ವೈಶಾಖ ಶುಕ್ಲ ಪಕ್ಷ ತೃತೀಯಾ (೭.೫.೨೦೧೯)

ಅಕ್ಷಯ ತದಿಗೆಯಂದು ಮಾಡುವ ವಿವಿಧ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ

ಮೂರೂವರೆ ಮುಹೂರ್ತಗಳಲ್ಲಿ ಒಂದು ಪೂರ್ಣ ಮೂಹೂರ್ತವಾಗಿರುವ ಅಕ್ಷಯ ತೃತೀಯಾದಂದು ಎಳ್ಳು ತರ್ಪಣ ನೀಡುವುದು, ಉದಕಕುಂಭ ದಾನ ಮಾಡುವುದು, ಮೃತ್ತಿಕಾ ಪೂಜೆ ಮಾಡುವುದು, ಹಾಗೆಯೇ ದಾನ ನೀಡುವ ರೂಢಿ ಇದೆ. ಇದರ ಹಿಂದಿನ ಅಧ್ಯಾತ್ಮಶಾಸ್ತ್ರವನ್ನು ನಾವು ತಿಳಿದುಕೊಳ್ಳೋಣ.

ಅಕ್ಷಯ ತೃತೀಯಾ ಕೃತಯುಗ ಅಥವಾ ತ್ರೇತಾಯುಗದ ಆರಂಭದ ದಿನವಾಗಿದೆ.

ಈ ತಿಥಿಯಂದು ಹಯಗ್ರೀವ ಅವತಾರ, ನಾರಾಯಣ ಪ್ರಕಟೀಕರಣ ಮತ್ತು ಪರಶುರಾಮ ಅವತಾರವಾಯಿತು.

ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ. ಆದುದರಿಂದ ಪೃಥ್ವಿಯ ಮೇಲಿನ ಸಾತ್ತ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ.

ಈ ಕಾಲಮಹಾತ್ಮೆಯಿಂದಾಗಿ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮಕಾರ್ಯಗಳನ್ನು ಮಾಡಿದರೆ ಅವುಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.

ಈ ತಿಥಿಯಂದು ದೇವತೆಗಳನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳೂ ಅಕ್ಷಯ (ಅವಿನಾಶಿ)ವಾಗುತ್ತವೆ. (ಆಧಾರ : ‘ಮದನರತ್ನ’)

Kannada Weekly | Offline reading | PDF