ಸಾಧಕರ ತೊಂದರೆ ದೂರವಾಗಬೇಕೆಂಬ ತಳಮಳದಿಂದ ಸಾಧಕರಿಗೆ ನಾಮಜಪ ಮುಂತಾದ ಆಧ್ಯಾತ್ಮಿಕ ಉಪಾಯಗಳನ್ನು ಹೇಳುವ ಪ.ಪೂ. ದೇವಬಾಬಾರವರ ಯೋಗ ಸಾಮರ್ಥ್ಯ ಮತ್ತು ಅನುಭವಿಸಿದ ಅವರ ಪ್ರೀತಿ ಮತ್ತು ಸರ್ವಜ್ಞತೆ !

ಏಕಮೇವಾದ್ವಿತೀಯ ಸಿದ್ಧ ಪುರುಷರು – ಕಿನ್ನಿಗೋಳಿಯ ಪ.ಪೂ. ದೇವಬಾಬಾ !

ಪ. ಪೂ. ದೇವಬಾಬಾ ಮತ್ತು ಅವರ ಪತ್ನಿ ಸೌ. ಜ್ಯೋತಿ ರಾವ

‘ಸಮಾಜದಲ್ಲಿನ ಬಹಳಷ್ಟು ಸಂತರ ವೈಶಿಷ್ಟ್ಯಗಳು ಒಂದೇ ರೀತಿ ಇರುವುದು ಕಾಣಿಸುತ್ತದೆ; ಆದರೆ ಕಿನ್ನಿಗೋಳಿಯ ಪ.ಪೂ. ದೇವ ಬಾಬಾರವರ ಅನೇಕ ವೈಶಿಷ್ಟ್ಯಗಳು ನನ್ನ ಗಮನಕ್ಕೆ ಬಂದವು. ಅವರು ಸಂಗೀತ ಮತ್ತು ನೃತ್ಯ ಈ ವಿಷಯದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರಿಗೆ ಕಳೆದ ಎರಡು ವರ್ಷಗಳಿಂದ ಮಾರ್ಗದರ್ಶನ ಮಾಡುತ್ತಲೇ ಇದ್ದಾರೆ; ಅದರೊಂದಿಗೆ ರಾಷ್ಟ್ರ ಮತ್ತು ಧರ್ಮಕ್ಕಾಗಿಯೂ ಅವರು ಕಾರ್ಯನಿರತರಾಗಿದ್ದಾರೆ. ಅಷ್ಟೇ ಅಲ್ಲದೇ, ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಸಾಧಕರು ವಿವಿಧ ಕಾರ್ಯಕ್ರಮ, ವಿಧಿ ಮುಂತಾದವುಗಳ ಸಮಯದಲ್ಲಿ ಮಾಡಿದ ಸೂಕ್ಷ್ಮ ಪರೀಕ್ಷೆಯ ಅಂತರ್ಗತ ಬಿಡಿಸಿದ ಸೂಕ್ಷ್ಮ ಚಿತ್ರಗಳ ಮತ್ತು ಚಿತ್ರಕಲೆಗೆ ಸಂಬಂಧಿಸಿದ ಚಿತ್ರಗಳ ಬಗ್ಗೆಯೂ ಆಧ್ಯಾತ್ಮಿಕ ಭಾವಾರ್ಥ ಹೇಳುವುದು ಮತ್ತು ಸಾಧಕರಿಗೆ ಧರ್ಮಕಾರ್ಯಕ್ಕಾಗಿ (ಹಿಂದೂ ರಾಷ್ಟ್ರಕ್ಕಾಗಿ) ತಮ್ಮ ಆಧ್ಯಾತ್ಮಿಕ ಶಕ್ತಿ ಪ್ರದಾನಿಸುವುದು, ಇವು ಅವರ ವಿವಿಧ ವೈಶಿಷ್ಟ್ಯಗಳಾಗಿವೆ. ಪ.ಪೂ. ದೇವ ಬಾಬಾರವರು ಓರ್ವ ಸಿದ್ಧ ಪುರುಷರೇ ಆಗಿದ್ದಾರೆ. ಇಂತಹ ಸಿದ್ಧ ಪುರುಷರನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಹಾಯಕ್ಕಾಗಿ ನೀಡಿದ ಬಗ್ಗೆ ನಾನು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ‘ಪ.ಪೂ. ದೇವಬಾಬಾರವರು ಮುಂದೆಯೂ ನಮಗೆ ಇದೇ ರೀತಿಯಲ್ಲಿ ಸಹಾಯವನ್ನು ಮಾಡಬೇಕು’, ಎಂದು ಅವರ ಚರಣಗಳಲ್ಲಿ ಪ್ರಾರ್ಥನೆ !’ – (ಪರಾತ್ಪರ ಗುರು) ಡಾ. ಆಠವಲೆ

‘ರಾಮನಾಥಿ ಆಶ್ರಮದ ಸಾಧಕರು ಕಳೆದ ೪-೫ ತಿಂಗಳುಗಳಿಂದ ಪ.ಪೂ ದೇವ ಬಾಬಾರವರ ‘ಶಕ್ತಿದರ್ಶನ ಯೋಗಾಶ್ರಮಕ್ಕೆ ನಾಮಜಪ ಮುಂತಾದ ಉಪಾಯಗಳಿಗಾಗಿ ಹೋಗುತ್ತಿದ್ದಾರೆ. ಪ.ಪೂ. ದೇವ ಬಾಬಾರವರ ಆಧ್ಯಾತ್ಮಿಕ ಉಪಾಯ ಮಾಡುವ ವೈಶಿಷ್ಟ್ಯಪೂರ್ಣ ಪದ್ಧತಿ, ಪ್ರತಿಯೊಬ್ಬ ಸಾಧಕನ ಸಾಧನೆಯಲ್ಲಿನ ಅಡಚಣೆ ದೂರವಾಗಬೇಕು, ಎಂಬ ಅವರಲ್ಲಿರುವ ತಳಮಳ, ಅವರ ಸರ್ವಜ್ಞತೆ ಮುಂತಾದ ಗುಣಗಳ ಬಗ್ಗೆ ಗಮನಕ್ಕೆ ಬಂದ ಅಂಶಗಳನ್ನು ಮುಂದೆ ನೀಡುತ್ತಿದ್ದೇನೆ.

