ದೃಷ್ಟಿಹೀನರಾಗಿದ್ದರೂ ಮುಗ್ಧಭಾವದಿಂದಾಗಿ ಪೂ. ಸೌ. ಸಂಗೀತಾ ಪಾಟೀಲ ಇವರು ಸನಾತನದ ೮೫ ನೇ ಸಂತಪದವಿಗೇರಿದರು !

ಗುರುಚರಣಗಳಲ್ಲಿ ಅರ್ಪಣೆ ಮಾಡಿದರು ತನು, ಮನ ಮತ್ತು ಧನ | ಸಂತಪದವಿಯ ಉಡುಗೊರೆ ನೀಡಿ ಶ್ರೀ ಗುರುಗಳು ಮಾಡಿದರು ಚೈತನ್ಯ ಮತ್ತು ಆನಂದಸಮ |

ಭೋಸರಿ (ಪುಣೆ) – ಮಾರ್ಚ್ ೩೦ ರಂದು ಇಲ್ಲಿ ನೆರವೇರಿದ ಒಂದು ಭಾವ ಸಮಾರಂಭದಲ್ಲಿ ಇಲ್ಲಿನ ಸೌ. ಸಂಗೀತಾ ಪಾಟೀಲ (ವಯಸ್ಸು ೫೯ ವರ್ಷ) ಇವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಸಂತಪದವಿಯಲ್ಲಿ ವಿರಾಜಮಾನರಾದರು. ಅವರು ಸನಾತನದ ೮೫ ನೇ ಸಂತರಾಗಿದ್ದಾರೆ. ಇದೇ ಭಾವಸಮಾರಂಭದಲ್ಲಿ ೪ ಸಾಧಕರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನನ-ಮರಣದ ಚಕ್ರದಿಂದ ಬಿಡುಗಡೆಯಾಗಿದ್ದಾರೆಂದು ಘೋಷಣೆ ಮಾಡಲಾಯಿತು. ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರ ಶುಭ ಹಸ್ತಗಳಿಂದ ಪೂ. (ಸೌ.) ಸಂಗೀತಾ ಪಾಟೀಲ ಇವರನ್ನು ಸನ್ಮಾನಿಸಲಾಯಿತು.

ಕಠಿಣ ಪ್ರಾರಬ್ಧ ಎದುರಿಸಿ ಪುಣೆಯ ಪೂ. (ಸೌ.) ಸಂಗೀತಾ ಪಾಟೀಲರು ಸನಾತನದ ೮೫ ನೇ ಸಮಷ್ಟಿ ಸಂತರಾದರು !

ಭೋಸರಿ (ಪುಣೆ) – ‘ಶರೀರ, ಮನಸ್ಸು ಮತ್ತು ಬುದ್ಧಿಯ ಬಂಧನದಿಂದಾಗಿ ಪರತಂತ್ರದಲ್ಲಿ ಸಿಲುಕಿರುವ ಈ ಜೀವ ಹಗಲಿರುಳು ನಾಮಸ್ಮರಣೆಯಲ್ಲಿ ರಮಿಸಿತು ಹಾಗೂ ಅದರಿಂದಲೇ ಇದಕ್ಕೆ ಪುರುಷೋತ್ತಮ ಅಂದರೆ ಭಗವಂತ ಕಾಣಿಸಿದನು ಎಂಬುದು ಸಂತರಾದ ಭಕ್ತರಾಜ ಮಹಾರಾಜರ ಭಜನೆಯ ಒಂದು ಸಾಲು ಹೇಳುತ್ತದೆ. ಈ ಸಾಲನ್ನು ಪ್ರತ್ಯಕ್ಷ ಜೀವನದಲ್ಲಿ ಅನುಭವಿಸುವ ಹಾಗೂ ಅಸಹನೀಯ ಪ್ರಾರಬ್ಧದಲ್ಲಿಯೂ ದೇವರ ಮೇಲಿನ ಶ್ರದ್ಧೆಯನ್ನು ಒಂದು ಕ್ಷಣವೂ ಕಡಿಮೆಯಾಗಲು ಬಿಡದೆ ಮುಗ್ಧಭಾವದಿಂದ ಅಖಂಡ ನಾಮಸ್ಮರಣೆ ಮಾಡುತ್ತಾ ಭಗವಂತನನ್ನು ಅನುಭವಿಸುವ ಸೌ.ಸಂಗೀತಾ ಪಾಟೀಲ (ವಯಸ್ಸು ೫೯ ವರ್ಷ) ಇವರು ಸನಾತನದ ೮೫ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರು.

