ಕಿನ್ನಿಗೋಳಿಯ ಸಂತರಾದ ಪ.ಪೂ. ದೇವಬಾಬಾ ಇವರ ಮನೆಯಲ್ಲಿ ವಸಂತಪಂಚಮಿಯಂದು ನಾಗಪೂಜೆಯ ನಿಮಿತ್ತ ಮಹರ್ಷಿಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕಿಯರಿಂದ ಗಾಯನಸೇವೆ ಪ್ರಸ್ತುತ !

ಪ.ಪೂ. ದೇವಬಾಬಾರವರ ನಿವಾಸ ಸ್ಥಾನದಲ್ಲಿರುವ ನಾಗವನದಲ್ಲಿನ ನಾಗದೇವತೆಯಮುಂದೆ ನಾಗನ ಪ್ರತೀಕ ತೆಗೆದಿರುವ ರಂಗೋಲಿ !

ಮಾಘ ಶುಕ್ಲ ಪಕ್ಷ ಪಂಚಮಿ (ವಸಂತಪಂಚಮಿ, ೧೦.೨.೨೦೧೯) ರಂದು ನಾಗಪೂಜೆಯ ನಿಮಿತ್ತದಿಂದ ಕಿನ್ನಿಗೋಳಿಯ ಸಂತರಾದ ಪ.ಪೂ. ದೇವಬಾಬಾ ಇವರ ಮನೆಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧರಾದ ಸೌ. ಸೀಮಂತಿನಿ ಬೊರ್ಡೆ, ಸೌ. ಅನಘಾ ಜೋಶಿ ಮತ್ತು ಕು. ತೇಜಲ ಪಾತ್ರೀಕರ ಇವರು ಗಾಯನ ಸೇವೆಯನ್ನು ಪ್ರಸ್ತುತ ಪಡಿಸಿದರು. ಪ.ಪೂ. ದೇವಬಾಬಾ ಇವರ ಮನೆಯಲ್ಲಿ ನಾಗಬನ ಇದೆ. ಪ್ರತಿವರ್ಷ ವಸಂತ ಪಂಚಮಿಯ ದಿನದಂದು ಈ ಬನದಲ್ಲಿ ದೊಡ್ಡ ಮಹೋತ್ಸವ ಇರುತ್ತದೆ. ಆ ದಿನ ಅಲ್ಲಿ ನಾಗಪೂಜೆ ಮಾಡಲಾಗುತ್ತದೆ. ಆ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿಗಳನ್ನು ಇಂದು ನೋಡೋಣ.

೧. ಪ.ಪೂ. ದೇವಬಾಬಾರವರಮನೆಯಲ್ಲಿ ನಾಗದೇವತೆಯ ಪೂಜೆಯ ಮೊದಲುಮತ್ತು ಪೂಜೆಯ ಸಮಯದಲ್ಲಿ ಬಂದ ಅನುಭೂತಿಗಳು

೧ ಅ. ಕು. ಮಯೂರಿ ಡಗವಾರ,ಸನಾತನ ಆಶ್ರಮ, ರಾಮನಾಥಿ, ಗೋವಾ.

