ಹಿಂದೂ ಧರ್ಮರಕ್ಷಣೆಗಾಗಿ ಹಿಂದುತ್ವನಿಷ್ಠ ನ್ಯಾಯವಾದಿಗಳ ಕೃತಿಶೀಲ ಸಂಘಟನೆ ಮಾಡುವ ಕಾರ್ಯದಲ್ಲಿ ಸಮರ್ಪಿತ ಭಾವದಿಂದ ಸಹಭಾಗಿಯಾಗುವ ಅಂಕೋಲಾದ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಸೌ. ದಿವ್ಯಾ ಉಮಾಶಂಕರ !

‘ಚೈತ್ರ ಕೃಷ್ಣ ಪಕ್ಷ ಪಂಚಮಿ (೨೪.೪.೨೦೧೯) ರಂದು ಅಂಕೋಲಾದ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಸೌ. ದಿವ್ಯಾ ಉಮಾಶಂಕರ (ಪೂರ್ವಾಶ್ರಮದ ಕು. ದಿವ್ಯಾ ಬಾಳೆಹಿತ್ತಲ) ಮತ್ತು ಹುಬ್ಬಳ್ಳಿಯ ನ್ಯಾಯವಾದಿ ಉಮಾಶಂಕರ ಇವರಿಬ್ಬರ ವಿವಾಹ ನೆರವೇರಿತು. ಈ ನಿಮಿತ್ತ ಸೌ. ದಿವ್ಯಾ ಇವರ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡುತ್ತಿದ್ದೇವೆ.

ನ್ಯಾಯವಾದಿ ಉಮಾಶಂಕರ ಮತ್ತು ನ್ಯಾಯವಾದಿ ದಿವ್ಯಾ ಇವರ ವಿವಾಹದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಹಾರ್ದಿಕ ಶುಭಾಶಯಗಳು !

೧. ಹಿಂದೂ ಧರ್ಮರಕ್ಷಣೆಗಾಗಿ ಹಿಂದುತ್ವನಿಷ್ಠ ನ್ಯಾಯವಾದಿಗಳ ಕೃತಿಶೀಲ ಸಂಘಟನೆ ಮಾಡುವ ತಳಮಳ ಇರುವುದು