          ಭೋಸರಿಯಲ್ಲಿ ಮಾರ್ಚ್ ೩೦ ರಂದು ನೆರವೇರಿದ ಭಾವ ಸಮಾರಂಭದಲ್ಲಿ ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ‘ಸೌ. ಸಂಗೀತಾ ಪಾಟೀಲ ಇವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಸಂತಪದವಿಗೇರಿದ್ದಾರೆ ಎಂದು ಘೋಷಣೆ ಮಾಡಿದರು. ಇದೇ ಸಮಾರಂಭದಲ್ಲಿ ಪೂ. (ಸೌ.) ಸಂಗೀತಾ ಪಾಟೀಲ ಇವರಿಗೆ ಹೆಜ್ಜೆ ಹೆಜ್ಜೆಗೂ ಸಹಕರಿಸುತ್ತಿರುವ ಅವರ ಯಜಮಾನ ಶ್ರೀ. ಮಹಾದೇವ ಪಾಟೀಲ (ವಯಸ್ಸು ೬೫ ವರ್ಷ) ಇವರು ಕೂಡ ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆಂದು ಘೋಷಣೆ ಮಾಡಲಾಯಿತು. ಅನಾರೋಗ್ಯದಿಂದ ಬಂದಿರುವ ದೃಷ್ಟಿಹೀನತೆ, ತೀವ್ರ ಆರ್ಥಿಕ ಬಿಕ್ಕಟ್ಟು, ಕಡಿಮೆ ಶಿಕ್ಷಣ, ಶಾರೀರಿಕ ಕಾಯಿಲೆ, ಯಜಮಾನರ ಕಾಯಿಲೆ, ಇಂತಹ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಪೂ. (ಸೌ.) ಸಂಗೀತಾ ಪಾಟೀಲ ಇವರು ಮುಗ್ಧಭಾವದಿಂದ ಆನಂದದಲ್ಲಿ ಸಾಧನಾನಿರತರಾಗಿದ್ದಾರೆ ಎಂದು ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಅವರ ಗುಣವೈಶಿಷ್ಟ್ಯವನ್ನು ಕೊಂಡಾಡಿದರು. ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಪೂ. (ಸೌ.) ಸಂಗೀತಾ ಪಾಟೀಲ ಇವರಿಗೆ ಪುಷ್ಪಹಾರವನ್ನು ಅರ್ಪಿಸಿ, ಶಾಲು, ಶ್ರೀಫಲ ಮತ್ತು ಇತರ ಉಡುಗೊರೆಗಳನ್ನು ನೀಡಿ ಸನ್ಮಾನಿಸಿದರು ಹಾಗೂ ಅವರ ಚರಣಗಳಿಗೆ ತಲೆಯಿಟ್ಟು ನಮಸ್ಕಾರ ಮಾಡಿದರು. ಪೂ. (ಸೌ.) ಸಂಗೀತಾ ಪಾಟೀಲರ ಸನ್ಮಾನವಾದ ನಂತರ ಅವರು ಕೂಡ ಗುಲಾಬಿಯ ಹೂವು ಮತ್ತು ಉಡುಗೊರೆಯನ್ನು ನೀಡಿ ಸದ್ಗುರು (ಕು.) ಸ್ವಾತಿ ಖಾಡ್ಯೆಯವರ ಸನ್ಮಾನ ಮಾಡಿದರು.