೧ ಅ ೧. ಪ.ಪೂ. ದೇವಬಾಬಾರವರೆಡೆಗೆ ಹೋಗುವ ಸಿದ್ಧತೆ ಮಾಡುವಾಗ ಮತ್ತು ಪ್ರಯಾಣದಲ್ಲಿ ೨ ಸರ್ಪಗಳು ಜೊತೆಯಲ್ಲಿ ಇರುತ್ತವೆ ಎಂದು ಅನಿಸುವುದು ಹಾಗೂ ಅವರ ಮೂಲಕ ದೇವರು ಕೆಟ್ಟ ಶಕ್ತಿಗಳಿಂದ ರಕ್ಷಣೆ ಮಾಡುತ್ತಿರುವನು ಎಂಬ ಅನುಭೂತಿ ಬರುವುದು : ‘೮.೨.೨೦೧೯ ರಂದು ಪ.ಪೂ. ದೇವಬಾಬಾರವರೆಡೆಗೆ ಹೋಗುವ ಸಿದ್ಧತೆ ಮಾಡುತ್ತಿದ್ದಾಗ ನನ್ನ ಸುತ್ತಮುತ್ತಲೂ ಸೂಕ್ಷ್ಮದಿಂದ ೨ ದೊಡ್ಡ ಸರ್ಪಗಳಿವೆ’, ಎಂದು ನನಗೆ ಅನಿಸಿತು. ನಾವು ಮೂಲ್ಕಿಗೆ ಹೋಗಲು ಮಡಗಾವ ರೈಲು ನಿಲ್ದಾಣಕ್ಕೆ ಹೋಗುವಾಗ ಮತ್ತು ಅಲ್ಲಿಂದ ಪ್ರಯಾಣ ಆರಂಭಿಸಿದ ಮೇಲೆಯೂ ಮಧ್ಯ-ಮಧ್ಯದಲ್ಲಿ ನಾಗದೇವತೆಗಳು ನಮ್ಮ ಜೊತೆಗೆ ಇದ್ದಂತೆ ನನಗೆ ಅನಿಸುತ್ತಿತ್ತು. ಅನಂತರ ನಾನು ಮಲಗಿದ್ದಾಗಲೂ ‘ಆ ಸರ್ಪಗಳು ನನ್ನ ಸುತ್ತಲೂ ಇವೆ ಮತ್ತು ಆ ನಾಗಗಳ ಒಂದು ಪಾರದರ್ಶಕ ಬಿಳಿಬಣ್ಣದ ಕವಚವು ನನ್ನ ಸುತ್ತಲೂ ಇದೆ’, ಎಂದು ನನಗೆ ಅನಿಸುತ್ತಿತ್ತು.

ಬೆಳಗ್ಗೆ ೯.೩೦ ಗಂಟೆಗೆ ಆಕಸ್ಮಿಕವಾಗಿ ನನಗೆ ಸ್ವಲ್ಪ ಎಚ್ಚರವಾದ ನಂತರ ‘ನನ್ನ ಸುತ್ತಲೂ ಯಾವುದೋ ಆಕೃತಿಗಳಿವೆ’ ಎಂದು ನನಗೆ ಅನಿಸುವುದು; ಆದರೆ ‘ನಾಗದೇವತೆಗಳ ಕವಚವಿರುವುದರಿಂದ ಆ ಆಕೃತಿಗಳಿಗೆ ನನ್ನ ಹತ್ತಿರ ಬರಲು ಆಗುತ್ತಿರಲಿಲ್ಲ’, ಎಂಬುದು ನನ್ನ ಗಮನಕ್ಕೆ ಬಂದಿತು. ಸ್ವಲ್ಪ ಸಮಯದ ನಂತರ ಕಣ್ಣು ತೆರೆದು ನೋಡಿದಾಗ ನನ್ನೆದುರಿಗೆ ಇಬ್ಬರು ಇತರ ಪಂಥದ ಸ್ತ್ರೀಯರು ಕುಳಿತಿರುವುದು ನನ್ನ ಗಮನಕ್ಕೆ ಬಂದಿತು. ಬೇರೆ ಇತರ ಪಂಥದ ವ್ಯಕ್ತಿಗಳು ನನ್ನ ಬಳಿಗೆ ಬಂದರೆ ಅಥವಾ ನನಗೆ ಕಂಡಿದ್ದರೆ ನನಗೆ ತೊಂದರೆ ಕೊಡುವ ದೊಡ್ಡ ಕೆಟ್ಟ ಶಕ್ತಿಗಳಿಂದ ನನಗೆ ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗುತ್ತಿತ್ತು; ಆದರೆ ಆ ಸಮಯದಲ್ಲಿ ನನ್ನ ಸುತ್ತಲೂ ಈ ನಾಗಗಳ ಕವಚವಿರುವುದರಿಂದ ನನಗ ಆ ಸ್ತ್ರೀಯರಿಂದ ಯಾವುದೇ ತೊಂದರೆಯಾಗಲಿಲ್ಲ’, ಎಂದು ನನಗೆ ಅನಿಸಿತು.

