ಸಾಧಕರಿಗೆ ಸೂಚನೆ ಹಾಗೂ ಕೃತಿಶೀಲ ವಾಚಕರಿಗೆ ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಏಪ್ರಿಲ್ ೫ ರಿಂದ ಮೇ ೫, ೨೦೧೯ ಈ ಅವಧಿಯಲ್ಲಿ ನಿಯತಕಾಲಿಕೆ ‘ಸನಾತನ ಪ್ರಭಾತದ ‘ವಾಚಕರ ವೃದ್ಧಿ ಅಭಿಯಾನ ಹಮ್ಮಿಕೊಂಡು ಹೆಚ್ಚೆಚ್ಚು ಜಿಜ್ಞಾಸುಗಳ ವರೆಗೆ ‘ಸನಾತನ ಪ್ರಭಾತವನ್ನು ತಲುಪಿಸಿರಿ !

‘ನಿಯತಕಾಲಿಕೆ ‘ಸನಾತನ ಪ್ರಭಾತವು ಹಿಂದೂ ರಾಷ್ಟ್ರ ಸ್ಥಾಪನೆಯ ವೈಚಾರಿಕ ಹೋರಾಟದ ಮಹತ್ವದ ಶಸ್ತ್ರವಾಗಿದೆ. ವಾಚಕರಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೀತಿಯನ್ನು ಜಾಗೃತಗೊಳಿಸುವ ಹಾಗೂ ಅವರ ಸಾಧನೆಗಾಗಿ ಪ್ರತಿದಿನ ದಿಕ್ಕನ್ನು ತೋರಿಸಲು ಕಟಿಬದ್ಧವಾಗಿದೆ. ಆಪತ್ಕಾಲವನ್ನು ಎದುರಿಸಲು ಸಾಧನೆಯ ರೂಪದಲ್ಲಿ ಸಂಜೀವನಿಯನ್ನು ಸಮಾಜದ ತನಕ ತಲುಪಿಸುವ ಪ್ರಸಕ್ತ ಕಾಲದ ಆವಶ್ಯಕತೆಯನ್ನು ಸನಾತನ ಪ್ರಭಾತವು ಪೂರ್ಣಗೊಳಿಸುತ್ತದೆ.

ಈ ನಿಯತಕಾಲಿಕೆಯು ಹೆಚ್ಚೆಚ್ಚು ಜಿಜ್ಞಾಸುಗಳವರೆಗೆ ತಲುಪಿ ಎಲ್ಲರಿಗೆ ಅದರಿಂದ ಲಾಭವಾಗಬೇಕೆಂಬ ದೃಷ್ಟಿಯಿಂದ ಏಪ್ರಿಲ್ ೫ ರಿಂದ ಮೇ ೫, ೨೦೧೯ ರ ವರೆಗಿನ ಅವಧಿಯಲ್ಲಿ ಭಾರತಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ‘ಸನಾತನ ಪ್ರಭಾತ ವಾಚಕರ ವೃದ್ಧಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ ಸನಾತನ ಪ್ರಭಾತವನ್ನು ಹೆಚ್ಚೆಚ್ಚು ಹಿಂದೂಗಳ ಮನೆಮನೆಗೆ ತಲುಪಿಸಲು ಸಾಧಕರು, ವಾಚಕರು, ಹಿತಚಿಂತಕರು, ಅರ್ಪಣೆದಾರರು, ರಾಷ್ಟ್ರಪ್ರೇಮಿ ಹಾಗೂ ಧರ್ಮಪ್ರೇಮಿಗಳು ಸಂಘಟಿತರಾಗಿ ಪ್ರಯತ್ನಿಸಿದರೆ ಧರ್ಮದ ಪ್ರಸಾರದೊಂದಿಗೆ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪಕ್ಕೆ ಹೆಚ್ಚು ಬಲ ಸಿಗುವುದು !

೧. ಸಾಪ್ತಾಹಿಕ ಸನಾತನ ಪ್ರಭಾತ ೨೧ ವರ್ಷ, ದೈನಿಕ ಸನಾತನ ಪ್ರಭಾತದ ೨೦ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.

