ತೊಂದರೆಯಿರುವ ಸಾಧಕರೇ, ‘ಭಾವಜಾಗೃತಿಯ ಪ್ರಯತ್ನ, ನಾಮಜಪ ಮುಂತಾದವುಗಳು  ಸರಿಯಾಗಿ ಆಗುತ್ತಿಲ್ಲವೆಂದು ದುಃಖ ಪಡದೆ ಪಟ್ಟುಹಿಡಿದು ಪ್ರಯತ್ನವನ್ನು ಮುಂದುವರಿಸುತ್ತೀರಿ !

(ಪೂ.) ಶ್ರೀ. ಸಂದೀಪ ಆಳಶಿ

‘ಸದ್ಯ ಸೂಕ್ಷ್ಮದಲ್ಲಿನ ಆಪತ್ಕಾಲವು ನಡೆಯುತ್ತಿರುವುದರಿಂದ ತೊಂದರೆಯಿರುವ ಹೆಚ್ಚಿನ ಸಾಧಕರ ಮನಸ್ಸಿನಲ್ಲಿ ಅನೇಕ ಬಾರಿ ತೊಂದರೆದಾಯಕ ಶಕ್ತಿಯ ಆವರಣ ಬರುತ್ತದೆ. ಮನಸ್ಸು ಮೂಲದಲ್ಲಿಯೇ ಸಂವೇದನಾಶೀಲವಾಗಿರುವುದರಿಂದ ಕೆಟ್ಟ ಶಕ್ತಿಗಳಿಗೆ ಬುದ್ಧಿಯ ತುಲನೆಯಲ್ಲಿ ಮನಸ್ಸಿನ ಮೇಲೆ ಆವರಣ ತರುವುದು ಸುಲಭವಿರುತ್ತದೆ. ಮನಸ್ಸಿನ ಮೇಲೆ ಆವರಣ ಬಂದಿರುವುದರಿಂದ ಕೆಲವು ಸಾಧಕರಿಗೆ ‘ಭಾವ ಜಾಗೃತಿಯ ಪ್ರಯತ್ನ, ನಾಮಜಪ ಮುಂತಾದವುಗಳನ್ನು ಮಾಡಲೇಬಾರದು’, ಎಂದೆನಿಸುತ್ತದೆ. ಕೆಲವು ಸಾಧಕರಿಗೆ ಭಾವ ಜಾಗೃತಿಯ ಪ್ರಯತ್ನ ಮಾಡಿದರೂ ಭಾವ ಜಾಗೃತಿಯಾಗದಿರುವುದು, ಆಧ್ಯಾತ್ಮಿಕ ಉಪಾಯಗಳ ಸಮಯದಲ್ಲಿ ನಾಮಜಪವು ಯಾಂತ್ರಿಕವಾಗಿ ಆಗುವುದರಿಂದ ನಾಮಜಪದ ಆನಂದವನ್ನು ಅನುಭವಿಸಲು ಸಾಧ್ಯವಾಗದಿರುವುದು ಮುಂತಾದವುಗಳು ಆಗುತ್ತಿದೆ. ಕೆಲವು ಸಾಧಕರಿಗೆ ಈ ಪ್ರಯತ್ನ ಮಾಡಿ ಉತ್ತಮ ಸ್ಥಿತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ; ಆದರೆ ಕೆಲವು ಸಮಯದ ನಂತರ ಪುನಃ ಮನಸ್ಸಿನ ಮೇಲೆ ಆವರಣ ಬಂದಿರುವುದರಿಂದ ಪುನಃ ಮನಸ್ಸಿನ ಸ್ಥಿತಿ ಹಾಳಾಗುತ್ತದೆ. ಇದರಿಂದ ಇಂತಹ ಎಲ್ಲ ಸಾಧಕರಿಗೆ ಸಾಧನೆಯ ಪ್ರಯತ್ನಗಳ ವಿಷಯದಲ್ಲಿ ನಕಾರಾತ್ಮಕ ವಿಚಾರ ಬಂದು ಅವರು ನಿರಾಶರಾಗುತ್ತಾರೆ. ಈ ಸಂದರ್ಭದಲ್ಲಿ ಸಾಧಕರು ಮುಂದಿನ ದೃಷ್ಟಿಕೋನ ಗಮನದಲ್ಲಿಟ್ಟುಕೊಳ್ಳಬೇಕು.