ಪೂ. (ಸೌ.) ಸಂಗೀತಾ ಪಾಟೀಲರ ಸಾಮಾನ್ಯಕ್ಕಿಂತ ಶೇ. ೧೦ ರಷ್ಟು ಹೆಚ್ಚಾಗಿದ್ದ ಕಠಿಣ ಪ್ರಾರಬ್ಧ

ಪೂ. (ಸೌ.) ಸಂಗೀತಾ ಪಾಟೀಲರು ಹುಟ್ಟಿದ ೪ ದಿನಗಳಲ್ಲಿಯೇ ಅವರ ತಾಯಿ ನಿಧನರಾದರು. ನಂತರ ಅವರ ಬಾಲ್ಯಾವಸ್ಥೆಯಲ್ಲಿಯೇ ಅವರ ತಂದೆ ನಿಧನರಾದರು. ಆದ್ದರಿಂದ ಮಾತೃ-ಪಿತೃಸುಖ ಅವರಿಗೆ ಸಿಗಲಿಲ್ಲ. ಒಂದು ಬ್ರಾಹ್ಮಣ ಕುಟುಂಬ ಅವರನ್ನು ಸಾಕಿಸಲಹಿತು. ಮುಂದೆ ಅವರ ವಿವಾಹವಾಯಿತು; ಆದರೆ ಅವರ ಮಕ್ಕಳು ಕೂಡ ಚಿಕ್ಕಂದಿನಲ್ಲಿಯೇ ತೀರಿ ಹೋದರು. ಪೂ. (ಸೌ.) ಸಂಗೀತಾ ಪಾಟೀಲರಿಗೆ ಒಮ್ಮೆ ವಿಷಮಜ್ವರ ಬಂದಿತ್ತು. ಅದರಲ್ಲಿ ಅವರ ದೃಷ್ಟಿಯೇ ಹೋಯಿತು. ಮುಂದೆ ಯಜಮಾನರ ನೌಕರಿಯ ಸ್ಥಳದಲ್ಲಿ ಅಪಘಾತವಾಗಿ ಅವರ ಕೈಯ ನಾಲ್ಕು ಬೆರಳುಗಳು ಕತ್ತರಿಸಲ್ಪಟ್ಟಿತ್ತು. ಅದೇ ದಿನ ಕೆಲಸದ ಸ್ಥಳದಲ್ಲಿ ಇನ್ನೊಂದು ಅಪಘಾತವಾಗಿ ಅವರ ಕಾಲಿಗೂ ಗಂಭೀರವಾದ ಗಾಯವಾಗಿತ್ತು. ಅದರಲ್ಲಿ ಅವರ ನೌಕರಿ ಹೋಯಿತು. ನಂತರ ಯಜಮಾನರ ಒಂದು ಕಣ್ಣು ಕೂಡ ಹೋಯಿತು. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಾಗಿರುವುದರಿಂದ ಪಾಟೀಲ ಕಾಕೂ ಸ್ವಲ್ಪ ದಿನ ಪಾತ್ರೆ ತೊಳೆಯುವುದು ಹಾಗೂ ನೆಲ ಒರೆಸುವ ಮನೆಕೆಲಸವನ್ನು ಮಾಡಿದರು. ಇಷ್ಟು ಕಷ್ಟದ ಪರಿಸ್ಥಿತಿ ಇದ್ದರೂ ಅವರು ಪರಿಸ್ಥಿತಿಯನ್ನು ದೂರಲಿಲ್ಲ ಅಥವಾ ಅವರಿಗೆ ದೇವರ ವಿಷಯದಲ್ಲಿ ವಿಕಲ್ಪ ಬಂದಿರಲಿಲ್ಲ. ತದ್ವಿರುದ್ಧ ಅವರು ಜೀವವನ್ನು ಪಣಕ್ಕಿಟ್ಟು ಪ್ರಸಾರ ಸೇವೆ ಮಾಡುತ್ತಿದ್ದರು. ‘ಗುರುದೇವರು ಜೊತೆಯಲ್ಲಿದ್ದಾರೆ ಎಂಬ ಭಾವವನ್ನಿಟ್ಟು ಅವರು ಸೇವೆ-ಸಾಧನೆ ಮಾಡುತ್ತಾ ಇದ್ದರು. ಅನೇಕ ವೇಳೆ ಪ್ರಸಾರಕ್ಕಾಗಿ ಅಥವಾ ಕೆಲಸಕ್ಕಾಗಿ ಬಸ್‌ನಲ್ಲಿ ಪ್ರಯಾಣಿಸುವಾಗ ಅವರಿಗೆ ಹಣದ ಅಡಚಣೆ ಬರುತ್ತಿತ್ತು. ಆದರೆ ಬಸ್‌ನಲ್ಲಿ ಕೆಲವೊಮ್ಮೆ ನಿರ್ವಾಹಕ ಅಥವಾ ಪ್ರಯಾಣಿಕರು ಯಾರಾದರೂ ಹಣ ಸಹಾಯ ಮಾಡುತ್ತಿದ್ದರು. ಅವರು ರಾಮನಾಥಿಗೆ ಹೋದಾಗ ಪರಾತ್ಪರ ಗುರು ಡಾಕ್ಟರ ಆಠವಲೆಯವರೊಂದಿಗಿನ ಸಂಭಾಷಣೆಯನ್ನು ಸೂಕ್ಷ್ಮ-ಜ್ಞಾನ ತಿಳಿಯುವ ಸಾಧಕ ಶ್ರೀ. ನಿಷಾಧ ದೇಶಮುಖ ಇವರು ಸೂಕ್ಷ್ಮ ಪರೀಕ್ಷಣೆ ಮಾಡಿದರು. ಅದರಲ್ಲಿ ಅವರು ಮುಂದಿನಂತೆ ಹೇಳಿದ್ದಾರೆ,