೧ ಅ ೨. ಪ.ಪೂ. ದೇವಬಾಬಾರವರ ಆಶ್ರಮಕ್ಕೆ ಹೋದ ಮೇಲೆ ಸರ್ಪಗಳು ಅದೃಶ್ಯವಾಗುವುದು ಮತ್ತು ‘ಮರುದಿನ ನಾಗದೇವತೆಯ ಪೂಜೆ ಇದೆ’, ಎಂದು ತಿಳಿದ ನಂತರ ‘ಹಿಂದಿನ ದಿನವೇ ಪ್ರತ್ಯಕ್ಷ ನಾಗದೇವತೆಗಳೇ ಜೊತೆಗಿದ್ದಾರೆ ಮತ್ತು ಅವರ ಕೃಪೆಯಿಂದಲೇ ನಾನು ಈ ಪೂಜೆಗೆ ಉಪಸ್ಥಿತ ಇರಲು ಸಾಧ್ಯವಾಯಿತು’, ಎಂಬುದು ಗಮನಕ್ಕೆ ಬರುವುದು : ಪ.ಪೂ. ದೇವಬಾಬಾರವರ ಆಶ್ರಮಕ್ಕೆ ಹೋದ ಮೇಲೆಯೂ ‘ಆ ಸರ್ಪಗಳು ಸತತವಾಗಿ ನನ್ನ ಜೊತೆಯಲ್ಲಿಯೇ ಇವೆ’, ಎಂದು ನನಗೆ ಸ್ವಲ್ಪ ಹೊತ್ತು ಅನಿಸುತ್ತಿತ್ತು. ಅನಂತರ ಅವು ಅದೃಶ್ಯವಾಗಿರುವುದು ಅರಿವಾಯಿತು. ‘ಮರುದಿನ ನಾಗದೇವತೆಯ ಪೂಜೆ ಇದೆ’, ಎಂದು ತಿಳಿದನಂತರ ನನಗೆ ‘ಹಿಂದಿನ ದಿನವೇ ಪ್ರತ್ಯಕ್ಷ ನಾಗದೇವತೆ ನನ್ನ ಜೊತೆಯಲ್ಲಿದ್ದಾರೆ ಮತ್ತು ಅವರ ಕೃಪೆಯಿಂದಲೇ ನಾನು ಈ ಪೂಜೆಗೆ ಉಪಸ್ಥಿತ ಇರಲು ಸಾಧ್ಯವಾಯಿತು’, ಎಂಬುದು ಗಮನಕ್ಕೆ ಬಂದಿತು.

೧ ಅ ೩. ಪ.ಪೂ. ದೇವಬಾಬಾರವರ ಮನೆಯ ಪಕ್ಕದಲ್ಲಿ ಇರುವ ನಾಗಬನದಲ್ಲಿ ಹೋದ ನಂತರ ಸೂಕ್ಷ್ಮದಲ್ಲಿ ಒಂದು ದೊಡ್ಡ ನಾಗದೇವತೆ ಕಾಣಿಸುವುದು, ಅದರಿಂದ ತುಂಬಾ ಒಳ್ಳೆಯ ಶಕ್ತಿ ಪ್ರಕ್ಷೇಪಿತವಾಗುತ್ತಿದ್ದು ಆ ಶಕ್ತಿ ಸಾಧಕಿಯ ಮಣಿಪುರ ಚಕ್ರದಲ್ಲಿನ ತೊಂದರೆದಾಯಕ ಶಕ್ತಿಯನ್ನು ಎಳೆದುಕೊಳ್ಳುತ್ತಿದೆ ಎಂದು ಅನಿಸುವುದು ಮತ್ತುಇದರಿಂದಾಗಿ ಪೂಜೆಯಾದ ಬಳಿಕ ಸಾಧಕಿಗೆ ಹಗುರವೆನಿಸುವುದು ಮತ್ತು ಉತ್ಸಾಹ ವೆನಿಸುವುದು : ನಾವು ಪ.ಪೂ. ದೇವಬಾಬಾರವರ ಮನೆಯ ಪಕ್ಕದಲ್ಲಿಇರುವ ನಾಗಬನದ ಹತ್ತಿರ ಹೋದೆವು. ಅಲ್ಲಿನ ನಾಗನ ಮೂರ್ತಿ ನೋಡುತ್ತಿರುವಾಗ ಸೂಕ್ಷ್ಮದಲ್ಲಿ ಒಂದು ದೊಡ್ಡ ನಾಗದೇವತೆ ನನ್ನೆದುರಿಗೆ ಕಾಣಿಸುವುದು. ಆ ನಾಗದೇವತೆಯೂ ವಿರಾಟ ರೂಪದಲ್ಲಿದ್ದಳು. ಅವಳಿಗೆ ಅನೇಕ ಮುಖಗಳಿದ್ದವು ಮತ್ತು ಅವಳ ಬಣ್ಣ ಚಿನ್ನ-ಬೆಳ್ಳಿಯ ಮತ್ತು ಸ್ವಲ್ಪ ನೀಲಿಬಣ್ಣದ್ದಾಗಿತ್ತು. ‘ಆ ನಾಗದೇವತೆಯ ತಲೆಯ ಮೇಲಿರುವ ಮಣಿಯಿಂದ ತುಂಬಾ ಪ್ರಕಾಶ ಹೊರ ಬೀಳುತ್ತಿತ್ತು’, ಎಂದು ನನಗೆ ಅನಿಸಿತು. ಆ ನಾಗದೇವತೆಯಿಂದ ಒಳ್ಳೆಯ ಶಕ್ತಿ ಪ್ರಕ್ಷೇಪಿತವಾಗುತ್ತಿದ್ದೂ ಆ ಶಕ್ತಿ ನನ್ನ ಮಣಿಪುರ ಚಕ್ರದಲ್ಲಿನ ತೊಂದರೆದಾಯಕ ಶಕ್ತಿಯನ್ನು ಎಳೆಯುತ್ತಿರುವುದೆಂದು ನನಗೆ ಅನಿಸಿತು. ಆದುದರಿಂದ ಪೂಜೆಯಾದ ಬಳಿಕ ನನಗೆ ತುಂಬಾ ಹಗುರ ಮತ್ತು ಉತ್ಸಾಹವೆನಿಸುತ್ತಿತ್ತು.

