ಸಾಧಕರಿಗೆ ಸೂಚನೆ

(ಸದ್ಗುರು) ಸೌ. ಬಿಂದಾ ಸಿಂಗಬಾಳ

‘ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಛಾಯಾಚಿತ್ರಮಯ ಜೀವನದರ್ಶನ (ಭಾಗ ೧) ಈ ಗ್ರಂಥದ ವಿತರಣೆಯನ್ನು ವಿವಿಧ ಉಪಕ್ರಮಗಳಲ್ಲಿ ಮಾಡಿರಿ !

‘ಸಾಧಕರನ್ನು ಭವಸಾಗರದಿಂದ ಪಾರು ಮಾಡುವ ಮತ್ತು ಅಲ್ಪಾವಧಿಯಲ್ಲಿ ಧರ್ಮ, ಅಧ್ಯಾತ್ಮ ಮುಂತಾದ ಎಲ್ಲ ವಿಷಯಗಳ ಬಗೆಗಿನ ಬರಹವನ್ನು ಅಖಿಲ ಮನುಕುಲದವರೆಗೆ ತಲುಪಿಸಿ ಜಗದೋದ್ಧಾರದ ಕಾರ್ಯವನ್ನು ಮಾಡುವ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಜೀವನದ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಗುರುದೇವರ ಹಿಂದಿನ ಜೀವನ, ಅವರ ಸಾತ್ತ್ವಿಕ ಮತ್ತು ಸಂಸ್ಕಾರವಿರುವ ಪರಿವಾರ, ಅವರು ನಿರ್ಮಿಸಿದ ‘ಗುರುಕೃಪಾಯೋಗ ಎಂಬ ಸಾಧನಾಮಾರ್ಗ ಮತ್ತು ಅವರು ವಿಹಂಗಮ ಗತಿಯಿಂದ ಮಾಡಿದ ಧರ್ಮ ಮತ್ತು ಅಧ್ಯಾತ್ಮ ಪ್ರಸಾರದ ಕಾರ್ಯ ಈ ಸಂದರ್ಭದಲ್ಲಿನ ಮಾಹಿತಿಯನ್ನು ಅರಿತುಕೊಳ್ಳಲು ಎಲ್ಲ ಜನರು ಉತ್ಸುಕರಿರುತ್ತಾರೆ. ಈ ಎಲ್ಲ ಮಾಹಿತಿಯನ್ನು ‘ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಛಾಯಾಚಿತ್ರಮಯ ಜೀವನದರ್ಶನ (ಭಾಗ ೧) ಈ ಗ್ರಂಥದಲ್ಲಿ ಸಂಗ್ರಹಿಸಿದ್ದೇವೆ. ಈ ಜೀವನಚರಿತ್ರೆ ಎಲ್ಲರವರೆಗೆ ತಲುಪಬೇಕೆಂದು ಈ ಗ್ರಂಥವನ್ನು ವಿಶೇಷ ರಿಯಾಯಿತಿಯಲ್ಲಿ ೨೦೦ ರೂಪಾಯಿಗಳ ಅರ್ಪಣೆ ಬೆಲೆಯಲ್ಲಿ ಲಭ್ಯ ಮಾಡಿಕೊಡಲಾಗಿದೆ. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿಸಮಿತಿ ಇವುಗಳ ವಿವಿಧ ಉಪಕ್ರಮಗಳಲ್ಲಿ (ಉದಾ. ಹಿಂದೂ ರಾಷ್ಟ್ರ-ಜಾಗೃತಿ ಸಭೆ, ಹಿಂದೂ ಅಧಿವೇಶನಗಳು, ಶಿಬಿರಗಳು) ಈ ಗ್ರಂಥಗಳ ವಿತರಣೆ ಮಾಡಬೇಕು. ಸಾಧಕರು ಹೆಚ್ಚೆಚ್ಚು ಪ್ರಯತ್ನ ಮಾಡಿ ಪರಾತ್ಪರ ಗುರುಗಳ ಜೀವನಚರಿತ್ರೆಯನ್ನು ಸಮಾಜದವರೆಗೆ ತಲುಪಿಸಬೇಕು. – (ಸದ್ಗುರು) ಸೌ. ಬಿಂದಾ ಸಿಂಗಬಾಳ

Kannada Weekly | Offline reading | PDF