ಪೊಲೀಸರಿಂದ ಸನಾತನದ ಸಾಧಕರ ಮುಂದುವರಿದ ವಿಚಾರಣೆಯ ಕಿರುಕುಳ

ವಿಚಾರವಂತರ ಹತ್ಯೆಗಳ ಪ್ರಕರಣದಲ್ಲಿ ಸಂಬಂಧಿಸಿ ಪೊಲೀಸರಿಂದ ಮಹಾರಾಷ್ಟ್ರದ ಠಾಣೆಯಲ್ಲಿ ಸನಾತನದ ಸಾಧಕ ಹರಿ ಪ್ರಭು ವಿಚಾರಣೆ

ಪದೇ ಪದೇ ವಿಚಾರಣೆ ಮಾಡಿ ಸನಾತನದ ಅಮಾಯಕ ಸಾಧಕರನ್ನು ಅನಾವಶ್ಯಕ ಕಿರುಕುಳ ಕೊಡುವ ಪೊಲೀಸರು ಜನರಿಗೆ ಹೇಗೆ ನ್ಯಾಯ ನೀಡುವರು ? ಜಿಹಾದಿ ಭಯೋತ್ಪಾದಕರ ಬಗ್ಗೆ ಈ ರೀತಿಯ ವಿಚಾರಣೆಯನ್ನು ಮಾಡುತ್ತಿದ್ದರೆ, ಇದುವರೆಗೆ ದೇಶ ಭಯೋತ್ಪಾದನೆಯಿಂದ ಮುಕ್ತವಾಗುತಿತ್ತು !

೯.೪.೨೦೧೯ ರಂದು ಮಧ್ಯಾಹ್ನ ೧ ಗಂಟೆಗೆ ಮಹಾರಾಷ್ಟ್ರದ ಠಾಣೆಯ ಸಾಧಕ ಶ್ರೀ. ಹರಿ ಪ್ರಭು ಇವರನ್ನು ಪೊಲೀಸ್ ಠಾಣೆಯ ವಿಶೇಷ ತಂಡದ ಪೇದೆ ಮೋರೇಶ್ವರ ಬಾಬರ ಮತ್ತು ಅವರ ಜೊತೆ ಕೃಷ್ಣ ಭೆರೆ ಇವರು ಅವರ ನಿವಾಸ ಸ್ಥಾನಕ್ಕೆ ಬಂದು ವಿಚಾರಣೆ ಮಾಡಿದರು. ಸಾಧಕ ಶ್ರೀ. ಪ್ರಭು ಇವರು ಪೊಲೀಸರು ಬಂದಾಗ ಮೊದಲು ಅವರು ಬಂದಿರುವ ಕಾರಣವನ್ನು ಕೇಳಿದರು; ಆದರೆ ಪೊಲೀಸರು ಅವರಿಗೆ ಬಂದ ಕಾರಣವನ್ನು ಹೇಳದೆ ‘ಮೊದಲು ನಿಮ್ಮ ಮಾಹಿತಿ ಹೇಳಿರಿ ಎಂದರು. ಅನಂತರ ಪ್ರಭು ಇವರು ತಮ್ಮ ವಯಸ್ಸು, ಅವರು ಯಾವಾಗ ನೌಕರಿಯಿಂದ ನಿವೃತ್ತರಾದರು, ಸದ್ಯ ಮಾಡುತ್ತಿರುವ ಧರ್ಮಪ್ರಸಾರದ ಸೇವೆ, ಇತ್ಯಾದಿ ಮಾಹಿತಿಯನ್ನು ನೀಡಿದರು. ಕೊನೆಗೆ ಪೊಲೀಸ್ ಪೇದೆ ಬಾಬರ ‘ಕೊಲ್ಲಾಪುರದ ಗೋವಿಂದ ಪಾನ್ಸರೆ ಇವರ ವಿಷಯದಲ್ಲಿ ಏನಾದರೂ ತಿಳಿದಿದೆಯೆ ? ಎಂದು ಕೇಳಿದರು. ಅದಕ್ಕೆ ಶ್ರೀ. ಪ್ರಭು ಇವರು ‘ನನಗೆ ಅವರ ವಿಷಯದಲ್ಲಿ ಏನೂ ಗೊತ್ತಿಲ್ಲ ಎಂದರು. ಅನಂತರ ಪೊಲೀಸ್ ಪೇದೆ ಇವರ ಎಲ್ಲ ಮಹಿತಿಯನ್ನು ಒಂದು ಕಾಗದದಲ್ಲಿ ಬರೆದು ಅದರಲ್ಲಿ ಶ್ರೀ. ಪ್ರಭು ಇವರ ಸಹಿ ಪಡೆದು ಹಿಂದಿರುಗಿದರು.

