ರಾಮನಾಥಿ(ಗೋವಾ)ದಲ್ಲಿಯ ಸನಾತನ ಆಶ್ರಮದಲ್ಲಿ ೫೫ ನೇ ಪಂಚಮುಖಿ ಹನುಮತ್ಕವಚ ಯಜ್ಞದ ಭಾವಪೂರ್ಣ ವಾತಾವರಣದಲ್ಲಿ ಸಮಾರೋಪ !

ಪರಾತ್ಪರ ಗುರು ಡಾ. ಆಠವಲೆ (ಆಸನದ ಮೇಲೆ ಕುಳಿತಿರುವ) ಇವರಿಗೆ ಶ್ರೀ ಹನುಮಂತನ ಮೂರ್ತಿಯನ್ನು ನೀಡುತ್ತಿರುವ ಎಡದಿಂದ ಸೌ. ಜ್ಯೋತಿ ರಾವ, ಪ.ಪೂ. ದೇವ ಬಾಬಾ, ಪ.ಪೂ. ದಾಸ ಮಹಾರಾಜ ಮತ್ತು ಪೂ. (ಸೌ.) ಲಕ್ಷ್ಮೀ ನಾಯಿಕ್

 

ಪ.ಪೂ. ದೇವಬಾಬಾ ಇವರಿಗೆ ಉಡುಗೊರೆಯನ್ನು ನೀಡಿ ಅವರ ಸನ್ಮಾನವನ್ನು ಮಾಡುತ್ತಿರುವ ೧. ಪ.ಪೂ. ದಾಸ ಮಹಾರಾಜ ೨. ಸೌ. ಜ್ಯೋತಿ ರಾವ ಮತ್ತು ೩. ಪೂ. (ಸೌ.) ಲಕ್ಷ್ಮೀ (ಮಾಯಿ) ನಾಯಿಕ್

 

ಯಜ್ಞದ ಸ್ಥಳದಲ್ಲಿ ಮಂತ್ರೋಚ್ಚಾರವನ್ನು ಮಾಡುತ್ತಿರುವ ಎಡದಿಂದ ಶ್ರೀ. ಪವನ ಬರ್ವೆ,ಶ್ರೀ. ದಾಮೋದರ ವಝೆ, ಆಸನದ ಮೇಲೆ ಕುಳಿತಿರುವ ಪ.ಪೂ. ದಾಸ ಮಹಾರಾಜ, ನಿಂತಿರುವವರು ಎಡದಿಂದಶ್ರೀ. ಅಮರ ಜೋಶಿ, ಪೂರ್ಣಾಹುತಿಯನ್ನು ನೀಡುತ್ತಿರುವ ಪೂ.(ಡಾ.) ಮುಕುಲ ಗಾಡಗಿಳ, ಸದ್ಗುರು (ಸೌ.) ಬಿಂದಾ ಸಿಂಗಬಾಳ