೧ ಅ. ಹಿಂದೂ ವಿಧಿಜ್ಞ ಪರಿಷತ್ತಿನ ಕಾರ್ಯವನ್ನು ತಿಳಿದುಕೊಂಡು ‘ಹಿಂದುತ್ವ’ ಮತ್ತು ‘ರಾಷ್ಟ್ರ’ ಈ ವಿಷಯಗಳಲ್ಲಿ ಆಸಕ್ತಿ ಇರುವ ಕರ್ನಾಟಕದ ನ್ಯಾಯವಾದಿಗಳ ಸಂಘಟನೆ ಮಾಡಲು ತಳಮಳದಿಂದ ಪ್ರಯತ್ನಿಸುವುದು : ‘ಡಿಸೆಂಬರ್ ೨೦೧೬ ರಲ್ಲಿ ಹಿಂದೂ ವಿಧಿಜ್ಞ ಪರಿಷತ್‌ನಿಂದ ಆಯೋಜಿಸಲ್ಪಟ್ಟ ನ್ಯಾಯವಾದಿ ಅಧಿವೇಶನಕ್ಕೆ ಕು. ದಿವ್ಯಾಕ್ಕ ಪ್ರಥಮಬಾರಿ ಬಂದಿದ್ದರು. ಆಗ ‘ಅಧಿವೇಶನದಲ್ಲಿ ಹಿಂದೂ ಧರ್ಮ ಮತ್ತು ರಾಷ್ಟ್ರ ಇವುಗಳ ಕುರಿತು ಮಂಡಿಸಲಾಗುವ ವಿಷಯವನ್ನು ಅವರು ಮನಸ್ಸಿನಿಂದ ತಿಳಿದುಕೊಳ್ಳುತ್ತಿದ್ದಾರೆ’, ಎಂಬುದು ನನ್ನ ಗಮನಕ್ಕೆ ಬಂದಿತು. ಅನಂತರ ಅವರು ಸನಾತನ ಸಂಸ್ಥೆಯ ಗೌರವಾನ್ವಿತ ಕಾನೂನುವಿಷಯದ ಸಲಹೆಗಾರರಾದ ನ್ಯಾಯವಾದಿ ರಾಮದಾಸ ಕೇಸರಕರ ಇವರೊಂದಿಗೆ ಕರ್ನಾಟಕ ರಾಜ್ಯದಲ್ಲಿ ನ್ಯಾಯವಾದಿಗಳ ಭೇಟಿಗೆಂದು ಹೋಗಿದ್ದರು. ಅವರಿಬ್ಬರ ಪ್ರಯಾಣದಿಂದ ತುಂಬಾ ಸಕಾರಾತ್ಮಕ ಪರಿಣಾಮದಿಂದಾಗಿ ಮೇ ೨೦೧೮ ರಲ್ಲಿ ನೆರವೇರಿದ ನ್ಯಾಯವಾದಿಗಳ ಅಧಿವೇಶನಕ್ಕೆ ಕರ್ನಾಟಕ ರಾಜ್ಯದಿಂದ ೨೨ ನ್ಯಾಯವಾದಿಗಳು ಆಗಮಿಸಿದ್ದರು. ಅವರೆಲ್ಲರೂ ‘ಹಿಂದುತ್ವ’ ಮತ್ತು ‘ರಾಷ್ಟ್ರ’ ಈ ವಿಷಯಗಳಲ್ಲಿ ತುಂಬಾ ಆಸಕ್ತಿಯಿಂದ ಅಧಿವೇಶನದಲ್ಲಿ ಪಾಲ್ಗೊಂಡರು. ಇದರ ಶ್ರೇಯಸ್ಸು ಕೇವಲ ನ್ಯಾಯವಾದಿ ದಿವ್ಯಾ ಮತ್ತು ನ್ಯಾಯವಾದಿ ಕೇಸರಕರಕಾಕಾ ಇವರಿಗೆ ಸಲ್ಲುತ್ತದೆ. ಈ ಎರಡು ದಿನಗಳ ಅಧಿವೇಶನದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಮತ್ತು ಪಂಢರಪೂರದ ನ್ಯಾಯವಾದಿ ನಿಲೇಶ ಸಾಂಗೋಲಕರ ಇವರೊಡನೆ ದಿವ್ಯಾಕ್ಕಳು ತುಂಬಾ ಕೃತಿಶೀಲರಾಗಿದ್ದರು. ಅದೇರೀತಿ ಅಧಿವೇಶನಕ್ಕೆ ಸಂಬಂಧಪಟ್ಟ ಸೇವೆ ಮುಗಿದ ತಕ್ಷಣ, ಅವರು ಅಡುಗೆಮನೆಯಲ್ಲಿ ಸೇವೆ ಮಾಡುತ್ತಿದ್ದರು. ಆಗ ‘ಒಬ್ಬ ವ್ಯಕ್ತಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಮಷ್ಟಿ ಸೇವೆ ಹೇಗೆ ಮಾಡಲು ಸಾಧ್ಯ ?’ ಎಂದು ಆಶ್ಚರ್ಯವೆನಿಸಿತು.

೧ ಆ. ಪ್ರಗತಿಪರರ ಹತ್ಯೆಗಳ ಪ್ರಕರಣಗಳಲ್ಲಿ ಹಿಂದುತ್ವನಿಷ್ಠರನ್ನು ವಿನಾಕಾರಣ ಸಿಲುಕಿಸಲಾಯಿತು. ಆ ಸಮಯಕ್ಕೆ ಅವರು ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಮತ್ತು ನ್ಯಾಯವಾದಿ ಸಮೀರ ಪಟವರ್ಧನ ಇವರ ಮಾರ್ಗದರ್ಶನದಲ್ಲಿ ಹಿಂದುತ್ವನಿಷ್ಠರಿಗೆ ಕಾನೂನು ವಿಷಯದಲ್ಲಿ ಮಾರ್ಗದರ್ಶನ ಮಾಡುವ ಸೇವೆಯಲ್ಲಿ ಉತ್ತಮವಾಗಿ ಸಹಭಾಗಿಯಾದರು. ಈ ರೀತಿ ಅವರು ಹಿಂದುತ್ವನಿಷ್ಠರಿಗೆ ಸಹಾಯ ಮಾಡುವ ಸಮಷ್ಟಿ ಸೇವೆಯಲ್ಲಿ ಸತತ ಮನಃಪೂರ್ವಕವಾಗಿ ಸಹಭಾಗಿಯಾಗುತ್ತಾರೆ.