೨. ‘ಸಾಧನೆ ಮತ್ತು ಹಿಂದೂಗಳ ಸಂಘಟಿತ ಪ್ರಯತ್ನದಿಂದ ಹಿಂದೂ ರಾಷ್ಟ್ರರೂಪದ ದಿವ್ಯಕನಸು ನನಸಾಗಬಹುದು, ಈ ಅದಮ್ಯ ಆತ್ಮವಿಶ್ವಾಸವು ಹಿಂದುತ್ವನಿಷ್ಠರಲ್ಲಿ ಬಿತ್ತುವಲ್ಲಿ ಈ ನಿಯತಕಾಲಿಕೆಯ ಸಿಂಹಪಾಲಿದೆ.

೩. ಇದು ಒಂದು ಆಧ್ಯಾತ್ಮಿಕ ಸಂಘಟನೆಯು ಯಾವುದೇ ರಾಜಕೀಯ ಹಾಗೂ ಆರ್ಥಿಕ ಬೆಂಬಲವಿಲ್ಲದೇ ಕೇವಲ ಈಶ್ವರನ ಕೃಪೆಯಿಂದ ನಡೆಸುತ್ತಿರುವ ಏಕೈಕ ನಿಯತಕಾಲಿಕೆಯಾಗಿದೆ.

ಈ ಅಭಿಯಾನದ ಮಾರ್ಗದರ್ಶಕವಾಗಿರುವ ಕೆಲವು ಅಂಶ ಮತ್ತು ಸೂಕ್ಷ್ಮ ವಿಷಯದ ಬಗ್ಗೆ ಈ ಮುಂದೆ ನೀಡಲಾಗಿದೆ.

೧. ಅಭಿಯಾನದ ಬಗ್ಗೆ ಮಹತ್ವದ ಸೂಚನೆ

೧ ಅ. ವಾಚಕರ ವೃದ್ಧಿ ಅಭಿಯಾನದ ಸೇವೆಯನ್ನು ಪ್ರಾಧಾನ್ಯತೆಯಿಂದ ಮಾಡಿರಿ !

ವಾಚಕರ ವೃದ್ಧಿಯನ್ನು ಮಾಡಲು ಎಲ್ಲ ಸಾಧಕರು ನಗರದಲ್ಲಿ, ಅದೇ ರೀತಿ ಗ್ರಾಮ ಗ್ರಾಮಗಳಲ್ಲಿ ಸಂಪರ್ಕದ ಸವಿಸ್ತಾರ ಪಟ್ಟಿಯನ್ನು ತಯಾರಿಸಿ ಹಾಗೂ ಅದಕ್ಕನುಸಾರ ಸಂಪರ್ಕವನ್ನು ಮಾಡಿರಿ. ಜಿಲ್ಲೆಯಲ್ಲಿರುವ ಇತರ ಸೇವೆಗಳ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಾಧಕರು ಈ ಸೇವೆಗೆ ಹೆಚ್ಚೆಚ್ಚು ಪ್ರಾಧಾನ್ಯತೆಯನ್ನು ನೀಡಿ. ರಜೆಯ ಸಮಯದಲ್ಲಿ ಸಾಧಕರ ಯುವ ಮಕ್ಕಳು, ಪ್ರಾಸಂಗಿಕ ಸೇವೆಯನ್ನು ಮಾಡುವ ಸಾಧಕರು ಮತ್ತು ಕೃತಿಶೀಲ ವಾಚಕರು ಹಾಗೂ ಧರ್ಮಪ್ರೇಮಿಗಳೊಂದಿಗೆ ಈ ಸೇವೆಯ ಆಯೋಜನೆಯನ್ನು ಮಾಡಿರಿ.

೧ ಆ. ಸಂಪರ್ಕಕ್ಕೆ ಹೋಗುವಾಗ ಜೊತೆಯಲ್ಲಿ ಏನೆಲ್ಲ ಇಟ್ಟುಕೊಳ್ಳಬೇಕು ?