ರಾಮನಾಥಿ (ಗೋವಾ), ೩೧ ಮಾರ್ಚ್ (ವರದಿ) – ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಪರಾತ್ಪರ ಗುರು ಡಾ. ಆಠವಲೆ ಇವರ ಮಹಾಮೃತ್ಯುಯೋಗವು ತಪ್ಪಿಸಬೇಕು ಹಾಗೂ ಅವರಿಗೆ ಆರೋಗ್ಯಪೂರ್ಣ ದೀರ್ಘಾಯುಷ್ಯ ಸಿಗಲಿ, ಅದೇ ರೀತಿ ಸಾಧಕರ ಸಾಧನೆಯಲ್ಲಿನ ಅಡಚಣೆ ದೂರವಾಗಲಿ, ಈ ಸಂಕಲ್ಪದಿಂದ ಆರಂಭಿಸಲಾಗಿದ್ದ ೫೫ ಪಂಚಮುಖಿ ಹನುಮತ್ಕವಚ ಯಜ್ಞದ ಸಮಾರೋಪ ಆಯಿತು. ಅತ್ಯಂತ ಭಾವಪೂರ್ಣ ಹಾಗೂ ಚೈತನ್ಯಮಯ ವಾತಾವರಣದಲ್ಲಿ ಮಾರ್ಚ್ ೩೧ ರಂದು ೫೫ ನೇ ಪಂಚಮುಖಿ ಹನುಮನ್ಕವಚ ಯಜ್ಞ ರಾಮನಾಥಿ (ಗೋವಾದಲ್ಲಿ ಯ ಸನಾತನದ ಆಶ್ರಮದಲ್ಲಿ ಜರುಗಿತು. ಅತ್ಯಂತ ಶಾರೀರಿಕ ತೊಂದರೆಯಾಗುತ್ತಿದ್ದರೂ ಪರಾತ್ಪರ ಗುರು ಡಾ. ಆಠವಲೆಯವರು ಯಜ್ಞವಿಧಿಯಲ್ಲಿ ಭಾಗವಹಿಸಿದರು. ಸನಾತನದ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಪೂ. (ಡಾ.) ಮುಕುಲ ಗಾಡಗೀಳ ಇವರು ಈ ಯಜ್ಞವಿಧಿಗಳಲ್ಲಿ ಪಾಲ್ಗೊಂಡರು. ಇದರ ಪೌರೋಹಿತ್ಯವನ್ನು ಸನಾತನದ ಪುರೋಹಿತ ಪಾಠಶಾಲೆಯ ಸಂಚಾಲಕರಾದ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ಇರುವ ಶ್ರೀ. ದಾಮೋದರ ವಝೆಗುರುಜಿ ಹಾಗೂ ಇತರ ಪುರೋಹಿತರು ಮಾಡಿದರು. ಈ ಯಜ್ಞಕ್ಕೆ ಕಿನ್ನಿಗೋಳಿಯ ಸಂತರಾದ ಪ.ಪೂ. ದೇವಬಾಬಾ, ಅವರ ಪತ್ನಿ ಸೌ. ಜ್ಯೋತಿ ರಾವ ಮತ್ತು ಪ.ಪೂ. ದಾಸ ಮಹಾರಾಜ ಇವರ ಪತ್ನಿ ಪೂ. (ಸೌ.) ಲಕ್ಷ್ಮೀ (ಮಾಯಿ)ನಾಯಿಕ್ ಇವರ ವಂದನೀಯ ಉಪಸ್ಥಿತಿ ಲಭಿಸಿತು. ೨೦೦೨ ರಲ್ಲಿ ಪಾನವಳ-ಬಾಂದಾ (ಸಿಂಧುದುರ್ಗ)ದಲ್ಲಿಯ ಸಂತರಾದ ಪ.ಪೂ. ದಾಸ ಮಹಾರಾಜರು ೫೫ ಪಂಚಮುಖಿ ಹನುಮನ್ಕವಚ ಯಜ್ಞದ ಸಂಕಲ್ಪ ಮಾಡಿದ್ದರು. ತೀವ್ರ ಶಾರೀರಿಕ ತೊಂದರೆಯಿದ್ದರೂ ಪ.ಪೂ. ದಾಸ ಮಹಾರಾಜರು ಈ ಎಲ್ಲ ಯಜ್ಞಗಳ ಪೌರೋಹಿತ್ಯವನ್ನು ಮಾಡಿದರು.

ಪ.ಪೂ. ದೇವಬಾಬಾ, ಸೌ. ಜ್ಯೋತಿ ರಾವ, ಪ.ಪೂ. ದಾಸ ಮಹಾರಾಜ ಮತ್ತು ಪೂ. (ಸೌ.) ಲಕ್ಷ್ಮೀ (ಮಾಯಿ) ನಾಯಿಕ್ ಇವರಿಂದ ಪರಾತ್ಪರಗುರು ಡಾ. ಆಠವಲೆ ಇವರಿಗೆ ಹನುಮಂತನ ಮೂರ್ತಿ ಪ್ರದಾನ !