೧ ಅ ೪. ನಾಗಬನದಲ್ಲಿನ ನಾಗದೇವತೆಯ ಎದುರಿಗೆ ನಾಗದ ಪ್ರತೀಕ ಸ್ವರೂಪ ತೆಗೆದ ರಂಗೋಲಿಯಿಂದ ನಾಗದ ಶಕ್ತಿ ಪ್ರಕ್ಷೇಪಿತವಾಗುತ್ತಿರುವುದೆಂದು ಅರಿವಾಗುವುದು ಮತ್ತು ‘ಆ ರಂಗೋಲಿ ಅಂದರೆ ನಾಗದೊಂದಿಗೆ ಸಂಬಂಧಪಟ್ಟ ‘ಯಂತ್ರ’ ಇದೆ’, ಎಂದು ಅನಿಸುವುದು : ನಾಗಬನದ ಸ್ಥಳದಲ್ಲಿ ಓರ್ವ ಪುರೋಹಿತರು ನಾಗದ ರಂಗೋಲಿ ಬಿಡಿಸಿದ್ದರು. ಆ ರಂಗೋಲಿಯಿಂದ ದೊಡ್ಡ ಪ್ರಮಾಣದಲ್ಲಿ ನಾಗನ ಶಕ್ತಿ ಪ್ರಕ್ಷೇಪಿತ ವಾಗುತ್ತಿತ್ತು. ‘ರಂಗೋಲಿ ಪೂರ್ತಿಯಾಗುತ್ತಿದ್ದಂತೆ ನಾಗನ ಶಕ್ತಿ ಕೂಡ ದೊಡ್ಡಪ್ರಮಾಣದಲ್ಲಿ ಜಾಗೃತವಾಗಿ ಹೆಚ್ಚಾಗುತ್ತಿದೆ’, ಎಂದು ನನಗೆ ಅರಿವಾಯಿತು. ರಂಗೋಲಿ ಪೂರ್ತಿಯಾದಾಗ ‘ಆ ರಂಗೋಲಿಯಿಂದ ಪ್ರತ್ಯಕ್ಷ ನಾಗದೇವತೆ ಮತ್ತು ಅದರ ಶಕ್ತಿ ಇದೆ’, ಎಂದು ನನ್ನ ಗಮನಕ್ಕೆ ಬಂದಿತು. ಆ ರಂಗೋಲಿಯೆಡೆಗೆ ನೋಡಿದ ಮೇಲೆ ‘ಆ ರಂಗೋಲಿ ಅಂದರೆ ನಾಗನಿಗೆ ಸಂಬಂಧಪಟ್ಟ ‘ಯಂತ್ರ’ ಇದೆ’, ಎಂದು ನನಗೆ ಅನಿಸಿತು.’