೧. ಪ.ಪೂ. ದೇವಬಾಬಾರವರ ಆಧ್ಯಾತ್ಮಿಕ ಉಪಾಯ ಮಾಡುವ ವೈಶಿಷ್ಟ್ಯಪೂರ್ಣ ಪದ್ಧತಿ ಮತ್ತು ಅದರಿಂದ ಗಮನಕ್ಕೆ ಬಂದ ಅವರ ಯೋಗಸಾಮರ್ಥ್ಯ !

ಪ.ಪೂ. ದೇವಬಾಬಾರವರ ಆಧ್ಯಾತ್ಮಿಕ ಉಪಾಯ ಮಾಡುವ ಪದ್ಧತಿ ವೈಶಿಷ್ಟ್ಯಪೂರ್ಣವಾಗಿದೆ. ಆಧ್ಯಾತ್ಮಿಕ ಉಪಾಯ ಮಾಡುವಾಗ ಅವರು ಮಾಡುತ್ತಿರುವ ಅವರು ಹೇಳಿದ ಪ್ರಕ್ರಿಯೆ ಹೀಗಿದೆ. ಅವರು ವ್ಯಕ್ತಿಗೆ ಅವನ ಹಿಂದಿನ ಜನ್ಮದಲ್ಲಿ ಮಾಡಿರುವ ತಪ್ಪಿನ ಕರ್ಮಫಲಕ್ಕೆ ಸಂಬಂಧಿಸಿದ ಕರ್ಮವನ್ನು ಹುಡುಕುತ್ತಾರೆ. ಈ ಕರ್ಮದ ಮಾಧ್ಯಮದಿಂದ ಪ.ಪೂ. ದೇವಬಾಬಾರವರು ಯೋಗಸಾಮರ್ಥ್ಯದಿಂದ ವ್ಯಕ್ತಿಯ ಸೂಕ್ಷ್ಮದೇಹವನ್ನು ಹಿಂದಿನ ಜನ್ಮಕ್ಕೆ ಕರೆದುಕೊಂಡು ಹೋಗುತ್ತಾರೆ ಮತ್ತು ಅವರು ಮಾಡಿದ ತಪ್ಪು ಕರ್ಮವನ್ನು ಹುಡುಕುತ್ತಾರೆ. ನಂತರ ವ್ಯಕ್ತಿಗೆ ನಾಮಜಪ ಮುಂತಾದ ಆಧ್ಯಾತ್ಮಿಕ ಉಪಾಯ ಮಾಡಲು ಹೇಳುತ್ತಾರೆ. ಇದರಿಂದ ಪ.ಪೂ. ದೇವಬಾಬಾರವರ ಯೋಗಸಾಮರ್ಥ್ಯದ ಕಲ್ಪನೆ ಬರುತ್ತದೆ.

೨. ಪ.ಪೂ. ದೇವಬಾಬಾರವರ ಆಧ್ಯಾತ್ಮಿಕ ಉಪಾಯಗಳ ಸಮಯದಲ್ಲಿ ಅನುಭವಿಸಿದ ಅವರ ಪ್ರೀತಿ ಮತ್ತು ಸರ್ವಜ್ಞತೆ !

೨. ಅ. ಪ.ಪೂ. ದೇವಬಾಬಾರವರು ಆಧ್ಯಾತ್ಮಿಕ ಉಪಾಯ ಮಾಡುವಮೊದಲು ಸಾಧಕಿಗೆ ತೊಂದರೆ ಕಡಿಮೆಯಾಗುವ ಬಗ್ಗೆ ಪ್ರೀತಿಯಿಂದ ಆಶ್ವಾಸನೆ ನೀಡುವುದು ಹಾಗೂ ಅವಳು ೨ ದಿನ ಮಾಡಿದ ಪ್ರಯತ್ನಗಳಿಂದಾಗಿ ಅವಳ ಸ್ಥಿತಿಯಲ್ಲಿ ಪರಿವರ್ತನೆಯಾದ ಬಗ್ಗೆ ಖಚಿತವಾಗಿ ಗುರುತಿಸುವುದು : ಓರ್ವ ಸಾಧಕಿಗೆ ಬಹಳ ಶಾರೀರಿಕ ತೊಂದರೆಯಿದ್ದುದರಿಂದ ಅವಳು ತನ್ನ ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಳು ಮತ್ತು ನಿರಾಶಳಾಗಿದ್ದಳು. ಪ.ಪೂ ದೇವಬಾಬಾರವರು ಮೊದಲ ಸಂಭಾಷಣೆಯಲ್ಲಿ ಅವಳಿಗೆ ‘ನೀನು ಯಾರು ?’, ಎಂಬ ಪ್ರಶ್ನೆಯನ್ನು ಕೇಳಿದರು ಮತ್ತು ವಿವಿಧ ಉದಾಹರಣೆಗಳನ್ನು ನೀಡಿ ಅವಳಿಗೆ ‘ಅವಳ ದೇಹ ಮತ್ತು ಆನಂದ ನೀಡುವ ಅಂತರಾತ್ಮ ಬೇರೆ ಇದೆ’, ಎಂದು ತಿಳಿಸಿ ಹೇಳಿದರು. ‘ಈ ಜ್ಞಾನವಾದ ನಂತರ ನಿನ್ನ ದುಃಖ ದೂರವಾಗುವುದು’, ಎಂಬ ಅರಿವು ಮಾಡಿಕೊಟ್ಟು ಅವಳಿಗೆ ಅವಳ ರೋಗವನ್ನು ಗುಣ ಪಡಿಸುವ ಬಗ್ಗೆ ಖಾತ್ರಿ ನೀಡಿದರು. ಇದರಿಂದ ಅವಳ ಮನಸ್ಸಿನಲ್ಲಿನ ನಿರಾಶೆ ದೂರವಾಗಲು ಸಹಾಯವಾಯಿತು. ಮೊದಲ ಭೇಟಿಯಲ್ಲೇ ಪ.ಪೂ. ದೇವಬಾಬಾ ಇದೆಲ್ಲವನ್ನೂ ಅತ್ಯಂತ ಪ್ರೀತಿಯಿಂದ ಹೇಳುತ್ತಿದ್ದರು. ಈ ಸಂಭಾಷಣೆಯನಂತರ ಅವರು ಅವಳಿಗೆ ನಾಮಜಪ ಮುಂತಾದ ಆಧ್ಯಾತ್ಮಿಕ ಉಪಾಯಗಳನ್ನು ಹೇಳಲು ಪ್ರಾರಂಭಿಸಿದರು. ಅಂದು ಅವಳಿಗೆ ಅಪೇಕ್ಷಿತವಿರುವಂತಹ ಫಲಶೃತಿ ಸಿಗದ ಕಾರಣ ಕೊನೆಯ ದಿನ ಅವರು ಸಾಧಕಿಯನ್ನು ಪುನಃ ಉಪಾಯಗಳಿಗಾಗಿ ಕರೆಯಿಸಿದರು. ಆ ದಿನ ೨ ದಿನ ಗೋಸೇವೆ ಮತ್ತು ಆಶ್ರಮ ಸೇವೆ ಮಾಡಿದುದರಿಂದ ಅವಳ ಮನಸ್ಸಿನ ನಿರಾಶೆ ಕಡಿಮೆಯಾಗಿ ಅವಳ ಮನಸ್ಸಿನಲ್ಲಿ ಈಶ್ವರನ ಬಗ್ಗೆ ಶರಣಾಗತಭಾವ ಹೆಚ್ಚಾಗಿತ್ತು. ಇದರಿಂದ ಅವಳಿಗೆ ಸಹಜವಾಗಿ ಲಾಭವಾಯಿತು. ಅವಳು ಮಾಡಿದ ಈ ಪ್ರಯತ್ನಗಳ ಬಗ್ಗೆ ಪ.ಪೂ. ದೇವಬಾಬಾರಿಗೆ ಏನೂ ಹೇಳದಿದ್ದರೂ ಅವರು, “ಅವಳ ಶರಣಾಗತಿ ಹೆಚ್ಚಾಗಿರುವುದರಿಂದ ಇಂದು ಅವಳಿಗೆ ಉತ್ತಮ ಲಾಭವಾಯಿತು. ಶರಣಾಗತಭಾವ ಹೆಚ್ಚಾದರೆ ಸಾಧಕರ ಮೇಲೆ ಉಪಾಯಗಳ ಪರಿಣಾಮ ಕೂಡಲೇ ಆಗುತ್ತದೆ ಎಂದು ಹೇಳಿದರು.

