ಸನಾತನ ಸಂಸ್ಥೆಯ ಸಾಧಕರಿಗೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆ !

ಡಾ. ನರೇಂದ್ರ ದಾಭೋಳ್ಕರ್, ಕಾ. ಗೋವಿಂದ ಪಾನ್ಸರೆ, ಪ್ರಾ. ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ ಇವರ ಹತ್ಯೆಯ ಪ್ರಕರಣಗಳಲ್ಲಿ ಪೊಲೀಸರಿಂದ ಪದೇ ಪದೇ ಸಾಧಕರ ಮತ್ತು ಕಾರ್ಯಕರ್ತರ ವಿಚಾರಣೆಯಾಗುತ್ತಿದೆ ಮತ್ತು ಪೊಲೀಸರು ವಿಚಾರಣೆಯ ಹೆಸರಿನಲ್ಲಿ ಅರಿಗೆ ವಿನಾಕಾರಣ ಕಿರುಕುಳವನ್ನು ನೀಡುತ್ತಿದ್ದಾರೆ. ಸಾಧಕರು ಮತ್ತು ಕಾರ್ಯಕರ್ತರು ಈ ವಿಚಾರಣೆಯ ವಿಸ್ತೃತ ವಾರ್ತೆಯನ್ನು ತಕ್ಷಣವೇ ‘ಸನಾತನ ಪ್ರಭಾತದ ಸಮೀಪದ ಕಾರ್ಯಾಲಯಕ್ಕೆ ಕಳುಹಿಸಬೇಕು.

ಪೊಲೀಸರು ವಿಚಾರಣೆಗೆ ಬಂದರೆ ಭಯಪಡದೆ ದೃಢವಾಗಿರಿ !

‘ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಡಾ. ನರೇಂದ್ರ ದಾಭೋಳ್ಕರ್, ಕಾ. ಪಾನ್ಸರೆ ಇವರ ಹತ್ಯೆಯ ಪ್ರಕರಣದಲ್ಲಿ ಪೊಲೀಸರಿಂದ ಸನಾತನ ಸಂಸ್ಥೆ ಮತ್ತು ಸಾಧಕರನ್ನು ಅನಾವಶ್ಯಕವಾಗಿ ಸಿಲುಕಿಸುವ ಪ್ರಯತ್ನ ನಡೆದಿದೆ. ಪೊಲೀಸರು ವಿಚಾರಣೆಗೆ ಬಂದರೆ ಸಾಧಕರು ಭಯಪಡದೆ, ಪೊಲೀಸರು ಕೇಳುವ ಪ್ರಶ್ನೆಗಳಿಗೆ ಶಾಂತರೀತಿಯಿಂದ ಉತ್ತರ ಕೊಡಬೇಕು. ಏಕೆಂದರೆ ಸನಾತನ ಸಂಸ್ಥೆಯ ಎಲ್ಲ ಕಾರ್ಯಗಳು ಕಾನೂನುಪ್ರಕಾರ ನಡೆಯುತ್ತವೆ. ಈ ಹಿಂದೆಯೂ ಇಂತಹ ಘಟನೆಗಳಲ್ಲಿ ಸಾಧಕರ ವಿಚಾರಣೆ ಆಗಿತ್ತು; ಆದರೆ ಇಂತಹ ವಿಚಾರಣೆಯಿಂದ ಏನೂ ಸಾಧ್ಯವಾಗಿಲ್ಲ. ‘ಏನೂ ಮಾಡದಿರುವವನಿಗೆ ಭಯ ಏತಕ್ಕೆ ಎಂಬಂತೆ ನಾವು ಏನೂ ಮಾಡದಿರುವಾಗ ಸಾಧಕರು ಭಯಪಡುವ ಅವಶ್ಯಕತೆಯಿಲ್ಲ. ಭಗವಾನ ಶ್ರೀಕೃಷ್ಣ ನಮ್ಮ ಹಿಂದಿರುವುದರಿಂದ ಸಾಧಕರು ಇಂತಹ ಪ್ರಸಂಗಗಳಲ್ಲಿ ಸ್ವಲ್ಪವೂ ಭಯಪಡದೆ ಪ್ರಾರ್ಥನೆ ಮತ್ತು ನಾಮಜಪ ಮಾಡುತ್ತಾ ದೃಢವಾಗಿ ಪ್ರಸಂಗವನ್ನು ಎದುರಿಸಬೇಕು.

Kannada Weekly | Offline reading | PDF