೧. ‘ಮನಸ್ಸಿನ ಸ್ಥಿತಿ ಪದೇ ಪದೇ ಹಾಳಾಗುವುದರ ಮುಖ್ಯ ಕಾರಣವೆಂದರೆ ‘ಕೆಟ್ಟ ಶಕ್ತಿಗಳ ತೊಂದರೆ’, ಎಂಬುದನ್ನು ಸ್ವೀಕರಿಸಿ ಅದನ್ನು ಎದುರಿಸಿದರೆ ಆಧ್ಯಾತ್ಮಿಕ ಉಪಾಯಗಳನ್ನು ಪರಿಣಾಮಕಾರಿಯಾಗಿ ಮಾಡುವುದರೊಂದಿಗೆ ‘ಸ್ವಭಾವದೋಷ-ನಿರ್ಮೂಲನೆಯ ಪ್ರಕ್ರಿಯೆಯನ್ನೂ ಸರಿಯಾಗಿ ಮಾಡುವುದು’, ಸಾಧನೆಯೇ ಆಗಿದೆ.

೨. ‘ಯಾವುದು ಆಗುವುದಿಲ್ಲವೋ ಅದಕ್ಕಾಗಿ ಪ್ರಯತ್ನಿಸುವುದು’, ಸಾಧನೆಯೇ ಆಗಿದ್ದು ‘ನನ್ನಲ್ಲಿ ಕ್ಷಾತ್ರವೃತ್ತಿ ನಿರ್ಮಾಣವಾಗಲು ದೇವರು ಇಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾನೆ’, ಎಂಬ ಭಾವವಿಡಬೇಕು.

೩. ಸದ್ಯ ಕೆಟ್ಟ ಶಕ್ತಿಗಳ ತೊಂದರೆಯಿಂದಾಗಿ ಭಾವಜಾಗೃತಿಯ ಪ್ರಯತ್ನ, ನಾಮಜಪ ಮುಂತಾದವುಗಳಿಂದ ಒಳ್ಳೆಯ ಪರಿಣಾಮ ಬಾಹ್ಯಮನಕ್ಕೆ ಅನುಭವಿಸಲು ಸಾಧ್ಯವಾಗದಿದ್ದರೂ, ಭಾವ, ನಾಮಜಪ ಮುಂತಾದವುಗಳ ಕೇಂದ್ರ ಅಂತರ್ಮನದಲ್ಲಿ ಹೆಚ್ಚಾಗುತ್ತಲೇ ಇರುತ್ತದೆ. ಮುಂದೆ ಸೂಕ್ಷ್ಮದಲ್ಲಿನ ಆಪತ್ಕಾಲವು ಕಡಿಮೆಯಾದಾಗ ಭಾವ, ನಾಮಜಪ ಮುಂತಾದವುಗಳ ಕೇಂದ್ರ ಅಂತರ್ಮನದಲ್ಲಿ ಮೊದಲೇ ಹೆಚ್ಚಾಗಿರುವುದರಿಂದ ‘ಭಾವಜಾಗೃತಿಯ ಪ್ರಯತ್ನ, ನಾಮಜಪ ಮುಂತಾದವುಗಳು ಸಹಜವಾಗಿ ಮತ್ತು ಉತ್ಕೃಷ್ಟವಾಗಿ ಆಗುವುದು’, ಎಂಬುದನ್ನು ಖಚಿತ ಪಡಿಸಿಕೊಳ್ಳಿರಿ. ಸ್ವಲ್ಪದರಲ್ಲಿ ‘ಸದ್ಯ ಪ್ರಯತ್ನ ಸರಿಯಾಗಿ ಆಗುತ್ತಿಲ್ಲ’, ಈ ವಿಚಾರದಿಂದ ಎದೆಗುಂದದೆ ಶ್ರದ್ಧೆಯನ್ನಿಟ್ಟು ಪಟ್ಟುಹಿಡಿದು ಪ್ರಯತ್ನವನ್ನು ಮುಂದುವರಿಸುತ್ತಲೇಇರಿ.’ – (ಪೂ.) ಶ್ರೀ. ಸಂದೀಪ ಆಳಶಿ (೧೬.೨.೨೦೧೯)

Kannada Weekly | Offline reading | PDF