೨ ಆ. ಪ.ಪೂ. ದೇವಬಾಬಾರವರು ಸಾಧಕಿಗೆ “ಅವಳ ಕೋಪದ ಮೂಲ ಕಾರಣ ಅಹಂಕಾರವಾಗಿದೆ’, ಎಂದು ಹೇಳಿ ಅವಳ ಬಗ್ಗೆ ಸ್ಥೂಲದಲ್ಲಿ ಏನೂ ತಿಳಿದಿಲ್ಲದಿದ್ದರೂ ಅಹಂ ನಿರ್ಮೂಲನೆಗಾಗಿ ಅವಳು ಮಾಡಿದ ಪ್ರಯತ್ನಗಳ ಬಗ್ಗೆ ಕೇಳುವುದು : ಇನ್ನೋರ್ವ ಸಾಧಕಿಗೆ ಆಧ್ಯಾತ್ಮಿಕ ಉಪಾಯ ಹೇಳುವ ಮೊದಲು ಪ.ಪೂ. ದೇವಬಾಬಾರವರು ಅವಳೊಂದಿಗೆ ಮಾತನಾಡಿದರು. ಪ್ರಾರಂಭದಲ್ಲಿ ಅವರು ಸಾಧಕಿಯಲ್ಲಿ “ನಿನ್ನೊಳಗೆ ಇಷ್ಟು ಕೋಪವನ್ನು ಏಕೆ ಹಿಡಿದಿಟ್ಟುಕೊಂಡಿದ್ದೀಯಾ ? ನಿನಗೆ ಯಾವುದರಿಂದಾಗಿ ಇಷ್ಟು ಕೋಪ ಬರುತ್ತದೆ ?’, ಎಂದು ಕೇಳಿದರು. ಪ.ಪೂ. ದೇವಬಾಬಾರವರು ಸಾಧಕಿಗೆ “ಈ ಕೋಪದ ಮೂಲ ಕಾರಣ ಅಹಂಕಾರವಾಗಿದೆ’, ಎಂದು ತುಂಬಾ ಪ್ರೀತಿಯಿಂದ ತಿಳಿಸಿದರು. ಅವರು ಅವಳ ತೊಂದರೆಯ ಮೂಲ ಕಾರಣವನ್ನೇ ಹುಡುಕಿ ತೆಗೆದರು. ನಂತರ ಅವರು, “ನಿನ್ನ ಆಶ್ರಮದಲ್ಲಿನ ಫಲಕದ ಮೇಲೆ ಸಾಧಕರು ನಿನಗೆ ಸಹಾಯ ಮಾಡಬೇಕು, ಎಂದು ‘ಕೋಪ ಬರುವುದು’ ಹಾಗೂ ನಿನ್ನ ಅಹಂನ ಇತರ ಲಕ್ಷಣಗಳ ಬಗ್ಗೆ ಬರೆದಿದ್ದೀಯಲ್ಲವೇ ?”, ಎಂದು ಕೇಳಿದರು. ಪ್ರತ್ಯಕ್ಷದಲ್ಲಿಯೂ ಆ ಸಾಧಕಿಗೆ ಆಶ್ರಮದಲ್ಲಿನ ಸಾಧಕರಿಂದ ಸಹಾಯ ಪಡೆಯುವ ದೃಷ್ಟಿಯಿಂದ ತನ್ನ ಅಹಂನ ಲಕ್ಷಣಗಳನ್ನು ಕಾಗದದ ಮೇಲೆ ಬರೆದು ಅದನ್ನು ರಾಮನಾಥಿ ಆಶ್ರದಲ್ಲಿನ ಫಲಕದ ಮೇಲೆ ಹಾಕಿದ್ದಳು. ಪ.ಪೂ. ದೇವಬಾಬಾರವರಿಗೆ ಅವಳ ಬಗ್ಗೆ ಸ್ಥೂಲದಲ್ಲಿ ಏನೂ ತಿಳಿದಿಲ್ಲದಿದ್ದರೂ ಅವರು ಅವಳಿಗೆ ಈ ಬಗ್ಗೆ ಕೇಳಿದರು.

