ಲಿನ ಸನಾತನ ಆಶ್ರಮದಲ್ಲಿ ಓರ್ವ ಸಂತರೊಂದಿಗೆ ನಡೆದ ದೀಕ್ಷಿತ ದಂಪತಿಗಳ ಭೇಟಿಯ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಲಾಯಿತು. ಚಿತ್ರಮುದ್ರಿಕೆಯನ್ನು ನೋಡಿ ದೀಕ್ಷಿತ ದಂಪತಿಗಳೊಂದಿಗೆ ಎಲ್ಲರದ್ದೂ ಭಾವಜಾಗೃತವಾಯಿತು. ಅದರ ನಂತರ ಪೂ. ರಮಾನಂದಅಣ್ಣನವರು ಡಾ. ದೀಕ್ಷಿತ ಅಜ್ಜನವರಿಗೆ, ‘ದೀಕ್ಷಿತ ಅಜ್ಜನವರೇ, ನೀವು ಪ.ಪೂ. ಡಾಕ್ಟರರನ್ನು ಒಂದು ಬಾರಿ, ‘ನೀವು ನನ್ನ ಸತ್ಕಾರ ಏಕೆ ಮಾಡುತ್ತಿರುವಿರಿ ? ಎಂದು ಕೇಳಿದ್ದಿರಿ. ಆ ಪ್ರಶ್ನೆಯ ಉತ್ತರ ಹೀಗಿದೆ, ನಿಮ್ಮ ಆಧ್ಯಾತ್ಮಿಕ ಮಟ್ಟ ಶೇ. ೭೧ ರಷ್ಟಾಗಿದೆ. ನೀವು ಸಂತರಾಗಿದ್ದಿರಿ, ಎಂದು ಪ.ಪೂ. ಡಾಕ್ಟರು ಹೇಳಿದ್ದಾರೆ, ಎಂದು ಹೇಳಿದರು. ಅದರ ನಂತರ ಪೂ. (ಡಾ.) ದೀಕ್ಷಿತ ಅಜ್ಜನವರಿಗೆ ಪೂ. ರಮಾನಂದ ಅಣ್ಣನವರು ಪುಷ್ಪಹಾರ ಹಾಕಿ ಮತ್ತು ಪ.ಪೂ. ಡಾಕ್ಟರರ ಛಾಯಾಚಿತ್ರ, ಶಾಲು ಮತ್ತು ಶ್ರೀಫಲ ನೀಡಿ ಸನ್ಮಾನಿಸಿದರು.

ಪೂ. ದೀಕ್ಷಿತ ಅಜ್ಜನವರ ಕುರಿತು ಕುಟುಂಬದವರು ಮನೋಗತ ವ್ಯಕ್ತಪಡಿಸಿದನಂತರ ಕೊನೆಗೆ ಸೌ. ವಿಜಯಾ ದೀಕ್ಷಿತ ಅಜ್ಜಿಯವರು ಮನೋಗತ ವ್ಯಕ್ತಪಡಿಸಿದರು. ಅವರ ಬಗ್ಗೆ ಹೇಳುವಾಗ ಪೂ.ರಮಾನಂದ ಅಣ್ಣನವರು ಪೂ. (ಡಾ.) ದೀಕ್ಷಿತ ಅಜ್ಜನವರ ಇಷ್ಟೊಂದು ವರ್ಷಗಳಿಂದ ಭಾವಪೂರ್ಣ ಸೇವೆ ಮಾಡುತ್ತಿದ್ದ ಅಜ್ಜಿಯವರ ಆಧ್ಯಾತ್ಮಿಕ ಮಟ್ಟವೂ ಕಳೆದ ಎರಡು ವರ್ಷಗಳಲ್ಲಿ ಶೇ. ೫ ರಷ್ಟು ಹೆಚ್ಚಾಗಿ ಶೇ. ೬೭ ರಷ್ಟು ಆದ ಬಗ್ಗೆ ಘೋಷಣೆ ಮಾಡಿದರು. ಅನಂತರ ಪೂ. ಶಂಕರ ಗುಂಜೆಕರ ಮಾಮಾ ಇವರಿಂದ ಸೌ. ದೀಕ್ಷಿತ ಅಜ್ಜಿಯವರ ಸತ್ಕಾರ ಮಾಡಲಾಯಿತು.