ವಾಚಕರ ವೃದ್ಧಿ ಮಾಡುವ ಉದ್ದೇಶದಿಂದ ಸಂಪರ್ಕಕ್ಕಾಗಿ ಹೋಗುವಾಗ ಸನಾತನ ಪ್ರಭಾತದ ಅಭಿಯಾನ ಮಾಹಿತಿಪತ್ರ (ಬ್ರೋಷರ್), ವಿನಂತಿ ಪತ್ರ, ಚಂದಾ ಅರ್ಜಿ, ಒಂದು ಫೈಲ್‌ನಲ್ಲಿ ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ಹಳೆಯ ಪತ್ರಿಕೆ ಮತ್ತು ಬಣ್ಣದ ವಿಶೇಷಾಂಕದ ಒಂದೊಂದು ಪ್ರತಿಯನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. ಮರಾಠಿ ಹಾಗೂ ಕನ್ನಡ ಸಾಪ್ತಾಹಿಕ, ಹಿಂದಿ ಹಾಗೂ ಆಂಗ್ಲದ ಪಾಕ್ಷಿಕ, ಅದೇರೀತಿ ಗುಜರಾತಿ ಮಾಸಿಕ ಇವುಗಳ ಸಂಚಿಕೆಗಳ ಸಂಚನ್ನು ಕೂಡ ಆವಶ್ಯಕತೆಗನುಸಾರ ಇಟ್ಟುಕೊಳ್ಳಬೇಕು. ಮನೆಯಲ್ಲಿದ್ದು ಸೇವೆಯನ್ನು ಮಾಡುವ ಸಾಧಕರಿಗೆ ಸಂಚನ್ನು ತಯಾರಿಸುವ ಸೇವೆಯನ್ನು ನೀಡಬೇಕು.

೧ ಇ. ಎಲ್ಲ ನಿಯತಕಾಲಿಕೆಯ ವಾಚಕರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಿರಿ !

ನಿಯಮಿತವಾಗಿ ಸಾಪ್ತಾಹಿಕ ಸನಾತನ ಪ್ರಭಾತವನ್ನು ವಿತರಿಸಲು ಸಾಧ್ಯವಿರುವ ಸ್ಥಳದಲ್ಲಿ ಅದರ ವಾಚಕರನ್ನಾಗಿಸಲು ಆದ್ಯತೆಯನ್ನು ನೀಡಿ. .

ಕೇವಲ ಕನ್ನಡ ಭಾಷೆಯಲ್ಲಿನ ನಿಯತಕಾಲಿಕೆಯ ವಾಚಕರವೃದ್ಧಿಯ ಉದ್ದೇಶವನ್ನಿಟ್ಟುಕೊಳ್ಳದೇ ಮರಾಠಿ, ಹಿಂದಿ. ಆಂಗ್ಲ ಮತ್ತು ಗುಜರಾತಿ ಭಾಷೆಯ ನಿಯತಕಾಲಿಕೆಯ ವಾಚಕರ ಸಂಖ್ಯೆ ಹೆಚ್ಚಿಸಲೂ ಗಮನವಿಡಬೇಕು.

೧ ಈ. ವಾಚಕರಾಗುವ ವಿಷಯದಲ್ಲಿ ಜಿಜ್ಞಾಸುಗಳು ದ್ವಂದ್ವ ಮನಃಸ್ಥಿತಿಯಲ್ಲಿದ್ದರೆ

ಜಿಜ್ಞಾಸುಗಳನ್ನು ಸಂಪರ್ಕಿಸಿದಾಗ ವಾಚಕರಾಗಲು ಕೂಡಲೇ ಒಪ್ಪಿದರೆ ಸಂಚಿಕೆಯನ್ನು ಆರಂಭಿಸಿ. ಅವರಿಗೆ ದ್ವಂದ್ವ ಮನಃಸ್ಥಿತಿ ಇದ್ದರೆ ೩-೪ ಹಳೆಯ ಸಂಚಿಕೆಯನ್ನು ಓದಲು ನೀಡಿ ‘ನೀವು ಇದನ್ನು ಓದಿ ನೋಡಿ, ಎಂದು ಹೇಳಿ ತಮ್ಮ ಸಂಪರ್ಕ ಸಂಖ್ಯೆಯನ್ನು ನೀಡಿರಿ. ನಂತರ ೫-೬ ದಿನಗಳ ನಂತರ ಮತ್ತೊಮ್ಮೆ ಸಂಪರ್ಕಕ್ಕೆ ಹೋಗಿ ಅವರಿಗೆ ಇಚ್ಛೆ ಇದ್ದಲ್ಲಿ ಸಂಚಿಕೆಯನ್ನು ಆರಂಭಿಸಿ. ಸಂಚಿಕೆಯನ್ನು ಆರಂಭಿಸಲು ಅವರಿಗೆ ತುಂಬಾ ಒತ್ತಡ ಮಾಡಬೇಡಿರಿ.