೧ ಇ. ಹಿಂದುತ್ವನಿಷ್ಠ ನ್ಯಾಯವಾದಿಗಳ ಸಂಘಟನೆ ಮಾಡುವ ಈಶ್ವರೀ ಸೇವೆಯಲ್ಲಿ ಸಮರ್ಪಿತಭಾವದಿಂದ ಸೇವೆ ಮಾಡುತ್ತಿರುವುದರಿಂದ ಅವರಿಗೆ ಭಗವಾನ ಶ್ರೀಕೃಷ್ಣನ ಕೃಪೆಯ ಅನುಭೂತಿ ಬರುವುದು : ಇದುವರೆಗೆ ಹಿಂದೂ ವಿಧಿಜ್ಞ ಪರಿಷತ್ತಿನಿಂದ ಆಯೋಜಿಸಲಾಗಿದ್ದ ಪ್ರತಿಯೊಂದು ನ್ಯಾಯವಾದಿಗಳ ಅಧಿವೇಶನದಲ್ಲಿ ದಿವ್ಯಾಕ್ಕಳ ತಳಮಳದಿಂದಾಗಿ ಕರ್ನಾಟಕದ ಹಿಂದುತ್ವನಿಷ್ಠ ನ್ಯಾಯವಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತ ಇರುತ್ತಾರೆ ಮತ್ತು ಆ ನ್ಯಾಯವಾದಿಗಳ ಅಧಿವೇಶನದಲ್ಲಿನ ಸಹಭಾಗವು ಸಕಾರಾತ್ಮಕವಾಗಿ ಇರುತ್ತದೆ. ಇದರಿಂದ ದಿವ್ಯಾಕ್ಕ ಇವರಿಗೆ ‘ಹಿಂದೂ ಧರ್ಮ ಕಾರ್ಯದಲ್ಲಿ ಆಸಕ್ತಿ ಇದೆ’, ಎಂಬುದು ಕಂಡು ಬರುತ್ತದೆ. ಅವರು ಸಮರ್ಪಿತ ಭಾವದಿಂದ ಸೇವೆ ಮಾಡುತ್ತಿರುವುದರಿಂದ ‘ಈಶ್ವರನೂ ಅವರಿಗೆ ಸಹಾಯ ಮಾಡುತ್ತಾನೆ’, ಎಂಬ ಕುರಿತು ಅನುಭೂತಿಗಳು ಅವರಿಗೆ ಅನೇಕಬಾರಿ ಬಂದಿವೆ. ಅವರು ಬೆಂಗಳೂರಿನಲ್ಲಿ ಕಲಿಯುತ್ತಿದ್ದರು. ಆಗ ಅವರಿಗೆ ಸಾಧನೆಯ ಆಸಕ್ತಿ ಇದ್ದುದರಿಂದ ಅವರು ನಡುನಡುವೆ ರಾಮನಾಥಿ (ಗೋವಾ)ಯ ಸನಾತನ ಆಶ್ರಮಕ್ಕೆ ಬರುತ್ತಿದ್ದರು. ಒಮ್ಮೆ ಹೀಗೆಯೆ ಅವರು ಗೋವಾಕ್ಕೆ ಬಂದಾಗ ಅವರಿಗೆ ರಾತ್ರಿ ಸಮಯದಲ್ಲಿಯೇ ಅವರ ಓರ್ವ ಸಂಬಂಧಿಕರಿಂದ ‘ಬೆಳಗ್ಗೆ ನಾನು ಬೆಂಗಳೂರಿಗೆ ನಿನ್ನನ್ನು ಭೇಟಿಯಾಗಲು ಬರುತ್ತಿದ್ದೇನೆ’, ಎಂದು ಸಂಚಾರಿವಾಣಿ ಕರೆ ಬಂದಿತು. ಆ ಪ್ರಸಂಗದಲ್ಲಿ ಅವರಿಗೆ ಮರುದಿನ ಬೆಳಗ್ಗೆ ಬೆಂಗಳೂರಿಗೆ ತಲುಪುವುದು ಅಸಾಧ್ಯವಿತ್ತು. ಆಗ ಅವರು ಭಗವಾನ ಶ್ರೀಕೃಷ್ಣನಿಗೆ ‘ಈಗ ನೀನೇ ಕಾಪಾಡಬೇಕು’, ಎಂದು ಪ್ರಾರ್ಥನೆ ಮಾಡಿದರು ಮತ್ತು ಶ್ರೀಕೃಷ್ಣನ ಕೃಪೆಯಿಂದ ಕೆಲವು ಕಾರಣದಿಂದ ಆ ಸಂಬಂಧಿಕರು ಬೆಂಗಳೂರಿಗೆ ಬರುವುದು ರದ್ದಾಯಿತು.

