ಮುಗ್ಧ ಭಾವದಿಂದ ಸತತ ದೇವರ ಅನುಸಂಧಾನದಲ್ಲಿರುವ ಮತ್ತು ದೃಷ್ಟಿದೋಷವಿದ್ದರೂ ‘ಸನಾತನದ ಕಾರ್ಯವನ್ನು ಮನೆಮನೆಗೆ ತಲುಪಿಸಬೇಕು, ಎಂಬ ತಳಮಳದಿಂದ ಸೇವೆ ಮಾಡುವ ಪುಣೆಯ ಸೌ. ಸಂಗೀತಾ ಪಾಟೀಲರವರು ಸಮಷ್ಠಿ ಸಂತಪದವಿಯಲ್ಲಿ ವಿರಾಜಮಾನ ! – (ಪರಾತ್ಪರ ಗುರು) ಡಾ. ಆಠವಲೆ

‘ಪುಣೆಯ ಸೌ. ಸಂಗೀತಾ ಮಹಾದೇವ ಪಾಟೀಲರವರು ಚಿಕ್ಕಂದಿನಿಂದಲೂ ಅತ್ಯಂತ ಕಠಿಣಜೀವನ ನಡೆಸುವಾಗ ದೇವರ ಮೇಲಿನ ನಿಷ್ಠೆ ಎಂದಿಗೂ ಕಡಿಮೆಯಾಗಲು ಬಿಡಲಿಲ್ಲ. ಅವರ ಮುಗ್ಧಭಾವದಿಂದಾಗಿ ದೇವರು ಕೂಡ ಅವರ ಪ್ರತಿಯೊಂದು ಕರೆಗೆ ಓಡಿ ಬರುತ್ತಿದ್ದನು. ಅನಾರೋಗ್ಯದಿಂದ ಅವರಿಗೆ ಅಂಧತ್ವ ಬಂದಿತು ಮತ್ತು ಸಾಧನೆ ಮಾಡಿದ ನಂತರ ಅವರಿಗೆ ದೊಡ್ಡ ಅನುಭೂತಿ ಬಂದಿತು, ಅದೇನೆಂದರೆ ಅವರಿಗೆ ಸ್ವಲ್ಪ ಸ್ವಲ್ಪ ಕಾಣಿಸತೊಡಗಿತು. ನಾವು ಸಂತ ಜನಾಬಾಯಿ, ಸಂತ ಸಖುಬಾಯಿಯವರ ವಿಷಯದಲ್ಲಿ ಕೇಳಿದ್ದೆವು, ಪ್ರತ್ಯಕ್ಷ ದೇವರೇ ಅವರ ಸಹಾಯಕ್ಕೆ ಬರುತ್ತಿದ್ದರು. ಹಾಗೆಯೇ ಸೌ. ಪಾಟೀಲಕಾಕೂರವರ ಸಂದರ್ಭದಲ್ಲಿಯೂ ಘಟಿಸಿದೆ.

ಅವರನ್ನು ವೈಶಿಷ್ಟ್ಯವೆಂದರೆ ಬಾಹ್ಯ ಪರಿಸ್ಥಿತಿ ಎಷ್ಟೂ ಪ್ರತಿಕೂಲ ವಿದ್ದರೂ, ಸೇವೆಯ ತೀವ್ರ ತಳಮಳ ಮತ್ತು ಸನಾತನದ ಕಾರ್ಯ ಸಮಾಜದ ವರೆಗೆ ತಲುಪಿಸುವ ಧ್ಯಾಸ, ಇದರಿಂದ ಕಣ್ಣು ಕಾಣಿಸದಿದ್ದರೂ ಅವರು ಪ್ರಸಾರ ಸೇವೆಯನ್ನು ಮಾಡುತ್ತಾರೆ. ಅವರು ದೇವರನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದರು ಮತ್ತು ಜನಜಂಗುಳಿ ರಸ್ತೆಯಲ್ಲಿ ಒಬ್ಬರೇ ನಡೆದುಕೊಂಡು ಹೋಗಿ ಮನೆಮನೆ ಪ್ರಸಾರ ಮಾಡುತ್ತಾರೆ. ಕಣ್ಣು ಕಾಣಿಸದಿರುವುದರಿಂದ ಅವರಿಗೆ ಓದುವುದು ಮುಂತಾದವು ಬರುತ್ತಿರಲಿಲ್ಲ. ಹೀಗಿದ್ದರೂ ಅವರು ಶಾಸ್ತ್ರೀಯ ಭಾಷೆಯಲ್ಲಿ ವಿಷಯಗಳನ್ನು ವಿಶ್ಲೇಷಣೆ ಮಾಡುತ್ತಾರೆ.