‘ಸೌ. ಸಂಗೀತಾ ಇವರ ಪ್ರಾರಬ್ದ ಶೇ. ೭೫ ರಷ್ಟು ಇದೆ; ಭಕ್ತಿಭಾವದಿಂದ ಅವರು ಅದನ್ನು ಎದುರಿಸಿದರು. (ಕಲಿಯುಗದಲ್ಲಿ ಸಾಮಾನ್ಯ ವ್ಯಕ್ತಿಯ ಪ್ರಾರಬ್ಧ ಶೇ. ೬೫ ರಷ್ಟು ಇರುತ್ತದೆ ಹಾಗೂ ಸಾಮಾನ್ಯ ವ್ಯಕ್ತಿ ಅಡಚಣೆ ಬಂದಾಗ ಧೈರ್ಯವನ್ನು ಕಳೆದುಕೊಂಡು ದುಃಖಿಯಾಗುತ್ತಾನೆ.) ಕಾಕೂರವರೊಂದಿಗೆ ಸಹಜವಾಗಿ ಮಾತನಾಡಿದರೂ ಚೈತನ್ಯದ ಅರಿವಾಗುತ್ತದೆ. ಅವರ ಮನಸ್ಸು ಅನುಸಂಧಾನದಲ್ಲಿದ್ದು ಅವರು ಸಂತಪದವಿಯ ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾರೆ.

ಉತ್ಕಟ ಭಾವವುಳ್ಳ ಪೂ. (ಸೌ.) ಸಂಗೀತಾ ಪಾಟೀಲ ಅಂದರೆ ಕಲಿಯುಗದ ಶಬರಿಯೆ ಆಗಿದ್ದಾರೆ !

ಪೂ.(ಸೌ.) ಸಂಗೀತಾ ಪಾಟೀಲರ ಉತ್ಕಟ ಭಾವದ ಒಂದು ಉದಾಹರಣೆ ನೀಡುವಾಗ ಸದ್ಗುರು (ಕು.) ಸ್ವಾತಿ ಖಾಡ್ಯೆ ‘ಪೂ. (ಸೌ.) ಸಂಗೀತಾ ಪಾಟೀಲ ಇವರು ಶಬರಿಯ ಹಾಗೆ ಸಾಧನೆ ಮಾಡಿದರು. ‘ಗುಡಿಸಲಿಗೆ ರಾಮ ಬಂದೇ ಬರುವನು ಎಂಬ ಭಾವದಿಂದ ಶಬರಿ ಸುಂದರವಾದ ರಂಗೋಲಿ ಬಿಡಿಸುತ್ತಿದ್ದಳು. ಪಾಟೀಲಕಾಕೂ ಕೂಡ ‘ಗುರುದೇವರು ಮನೆಗೆ ಬಂದು ದರ್ಶನ ಕೊಡುವರು ಎಂಬ ಭಾವದಿಂದ ಪ್ರತಿದಿನ ಭಜನೆಯನ್ನು ಗುಣುಗುಣಿಸುತ್ತಾ ರಂಗೋಲಿ ಹಾಕುತ್ತಾರೆ. ‘ನಾನು ಎಲ್ಲಿಗೆ ಹೋಗುವೆನೋ, ನೀವು ಅಲ್ಲಿ ನನ್ನ ಜೊತೆಗೆ ಬನ್ನಿ ಎಂದು ಪಾಟೀಲಕಾಕೂ ಪ್ರಾರ್ಥನೆ ಮಾಡುತ್ತಿದ್ದರು, ಆದ್ದರಿಂದಲೇ ಭಗವಂತ ಕೂಡ ಅವರ ಜೊತೆಗೆ ಇರುತ್ತಿದ್ದನು.