ಪೂ. (ಡಾ.) ನೀಲಕಂಠ ದೀಕ್ಷಿತ ಇವರ ಸನ್ಮಾನ ಮಾಡುವಾಗ ಪೂ. ರಮಾನಂದ ಗೌಡ, ಪಕ್ಕದಲ್ಲಿ ಸೌ. ವಿಜಯಾ ದೀಕ್ಷಿತ

ಧ್ವನಿಚಿತ್ರಮುದ್ರಿಕೆಯನ್ನು ನೋಡಿ ಡಾ. ನೀಲಕಂಠ ದೀಕ್ಷಿತ ಮತ್ತು ಸೌ. ವಿಜಯಾ ದೀಕ್ಷಿತ ಇವರು ವ್ಯಕ್ತಪಡಿಸಿದ ಮನೋಗತ

೧. ‘ಧ್ವನಿಚಿತ್ರಮುದ್ರಿಕೆ ಮೂಲಕ ಪುನಃ ಗುರುದೇವರ ದರ್ಶನವಾಯಿತು. – ಪೂ. (ಡಾ.) ದೀಕ್ಷಿತ ಅಜ್ಜನವರು

೨. ‘ನಮ್ಮೆಲ್ಲ ಕುಟುಂಬ ಪ.ಪೂ. ಡಾಕ್ಟರರ ಋಣಿಯಾಗಿದ್ದೇವೆ. ಪ.ಪೂ. ಡಾಕ್ಟರರೊಂದಿಗೆ ಇದ್ದ ಕ್ಷಣಗಳು ನಮಗೆ ಜೀವನದ ಕೊನೆಯ ವರೆಗೆ ನೆನಪಿನಲ್ಲಿರುವುದು. ಎಲ್ಲ ಸಾಧಕರೂ ನಮಗೆ ತುಂಬಾ ಪ್ರೀತಿಯಿಂದ ನೋಡಿದ್ದಾರೆ. ಪ.ಪೂ. ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು ! – ಸೌ. ವಿಜಯಾ ದೀಕ್ಷಿತ, ಬೆಳಗಾವಿ.

ಪೂ. (ಡಾ.) ನೀಲಕಂಠ ದೀಕ್ಷಿತ ಅಜ್ಜನವರಿಗೆ ಸಂತರೆಂದು ಘೊಷಿಸಿದ ನಂತರ ಅವರ ಕುಟುಂಬದವರು ವ್ಯಕ್ತಪಡಿಸಿದ ಮನೋಗತ

೧. ‘ಆಚಾರಃ ಪರಮೋ ಧರ್ಮಃ ಅಂದರೆ ‘ಆಚಾರವು ಪರಮ ಧರ್ಮವಿದೆ, ಈ ತತ್ತ್ವಕ್ಕನುಸಾರ ಜೀವನ ನಡೆಸಿ ಅಧ್ಯಾತ್ಮದಲ್ಲಿ ಪ್ರಗತಿ ಮಾಡಿದ ಸಾಕಾರ ಉದಾಹರಣೆ ಅಂದರೆ ಅತ್ತೆ-ಮಾವ (ಮಾವನವರು ಪೂ. (ಡಾ.) ದೀಕ್ಷಿತ ಮತ್ತು ಅತ್ತೆ ಸೌ. ದೀಕ್ಷಿತ) ಇವರು ಜೀವನವೆಲ್ಲ ಆಚಾರಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ನನ್ನ ಮದುವೆ ಆದನಂತರ ಅವರ ರೂಪದಲ್ಲಿ ನನಗೆ ತಂದೆ-ತಾಯಿಯೇ ಭೇಟಿಯಾದರು ಮತ್ತು ಈಗ ಅವರ ರೂಪದಲ್ಲಿ ನನಗೆ ಸಂತರು ಭೇಟಿಯಾದರು. ನನ್ನಿಂದ ಅವರ ಅಧಿಕಾಧಿಕ ಸೇವೆಯಾಗಲಿ. – ಶ್ರೀ. ಯಶವಂತ ಕಣಗಲೇಕರ (ಅಳಿಯ), ಬೆಳಗಾವಿ.