ಮೇಲಿನ ಎರಡು ಉದಾಹರಣೆಗಳಿಂದ ಪ.ಪೂ ದೇವಬಾಬಾ ಇವರ ಸರ್ವಜ್ಞತೆಯು ಅನುಭವಕ್ಕೆ ಬಂದಿತು.

೩. ‘ಪ್ರತಿಯೊಬ್ಬ ವ್ಯಕ್ತಿ ತನ್ನ ಪೂರ್ವಕರ್ಮಕ್ಕನುಸಾರ ವರ್ತಿಸುತ್ತಾನೆ’, ಎಂದು ಗಮನದಲ್ಲಿಟ್ಟರೆ ‘ಯಾರ ಬಗ್ಗೆಯೂ ಕೋಪ ಅಥವಾ ಯಾರ ಬಗ್ಗೆಯೂ ಪೂರ್ವಾಗ್ರಹವಿರದೇ ಪ್ರೀತಿಯೇ ಅನಿಸುವುದು’, ಎಂದು ಪ.ಪೂ. ದೇವಬಾಬಾರವರು ಹೇಳುವುದು

ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನ ಸಂಸ್ಥೆಯ ಮೇಲಿನ ಪ್ರೀತಿಯಿಂದಾಗಿ ಪ.ಪೂ. ದೇವಬಾಬಾ ಇವರು ಸನಾತನದ ತುಂಬಾ ಸಾಧಕರಿಗೆ ನಾಮಜಪ ಮುಂತಾದ ಆಧ್ಯಾತ್ಮಿಕ ಉಪಾಯ ಹೇಳುತ್ತಾರೆ. ಬಹಳಷ್ಟು ಸಾಧಕರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ವಿವಿಧ ಅಡಚಣೆಗಳಿರುತ್ತವೆ. ಇದರ ಬಗ್ಗೆ ಒಮ್ಮೆ ಪ.ಪೂ. ದೇವಬಾಬಾ ನನ್ನಲ್ಲಿ “ನಿಜವಾಗಿಯೂ ಪ್ರತಿಯೊಬ್ಬ ವ್ಯಕ್ತಿ ಒಳ್ಳೆಯವನೇ ಇರುತ್ತಾನೆ. ಅವನು ಈ ಜನ್ಮದಲ್ಲಿ ಅವನ ಪೂರ್ವ ಕರ್ಮಕ್ಕನುಸಾರ ವರ್ತಿಸುತ್ತಿರುತ್ತಾನೆ. ನಾವು ಇದನ್ನು ತಿಳಿದುಕೊಂಡರೆ, ನಮಗೆ ಆ ವ್ಯಕ್ತಿಯ ಬಗ್ಗೆ ಪೂರ್ವಾಗ್ರಹವಿರದೇ ಅಥವಾ ಅವನ ಮೇಲೆ ಕೋಪ ಬರದೇ ಅವನ ಬಗ್ಗೆ ಪ್ರೀತಿಯೇ ಅನಿಸುತ್ತದೆ ಎಂದು ಹೇಳಿದರು. ಅವರ ಈ ವಾಕ್ಯದಿಂದ ‘ಸಂತರು ಪ್ರತಿಯೊಬ್ಬರನ್ನು ಹೇಗೆ ಸಮಾನವಾಗಿ ಪ್ರೀತಿಸುತ್ತಾರೆ’, ಎಂದು ಗಮನಕ್ಕೆ ಬಂದಿತು.

೪. ‘ಸಮಾಜದಲ್ಲಿನ ಅಪಾತ್ರ ಜನರಿಗೆ ವಿದ್ಯೆಯನ್ನು ಕಲಿಸುವುದು’, ಎಂದರೆ ‘ಗುರುಗಳು ನೀಡಿದ ವಿದ್ಯೆಗೆ ವಿಶ್ವಾಸಘಾತವಾಗಿದೆ’, ಎಂದು ಗುರುನಿಷ್ಠೆಯಿರುವ ಪ.ಪೂ. ದೇವಬಾಬಾರವರು ನಿಸ್ವಾರ್ಥ ಭಾವದಿಂದ ಸಾಧನೆ ಮಾಡುವ ಸನಾತನದ ಸಾಧಕರಿಗಾಗಿ ಅವರ ವಿದ್ಯೆಯ ಉಪಯೋಗ ಮಾಡುವುದು