೧ ಆ. ಕು. ಮೃಣಾಲಿನಿ ದೇವಘರೆ, ಸನಾತನ ಆಶ್ರಮ, ರಾಮನಾಥಿ, ಗೋವಾ.

೧ ಆ ೧. ‘ನಾಗಬನವು ಜಾಗೃತ ಸ್ಥಾನವಾಗಿದೆ’, ಎಂದು ಅನಿಸುವುದು ಮತ್ತು ಅಲ್ಲಿ ಒಂದು ರೀತಿಯ ಶಕ್ತಿ ಪ್ರಕ್ಷೇಪಿತವಾಗುತ್ತಿರುವುದು ಅರಿವಾಗುವುದು : ‘ಪ.ಪೂ. ದೇವಬಾಬಾ ಇವರ ಮನೆಯ ಜಾಗದಲ್ಲಿರುವ ನಾಗಬನದಲ್ಲಿನ ಪೂಜೆಯ ಸ್ಥಳದಲ್ಲಿನ ವಾತಾವರಣ ತುಂಬಾ ಆನಂದವೆನಿಸುತ್ತಿತ್ತು. ವಾತಾವರಣದಲ್ಲಿ ತುಂಬಾ ಪ್ರಕಾಶವಿರುವುದೆಂದು ಅರಿವಾಗುತ್ತಿತ್ತು. ನಾಗಬನದ ಒಳಗೆ ಹೋದನಂತರ ‘ಅದು ಜಾಗೃತ ಸ್ಥಳವಿರಬೇಕು’, ಎಂದು ನನಗೆ ಅನಿಸುತ್ತಿತ್ತು. ನಾಗಬನದ ಒಳಗೆ ಹೊರಗಡೆಗಿಂತ ಹೆಚ್ಚು ಪ್ರಮಾಣದಲ್ಲಿ ಶಕ್ತಿಯ ಅರಿವಾಗುತ್ತಿತ್ತು. ನಾಗಬನದ ಒಳಗೆ ಹೋದತಕ್ಷಣ ಒಂದು ರೀತಿಯ ಶಕ್ತಿ ಪ್ರಕ್ಷೇಪಿತವಾಗುವುದು ಅರಿವಾಗುತ್ತಿತ್ತು.

೧ ಆ ೨. ಆರತಿಯ ಸಮಯದಲ್ಲಿ ಸೂಕ್ಷ್ಮದಿಂದ ಎರಡು ನಾಗಗಳು ಕಾಣಿಸಿಅವುಗಳ ಹಿಂದೆ ತುಂಬಾ ಪ್ರಕಾಶ ಕಾಣಿಸುವುದು : ಆರತಿ ಮಾಡುತ್ತಿದ್ದಾಗ, ‘ಹಿಂದಿನಿಂದ ನೀಲಿ ಬಣ್ಣದ ೨ ನಾಗಗಳು (ಸೂಕ್ಷ್ಮದಿಂದ) ಮೇಲೆ ಬಂದಿದೆ ಮತ್ತು ಅವುಗಳ ಹಿಂದೆ ತುಂಬಾ ಪ್ರಕಾಶವಿದೆ’, ಎಂದು ಅನಿಸಿತು.

೧ ಆ ೩. ನಾಗಪೂಜೆಗಾಗಿ ಬಿಡಿಸಿದ ಸರ್ಪದ ರಂಗೋಲಿಯಿಂದ ತುಂಬಾ ಮಾರಕ ಶಕ್ತಿಯ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿರುವಂತೆ ಅರಿವಾಗುತ್ತಿತ್ತು.’