‘ಪ.ಪೂ. ಡಾಕ್ಟರರು ಜೊತೆಗಿದ್ದಾರೆ ಎಂಬ ಭಾವದಿಂದ ದೈನಂದಿನ ಸೇವೆ ಮಾಡಿರಿ ! – ಪೂ. (ಸೌ.) ಸಂಗೀತಾ ಪಾಟೀಲ

ಎಲ್ಲರಿಗೂ ಭಾವಪೂರ್ಣ ನಮಸ್ಕಾರ ! ದೇವರು ಮಾಡಿಸಿಕೊಳ್ಳುತ್ತಾರೆ, ಎಂಬ ಭಾವದಿಂದ ಸಕಾರಾತ್ಮಕರಾಗಿರಿ. ‘ಪರಾತ್ಪರ ಗುರು ಡಾ.ಆಠವಲೆಯವರು ಜೊತೆಗಿದ್ದಾರೆ ಎಂಬ ಭಾವದಿಂದ ಪ್ರತಿದಿನ ಸೇವೆ ಮಾಡಿ. ಅದರಿಂದ ಮನೆಯಲ್ಲಿ ಚೈತನ್ಯವಿರುತ್ತದೆ. ನಾವು ಆಜ್ಞಾಧಾರಕರಾಗಿರಬೇಕು. ಪ.ಪೂ. ಗುರುದೇವರನ್ನು ಜೊತೆಗೆ ಕರೆದುಕೊಂಡು ಹೋದರೆ ಸೇವೆ ಪರಿಪೂರ್ಣವಾಗುತ್ತದೆ. ವ್ಯಷ್ಟಿ ಸಾಧನೆಯಿದ್ದರೆ ಸಮಷ್ಟಿ ಸಾಧನೆಯೂ ಸಹಜವಾಗಿ ಆಗುವುದು. ಗುರುದೇವರಿಗೆ ವರದಿ ನೀಡಿ. ಸಾಧನೆಯಲ್ಲಿನ ಅಡಚಣೆ ದೂರವಾಗುವುದು. ನನ್ನ ಮುಂದೆ ಅನೇಕ ಸವಾಲುಗಳಿದ್ದವು; ಆದರೆ ದೇವರೇ ನನ್ನನ್ನು ಉದ್ಧಾರ ಮಾಡಿದರು. ನನಗೆ ಏನೂ ಬರುವುದಿಲ್ಲ. ಏನು ಸಿಕ್ಕಿದೆಯೊ, ಅದರ ಶ್ರೇಯಸ್ಸು ಪ.ಪೂ.ಡಾಕ್ಟರರು ಮತ್ತು ಸದ್ಗುರು ಸ್ವಾತಿ ತಾಯಿ ಇವರದ್ದಾಗಿದೆ. ಮಾಡುವವರು ಮಾಡಿಸುವವರು ಪ.ಪೂ. ಡಾಕ್ಟರರೇ ಆಗಿದ್ದಾರೆ !

ಭಕ್ತಿಯೋಗದ ಸಾಕಾರ ಮೂರ್ತಿ ಪೂ. ಪಾಟೀಲ ಕಾಕೂ

‘ಇಷ್ಟರವರೆಗೆ ನಾನು ಅನೇಕ ಭಕ್ತಿಯೋಗಿಗಳನ್ನು ನೋಡಿದ್ದೇನೆ; ಆದರೆ ಭಕ್ತಿ ಯೋಗದೊಂದಿಗೆ ಅದ್ವೈತವಾಗಿರುವ, ಭಗವಂತನೊಂದಿಗೆ ಅಖಂಡ ಅನುಸಂಧಾನವಿರುವ ಪೂ. ಪಾಟೀಲಕಾಕೂ ಏಕೈಕರಾಗಿದ್ದಾರೆ ! ಭಕ್ತಿಯೋಗಿಯಾಗಿದ್ದು ಅವರು ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯನ್ನೂ ಮಾಡುತ್ತಿದ್ದಾರೆ. ಶಾರೀರಿಕ, ಆರ್ಥಿಕ ಇತ್ಯಾದಿ ಅನೇಕ ಅಡಚಣೆಗಳಿದ್ದರೂ ಪೂ. ಪಾಟೀಲ ಕಾಕೂ ಅದರ ಬಗ್ಗೆ ಯಾರಲ್ಲೂ ದೂರಲಿಲ್ಲ ಹಾಗೂ ಅವರಿಗೆ ಅಡಚಣೆಯಿಂದ ಯಾವ ಪರಿಣಾಮವೂ ಆಗಿಲ್ಲ. ಇಂತಹ ಕಾಕೂವನ್ನು ಸನಾತನ ಸಂಸ್ಥೆಗೆ ನೀಡಿದ್ದಕ್ಕಾಗಿ ಭಗವಂತನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ. – (ಪರಾತ್ಪರ ಗುರು) ಡಾ. ಆಠವಲೆ

ಭಕ್ತಿಮಾರ್ಗದ ಆದರ್ಶ ಸಂತರಾದ ಪೂ. ಪಾಟೀಲಕಾಕೂ !