೨. ‘ತಂದೆ-ತಾಯಿ ಇವರೇ ಮೊದಲ ಗುರುಗಳು, ಎಂದು ಹೇಳುತ್ತಾರೆ. ತಂದೆ-ತಾಯಿಯವರು ನಮ್ಮ ಮೇಲೆ ಉತ್ತಮ ಸಂಸ್ಕಾರಗಳನ್ನು ಮಾಡಿದರು. ಅವರಿಂದಲೇ ನಾವು ಸಾಧನೆಯಲ್ಲಿ ತೊಡಗಿದೆವು ಮತ್ತು ಗುರುದೇವರ ಭೇಟಿಯಾಯಿತು. ಅದಕ್ಕಾಗಿ ಕೃತಜ್ಞತೆಯನ್ನು ಬಿಟ್ಟರೆ ನನ್ನಲ್ಲಿ ಬೇರೆ ಯಾವ ಶಬ್ದವೂ ಇಲ್ಲ. – ಸೌ. ಅಂಜಲಿ ಕಣಗಲೇಕರ (ಪೂ. (ಡಾ.) ದೀಕ್ಷಿತ ಮತ್ತು ಅತ್ತೆ ಸೌ. ದೀಕ್ಷಿತ ಇವರ ಮಗಳು). ಬೆಳಗಾವಿ.

೩. ‘ಇಂದಿನ ದಿನ ತುಂಬಾ ಆನಂದದ ದಿನವಾಗಿದೆ. ಪೂ. ಮಾವನವರಿಂದ ((ಡಾ.) ದೀಕ್ಷಿತಅಜ್ಜನವರಿಂದ) ನಾವು ಸಾಧನೆ ಕಲಿತೆವು, ಶರಣಾಗತರಾಗುವುದನ್ನು ಕಲಿತೆವು. ಈಗ ದೇವಸ್ಥಾನಕ್ಕೆ ಹೋಗುವ ಅವಶ್ಯಕತೆ ಇಲ್ಲ, ಎಂದು ನನಗೆ ಅನಿಸುತ್ತದೆ. ಅವರ ಸೇವೆ ನನ್ನಿಂದ ಆಗಲಿ. ಗುರುದೇವರಲ್ಲಿ ಕೋಟಿ ಕೋಟಿ ಕೃತಜ್ಞತೆ. – ಸೌ. ಅನಘಾ ಜಯಂತ ದೀಕ್ಷಿತ ಹಿರಿಯ ಸೊಸೆ), ಬೆಳಗಾವಿ.

೪. ‘ಅಜ್ಜನವರ ಸ್ಥಾನದಲ್ಲಿ ನನಗೆ ಪೂ. ದಾದಾಜಿರವರ (ಯೋಗತಜ್ಞ ದಾದಾಜಿ ವೈಶಂಪಾಯನ ಇವರ) ಇನ್ನು ಕೆಲವೊಮ್ಮೆ ಪ.ಪೂ. ಡಾಕ್ಟರರ ದರ್ಶನ ಆಗುತ್ತಿತ್ತು. ಸಂತರ ಚೈತನ್ಯವು ವಿವಿಧ ಮಾಧ್ಯಮಗಳಿಂದ ಕಾರ್ಯನಿರತವಾಗಿರುತ್ತದೆ. ಆದುದರಿಂದ ನನಗೆ ಅಜ್ಜನವರ ಸ್ಥಾನದಲ್ಲಿ ಹೀಗೆ ದರ್ಶನವಾಗುತ್ತಿತ್ತು. ಇದು ಪ.ಪೂ. ಡಾಕ್ಟರರು ನನಗೆ ಈ ಸತ್ಸಂಗ ಸಮಾರಂಭದ ಮೂಲಕ ಕಲಿಸಿದರು. ಅವರ ಬಗ್ಗೆ ನಾನು ಕೃತಜ್ಞತೆ ವ್ಯಕ್ತಪಡಿಸುತ್ತೇನೆ. – ಡಾ. ಅಂಜೇಶ ಕಣಗಲೇಕರ (ಮೊಮ್ಮಗ), ಬೆಳಗಾವಿ.