ಪ.ಪೂ. ದೇವಬಾಬಾರವರು, “ಸಮಾಜದಲ್ಲಿನ ಅನೇಕ ಅಪಾತ್ರ ಜನರು ಈ ವಿದ್ಯೆಯನ್ನು ಕಲಿಯಲು ಎಷ್ಟು ಬೇಕೋ ಅಷ್ಟು ಹಣ ನೀಡಲು ಸಿದ್ಧರಿದ್ದಾರೆ; ಆದರೆ ‘ಅಪಾತ್ರನಿಗೆ ಜ್ಞಾನ ನೀಡುವುದು’, ಎಂದರೆ ‘ನನ್ನ ಗುರುಗಳು ನೀಡಿದ ವಿದ್ಯೆಯೊಂದಿಗೆ ವಿಶ್ವಾಸಘಾತ ಮಾಡಿದ ಹಾಗೆ ಆಗುವುದರಿಂದ ಹಾಗೆ ಮಾಡುವುದು ನನಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಸನಾತನದ ಸಾಧಕರಿಗಾಗಿ ನಾನು ಈ ವಿದ್ಯೆಯ (ವೈಶಿಷ್ಟ್ಯಪೂರ್ಣ ಪದ್ಧತಿಯಿಂದ ಸಾಧಕರಿಗೆ ಆಧ್ಯಾತ್ಮಿಕ ಉಪಾಯ ಹೇಳುವುದು, ಈ ವಿದ್ಯೆಯ) ಉಪಯೋಗ ಮಾಡುತ್ತಿದ್ದೇನೆ; ಏಕೆಂದರೆ ನೀವೆಲ್ಲರೂ ನಿಃಸ್ವಾರ್ಥ ಭಾವದಿಂದ ಸಾಧನೆಯನ್ನು ಮಾಡುತ್ತಿರುವಿರಿ. ಇದರಲ್ಲಿ ನಿಮ್ಮದು ಯಾವುದೇ ವೈಯಕ್ತಿಕ ಅಥವಾ ವ್ಯವಹಾರಿಕ ಸ್ವಾರ್ಥವಿಲ್ಲ. ‘ಆಧ್ಯಾತ್ಮಿಕ ಉಪಾಯಗಳಿಂದ ನಿಮ್ಮ ಸಾಧನೆಯಲ್ಲಿನ ಅಡಚಣೆಗಳು ದೂರವಾಗಿ ನಿಮ್ಮ ಸಾಧನೆ ಚೆನ್ನಾಗಿ ಆಗಬೇಕು ಮತ್ತು ಸಾಧನೆಯಲ್ಲಿ ಪ್ರಗತಿಯಾಗಬೇಕು’, ಎಂಬುದಕ್ಕಾಗಿ ನಾನು ನಿಮಗೆ ಈ ವಿದ್ಯೆಯ ಲಾಭವನ್ನು ಮಾಡಿಕೊಡುತ್ತಿದ್ದೇನೆ ಎಂದು ಹೇಳಿದರು. ಇದರಿಂದ ಅವರ ‘ಸಾಧಕರ ಮೇಲಿನ ಪ್ರೀತಿ’ ಮತ್ತು ‘ಅವರ ಸಮಷ್ಟಿಯ ವಿಚಾರ’ ಪ್ರಮುಖವಾಗಿ ಗಮನಕ್ಕೆ ಬಂದವು.

೫. ಪ.ಪೂ. ದೇವಬಾಬಾರವರು ಪರಾತ್ಪರ ಗುರು ಡಾ. ಆಠವಲೆ ಮತ್ತು ಮಹರ್ಷಿ ಅಧ್ಯಾತ್ಮವಿದ್ಯಾಲಯದ ಸಾಧಕರ ಕುರಿತು ವ್ಯಕ್ತಪಡಿಸಿದ ಗೌರವೋದ್ಗಾರ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಪ್ರತಿ ತಿಂಗಳು ಪ.ಪೂ. ದೇವಬಾಬಾರ ಆಶ್ರಮಕ್ಕೆ ಹೋಗುತ್ತಾರೆ. ಆ ಸಮಯಕ್ಕೆ ಅವರು ಅಧ್ಯಯನದ ದೃಷ್ಟಿಯಿಂದ ಪ.ಪೂ. ದೇವಬಾಬಾರವರಿಗೆ ಸಂಗೀತ(ಗಾಯನ, ವಾದನ ಮತ್ತು ನೃತ್ಯ), ಚಿತ್ರಕಲೆ, ಸೂಕ್ಷ್ಮಜ್ಞಾನ ಮುಂತಾದ ವಿಷಯಗಳ ಕುರಿತು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೆಗಳಿಗೆ ಉತ್ತರ ನೀಡುವಾಗ ಪ.ಪೂ. ದೇವಬಾಬಾ ಇವರಿಗೆ ತುಂಬಾ ಆನಂದವಾಗುತ್ತದೆ. ಮಾರ್ಚ್ ೨೦೧೯ ರ ಒಂದು ಭೇಟಿಯಲ್ಲಿ ಅವರು ಸಾಧಕರಿಗೆ, “ನಾನು ಪರಾತ್ಪರ ಗುರು ಡಾ. ಆಠವಲೆಯವರಿಗೆ ನಿಜವಾಗಿಯೂ ಆಭಾರಿಯಾಗಿದ್ದೇನೆ. ಅವರು ಪ್ರತಿಸಲ ತುಂಬಾ ಒಳ್ಳೆಯ ಸಾಧಕರನ್ನು ನನ್ನ ಬಳಿ ಕಳುಹಿಸುತ್ತಾರೆ. ನನಗೂ ಅವರಿಂದ ಹೊಸಹೊಸದು ಕಲಿಯಲು ಸಿಗುತ್ತದೆ. ನೀವೆಲ್ಲ ಸಾಧಕರು ಒಂದೇ ಹೂವಿನ ಒಂದೊಂದು ಎಸಳುಗಳಾಗಿದ್ದೀರಿ. ನಾವು ಎಸಳುಗಳನ್ನು ನೋಡಬಹುದು; ಆದರೆ ಕೇವಲ ಅವುಗಳನ್ನು ನೋಡಿ ಅಥವಾ ಅವುಗಳ ಕುರಿತು ಕೇಳುವುದರಿಂದ ಅವುಗಳ ಸ್ವಾದ ತಿಳಿಯುವುದಿಲ್ಲ, ಅದನ್ನು ಪ್ರತ್ಯಕ್ಷ ಅನುಭವಿಸಬೇಕಾಗುತ್ತದೆ. (ಗುಣ ಅನುಭವಿಸಬೇಕಾಗುತ್ತದೆ), ಹಾಗೆ ನಿಮ್ಮೆಲ್ಲರದು ಇದೆ”, ಎಂದು ಅವರು ಸಾಧಕರಿಗೆ ಹೇಳಿದರು. – ಕು. ತೇಜಲ ಪಾತ್ರೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೨೨.೩.೨೦೧೯)

ಸಾಧಕರಿಗೆ ಪ್ರೀತಿಯಿಂದ ಅವರ ಸಾಧನೆಯ ಕಾಳಜಿ ವಹಿಸುವ ಪ.ಪೂ. ದೇವಬಾಬಾರವರ ಪತ್ನಿ ಸೌ. ಜ್ಯೋತಿ ರಾವ (ಅಮ್ಮ) !