ಸಾಧಕರೇ, ವಿಚಾರಣೆಗಾಗಿ ಬರುವ ಪೊಲೀಸರಿಂದ ಎಚ್ಚರದಿಂದಿರಿ !

‘ಪೊಲೀಸರು ವಿಚಾರಣೆಯ ನೆಪದಲ್ಲಿ ಆಶ್ರಮಕ್ಕೆ ಅಥವಾ ಮನೆಗೆ ಬರಬಹುದು, ಆಗ ಅವರು ಯಾವುದಾದರೂ ಶಸ್ತ್ರಾಸ್ತ್ರ ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ಆಶ್ರಮದಲ್ಲಿಟ್ಟು ನಂತರ ದಾಳಿ ಮಾಡಿ ಅದನ್ನು ಜಪ್ತಿ ಮಾಡಿದೆವು, ಎಂದು ತೋರಿಸಬಹುದು. ಆದ್ದರಿಂದ ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಜಾಗರೂಕರಾಗಿರಿ !

೧. ಕೊಲ್ಲಾಪುರದಲ್ಲಿ ಒಬ್ಬ ಹೊಟೇಲ್ ಮಾಲೀಕರನ್ನು ಸಿಲುಕಿಸಲು ಪೊಲೀಸರೆ ಹೋಟೇಲ್‌ನಲ್ಲಿ ಮಾದಕ ಪದಾರ್ಥವನ್ನಿಟ್ಟಿದ್ದರು.

೨. ಆನಂದ ಸಂಪ್ರದಾಯದ ಆಶ್ರಮದಲ್ಲಿ ಪೊಲೀಸರು ಪ್ಲಾಸ್ಟಿಕ್‌ನ ಮಾನವೀ ತಲೆಬುರುಡೆಯನ್ನಿಟ್ಟು ಅವರನ್ನು ಅವಮಾನಗೊಳಿಸಿ ಅವರ ವಿರುದ್ಧ ಕಾನೂನುಕ್ರಮ ತೆಗೆದುಕೊಂಡಿದ್ದರು. ಸಂಪ್ರದಾಯದ ಗುರುಗಳು ಸೆರೆಮನೆಯಲ್ಲಿಯೆ ನಿಧನರಾದರು. ಈ ವಿಷಯವನ್ನು ೩೫ ವರ್ಷಗಳ ನಂತರ ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದರು.

೩. ಮಾಲೆಗಾವ್ ಬಾಂಬ್‌ಸ್ಫೋಟ ಪ್ರಕರಣದ ಆರೋಪ ಪತ್ರದಲ್ಲಿ ‘ಕರ್ನಲ್ ಪ್ರಸಾದ ಪುರೋಹಿತರ ದೇವಲಾಲಿಯಲ್ಲಿನ ಮನೆಯಲ್ಲಿ ಮಹಾರಾಷ್ಟ್ರದ ಉಗ್ರ ನಿಗ್ರಹ ದಳದವರೇ (ಎಟಿಎಸ್) ಆರ್ಡಿಎಕ್ಸ್ ಇಟ್ಟು ಅವರನ್ನು ಬಂಧಿಸಿದ್ದರು ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.

ಈ ವಿಷಯವನ್ನು ಗಮನದಲ್ಲಿಟ್ಟು ಪೊಲೀಸರು ಹಾಗೇನಾದರೂ ಮಾಡುತ್ತಿರುವರೆ, ಎಂದು ಜಾಗೃತ ವಹಿಸಿರಿ !

‘ಸನಾತನದ ಆಶ್ರಮಕ್ಕೆ ಪೊಲೀಸರು ಬಂದರೆ ಅವರ ಮೇಲೆ ಗಮನವಿಡಿ ಎಂದು ಸನಾತನ ಏಕೆ ಹೇಳುತ್ತದೆ, ಎಂಬುದು ಈ ಉದಾಹರಣೆಯಿಂದ ಅರಿವಾಗುವುದು.

Kannada Weekly | Offline reading | PDF