೫. ‘ಬೇಸಿಗೆಯ ರಜೆಯಲ್ಲಿ ನಾವು ಅಜ್ಜನವರ ಮನೆಗೆ ಹೋಗುತ್ತಿದ್ದೆವು. ಆಗ ನಾನು ಅಜ್ಜನವರಿಗೆ ಮುಂಜಾನೆ ೩ ಗಂಟೆಯಿಂದ ದೇವರಪೂಜೆ ಮಾಡುವುದು, ಗಿಡಗಳಿಗೆ ನೀರು ಹಾಕುವುದು ಮುಂತಾದವುಗಳನ್ನು ದಿನನಿತ್ಯ ಮಾಡುತ್ತಿರುವುದನ್ನು ನೋಡುತ್ತಿದ್ದೆನು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಅವರು ಆಚಾರಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಅಜ್ಜನವರು ನೀಡಿದ ಪ್ರೀತಿಯಿಂದಾಗಿ ಅನೇಕ ಜನರಿಗೆ ಅವರ ಆಧಾರವೆನಿಸುತ್ತದೆ. ‘ಡಾ. ದೀಕ್ಷಿತರವರ ಮನೆಗೆ ಹೋಗಬೇಕು, ಎಂದು ಹೇಳಿದರೆ ಸಾಕು, ಅನೇಕ ರಿಕ್ಷಾಚಾಲಕರು ಸಂಬಂಧಪಟ್ಟ ವ್ಯಕ್ತಿಗಳನ್ನು ಸರಿಯಾಗಿ ಅಜ್ಜನವರ ಮನೆಗೆ ಕರೆದುಕೊಂಡು ಹೋಗುತ್ತಾರೆ. ನನ್ನ ಮೇಲೆ ಸಂಸ್ಕಾರ ನೀಡುವ ಅಜ್ಜ-ಅಜ್ಜಿ ನನಗೆ ಲಭಿಸಿದರು, ಅದಕ್ಕಾಗಿ ನಾನು ಗುರುದೇವರ ಚರಣಗಳಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ. – ಶ್ರೀ. ಸತ್ಯಕಾಮ ಕಣಗಲೇಕರ (ಮೊಮ್ಮಗ)

೬. ‘ಪತಿ (ಪೂ. (ಡಾ.) ದೀಕ್ಷಿತ ಇವರು ಅತ್ಯಂತ ಶಾಂತ ಸ್ವಭಾವದವರಿದ್ದಾರೆ. ಅವರ ಎಂದಿಗೂ ಯಾವ ವಿಷಯಗಳಲ್ಲಿ ತಕರಾರು ಇರುವುದಿಲ್ಲ. ತಿನ್ನುವುದು, ಕುಡಿಯುವುದು, ಔಷಧಿ ತೆಗೆದುಕೊಳ್ಳುವುದು ಮುಂತಾದ ವಿಷಯಗಳಲ್ಲಿ ಅವರು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಅವರು ಸ್ವತಃ ಡಾಕ್ಟರ ಇದ್ದರೂ ಇತರ ಡಾಕ್ಟರರು ಹೇಳಿದಂತೆ ಕೇಳುತ್ತಾರೆ. ಅವರು ತುಂಬಾ ಶಾಂತವಾಗಿರುತ್ತಾರೆ. ಅವರಲ್ಲಿನ ಈ ಪರಿವರ್ತನೆ ನನಗೆ ಎದ್ದು ಕಾಣುತ್ತದೆ. ನನಗೆ ಸಮಾಜ ಸೇವೆ ಮಾಡಲು ತುಂಬಾ ಹಿಡಿಸುತ್ತಿತ್ತು; ಆದರೆ ಅವರ (ಪೂ. (ಡಾ.) ದೀಕ್ಷಿತ ಇವರ) ಸೇವೆಗಾಗಿ ಸಮಯ ಸಿಗಬೇಕೆಂದು ನಾನು ಸಮಾಜಸೇವೆ ಮಾಡುವುದನ್ನು ನಿಲ್ಲಿಸಿದೆನು. – ಸೌ. ವಿಜಯಾ ದೀಕ್ಷಿತ (ಪತ್ನಿ), ಬೆಳಗಾವಿ.