೨. ವಾಚಕರವೃದ್ಧಿಗಾಗಿ ಪ್ರತ್ಯಕ್ಷವಾಗಿ ಮಾಡಬೇಕಾದ ಪ್ರಯತ್ನ

೨ ಅ. ಸಂಪರ್ಕದಲ್ಲಿರುವ ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳನ್ನು ವಾಚಕರನ್ನಾಗಿ ಮಾಡುವುದು

೧. ಹಿತಚಿಂತಕರು, ಅರ್ಪಣೆದಾರರು, ಜಾಹೀರಾತುದಾರರು, ಅದೇರೀತಿ ಧರ್ಮಪ್ರೇಮಿಗಳಿಗೆ ನಿಯತಕಾಲಿಕೆಯ ಮಹತ್ವವನ್ನು ಹೇಳಿ ಅವರಿಗೆ ವಾಚಕರನ್ನಾಗಿಸಿ.

೨. ಸಂಸ್ಥೆ ಮತ್ತು ಸಮಿತಿಯ ಕಾರ್ಯದೊಂದಿಗೆ ಏಕರೂಪವಾಗಿರುವ ಬಹಳಷ್ಟು ಹಿಂದುತ್ವನಿಷ್ಠರು ಸನಾತನ ಪ್ರಭಾತದ ಪ್ರಸಾರ ಮಾಡಿ ಹೆಚ್ಚು ವಾಚಕರನ್ನಾಗಿಸಲು ಸ್ವಯಂಪ್ರೇರಣೆಯಿಂದ ಪ್ರಯತ್ನಿಸುತ್ತಿದ್ದಾರೆ. ಇತರ ಹಿಂದುತ್ವನಿಷ್ಠರನ್ನೂ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಅಳಿಲು ಸೇವೆ ಮಾಡಲು ವಿನಂತಿಸಬೇಕು.

೩. ಸನಾತನ ಪ್ರಭಾತದ ವಾಚಕರು, ಹಿತಚಿಂತಕರು, ಧರ್ಮಪ್ರೇಮಿ ಮುಂತಾದವರ ಸಂಬಂಧಿಕರು, ಸ್ನೇಹಿತರು ಮುಂತಾದವರನ್ನು ವಾಚಕರನ್ನಾಗಿಸಲು ಪ್ರವೃತ್ತಗೊಳಿಸಿರಿ. ಅವರು ಆ ರೀತಿಯಲ್ಲಿ ಇಚ್ಛಿಸಿದ್ದಲ್ಲಿ ‘ಆನ್‌ಲೈನ್ ಅರ್ಜಿಯನ್ನು ತುಂಬಿಸಿಯೂ ವಾಚಕರಾಗಬಹುದು ಅದಕ್ಕಾಗಿ ಅವರು www.SanatanPrabhat.org/subscribe/ ಈ ಜಾಲತಾಣಕ್ಕೆ ಭೇಟಿ ನೀಡಲು ವಿನಂತಿಸಿರಿ ಅಥವಾ ಸ್ಥಳೀಯ ಸಾಧಕರನ್ನು ಜೋಡಿಸಿ.

