ಸಾಧಕರೇ, ಅಷ್ಟಾಂಗ ಸಾಧನೆಯಲ್ಲಿನ ‘ಪ್ರೀತಿ’ ಈ ಅಂಗದ ಕಡೆಗೆ ಪ್ರಾಧಾನ್ಯತೆಯಿಂದ ಗಮನ ನೀಡಿ !

(ಪರಾತ್ಪರ ಗುರು) ಡಾ. ಆಠವಲೆ

‘ಗುರುಕೃಪಾಯೋಗಕ್ಕನುಸಾರ ಅಷ್ಟಾಂಗ ಸಾಧನೆ ಮಾಡುವಾಗ ಸ್ವಭಾವದೋಷ-ನಿರ್ಮೂಲನೆಗಾಗಿ ಪ್ರಯತ್ನಿಸುವುದು, ಅಹಂ-ನಿರ್ಮೂಲನೆಗಾಗಿ ಪ್ರಯತ್ನಿಸುವುದು, ನಾಮಜಪ, ಸತ್ಸಂಗ, ಸತ್ಸೇವೆ, ಭಾವಜಾಗೃತಿಗಾಗಿ ಪ್ರಯತ್ನಿಸುವುದು, ಸತ್‌ಗಾಗಿ ತ್ಯಾಗ ಮತ್ತು ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೇಮ) ಇವುಗಳಲ್ಲಿನ ‘ಪ್ರೀತಿ’ ಈ ಭಾಗದ ಕಡೆಗೆ ಸಾಧಕರು ಗಮನ ಕೊಡುವುದಿಲ್ಲ. ಈಶ್ವರನ ಎಲ್ಲಕ್ಕಿಂತ ಮಹತ್ವದ ಗುಣ ‘ಪ್ರೀತಿ’ ಆಗಿದೆಯೆಂಬುದೂ ಸಾಧಕರ ಗಮನಕ್ಕೆ ಬರುವುದಿಲ್ಲ. ಭಾವ ಸತ್ಸಂಗದಲ್ಲಿ ‘ಪ್ರೀತಿ’ ಈ ವಿಷಯದ ಬಗ್ಗೆ ಅನೇಕ ಬಾರಿ ವಿಷಯ ತೆಗೆದುಕೊಂಡಿದ್ದರೂ ಸಾಧಕರು ಆ ಕಡೆಗೆ ದುರ್ಲಕ್ಷ ಮಾಡುತ್ತಾರೆ. ಆದುದರಿಂದ ಅವರಲ್ಲಿ ಪ್ರೇಮಭಾವ, ಆತ್ಮೀಯತೆ ಮತ್ತು ಪ್ರೀತಿ ನಿರ್ಮಾಣವಾಗದಿರುವುದರಿಂದ ಅವರಿಗೆ ಆನಂದ ಸಿಗುವುದಿಲ್ಲ. ಅವರ ಸ್ವಂತದ ಪ್ರಗತಿಯಾಗುವುದಿಲ್ಲ ಮತ್ತು ಅವರ ಸಮಷ್ಟಿ ಸಾಧನೆಯ ಫಲಶ್ರುತಿಯೂ ಕಡಿಮೆಯಾಗುತ್ತದೆ; ಏಕೆಂದರೆ ಆತ್ಮೀಯತೆಯ ಹೊರತು ಸಮಷ್ಟಿ ಸಾಧನೆಯನ್ನು ಸರಿಯಾಗಿ ಮಾಡಲು ಬರುವುದಿಲ್ಲ.’

ಜ್ಞಾನಪ್ರಾಪ್ತಿಮಾಡಿಕೊಳ್ಳುವ ಸಾಧಕರಿಗೆ ಪರಾತ್ಪರ ಗುರು ಡಾ. ಆಠವಲೆ ಇವರು ಯಾವ ಪ್ರಶ್ನೆಯನ್ನು ಕೇಳುವರೋ, ಅವುಗಳ ಉತ್ತರ ನೀಡುವುದಕ್ಕಿಂತ ಅವರಿಗೆ ‘ದೇವರು ಸೂಚಿಸಿದ’ ಜ್ಞಾನವನ್ನು ಗ್ರಹಣ ಮಾಡುವುದು ಹೆಚ್ಚು ಮಹತ್ವದ್ದಾಗಿದೆ, ‘ಇದರ ಕಾರಣವೇನೆಂದರೆ, ನಾನು ಯಾವ ಪ್ರಶ್ನೆಯನ್ನು ಕೇಳುವೆನೋ, ಅದನ್ನು ನಾನು ಓದಿದ ಅಥವಾ ಅನುಭವಿಸಿದ ಯಾವುದಾದರೊಂದು ವಿಷಯದ ಬಗ್ಗೆ ಇರುತ್ತದೆ; ಆದರೆ ಯಾವ ಕಾಲದಲ್ಲಿ ಯಾವ ಜ್ಞಾನ ಸಿಗುವುದು ಮಹತ್ವದ್ದಾಗಿದೆ, ಎಂಬುದು ದೇವರಿಗೆ ಗೊತ್ತಿರುವುದರಿಂದ ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಸಾಧಕರು ದೇವರು ಕೊಡುತ್ತಿರುವ ಜ್ಞಾನವನ್ನು ಆದ್ಯತೆಯಿಂದ ಪಡೆಯಬೇಕು. ನಾನು ಕೇಳುವ ಪ್ರಶ್ನೆಗಳ ಉತ್ತರ ಪಡೆಯುವುದಕ್ಕಿಂತ ಅದು ಹೆಚ್ಚು ಮಹತ್ವದ್ದಾಗಿದೆ.’ – (ಪರಾತ್ಪರ ಗುರು) ಡಾ. ಆಠವಲೆ

Kannada Weekly | Offline reading | PDF