ಹಬ್ಬ ಮತ್ತು ಧಾರ್ಮಿಕ ವಿಧಿಯಿರುವ ದಿನದಂದು, ಹಾಗೆಯೇ ಶುಭದಿನ ಹೊಸ ಅಥವಾ ರೇಷ್ಮೆ ಬಟ್ಟೆ ಹಾಗೂ ವಿವಿಧ ಅಲಂಕಾರ ಧರಿಸಿದರೆ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುವುದು

‘ಹಬ್ಬ, ಯಜ್ಞ, ಉಪನಯನ, ವಿವಾಹ, ವಾಸ್ತುಶಾಂತಿಯಂತಹ ಧಾರ್ಮಿಕ ವಿಧಿಗಳ ಸಮಯದಲ್ಲಿ ದೇವತೆಗಳು ಮತ್ತು ಆಸುರೀ ಶಕ್ತಿಗಳ ನಡುವೆ ಅನುಕ್ರಮವಾಗಿ ಬ್ರಹ್ಮಾಂಡ, ವಾಯುಮಂಡಲ ಮತ್ತು ವಾಸ್ತು ಈ ಸ್ಥಳಗಳಲ್ಲಿ ಸೂಕ್ಷ್ಮ ಯುದ್ಧವು ನಡೆದಿರುತ್ತದೆ. ಹಬ್ಬವನ್ನು ಆಚರಿಸುವ ಮತ್ತು ಧಾರ್ಮಿಕ ವಿಧಿಗಳ ಸ್ಥಳಗಳಲ್ಲಿ ಉಪಸ್ಥಿತರಿರುವ ವ್ಯಕ್ತಿಗಳ ಮೇಲೆ ಈ ಸೂಕ್ಷ್ಮ ಯುದ್ಧದ ಪರಿಣಾಮವಾಗಿ ಕೆಟ್ಟ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ವಿವಿಧ ಸುವರ್ಣಾಲಂಕಾರ ಮತ್ತು ಹೊಸ ಅಥವಾ ರೇಷ್ಮೆಯ ಬಟ್ಟೆಗಳನ್ನು ಧರಿಸುವುದರಿಂದ ಆ ವ್ಯಕ್ತಿಯ ಸುತ್ತಲೂ ಈಶ್ವರನ ಸಗುಣ-ನಿರ್ಗುಣ ಸ್ತರದ ಚೈತನ್ಯದ ಸಂರಕ್ಷಣಾ ಕವಚವು ನಿರ್ಮಾಣವಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ಆ ವ್ಯಕ್ತಿಯ ರಕ್ಷಣೆಯಾಗುತ್ತದೆ. ಇದಕ್ಕಾಗಿ ಹಬ್ಬ ಮತ್ತು ಧಾರ್ಮಿಕ ವಿಧಿಯಿರುವ ದಿನದಂದು, ಹಾಗೆಯೇ ಶುಭದಿನ ಹೊಸ ಅಥವಾ ರೇಷ್ಮೆ ಬಟ್ಟೆ ಹಾಗೂ ವಿವಿಧ ಅಲಂಕಾರ ಧರಿಸುವ ಬಗ್ಗೆ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. – ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೨.೧೧.೨೦೦೭, ರಾತ್ರಿ ೮.೧೫)

Kannada Weekly | Offline reading | PDF