ಈ ಪ್ರಸಂಗದಲ್ಲಿ ಪ.ಪೂ. ದೇವಬಾಬಾ, ಸೌ. ಜ್ಯೋತಿ ರಾವ, ಪ.ಪೂ. ದಾಸ ಮಹಾರಾಜ ಮತ್ತು ಪೂ. (ಸೌ.) ಲಕ್ಷ್ಮೀ (ಮಾಯಿ) ನಾಯಿಕ್ ಇವರು ಪರಾತ್ಪರ ಗುರು ಡಾ. ಆಠವಲೆ ಇವರಿಗೆ ಏಕಮುಖಿ ಹನುಮಂತನ ಮರದ ಮೂರ್ತಿಯನ್ನು ನೀಡಿದರು. ಈ ಮೂರ್ತಿಯು ಕುಮಟಾ (ಕರ್ನಾಟಕ)ದಲ್ಲಿಯ ಮೂರ್ತಿಕಾರ ಹಾಗೂ ಸನಾತನದ ಸಾಧಕರಾದ ಶ್ರೀ. ಚೈತನ್ಯ ಆಚಾರಿ ಇವರು ಸನಾತನ-ನಿರ್ಮಿತ ಶ್ರೀ ಹನುಮಂತನ ಚಿತ್ರದಲ್ಲಿನ ರೂಪದಂತೆ ಮಾಡಿದರು. ಇದು ಹಲಸಿನ ಮರದಿಂದ ಮಾಡಲಾಗಿದೆ.

ಪ.ಪೂ. ದೇವಬಾಬಾ ಮತ್ತು ಸೌ. ಜ್ಯೋತಿ ರಾವ ಇವರ ಸನ್ಮಾನ !

ಯಜ್ಞದಲ್ಲಿ ಉಪಸ್ಥಿತರಿದ್ದ ಪ.ಪೂ. ದೇವಬಾಬಾ ಇವರನ್ನು ಪ.ಪೂ. ದಾಸ ಮಹಾರಾಜರ ಶುಭ ಹಸ್ತದಿಂದ ಪುಷ್ಪಹಾರವನ್ನು ಅರ್ಪಿಸಿ, ಅದೇ ರೀತಿ ಶ್ರೀಫಲವನ್ನು ಹಾಗೂ ಸನಾತನ-ನಿರ್ಮಿತ ಭಗವಾನ ಶ್ರೀಕೃಷ್ಣನ ಚಿತ್ರವನ್ನು ನೀಡಿ ಸನ್ಮಾನ ಮಾಡಲಾಯಿತು. ಪೂ. (ಸೌ.) ಲಕ್ಷ್ಮೀ (ಮಾಯಿ) ನಾಯಿಕ್ ಇವರು ಪ.ಪೂ. ದೇವಬಾಬಾರವರ ಪತ್ನಿ ಸೌ. ಜ್ಯೋತಿ ರಾವ ಇವರ ಉಡಿ ತುಂಬಿ ಹಾಗೂ ಉಡುಗೊರೆಯನ್ನು ನೀಡಿ ಸತ್ಕಾರವನ್ನು ಮಾಡಿದರು.

ಹಿಂದೂ ರಾಷ್ಟ್ರ ಬರುವುದು, ಬರುವುದು ಮತ್ತು ಬಂದೇ ಬರುವುದು !- ಪ.ಪೂ. ದೇವಬಾಬಾ

‘ಸದ್ಯ ಗೋಮಾತೆಯು ಬಂಧನದಲ್ಲಿದೆ. ಅದು ಬಂಧನ ಮುಕ್ತವಾದರೆ, ಭಾರತ ಮಾತೆಯು ಬಂಧನ ಮುಕ್ತವಾಗುವುದು ! ಭಾರತ ಮಾತೆಯ ವಿಜಯವು ನಿಶ್ಚಿತವಾಗಿದೆ, ಎಂಬ ಸಂದೇಶವನ್ನು ಸನ್ಮಾನದ ಸಂದರ್ಭದಲ್ಲಿ ಹಿಮಾಲಯದಲ್ಲಿಯ ಸಂತರಿಂದ ದೊರಕಿದೆ ಎಂದು ಪ.ಪೂ. ದೇವ ಬಾಬಾ ಇವರು ತಿಳಿಸಿದರು. ಯಜ್ಞ ಪ್ರಸಂಗದಲ್ಲಿ ಅವರು ‘ಹಿಂದೂ ರಾಷ್ಟ್ರ ಬರುವುದು, ಬರುವುದು ಮತ್ತು ಬಂದೇ ಬರುವುದು, ಎಂದು ಅವರು ಸಾಧಕರಿಗೆ ಪ್ರತಿಪಾದಿಸಿದರು.