ರಾಮನಾಥಿ ಆಶ್ರಮದಲ್ಲಿ ವಸಂತಪಂಚಮಿಯ ದಿನದಂದು ಪರಾತ್ಪರ ಗುರು ಡಾ. ಆಠವಲೆ ಇವರ ಪಾದುಕಾ-ಧಾರಣೆ ವಿಧಿ ಮತ್ತು ನಂತರ ‘ಶ್ರೀಂ’ ಬೀಜಮಂತ್ರಯುಕ್ತ ಪದಕಗಳ ಪೂಜೆ ಆಗುವುದೆಂದು ತಿಳಿಯುವುದು ಹಾಗೂ ಪ.ಪೂ. ದೇವಬಾಬಾರ ಕಡೆಗೆ ಅದೇ ದಿನ ಆಗುತ್ತಿದ್ದ ನಾಗದೇವತೆಯ ಪೂಜೆಯನ್ನು ನೋಡಿ ‘ಪ್ರತ್ಯಕ್ಷ ಶ್ರೀವಿಷ್ಣುವೇ ಅವನ ಪೂಜೆಯಾಗುವಮುನ್ನ ಶೇಷನಾಗನ ಪೂಜೆಯ ಆಯೋಜನೆ ಮಾಡಿದನು’, ಎಂಬ ವಿಚಾರ ಮನಸ್ಸಿನಲ್ಲಿ ಬರುವುದು

‘೧೦.೨.೨೦೧೯ ರಂದು ಅಂದರೆ ವಸಂತಪಂಚಮಿಯಂದು ರಾಮನಾಥಿ ಆಶ್ರಮದಲ್ಲಿ ‘ಪರಾತ್ಪರ ಗುರು ಡಾ. ಆಠವಲೆ ಇವರ ಪಾದುಕಾ-ಧಾರಣೆ ವಿಧಿ ಮತ್ತು ‘ಶ್ರೀಂ’ ಬೀಜಮಂತ್ರಯುಕ್ತ ಪದಕಗಳ ಪೂಜೆ ಆಗುವುದಿದೆ ಎಂದು ತಿಳಿಯಿತು ಮತ್ತು ಪ.ಪೂ. ದೇವಬಾಬಾರ ಕಡೆಗೂ ವಸಂತಪಂಚಮಿಯ ದಿನವೇ ನಾಗಪೂಜೆ ಇತ್ತು. ‘ಪರಾತ್ಪರ ಗುರು ಡಾಕ್ಟರ್ ಇವರು ಸಾಕ್ಷಾತ್ ವಿಷ್ಣುಸ್ವರೂಪ ಇದ್ದಾರೆ ಮತ್ತು ‘ಶ್ರೀಂ’ ಬೀಜಮಂತ್ರಯುಕ್ತ ಪದಕವು ಲಕ್ಷ್ಮಿಸ್ವರೂಪವಿದೆ. ಆದುದರಿಂದ ‘ಅವುಗಳ ಪೂಜೆ ಆಗುವ ಮುನ್ನ ಶ್ರೀವಿಷ್ಣು ಪ.ಪೂ. ದೇವಬಾಬಾರ ಕಡೆಗೆ ಇರುವ ಶೇಷನಾಗನ ಪೂಜೆ ಮಾಡಿಸಿ ಕೊಳ್ಳುತ್ತಿದ್ದಾನೆ ಮತ್ತು ಇದೆಲ್ಲ ಭಗವಾನ ಶ್ರೀವಿಷ್ಣುವಿನದ್ದೇ ಆಯೋಜನೆಇದೆ’, ಎಂಬುದು ಗಮನಕ್ಕೆ ಬಂದಿತು. ಈ ಮೂಲಕ ಭಗವಾನ ಶ್ರೀವಿಷ್ಣುವೇ ‘ಸನಾತನ ಸಂಸ್ಥೆಯ ಎಲ್ಲ ಸಾಧಕರಿಗೆ ನಾಗದೇವತೆಯ ಆಶೀರ್ವಾದ ಲಭಿಸಬೇಕು ಮತ್ತು ಉತ್ತಮ ಆರೋಗ್ಯ ದೊರಕಬೇಕು’, ಅದಕ್ಕಾಗಿ ನಮ್ಮೆಲ್ಲ ಸಾಧಕರಿಗೆ ನಾಗಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದರು’, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬಂದಿತು. ‘ಈ ಪೂಜೆ ಅಂದರೆ ಸಾಕ್ಷಾತ್ ಶೇಷನಾಗನ ಪೂಜೆ ಇದೆ’, ಎಂದು ನನಗೆ ಅನಿಸಿತು.’ – ಕು. ಮಯೂರಿ ಡಗವಾರ, ಸನಾತನ ಆಶ್ರಮ, ರಾಮನಾಥಿ, ಗೋವಾ.

Kannada Weekly | Offline reading | PDF