ಇಲ್ಲಿಯ ವರೆಗೆ ನಾನು ಅನೇಕ ಭಕ್ತಿಯೋಗಿಗಳನ್ನು ನೋಡಿದ್ದೇನೆ; ಆದರೆ ಭಕ್ತಿಯೋಗದೊಂದಿಗೆ ಅದ್ವೆ??ತವಾಗಿರುವ, ಭಗವಂತನೊಂದಿಗೆ ಅಖಂಡಅನುಸಂಧಾನವಿರುವ ಪಾಟೀಲಕಾಕೂ ಏಕೈಕರಾಗಿದ್ದಾರೆ ! ಭಕ್ತಿಯೋಗಿಯಾಗಿ ದ್ದರೂ ಅವರು ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯನ್ನು ಮಾಡುತ್ತಿದ್ದಾರೆ. ಶಾರೀರಿಕ, ಆರ್ಥಿಕ ಇತ್ಯಾದಿ ಎಲ್ಲಾ ರೀತಿಯ ಅಡಚಣೆಗಳಿದ್ದರೂ ಅವರು ಈ ಸಂದರ್ಭದಲ್ಲಿ ಯಾವುತ್ತೂ ಯಾವುದನ್ನೂ ದೂರಲಿಲ್ಲ ಮತ್ತು ಅವರ ಮೇಲೆ ಅಡಚಣೆಯಿಂದ ಯಾವುದೇ ಪರಿಣಾಮವು ಆಗಲಿಲ್ಲ. ಈ ಸ್ಥಿತಿಯಲ್ಲಿಯೂ ಅವರಿಗೆ ಭಗವಂತನ ಮೇಲೆ ಅಖಂಡ ಶ್ರದ್ಧೆ ಇತ್ತು.

ಅಖಂಡ ಭಾವಸ್ಥಿತಿ ಮತ್ತು ಸೇವೆಯ ತೀವ್ರ ತಳಮಳದಿಂದಸೌ. ಸಂಗೀತಾ ಮಹಾದೇವ ಪಾಟೀಲ ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿ ಸನಾತನದ ೮೫ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರು.

ಇಂತಹ ಪೂ. ಕಾಕೂರವರನ್ನು ಸನಾತನ ಸಂಸ್ಥೆಗೆ ನೀಡಿದ ಬಗ್ಗೆ ನಾನು ಭಗವಂತನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ. ‘ಅವರ ಉತ್ತರೋತ್ತರ ಆಧ್ಯಾತ್ಮಿಕ ಪ್ರಗತಿಯಾಗಬೇಕು, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !

ಪೂ. ಕಾಕೂರವರ ಯಜಮಾನರಲ್ಲಿ ಸಾಧಕತ್ವದ ಅನೇಕ ಗುಣಗಳಿವೆ. ಪೂ. ಕಾಕೂರವರ ಸಂತಪದವಿಯ ವರೆಗಿನ ಪ್ರವಾಸದಲ್ಲಿ ಅವರು ಬಹು ಅಮೂಲ್ಯ ಜೊತೆ ನೀಡಿದರು. ಇದರಿಂದ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು. ಈ ಬಗ್ಗೆ ನಾನು ಅವರಿಗೆ ಅಭಿನಂದಿಸುತ್ತೇನೆ.

‘ಪೂ. ಕಾಕೂ ಮತ್ತು ಅವರ ಪತಿಯವರು ರಾಮನಾಥಿ ಆಶ್ರಮದಲ್ಲಿ ಶಾಶ್ವತವಾಗಿ ಉಳಿಯಲು ಅದಷ್ಟು ಬೇಗನೆ ಬರಬೇಕೆಂದು ನಾನು ಅವರಲ್ಲಿ ವಿನಂತಿಸುತ್ತಿದ್ದೇನೆ.

– (ಪರಾತ್ಪರ ಗುರು) ಡಾ. ಆಠವಲೆ

‘ಈ ಕಡತವನ್ನು ಓದುವಾಗ ಅತಿಥಿಕಕ್ಷೆಯಲ್ಲಿ ತುಂಬಾ ಸುಗಂಧ ಹರಡುತ್ತಿತ್ತು ಮತ್ತು ಭಾವಜಾಗೃತಿಯಾಗುತ್ತಿತ್ತು. ಇಂತಹ ಅನುಭೂತಿ ಮೊದಲ ಬಾರಿ ಬಂದಿತು. – ಸದ್ಗುರು (ಸೌ.) ಬಿಂದಾ ಸಿಂಗಬಾಳ (೩೦.೩.೨೦೧೯)

Kannada Weekly | Offline reading | PDF