‘ನನಗೆ ಮತ್ತು ಇತರ ಓರ್ವ ಸಾಧಕಿಗೆ ಗೋಸೇವೆ ಮಾಡುವ ನಿಮಿತ್ತದಿಂದ ಪ.ಪೂ. ದೇವಬಾಬಾರವರ ಆಶ್ರಮದಲ್ಲಿ ಕೆಲವು ದಿನಗಳವರೆಗೆ ಇರುವ ಅವಕಾಶ ಸಿಕ್ಕಿತು. ಆಗ ಸೌ. ಜ್ಯೋತಿ ಅಮ್ಮನವರೊಂದಿಗೆ ನಮಗೆ ಹತ್ತಿರದಿಂದ ಸಂಪರ್ಕವಾಯಿತು. ಆಗ ನಮ್ಮ ಗಮನಕ್ಕೆ ಬಂದ ಅವರ ವೈಶಿಷ್ಟ್ಯಗಳನ್ನು ಮುಂದೆ ಕೊಡುತ್ತಿದ್ದೇವೆ.

೧. ಪ್ರೇಮಭಾವ

ಸೌ. ಜ್ಯೋತಿ ಅಮ್ಮ ನಮ್ಮೊಡನೆ ತುಂಬಾ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರ ಪ್ರೀತಿಯಿಂದಾಗಿ ‘ನಾವು ಸನಾತನದ ರಾಮನಾಥಿ ಆಶ್ರಮದಿಂದ ದೂರ ಬೇರೆ ಆಶ್ರಮಕ್ಕೆ ಬಂದಿದ್ದೇವೆ’, ಎಂದು ನನಗೆ ಅನಿಸಲೇ ಇಲ್ಲ. ‘ನಾವು ಊಟ ಮಾಡಿದೆವೋ ಇಲ್ಲವೋ ? ನಮಗೆ ಏನಾದರೂ ಬೇಕು-ಬೇಡ ?’, ಇದರ ಬಗ್ಗೆ ಅವರು ತುಂಬಾ ಪ್ರೀತಿಯಿಂದ ಗಮನ ನೀಡುತ್ತಿದ್ದರು.

೨. ಸತತ ಆನಂದ ಮತ್ತು ಉತ್ಸಾಹ

ಸೌ. ಜ್ಯೋತಿ ಅಮ್ಮ ಇವರು ಸತತ ಆನಂದ ಮತ್ತು ಉತ್ಸಾಹದಿಂದ ಇರುತ್ತಾರೆ. ಅವರು ಪ್ರತಿದಿನ ಮನೆಯಲ್ಲಿನ ಎಲ್ಲ ಕೆಲಸಗಳನ್ನು ಮತ್ತು ಬೆಳಗ್ಗಿನ ತಿಂಡಿ ಮಾಡಿ ಆಶ್ರಮಕ್ಕೆ ಬರುತ್ತಾರೆ. ನಂತರ ಆಶ್ರಮದಲ್ಲಿನ ಸೇವೆ ಮಾಡುತ್ತಾರೆ ಮತ್ತು ಸಾಯಂಕಾಲ ಮನೆಗೆ ಹೋಗುತ್ತಾರೆ. ಅಮ್ಮನವರಿಗೆ ತುಂಬಾ ವಯಸ್ಸಾಗಿದ್ದರೂ ಇದೆಲ್ಲವೂ ಮಾಡುವಾಗ ಅವರಲ್ಲಿ ಯುವಕರನ್ನು ನಾಚಿಸುವಂತಹ ಉತ್ಸಾಹವಿರುತ್ತದೆ.

೩. ಸೌ. ಜ್ಯೋತಿ ಅಮ್ಮನರವರ ಮಾತುಗಳೆಂದರೆ ಸಂತರ ವಚನಗಳೇ ಆಗಿರುವುದು !

೩ ಅ. ‘ಸೇವೆ ಮಾಡಿದರೆ ಸೇವಕ ಮತ್ತು ‘ಸಾಧನೆ ಮಾಡಿದರೆ ಸಾಧಕ ಆಗುತ್ತೀರಿ’, ಎಂದು ಸೌ. ಜ್ಯೋತಿ ಅಮ್ಮ ಹೇಳುವುದು : ಸೌ. ಜ್ಯೋತಿ ಅಮ್ಮನವರ ವಾಕ್ಯಗಳು ಸಂತರ ವಚನದಂತಿವೆ’, ಎಂದು ನನಗೆ ಅನಿಸುತ್ತದೆ. ಅವರ ಆಶ್ರಮದಲ್ಲಿ ಇರುವಾಗ ನಾನು ಅವರಲ್ಲಿ “ನಾನು ಯಾವ ಸೇವೆ ಮಾಡಲಿ ?” ಎಂದು ಕೇಳಿದೆನು. ಆಗ ನನಗೆ ಅವರು ಸೇವೆ ಹೇಳಿದರು ಮತ್ತು “ಸೇವೆ ಮಾಡಿದರೆ ಸೇವಕರಾಗುವಿರಿ !” ಎಂದು ಹೇಳಿದರು. ಬಳಿಕ ‘ನಾನು ತುಂಬಾ ಸಮಯದಿಂದ ಸೇವೆ ಮಾಡುತ್ತಿದ್ದೇನೆ’ ಎಂಬುದು ಅವರ ಗಮನಕ್ಕೆ ಬಂತು. ಆಗ ಅವರು ನನಗೆ ನಾಮಜಪ ಮಾಡಲು ಹೇಳಿದರು. ಆಗ ಅವರು ‘ಈಗ ಸೇವೆ ತುಂಬಾ ಆಯಿತು. ಈಗ ನಾಮಜಪ ಮಾಡು. ಸಾಧನೆ ಮಾಡಿದರೆ, ಸಾಧಕ ಆಗುತ್ತೀರಿ. ನೀನು ಸೇವಕಿಯಾಗಿದ್ದೀಯಾ. ಈಗ ನಿನಗೆ ಸಾಧಕ ಆಗ ಬೇಕಿದೆ. ನಾಮಜಪದಿಂದ ಶಕ್ತಿ ದೊರೆತು ಶರೀರಕ್ಕೂ ವಿಶ್ರಾಂತಿ ದೊರಕುವುದು’, ಎಂದು ಹೇಳಿ ಅವರು ನನಗೆ ನಾಮಜಪ ಮಾಡಲು ಹೇಳಿದರು.