‘ಪೂ. (ಸೌ.) ಸಂಗೀತಾ ಪಾಟೀಲಕಾಕೂ ಇವರ ವೈಶಿಷ್ಟ್ಯಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ರಾಮನಾಥಿ ಆಶ್ರಮದಲ್ಲಿ ನಾನು ಅವರನ್ನು ಮೊದಲ ಸಲ ಭೇಟಿಯಾಗಿದ್ದೆ, ಅದು ನನಗೆ ‘ಮೊದಲ ಭೇಟಿ ಎಂದೆನಿಸಲಿಲ್ಲ, ‘ಅನೇಕ ವರ್ಷಗಳಿಂದ ನಮ್ಮಲ್ಲಿ ಆತ್ಮೀಯತೆ ಇದೆ ಎಂದೆನಿಸಿತು. ಅವರೊಂದಿಗೆ ಮಾತನಾಡುವಾಗ ಅವರ ಮುಂದಿನ ವೈಶಿಷ್ಟ್ಯಗಳ ಅರಿವಾಯಿತು ಹಾಗೂ ಅವರಿಂದ ಕಲಿಯಲೂ ಸಿಕ್ಕಿತು.

೧. ನನ್ನೊಂದಿಗೆ ಮಾತನಾಡುವಾಗ ಪೂ. ಕಾಕೂರವರ ಮಾತು ಮುಗಿದು ನಾನು ಮಾತನಾಡುವಾಗ ಅವರು ತಕ್ಷಣ ಗುಣುಗುಣಿಸುತ್ತಾ ನಾಮಜಪ ಮಾಡುತ್ತಿದ್ದರು. ನಾನು ಇಂದಿನವರೆಗೆ ಹೀಗೆ ಎಲ್ಲಿಯೂ ನೋಡಿರಲಿಲ್ಲ. ‘ಸಗುಣ-ನಿರ್ಗುಣ ಭಾವಸ್ಥಿತಿ ಹೇಗಿರುತ್ತದೆ ? ಎಂಬುದು ಅವರಿಂದ ನನಗೆ ತಿಳಿಯಿತು.

೨. ಪೂ. ಕಾಕೂ ಇವರಿಗೆ ಉಡುಗೊರೆ ಎಂದು ನಾನು ಸೀರೆ ಕೊಟ್ಟಿದ್ದೇನೆ. ‘ನಾನು ಸೀರೆ ಕೊಡುತ್ತೇನೆ ಎಂಬುದು ಅವರಿಗೆ ಮೊದಲೇ ತಿಳಿದಿತ್ತು. ‘ಅಖಂಡ ಭಾವಾವಸ್ಥೆಯಿಂದಾಗಿ ಸೂಕ್ಷ್ಮದಲ್ಲಿನ ವಿಷಯ ತಿಳಿಯುವ ಕ್ಷಮತೆ ನಿರ್ಮಾಣವಾಗುತ್ತದೆ ಎಂಬುದರ ಪ್ರತ್ಯಕ್ಷ ಉದಾಹರಣೆಯನ್ನು ನಾನು ಅನುಭವಿಸಿದೆನು.