ಯಜ್ಞದ ಒಳ್ಳೆಯ ಪರಿಣಾಮವಾಯಿತು !- ಪ.ಪೂ. ದೇವಬಾಬಾ

ಪ.ಪೂ. ದೇವಬಾಬಾ ಯಜ್ಞದ ಬಗ್ಗೆ ಮಾತನಾಡುತ್ತಾ, “ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಟ್ಟಶಕ್ತಿಗಳ ಹಲ್ಲೆಯಾಗಿದ್ದನ್ನು ನಾನು ಇದೇ ಮೊದಲನೇ ಸಲ ನೋಡಿದೆ. ಆ ಕೆಟ್ಟ ಶಕ್ತಿಗಳು ನನ್ನ ಮೇಲೆ ಸೂಕ್ಷ್ಮದಿಂದ ಹಲ್ಲೆಯನ್ನು ಮಾಡಿದಾಗ, ನನ್ನ ಕಾಲು ಕೆಲವು ಸೆಕೆಂಡ್ ತನಕ ನೋವಾಗುತ್ತಿತ್ತು. ಅದೇ ಸಮಯದಲ್ಲಿ ನಮ್ಮ ಹತ್ತಿರದಲ್ಲಿರುವ ಲೈಟ್ (ಕೂಲ್ ಲೈಟ್) ಒಮ್ಮಿಂದೊಮ್ಮೆಲೆ ಕೆಳಗೆ ಬಿದ್ದಿತು. ಆಗ ಹನುಮಂತ ಇದ್ದಿದ್ದರಿಂದ ಕೆಟ್ಟ ಶಕ್ತಿಗಳು ಹೋಗುತ್ತಿರುವಂತೆ ಕಾಣಿಸಿತು. ನಂತರ ನನ್ನ ಕಾಲು ನೋವಾಗುವುದು ನಿಂತಿತು. ಕೆಟ್ಟ ಶಕ್ತಿ ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಯಜ್ಞದಿಂದ ವಾತಾವರಣದಲ್ಲಿ ಶುದ್ಧಿ ಆಯಿತು. ಯಜ್ಞದ ಪರಿಣಾಮವು ಒಳ್ಳೆಯದಾಯಿತು, ಎಂದರು.

ಕ್ಷಣಚಿತ್ರಗಳು

೧. ಯಜ್ಞಸ್ಥಳವನ್ನು ಕನಾತದಿಂದ ಮುಚ್ಚಲಾಗಿತ್ತು. ಆದರೂ ಪೂರ್ಣಾಹುತಿಯ ಸಮಯದಲ್ಲಿ ಯಜ್ಞಸ್ಥಳದಲ್ಲಿ ಪೂಜೆಗಾಗಿ ಇಟ್ಟಿದ್ದ ಪರಾತ್ಪರ ಗುರು ಡಾ.ಆಠವಲೆಯವರ ಪ್ರತಿಮೆಯ ಮುಖದಲ್ಲಿ ಆಶ್ರಮದ ಪರಿಸರದಲ್ಲಿಯ ಹನುಮಂತನ ದೇವಸ್ಥಾನದ ಮೇಲಿನಿಂದ ಸೂರ್ಯಕಿರಣವು ಬಂದಿತು. ಅನಂತರ ಅದು ಅದರ ಹಿಂದೆ ಇದ್ದಂತಹ ಪ್ರಭು ಶ್ರೀರಾಮನ ಮೂರ್ತಿಯ ಮೇಲೆಯೂ ಬಂದಿತು. ಇದರ ಬಗ್ಗೆ ಪ.ಪೂ. ದೇವಬಾಬಾರವರು, “ಇದು ಪರಾತ್ಪರ ಗುರು ಡಾ. ಆಠವಲೆ, ಪ.ಪೂ. ದಾಸ ಮಹಾರಾಜ ಮತ್ತು ಇತರ ಸಂತರಿಗಾಗಿ ಆಶೀರ್ವಾದಾತ್ಮಕವಿದೆ. ಸೂರ್ಯ ಎಂದರೆ ದೇವತೆಗಳ ಕಣ್ಣುಗಳಾಗಿವೆ. ನಮ್ಮ ಕಾರ್ಯವನ್ನು ನೋಡಲು ಈಶ್ವರನು ಸ್ವತಃ ಸೂರ್ಯಕಿರಣದ ಮಾಧ್ಯಮದಿಂದ ಬಂದಿದ್ದನು. ಪ್ರಭು ಶ್ರೀರಾಮನು ಸೂರ್ಯವಂಶಿಯಾಗಿದ್ದಾರೆ. ಆದ್ದರಿಂದ ಅವರ ಮೂರ್ತಿಯ ಮೇಲೆ ಸೂರ್ಯಕಿರಣ ಬೀಳುವುದು ಶುಭಯೋಗವೇ ಆಗಿದೆ, ಎಂದರು.