೨. ಸಹಜತೆ ಮತ್ತು ಉತ್ತಮ ನಿರೀಕ್ಷಣೆ ಕ್ಷಮತೆ

ಒಮ್ಮೆ ನ್ಯಾಯವಾದಿ ಅಧಿವೇಶನಕ್ಕೆ ಬಂದಿದ್ದ ಎಲ್ಲ ನ್ಯಾಯವಾದಿಗಳಿಗೆ ಸಂತರ ಭಾವಸತ್ಸಂಗ ಲಭಿಸಿತು. ಆಗ ದಿವ್ಯಾಕ್ಕಳು ಸಂತರಿಗೆ ಕರ್ನಾಟಕ ರಾಜ್ಯದ ನ್ಯಾಯವಾದಿಗಳ ಗುಣವೈಶಿಷ್ಟ್ಯಗಳನ್ನು ಅತ್ಯಂತ ಸಹಜವಾಗಿ ಹೇಳುತ್ತಿದ್ದರು. ಅವರಲ್ಲಿನ ಈ ಸಹಜತೆಯು ಮೆಚ್ಚುವಂತಹದಾಗಿತ್ತು. ಅವರು ಸಂತರಿಗೆ ‘ರಾಷ್ಟ್ರ ಮತ್ತು ಧರ್ಮ ಕಾರ್ಯದಲ್ಲಿ ಈ ನ್ಯಾಯವಾದಿಗಳು ಹೇಗೆ ಸಹಾಯ ಮಾಡಬಲ್ಲರು ?’ ಎಂಬುದನ್ನು ಸರಿಯಾಗಿ ಗುರುತಿಸಿ ಹೇಳಿದ್ದರು.

೩. ಪರಾತ್ಪರ ಗುರುದೇವರ ಬಗ್ಗೆ ಭಾವ

ನಾವು ಹಿಂದೂ ವಿಧಿಜ್ಞ ಪರಿಷತ್ತಿನ ವತಿಯಿಂದ ಬೆಂಗಳೂರಿನಲ್ಲಿ ನ್ಯಾಯವಾದಿಗಳ ಸಂಘಟನೆಗಾಗಿ ಹೋಗಿದ್ದೆವು. ಆಗ ನ್ಯಾಯವಾದಿಗಳ ಸಂಪರ್ಕದ ಸಮಯದಲ್ಲಿ ಅವರು ಅನೇಕಬಾರಿ ಪರಾತ್ಪರ ಗುರುದೇವರ ಬಗ್ಗೆ ಗೌರವದಿಂದ ಉಲ್ಲೇಖಿಸಿದರು. ಅವರೊಡನೆ ಸತ್ಸೇವೆ ಮಾಡುವಾಗ ‘ಕು. ದಿವ್ಯಾಕ್ಕಳಿಗೆ ಪರಾತ್ಪರ ಗುರುದೇವರ ಬಗ್ಗೆ ಅಪಾರ ಶ್ರದ್ಧೆ ಇದೆ’, ಎಂಬುದು ನನ್ನ ಗಮನಕ್ಕೆ ಬಂದಿತು.

೪. ದಿವ್ಯಕ್ಕಳಿಗೆ ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ಕಾರ್ಯ ಮಾಡುವ ನ್ಯಾಯವಾದಿ ಉಮಾಶಂಕರ ಇವರಂತಹ ಜೀವನ ಸಂಗಾತಿ ದೊರಕುವುದು, ಇದು ಈಶ್ವರೀ ನಿಯೋಜನೆಯೇ ಇರುವುದು

‘ಇಂದು ದಿವ್ಯಾಕ್ಕಳಿಗೆ ನ್ಯಾಯವಾದಿ ಉಮಾಶಂಕರ ಇವರಂತಹ ಜೀವನ ಸಂಗಾತಿ ದೊರಕುತ್ತಿದ್ದಾರೆ’, ಎಂಬುದು ಈಶ್ವರೀ ನಿಯೋಜನೆಯೇ ಆಗಿದೆ. ನ್ಯಾಯವಾದಿ ಉಮಾಶಂಕರ ಇವರೂ ಹಿಂದೂ ಧರ್ಮಕಾರ್ಯದ ನಿಮಿತ್ತ ೨೦೧೬ ರಿಂದ ಹಿಂದೂ ವಿಧಿಜ್ಞ ಪರಿಷತ್ತಿನೊಂದಿಗೆ ಕಾರ್ಯ ಮಾಡುತ್ತಿದ್ದಾರೆ. ‘ಈಶ್ವರನೇ, ಇವರಿಬ್ಬರಿಂದ ರಾಷ್ಟ್ರ ಮತ್ತು ಧರ್ಮ ರಕ್ಷಣೆಯ ಕಾರ್ಯ ಅಧಿಕಾಧಿಕ ಮಾಡಿಸಿಕೊ’, ಎಂದು ಪ್ರಾರ್ಥನೆ ಮಾಡುತ್ತೇನೆ ಮತ್ತು ವಧು-ವರರಿಗೆ ಮನಃಪೂರ್ವಕವಾಗಿ ಶುಭಾಶಯ ಕೋರುತ್ತೇನೆ. – ನ್ಯಾಯವಾದಿ ಸುರೇಶ ಕುಲಕರ್ಣಿ, ಹಿಂದೂ ವಿಧಿಜ್ಞ ಪರಿಷತ್ತು, ಸಂಭಾಜಿನಗರ, ಮಹಾರಾಷ್ಟ್ರ.(೨೩.೪.೨೦೧೯)

Kannada Weekly | Offline reading | PDF