೩. ಯಾವಾಗಲೂ ನಾನು ಸಾಧಕರು ಮತ್ತು ಸಂತರನ್ನು ಭೇಟಿಯಾದಾಗ ಅವರೊಂದಿಗೆ ಮಾತನಾಡುತ್ತೇನೆ. ಪೂ. ಕಾಕುರವರ ಭೇಟಿಯಲ್ಲಿ ನನಗೆ ‘ಏನಾದರೂ ಮಾತನಾಡಬೇಕು ಎಂದು ಅನಿಸುತ್ತಿರಲಿಲ್ಲ; ಏಕೆಂದರೆ ‘ಅವರ ಮಾತನ್ನು ಕೇಳುತ್ತಿರಬೇಕು ಎಂದು ಅನಿಸುತ್ತಿತ್ತು. ಇಷ್ಟರವರೆಗೆ ನನಗೆ ಭಕ್ತಿಮಾರ್ಗದಲ್ಲಿನ ಸಂತರ ಕೇವಲ ತಾತ್ತ್ವಿಕ ಮಾಹಿತಿ ಇತ್ತು. ಪೂ. ಕಾಕೂ ಇವರ ಮಾತು ಕೇಳಿದ ನಂತರ ನನಗೆ ‘ಭಕ್ತಿಮಾರ್ಗದಲ್ಲಿನ ಸಂತರು ಹೇಗಿರುತ್ತಾರೆ ? ಎಂದು ಅನುಭವಿಸಲು ಸಿಕ್ಕಿತು. – (ಪರಾತ್ಪರ ಗುರು) ಡಾ. ಆಠವಲೆ

ಸಾಧಕರೇ, ಭಕ್ತಿಮಾರ್ಗದ ಸಂತರನ್ನು ಗುರುತಿಸಲು ಕಲಿಯಿರಿ !

ಕೇವಲ ‘ಗುರುಕೃಪಾಯೋಗದ ಜ್ಞಾನ ಇರುವುದರಿಂದ ಪುಣೆಯ ಸಾಧಕರಿಗೆ ಸೌ. ಪಾಟೀಲ ಕಾಕೂ ಸಂತರಾಗಿದ್ದಾರೆಂದು ಗುರುತಿಸಲು ಆಗಲಿಲ್ಲ. ಇನ್ನು ಮುಂದೆ ಸಾಧಕರಿಗೆ ‘ವಿವಿಧ ಯೋಗ ಮಾರ್ಗಗಳ ಉನ್ನತರನ್ನು ಹೇಗೆ ಗುರುತಿಸುವುದು ? ಎಂಬುದು ತಿಳಿಯದಿದ್ದರೂ ಭಕ್ತಿಮಾರ್ಗದ ಅಖಂಡ ಭಗವಂತನ ಅನುಸಂಧಾನದಲ್ಲಿರುವ, ಅಖಂಡ ನಾಮಜಪ ಮಾಡುವ, ಅಖಂಡ ಭಾವಸ್ಥಿತಿಯಲ್ಲಿರುವವರನ್ನು ಗುರುತಿಸಲು ಸಾಧ್ಯವಾಗಬೇಕು. ಅದನ್ನು ಗುರುತಿಸಲು ಸಾಧ್ಯವಾದರೆ ಸಾಧಕರಿಗೆ ಅವರ ಸತ್ಸಂಗದ ಲಾಭ ಪಡೆದು ಪ್ರಗತಿ ಮಾಡಿಕೊಳ್ಳಲು ಸುಲಭವಾಗಬಹುದು. ಭಕ್ತಿಯೋಗದ ಸಂತರು ಹೆಚ್ಚಾಗಿ ವ್ಯಷ್ಟಿ ಸಾಧನೆ ಮಾಡುತ್ತಾರೆ. ಆದ್ದರಿಂದ ಅವರನ್ನು ಸಮಾಜ ಗುರುತಿಸಲು ಸಾಧ್ಯವಾಗುವುದಿಲ್ಲ; ಆದರೆ ಕೆಲವು ವರ್ಷ ಸಾಧನೆ ಮಾಡಿದ ಸನಾತನದ ಸಾಧಕರಿಗೆ ಅವರನ್ನು ಗುರುತಿಸಬೇಕು ಹಾಗಿದ್ದರೆ ಮಾತ್ರ ‘ಅವರ ಸಾಧನೆ ಸರಿಯಿದೆ ಎಂದು ತಿಳಿಯಬಹುದು.

ರಾಮನಾಥಿ ಆಶ್ರಮದ ಕೆಲವು ಸಾಧಕರು ಸೌ. ಪಾಟೀಲ ಕಾಕೂ ಸಂತರಾಗಿದ್ದಾರೆಂದು ಮೊದಲ ಭೇಟಿಯಲ್ಲೇ ಗುರುತಿಸಿದರು, ಎಂಬುದನ್ನು ಸಾಧಕರು ಗಮನಿಸಬೇಕು. – (ಪರಾತ್ಪರ ಗುರು) ಡಾ. ಆಠವಲೆ

Kannada Weekly | Offline reading | PDF