ತಮಾಷೆಯ ಪ್ರಸಂಗ : ಸೌ. ದೀಕ್ಷಿತ ಇವರ ಮನೋಗತ ಕೇಳಿದ ನಂತರ ಪೂ. ಅಜ್ಜನವರು ತಮಾಷೆಯಿಂದ ಸೌ. ದೀಕ್ಷಿತ ಇವರಿಗೆ, “ನಿನಗೆ ನನ್ನಕುರಿತು ಮಾತನಾಡಲು ಹೇಳಿದ್ದರು; ಆದರೆ ನೀನು ನಿನ್ನದೇ ಪ್ರಶಂಸೆ ಮಾಡುತ್ತಿದ್ದೆ ಎಂದು ಹೇಳಿದರು. ಅದಕ್ಕೆ ಅಜ್ಜಿಯವರು, “ಹೌದು ಅದೂ ನಿಮ್ಮ ವಿಷಯದಲ್ಲಿಯೇ ಇತ್ತು ಎಂದು ಹೇಳಿದರು.

ಸೌ. ವಿಜಯಾ ದೀಕ್ಷಿತ ಇವರ ಸತ್ಕಾರ ಮಾಡುವಾಗ ಪೂ. ಶಂಕರ ಗುಂಜೇಕರ

ಸೌ. ವಿಜಯಾ ದೀಕ್ಷಿತ ಅಜ್ಜಿಯವರ ಕುರಿತು ಕುಟುಂಬದವರು ವ್ಯಕ್ತಪಡಿಸಿದ ಮನೋಗತ

೧. ‘ಅಜ್ಜಿಯವರಿಗೆ ಬಾಲ್ಯದಿಂದಲೇ ಸಂತರ ಸತ್ಸಂಗ ಲಭಿಸಿದೆ. – ಪೂ. (ಡಾ.) ನೀಲಕಂಠ ದೀಕ್ಷಿತ

೨. ಧರ್ಮಾಚರಣೆಯನ್ನು ಅವರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅವರಿಗೆ ಎಂದೂ ದುಃಖ ಅಥವಾ ಬೇಸರವಾಗಿದ್ದನ್ನು ನಾನು ನೋಡಲಿಲ್ಲ. – ಶ್ರೀ. ಯಶವಂತ ಕಣಗಲೇಕರ (ಅಳಿಯ), ಬೆಳಗಾವಿ

೩. ‘ಸಮಾಜಸೇವೆ ಮಾಡುವುದು ಅವರಿಗೆ ಇಷ್ಟವಿತ್ತು; ಆದರೆ ಈಗ ಅವರಲ್ಲಿ ನಾಮಜಪ ಮಾಡುವ ಆಸಕ್ತಿ ನಿರ್ಮಾಣವಾಗಿದೆ. ಅವರಿಗೆ ಯಾವುದರ ಬಗ್ಗೆಯೂ ಪ್ರತಿಕ್ರಿಯೆ ಬರುವುದಿಲ್ಲ. ಈ ಪರಿವರ್ತನೆ ಅವರಲ್ಲಿ ತೀವ್ರವಾಗಿ ಕಂಡುಬರುತ್ತದೆ. – ಸೌ. ಅಂಜಲಿ ಕಣಗಲೇಕರ (ಮಗಳು), ಬೆಳಗಾವಿ.