೩ ಆ. ತುಂಬಾ ಸೇವೆ ಇರುವಾಗ ‘ಸೇವೆ ಎಂದರೆ ‘ರಾಮನ ಸ್ಮರಣೆ’ ಇರುವುದು : ಒಮ್ಮೆ ಸೌ. ಜ್ಯೋತಿ ಅಮ್ಮನವರು ನನಗೆ ‘ಕೆಲಸದಲ್ಲಿ ರಾಮ… ರಾಮನಲ್ಲಿ ಧ್ಯಾನ… ರಾಮ ಇದುವೇ ಧ್ಯಾನ…!’ ಇದರ ಅರ್ಥ ‘ಕೆಲಸ ಮಾಡುವಾಗ ‘ಧ್ಯಾನ’ ಮತ್ತು ‘ಧ್ಯಾನ’ ಮಾಡುವಾಗ ‘ರಾಮ’ ಹೀಗೆ ಆಗುತ್ತದೆ. ಇದರಲ್ಲಿ, ‘ತುಂಬಾ ಸೇವೆ ಇರುವಾಗ ಅದು ಸೇವೆ ಅಂದರೆ ಧ್ಯಾನ ಇರುತ್ತದೆ ಮತ್ತು ಧ್ಯಾನ ಅಂದರೆ ‘ರಾಮನ ಸ್ಮರಣೆ’ ಇದೆ. ನಮ್ಮ ಕೆಲಸ ಇದು ಧ್ಯಾನದಂತೆ ಆಗಬೇಕು.’ ಎಂದು ಹೇಳಿದರು.

೪. ಶ್ರೀಕೃಷ್ಣನ ಬಗ್ಗೆ ಭಾವ

ಅವರಲ್ಲಿ ಶ್ರೀಕೃಷ್ಣನ ಮೇಲೆ ತುಂಬಾ ಭಕ್ತಿಯಿದ್ದು ‘ಅವರು ಗೋಪಿ ಭಾವದಲ್ಲಿರುತ್ತಾರೆ’, ಎಂದು ಅನಿಸುತ್ತದೆ. ಅವರು ಪ್ರತಿಸಲ ‘ಶ್ರೀಕೃಷ್ಣನೇ ನನಗೆ ಎಲ್ಲವನ್ನೂ ಮಾಡುತ್ತಾನೆ. ಅವನ ಇಚ್ಛೆಯಿಂದಲೇ ಎಲ್ಲವೂ ಆಗುತ್ತದೆ,’ ಎಂದು ಅವರು ಹೇಳುತ್ತಾರೆ. ಅವರು ಸತತ ಶ್ರೀಕಷ್ಣನ ನಾಮಜಪ ಮಾಡುತ್ತಾರೆ. ಅವರ ಜೊತೆಯಲ್ಲಿರುವಾಗ ಸಂತರ ಸಹವಾಸದಲ್ಲಿನ ಆನಂದ ಸಿಗುತ್ತದೆ ಮತ್ತು ‘ಅವರು ಸಂತರೇ ಇದ್ದಾರೆ’, ಎಂದು ನನಗೆ ಅನಿಸುತ್ತದೆ.’ – ಕು. ಮಯೂರಿ ಡಗವಾರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೨.೨೦೧೯)

ಚೈತನ್ಯಮಯವಾದ ಪ.ಪೂ. ದೇವಬಾಬಾರವರ ‘ಶಕ್ತಿದರ್ಶನ ಯೋಗಾಶ್ರಮದ ವೈಶಿಷ್ಟ್ಯಗಳು !

ಪ.ಪೂ. ದೇವಬಾಬಾರವರ ಚೈತನ್ಯಮಯ ‘ಶಕ್ತಿದರ್ಶನ ಯೋಗಾಶ್ರಮ

೧. ಮುಂಜಾನೆ ೪.೩೦ ರಿಂದ ರಾತ್ರಿ ೧೦.೩೦ ರ ವರೆಗೆ ನಿರಂತರ ಸೇವೆ ಮಾಡುವ ಆಶ್ರಮದ ಸಾಧಕರಲ್ಲಿ ‘ಶ್ರೀಕೃಷ್ಣನೇ ಎಲ್ಲವನ್ನು ಮಾಡುತ್ತಾನೆ, ಎಂಬ ಭಾವ ಇರುವುದರಿಂದ ಅವರು ಸತತವಾಗಿ ಸೇವೆಯಲ್ಲಿ ನಿರತರಾಗಿರುವುದು

