ದೇಶವಿರೋಧಿ ಬೇಡಿಕೆ ಮಾಡುವ ಮೆಹಬೂಬಾ ಮುಫ್ತಿಯವರಿಗೆ ಸೆರೆಮನೆಗೆ ಯಾವಾಗ ತಳ್ಳುವಿರಿ ?

ಫಲಕ ಪ್ರಸಿದ್ಧಿಗಾಗಿ

೧. ದೇಶದ್ರೋಹಿ ಹೇಳಿಕೆ ನೀಡುವವರನ್ನು ಸೆರೆಮನೆಗೆ ಯಾವಾಗ ತಳ್ಳುವಿರಿ ?

‘ಪಾಕ್ ಕೂಡ ಈದ್‌ಗಾಗಿ ಅಣುಬಾಂಬ್ ಇಟ್ಟಿಲ್ಲ’, ಎಂದು ಜಮ್ಮೂ-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ‘ಭಾರತವು ದೀಪಾವಳಿಗಾಗಿ ಅಣುಬಾಂಬ್ ಇಟ್ಟಿಲ್ಲ’, ಎಂಬ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

೨. ಹಿಂದೂಗಳು ಸಹಿಷ್ಣುಗಳಿದ್ದರಿಂದ ಹೀಗೆ ಮಾಡುವುದಿಲ್ಲ

ನ್ಯೂಝಿಲ್ಯಾಂಡನ ೨ ಮಸೀದಿಗಳಲ್ಲಿ ಓರ್ವ ಕ್ರೈಸ್ತನು ಮಾಡಿದ ಗುಂಡುಹಾರಾಟದ ಸೇಡು ತೀರಿಸಿಕೊಳ್ಳಲು ಶ್ರೀಲಂಕಾದ ಚರ್ಚನಲ್ಲಿ ಬಾಂಬ್‌ಸ್ಫೋಟ ಮಾಡಲಾಯಿತು, ಎಂದು ಶ್ರೀಲಂಕಾದ ರಾಜ್ಯಮಂತ್ರಿ ರೂವಾನ್ ವಿಜಯವರ್ಧನೆಯವರು ಸಂಸತ್ತಿನಲ್ಲಿ ಮಾಹಿತಿ ನೀಡಿದರು.

೩. ದೇಶವಿರೋಧಿ ಬೇಡಿಕೆ ಮಾಡುವ ಮೆಹಬೂಬಾ ಮುಫ್ತಿಯವರಿಗೆ ಸೆರೆಮನೆಗೆ ಯಾವಾಗ ತಳ್ಳುವಿರಿ ?

ಸಾಧ್ವಿ ಪ್ರಜ್ಞಾಸಿಂಹ ಇವರ ಮೇಲೆ ಅನೇಕ ಆರೋಪಗಳಿದ್ದರೂ ಅವರನ್ನು ಬಿಡುಗಡೆಗೊಳಿಸಲಾಗಿದೆ. ಹಾಗೆಯೇ ಪ್ರತ್ಯೇಕತಾವಾದಿ ನಾಯಕ ಯಾಸಿನ ಮಲಿಕ್‌ನಿಗೂ ಬಿಡುಗಡೆ ಮಾಡಿ. ಅವನ ಆರೋಗ್ಯ ಸರಿ ಇಲ್ಲ, ಎಂದು ಜಮ್ಮೂ-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಆಗ್ರಹಿಸಿದ್ದಾರೆ.

೪. ಶ್ರೀಲಂಕಾದ ಸೈನ್ಯ ಈಗ ಪಾಕ್‌ನ ವಿರುದ್ಧ ಏನಾದರೂ ಕೃತಿ ಮಾಡುವುದೇ ?

ಶ್ರೀಲಂಕಾದಲ್ಲಿನ ಬಾಂಬ್‌ಸ್ಫೋಟಗಳ ಪ್ರಕರಣದಲ್ಲಿ ಪೊಲೀಸರು ೯ ಪಾಕಿಸ್ತಾನಿ ನಾಗರಿಕರನ್ನು ಬಂಧಿಸಿದೆ. ಈ ನಾಗರಿಕರು ಉಗ್ರರಿಗೆ ಬಾಂಬ್ ಸಿದ್ಧಪಡಿಸುವ ವಸ್ತುಗಳನ್ನು ಮತ್ತು ಇನ್ನಿತರ ಸೌಲಭ್ಯಗಳ ಪೂರೈಕೆ ಮಾಡಿದ್ದರು.

೫. ಈಗಲಾದರೂ ನಕ್ಸಲವಾದವು ನಾಶವಾಗುವುದೇ ?

ಪಲಾಮೂ(ಝಾರಖಂಡ)ದ ಹರಿಹರಗಂಜದಲ್ಲಿ ‘ಭಾಕಪ ಮಾವೋವಾದಿ’ ಈ ನಕ್ಸಲವಾದಿ ಸಂಘಟನೆಯ ೧೨ ನಕ್ಸಲಿಯರು ಮಧ್ಯರಾತ್ರಿ ಇಲ್ಲಿಯ ಹಳೆಯ ಬಸ್‌ನಿಲ್ದಾಣದ ಹತ್ತಿರದ ಭಾಜಪದ ಕಾರ್ಯಾಲಯವನ್ನು ಬಾಂಬ್‌ಸ್ಫೋಟ ಮಾಡಿ ಧ್ವಂಸಗೊಳಿಸಿದರು.

೬. ಭ್ರಷ್ಟಾಚಾರಿಗಳಿಗಿಂತ ಸಾಧೂ ಮತ್ತು ಸಂತರು ಎಂದಿಗೂ ಶ್ರೇಷ್ಠರೇ !

ಅಭಿವೃದ್ಧಿಗಾಗಿ ಅಭ್ಯರ್ಥಿಗಳನ್ನು ಕಳಿಸುವುದನ್ನು ಬಿಟ್ಟು ಸಾಧ್ವಿ ಪ್ರಜ್ಞಾಸಿಂಹ, ಸಾಕ್ಷೀಮಹಾರಾಜರನ್ನು ಸಂಸತ್ತಿಗೆ ಕಳುಹಿಸಿ ಅಲ್ಲೇನು ಕುಂಭಮೇಳ ಮಾಡಲಿಕ್ಕಿದೆಯೇ ?, ಎಂದು ಮಹಾರಾಷ್ಟ್ರದ ರಾಷ್ಟ್ರವಾದಿ ಯುವತಿ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷೆ ಸಕ್ಷಣಾ ಸಲಗರರು ಹೇಳಿದ್ದಾರೆ.

೭. ಕಾಂಗ್ರೆಸ್ಸಿಗರ ವಾಚಾಳಿತನವನ್ನು ಗಮನದಲ್ಲಿಡಿ !

ಒಂದು ವೇಳೆ ಸಾಧ್ವಿ ಪ್ರಜ್ಞಾಸಿಂಗ್‌ರವರು ಕೊಟ್ಟ ಶಾಪದಲ್ಲಿ ಸಾಮರ್ಥ್ಯವಿರುವುದಾದರೆ, ಅವರು ಮಸೂದ ಅಝಹರನಿಗೆ ಶಾಪ ಕೊಡಬೇಕಿತ್ತು; ಇದರಿಂದ ಭಾರತಕ್ಕೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಅವಶ್ಯಕತೆಯೇ ಇರುತ್ತಿರಲಿಲ್ಲ, ಎಂಬ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

Kannada Weekly | Offline reading | PDF