೨. ಪೂರ್ಣಾಹುತಿಯ ಸಮಯದಲ್ಲಿ ಪ.ಪೂ.ದಾಸ ಮಹಾರಾಜ ಮತ್ತು ಪೂ. (ಡಾ.) ಮುಕುಲ ಗಾಡಗೀಳರ ಮೇಲೂ ಸೂರ್ಯಕಿರಣ ಬಿಳುತ್ತಿತ್ತು.

೩. ಯಜ್ಞಸ್ಥಳದಲ್ಲಿ ಸನಾತನದ ವಿಕಲಚೇತನದ ಅವಸ್ಥೆಯಲ್ಲಿರುವ ಸಂತರಾದ ಪೂ. ಸೌರಭ ಜೋಶಿ ಇವರದ್ದು ಸಹ ವಂದನೀಯ ಉಪಸ್ಥಿತಿ ಇತ್ತು. ಯಜ್ಞ ನಡೆಯುತ್ತಿರುವಾಗ ಪೂ. ಸೌರಭ ಜೋಶಿಯವರ ಅಂಗೈ ಮೇಲೆ ಬಂಗಾರ ಬಣ್ಣದ ದೈವೀ ಕಣಗಳು ತುಂಬ ಬಂದಿದ್ದವು, ಅದೇ ರೀತಿ ಭ್ರೂಮಧ್ಯದಲ್ಲಿ ಭಗವಾನ ಶ್ರೀವಿಷ್ಣುವಿನ ಗಂಧದಂತೆ ಆಂಗ್ಲ ಭಾಷೆಯ ‘ಯು ಆಕಾರದಲ್ಲಿ ಬಂಗಾರದ ಅಚ್ಚು ಬಂದಿತ್ತು. ಪೂ. ಸೌರಭ ಜೋಶಿ ಇವರು ೨೦೦೨ ರಲ್ಲಿಯ ನೆರವೇರಿದ ಮೊದಲ ಪಂಚಮುಖಿ ಹನುಮಾನ ಕವಚ ಯಜ್ಞದಲ್ಲಿಯೂ ಉಪಸ್ಥಿತರಿದ್ದರು.

೪. ಆಶ್ರಮದಲ್ಲಾದ ಕಳೆದೆರಡು ಯಜ್ಞಗಳಲ್ಲಿಯ ಪೂರ್ಣಾಹುತಿಯ ವೇಳೆ ಸದ್ಗುರು (ಸೌ.) ಬಿಂದಾ ಸಿಂಗಬಾಳರಿಗೆ ತುಂಬ ಬೆವರು ಬರುತ್ತಿತ್ತು. ಈ ಬೆವರಿನ ಹನಿಯು ದೈವಿಯಾಗಿದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಅದನ್ನು ಪರೀಕ್ಷಿಸಲಾಗುತ್ತಿದೆ.

೫. ೫೪ ನೇ ಪಂಚಮುಖಿ ಹನುಮಾನ್ಕವಚ ಯಜ್ಞದ ವೇಳೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಮಾಡಿದ ವೈಜ್ಞಾನಿಕ ಶೋಧನೆ ಬಗ್ಗೆ ಯಜ್ಞದಲ್ಲಿಯ ಸಾಧಕರಿಗೆ ಮನವರಿಕೆ ಮಾಡಿಕೊಡಲಾಯಿತು.

Kannada Weekly | Offline reading | PDF