೪. ‘ತಾಯಿಯವರು ಮಿತವ್ಯಯರಿದ್ದಾರೆ. ಅವರು ಯಾವುದನ್ನೂ ವ್ಯರ್ಥ ಮಾಡುವುದಿಲ್ಲ. ಯಾವಾಗಲೂ ಸಮಾಧಾನದಿಂದಿರುತ್ತಾರೆ. ಅವರಿಗೆ ಬೆಳಗ್ಗೆ ಎಲ್ಲಿಯಾದರೂ ಹೋಗುವುದಿದ್ದರೆ, ಮುಂಜಾನೆ ೪ ಗಂಟೆಗೆ ಎದ್ದು ಅವರು ದೇವರಪೂಜೆ ಮಾಡಿದ ನಂತರವೇ ಅವರ ಬೇರೆ ಕೆಲಸಕ್ಕೆ ಹೋಗುತ್ತಾರೆ. ಅವರು ಆಲಸ್ಯ ಮಾಡುವುದಿಲ್ಲ. ನನ್ನ ಮದುವೆಯಾಗಿ ೩೨ ವರ್ಷಗಳಾದರೂ ಇಂದಿಗೂ ಅವರಿಂದ ನನಗೆ ತುಂಬಾ ಕಲಿಯಲು ಸಿಗುತ್ತದೆ. – ಸೌ. ಅನಘಾ ಜಯಂತ ದೀಕ್ಷಿತ (ಹಿರಿಯ ಸೊಸೆ), ಬೆಳಗಾವಿ.

೫. ‘ಅಜ್ಜಿಯವರು ನಮಗೆ ಆಧ್ಯಾತ್ಮಿಕ ಆಧಾರವೆನಿಸುತ್ತಾರೆ. – ಡಾ. ಅಂಜೇಶ ಕಣಗಲೇಕರ (ಮೊಮ್ಮಗ), ಬೆಳಗಾವಿ.

೬. ‘ಅಜ್ಜಿಯವರನ್ನು ನಾನು ಸತತವಾಗಿ ಕಾರ್ಯನಿರತರಾಗಿರುವುದನ್ನು ನೋಡಿದ್ದೇನೆ. ಅವರು ಲೇಖನ, ವಾಚನ, ಭಜನೆ ಹಾಡುವುದು ಅಥವಾ ನಾಮಸ್ಮರಣೆ ಇವುಗಳ ಪೈಕಿ ಏನಾದರೂ ಸತತವಾಗಿ ಮಾಡುತ್ತಿರುತ್ತಾರೆ. – ಶ್ರೀ. ಸತ್ಯಕಾಮ ಕಣಗಲೇಕರ. (ಮೊಮ್ಮಗ)

ಪೂ. (ಡಾ.) ನೀಲಕಂಠ ದೀಕ್ಷಿತ ಅಜ್ಜನವರನ್ನು ಸಂತರೆಂದು ಘೋಷಿಸಿದ ನಂತರ ಅವರು ವ್ಯಕ್ತಪಡಿಸಿದ ಮನೋಗತ

‘ನಾನು ಏನೂ ಮಾಡದೇ ನನ್ನ ಪ್ರಗತಿ ಹೇಗಾಯಿತು ? ಪ.ಪೂ. ಡಾಕ್ಟರರ ಚರಣಗಳಲ್ಲಿ ಕೃತಜ್ಞತೆ ! (ಈ ಸಮಯದಲ್ಲಿ ಭಾವೋದ್ವೇಗದಿಂದ ತುಂಬಿದ ಪೂ. ದೀಕ್ಷಿತ ಅಜ್ಜನವರ ಭಾವಜಾಗೃತಿಯಾದುದರಿಂದ ಅವರಿಗೆ ಹೆಚ್ಚು ಮಾತನಾಡಲು ಆಗಲಿಲ್ಲ.)

ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟ ಘೋಷಿಸಿದ ನಂತರ ಸೌ. ವಿಜಯಾ ದೀಕ್ಷಿತ ಅಜ್ಜಿಯವರು ವ್ಯಕ್ತಪಡಿಸಿದ ಮನೋಗತ !

‘ದೇವರನ್ನು ಸ್ಮರಿಸುತ್ತೇನೆ ಮತ್ತು ‘ದೇವರ ಸ್ಮರಣೆಯಾಗುತ್ತದೆ, ಇದರಲ್ಲಿ ಭೇದವಿದೆ. ಪ್ರಯತ್ನ ಮಾಡದೇ ದೇವರ ಸ್ಮರಣೆಯಾಗುತ್ತದೆ, ಆಗ ಬಹಳ ಆನಂದ ಸಿಗುತ್ತದೆ. ಒಂದು ವೇಳೆ ನಾವು ದೇವರನ್ನು ಮರೆತರೂ, ಅವನು ನಮ್ಮನ್ನು ಎಂದಿಗೂ ಮರೆಯುವುದಿಲ್ಲ. ಅವನು ನಮಗಾಗಿ ಎಲ್ಲವನ್ನೂ ಮಾಡುತ್ತಿರುತ್ತಾನೆ. ಸಂಸಾರಿಕ ದೃಷ್ಟಿಯಿಂದ ಡಾ. ದೀಕ್ಷಿತ ಇವರು ನನ್ನ ಪತಿ ಇದ್ದಾರೆ; ಆದರೆ ನಾನು ನನ್ನನ್ನು ನನ್ನಷ್ಟಕ್ಕೆ ಅವರ ‘ಶಿಷ್ಯಲೆಂದು ತಿಳಿದಿದ್ದೇನೆ. ಅವರೇ ನನಗೆ ಅನೇಕ ವಿಷಯ ಕಲಿಸಿದರು. ನನಗೆ ಏನಾದರೂ ತಿಳಿಯದಿದ್ದರೆ ಅವರನ್ನೇ ಕೇಳುತ್ತೇನೆ ಮತ್ತು ಅವರು ನನಗೆ ತಿಳಿಸಿ ಹೇಳುತ್ತಾರೆ. ‘ಪತಿಯನ್ನು ಗುರುವೆಂದು ತಿಳಿಯಬೇಕು, ಎಂದು ಗುರುಚರಿತ್ರೆಯಲ್ಲಿ ಹೇಳಲಾಗಿದೆ, ಅದಕ್ಕನುಸಾರ ನಾನು ಅವರನ್ನು ಗುರುವೆಂದು ತಿಳಿಯುತ್ತೇನೆ. ‘ಪತಿ ಕೆಟ್ಟವರಾಗಿದ್ದರೆ, ವ್ಯಸನಿಯಾಗಿದ್ದರೆ, ಅವರನ್ನು ಗುರು ಎಂದು ತಿಳಿದರೆ ಹೇಗೆ ನಡೆಯುತ್ತದೆ ? ಎಂದು ಯಾರಿಗಾದರೂ ಅನಿಸಬಹುದು. ನನಗೆ, ಪತಿ ಕೆಟ್ಟವರಿದ್ದರೆ ಇರಲಿ. ನಾವು ಒಳ್ಳೆಯವರಿದ್ದೆವಲ್ಲ, ನಮ್ಮ ಒಳ್ಳೆಯ ಆಚರಣೆಯಿಂದ ಪತಿಗೂ ಉತ್ತಮ ರೀತಿಯಲ್ಲಿ ವರ್ತಿಸಲು ಪ್ರೇರಣೆ ಸಿಗುವುದು, ಎಂದು ನನಗನಿಸಿತು. ದೇವರು ನಮ್ಮ ಕಡೆಗೆ ಬರುವನು.

Kannada Weekly | Offline reading | PDF