‘ಪ.ಪೂ. ದೇವಬಾಬಾರವರ ‘ಶಕ್ತಿದರ್ಶನ ಯೋಗಾಶ್ರಮದಲ್ಲಿ ಸಾಧಕರ ಸಂಖ್ಯೆ ತುಂಬಾ ಕಡಿಮೆ ಇದ್ದರೂ ಎಲ್ಲರೂ ಮುಂಜಾನೆ ೪.೩೦ ರಿಂದ ರಾತ್ರಿ ೧೦.೩೦ ರ ವರೆಗೆ ಸೇವೆ ಮಾಡುತ್ತಿರುತ್ತಾರೆ. ಆಶ್ರಮದ ಸ್ವಚ್ಛತೆ, ಗಿಡಗಳನ್ನು ಆರೈಕೆ ಮಾಡುವುದು, ಬರುವ ಅತಿಥಿಗಳ ನಿವಾಸ ಮತ್ತು ಇತರ ವ್ಯವಸ್ಥೆ ನೋಡುವುದು, ಹಾಗೆಯೇ ಗೋಸೇವೆ ಮಾಡುವುದು, ಹಸುವಿನ ಹಾಲು ಕರೆದು ಅದರಿಂದ ಪದಾರ್ಥಗಳನ್ನು ಮಾಡುವುದು, ಆಶ್ರಮದಲ್ಲಿ ಪ್ರಸಾದ ಮತ್ತು ಮಹಾಪ್ರಸಾದ ತಯಾರಿಸುವುದು, ಹಾಗೆಯೆ ಸಾಬೂನು, ತುಪ್ಪ, ಧೂಪ, ಬತ್ತಿ ಇತ್ಯಾದಿ ಉತ್ಪಾದನೆಯನ್ನು ಸಿದ್ಧಪಡಿಸುವುದು ಮತ್ತು ಪ.ಪೂ. ದೇವಬಾಬಾರವರ ಮಾಸಿಕಕ್ಕಾಗಿ ಲೇಖನ ಸಿದ್ಧಪಡಿಸಿ ಅವುಗಳನ್ನು ಮುದ್ರಣಕ್ಕೆ ಕಳುಹಿಸುವುದು ಹೀಗೆ ಅನೇಕ ಸೇವೆಗಳನ್ನು ಆಶ್ರಮದ ಕೇವಲ ೪-೫ ಸಾಧಕರು ಮತ್ತು ೩-೪ ಕೆಲಸಗಾರರ ಸಹಾಯದಿಂದ ಮಾಡುತ್ತಾರೆ. ಅನೇಕ ಸಲ ಕೆಲಸಗಾರರು ಸಿಗದಿದ್ದರೆ ಹಸುಗಳಿಗೆ ಹುಲ್ಲು ತರುವುದು ಮತ್ತು ಅದನ್ನು ಕತ್ತರಿಸಿ ಸಿದ್ಧಮಾಡಿ ಇಡುವುದು, ಹೀಗೆ ಅನೇಕ ಸೇವೆಗಳನ್ನೂ ಅವರು ಮಾಡುತ್ತಾರೆ. ಗೋಸೇವೆಯ ವ್ಯಾಪ್ತಿಯು ತುಂಬಾ ಇದ್ದು ಈ ಸೇವೆ ಶಾರೀರಿಕ ಶ್ರಮದ್ದಾಗಿರುತ್ತದೆ ಮತ್ತು ಅದನ್ನು ಸೂಕ್ತ ಸಮಯದಲ್ಲಿಯೇ ಪೂರ್ಣ ಮಾಡಬೇಕಾಗುತ್ತದೆ. ಈ ಎಲ್ಲ ಸೇವೆಗಳನ್ನು ಮಾಡುವಾಗ ಎಲ್ಲರೂ ಆನಂದದಿಂದ ಮತ್ತು ಉತ್ಸಾಹದಿಂದ ಇರುತ್ತಾರೆ. ಈ ಸಾಧಕರಲ್ಲಿ ‘ಶ್ರೀಕೃಷ್ಣನೇ ಎಲ್ಲವೂ ಮಾಡುತ್ತಾನೆ. ಆದುದರಿಂದ ನಮಗೆ ದಣಿವು ಆಗುವುದಿಲ್ಲ, ಎಂಬ ಭಾವ ಇರುತ್ತದೆ ಮತ್ತು ‘ಕೆಲಸದಲ್ಲಿ ಬದಲಾವಣೆಯೇ, ವಿಶ್ರಾಂತಿ, ಎಂಬ ವಿಚಾರ ಇರುವುದರಿಂದ ಅವರು ಎಲ್ಲ ಶಾರೀರಿಕ ಸೇವೆಗಳನ್ನು ದಣಿಯದೇ ಮಾಡುತ್ತಾರೆ. – ಕು. ಮಯೂರಿ ಡಗವಾರ, ಸನಾತನ ಆಶ್ರಮ, ರಾಮನಾಥಿ, ಗೋವಾ.( ೨೨.೨.೨೦೧೯)

೨. ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಇಲ್ಲದ ಪದಾರ್ಥಗಳೂ ಆಶ್ರಮದಲ್ಲಿನ ಚೈತನ್ಯದಿಂದಾಗಿ ಸಾತ್ತ್ವಿಕ ಮತ್ತು ರುಚಿಕರವಾಗಿರುವುದು

‘ಪ.ಪೂ. ದೇವಬಾಬಾರವರ ಸಾಧನೆ ಧ್ಯಾನಯೋಗಕ್ಕನುಸಾರ ಇದೆ. ಈ ಸಾಧನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಈ ಪದಾರ್ಥಗಳು ನಿಷಿದ್ಧವಾಗಿರುತ್ತವೆ. ಆದರಿಂದ ಅವರ ಆಶ್ರಮದಲ್ಲಿನ ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಇವುಗಳ ಬಳಕೆ ಮಾಡುವುದಿಲ್ಲ. ಹೀಗಿರುವಾಗ, ಆಶ್ರಮದಲ್ಲಿನ ಚೈತನ್ಯದಿಂದಾಗಿ ಎಲ್ಲ ಪದಾರ್ಥಗಳು ಸಾತ್ತ್ವಿಕ ರುಚಿಕರ ಮತ್ತು ತುಂಬಾ ಸ್ವಾಧಿಷ್ಟಕರವಾಗಿರುತ್ತವೆ.

ಮಾರ್ಚ್ ೨೦೧೯ ರಲ್ಲಿ ಪ.ಪೂ. ದೇವಬಾಬಾರವರ ಆಶ್ರಮದಲ್ಲಿ ಪ.ಪೂ. ದಾಸ ಮಹಾರಾಜರು ಹೋಗಿದ್ದರು. ಅವರು “ಆಶ್ರಮದಲ್ಲಿನ ಚೈತನ್ಯದಿಂದಾಗಿ ಇಲ್ಲಿಯ ಆಹಾರಕ್ಕೆ ಸಾತ್ತ್ವಿಕ ರುಚಿಯಿದ್ದು ನಾನು ಎಂದಿಗಿಂತ ಹೆಚ್ಚು ಊಟ ಮಾಡಿದೆನು !, ಎಂದು ಹೇಳಿದರು. – ಕು. ತೇಜಲ ಪಾತ್ರೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ.(೨೨.೩.೨೦೧೯)

Kannada Weekly | Offline reading | PDF