ಈಶ್ವರನ ಗುಣಗಳೆಂದರೆ ಸೂಕ್ಷ್ಮ ಆಭರಣಗಳು !

ಈಶ್ವರನ ಗುಣಗಳು ಮತ್ತು ಸೂಕ್ಷ್ಮ ರೂಪದಲ್ಲಿರುವ ಆಭರಣಗಳು ಒಂದಕ್ಕೊಂದು ಸಂಬಂಧಿಸಿರುತ್ತವೆ

೧. ಜೀವದಲ್ಲಿರುವ ಈಶ್ವರನ ಒಂದೊಂದು ಗುಣವೆಂದರೆ, ಈಶ್ವರನು ನೀಡಿದ ಒಂದೊಂದು ಸೂಕ್ಷ್ಮ ಆಭರಣವೇ ಆಗಿರುತ್ತದೆ : ಜೀವದಲ್ಲಿರುವ ಈಶ್ವರನ ಬೇರೆಬೇರೆ ಗುಣಗಳಿಗನುಸಾರ ಬೇರೆಬೇರೆ ಆಭರಣಗಳಿರುತ್ತವೆ ಮತ್ತು ಅವು ಈಶ್ವರನ ಗುಣಗಳಿಗನುಸಾರ ಆಯಾ ಆಕಾರವನ್ನು ತಾಳುತ್ತವೆ. ಅಲ್ಲದೇ ಜೀವಕ್ಕೆ ಆವಶ್ಯಕವಿರುವ ತತ್ತ್ವ್ವಕ್ಕನುಸಾರ ಅವುಗಳಲ್ಲಿ ಬಣ್ಣವನ್ನು ತುಂಬಿಸಲಾಗಿರುತ್ತದೆ.

೨. ದೈವೀ ಆಭರಣಗಳ ಸ್ಥಾನಗಳು ಶರೀರದಲ್ಲಿನ ಬೇರೆಬೇರೆ ಚಕ್ರಗಳ ಮೇಲಿರುತ್ತವೆ. ಅವು ಒಂದು ರೀತಿಯಲ್ಲಿ ಈಶ್ವರನು ಜೀವಕ್ಕೆ ನೀಡಿದ ಸಂರಕ್ಷಣಾ ಕವಚವೇ ಆಗಿರುತ್ತವೆ.

೩. ಸೂಕ್ಷ್ಮದಲ್ಲಿರುವ ಆಭರಣಗಳಿಂದ ಶರೀರದಲ್ಲಿನ ಚಕ್ರಗಳಿಗೆ ಸತತವಾಗಿ ಶಕ್ತಿಯು ಸಿಗುತ್ತಿರುತ್ತದೆ. – ಒಂದು ಅಜ್ಞಾತ ಶಕ್ತಿ

ಜೀವದ ಗುಣ ಮತ್ತು ಅವಗುಣಗಳಿಗನುಸಾರ ಸೂಕ್ಷ್ಮದಲ್ಲಿನ ಅಲಂಕಾರ

೧. ಜೀವದ ಗುಣ ಮತ್ತು ಅವಗುಣಗಳಿಗನುಸಾರ ಸೂಕ್ಷ್ಮದಲ್ಲಿರುವ ಆಭರಣಗಳು

೧ ಅ. ‘ವ್ಯಾಪಕತೆ, ಕ್ಷಾತ್ರವೃತ್ತಿ, ಪಾರದರ್ಶಕತೆ, ಪ್ರೀತಿ ಮುಂತಾದ ಗುಣಗಳಿಗೆ ಬೇರೆಬೇರೆ ಆಭರಣಗಳಿರುತ್ತವೆ.

೧ ಆ. ಯಾವ ರೀತಿ ದೇವತೆಗಳು ಆಭರಣಗಳನ್ನು ಧರಿಸಿರುತ್ತಾರೆಯೋ, ಅದರಂತೆಯೇ ಜೀವದ ದೇಹದಲ್ಲಿಯೂ ಅವನ ಗುಣಗಳಿಗನುಸಾರ ಸೂಕ್ಷ್ಮದಲ್ಲಿ ಆಭರಣಗಳಿರುತ್ತವೆ.

೧ಇ. ಜೀವದ ದೇಹದ ಮೇಲಿರುವ ಆಭರಣಗಳು ತಾರಕ ಆಭರಣಗಳಾಗಿರುತ್ತವೆ ಮತ್ತು ಜೀವವು ಕೈಯಲ್ಲಿ ಹಿಡಿದಿರುವ ಶಸ್ತ್ರಗಳು ಮಾರಕ ಆಭರಣಗಳಾಗಿರುತ್ತವೆ : ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಈಶ್ವರನ ಗುಣಗಳಿರುವ ಮತ್ತು ಈಶ್ವರನೊಂದಿಗೆ ಏಕರೂಪವಾಗಿರುವ ಜೀವಕ್ಕೆ ಈಶ್ವರನು ಅತೀ ಹೆಚ್ಚು ಪ್ರಮಾಣದಲ್ಲಿ ಸೂಕ್ಷ್ಮದಲ್ಲಿನ ಆಭರಣಗಳನ್ನು ಕೊಡುತ್ತಾನೆ. ಜೀವದಲ್ಲಿರುವ ತಾರಕ-ಮಾರಕ ಭಾವ ಮತ್ತು ಗುಣಗಳಿಗನುಸಾರ ಜೀವದಲ್ಲಿ ಸೂಕ್ಷ್ಮದಲ್ಲಿನ ತಾರಕ ಮತ್ತು ಮಾರಕ ಆಭರಣಗಳು ಇರುತ್ತವೆ. ಜೀವದ ದೇಹದ ಮೇಲಿರುವ ಆಭರಣಗಳು ಸೂಕ್ಷ್ಮದಲ್ಲಿನ ತಾರಕ ಆಭರಣಗಳ ಮತ್ತು ಜೀವವು ಕೈಯಲ್ಲಿ ಹಿಡಿದಿರುವ ಶಸ್ತ್ರಗಳು (ಉದಾ. ಖಡ್ಗ) ಸೂಕ್ಷ್ಮದಲ್ಲಿನ ಮಾರಕ ಆಭರಣಗಳ ಪ್ರತೀಕವಾಗಿವೆ.

Kannada Weekly | Offline reading | PDF