೨ ಆ. ಸಾರ್ವಜನಿಕ ಸ್ಥಳಗಳಲ್ಲಿ ಸಂಚಿಕೆಯನ್ನು ಆರಂಭಿಸಿ

೧. ಶಾಲೆ, ಮಹಾವಿದ್ಯಾಲಯ ಇದರೊಂದಿಗೆ ಸರಕಾರಿ ಹಾಗೂ ಖಾಸಗಿ ವಾಚನಾಲಯಗಳಲ್ಲಿ ಸಂಚಿಕೆಯನ್ನು ಆರಂಭಿಸಬಹುದು. ಹಣದ ಕೊರತೆಯಿಂದಾಗಿ ಸಂಚಿಕೆಯನ್ನು ಆರಂಭಿಸಲು ಗ್ರಂಥಾಲಯ ಪ್ರಮುಖರು ಹಿಂದೇಟು ಹಾಕುತ್ತಿದ್ದರೆ ಆ ಕ್ಷೇತ್ರದಲ್ಲಿ ಸಂಚಿಕೆಯನ್ನು ಪ್ರಾಯೋಜಕರನ್ನಾಗಿ ಮಾಡಲು ಇಚ್ಛೆಯಿರುವ ಜಿಜ್ಞಾಸುಗಳ ಮಾಧ್ಯಮದಿಂದ ನಿಯತಕಾಲಿಕೆಯನ್ನು ಆರಂಭಿಸುವುದು. ವಿಶೇಷ ಪ್ರಸಂಗಗಳಲ್ಲಿ ಪ್ರಸಿದ್ಧಿಗೊಳಿಸುವ ವಿಶೇಷಾಂಕ (‘ಪರಾತ್ಪರ ಗುರು ಡಾಕ್ಟರ ಆಠವಲೆಯವರ ಜನ್ಮೋತ್ಸವ ವಿಶೇಷಾಂಕ, ‘ಗುರುಶಕ್ತಿ ಪ್ರಧಾನ ಸಮಾರಂಭ ವಿಶೇಷಾಂಕ ಇತ್ಯಾದಿ) ತೋರಿಸಿ ಮುಂಬರುವ ವಿಶೇಷಾಂಕದ ಪ್ರಾಯೋಜಕರಾಗಲು ಅವರನ್ನು ಪ್ರೇರೇಪಿಸಬಹುದು.

೨. ಆಸ್ಪತ್ರೆ, ಸಂಸ್ಥೆ, ಬ್ಯಾಂಕ್, ಹೋಟೇಲ್, ಅಂಗಡಿ ಮುಂತಾದ ಜನಸಂದಣಿಯ ಸ್ಥಳಗಳಲ್ಲಿ, ಅದೇ ರೀತಿ ನ್ಯಾಯವಾದಿ, ಆಧುನಿಕ ವೈದ್ಯ, ಸಿ.ಎ., ಕ್ಷೌರದಂಗಡಿ, ಬ್ಯೂಟಿ ಪಾರ್ಲರ್, ಟ್ಯೂಶನ್ ಹೀಗೆ ವಿವಿಧ ಸ್ಥಳಗಳಲ್ಲಿ ನಿಯತಕಾಲಿಕೆಗಳನ್ನು ಇಟ್ಟಿರುತ್ತಾರೆ. ಇಂತಹ ಸ್ಥಳಗಳಲ್ಲಿ ನಮ್ಮ ಸಂಚಿಕೆಯನ್ನು ನಿಯಮಿತವಾಗಿ ತಲುಪಿಸಿದ್ದಲ್ಲಿ ವೇಗವಾಗಿ ಧರ್ಮಪ್ರಸಾರವಾಗುವುದು.

೩. ಕಾರ್ಯಾಲಯ, ಬ್ಯಾಂಕ್, ಸಹಕಾರಿ ಸಂಸ್ಥೆ,ವಿವಿಧ ಕಂಪನಿಗಳು, ಶಾಲೆ-ಮಹಾವಿದ್ಯಾಲಯಕ್ಕೆ (ಊಟದ ಸಮಯದಲ್ಲಿ) ಹೋಗಿ ಅಲ್ಲಿನ ಸಿಬ್ಬಂದಿಗಳನ್ನು ಸನಾತನ ಪ್ರಭಾತ ನಿಯತಕಾಲಿಕೆಯ ಮಾಹಿತಿಯನ್ನು ಹೇಳಲು ವ್ಯವಸ್ಥಾಪಕರ ಅನುಮತಿಯನ್ನು ಪಡೆದುಕೊಳ್ಳಿರಿ. ಅಲ್ಲಿ ಪ್ರಭಾವಿಯಾಗಿ ವಿಷಯವನ್ನು ಮಂಡಿಸಿ ಸನಾತನ ಪ್ರಭಾತ ವಾಚಕರ ವೃದ್ಧಿಯ ಅಭಿಯಾನವನ್ನು ಹಮ್ಮಿಕೊಳ್ಳಿರಿ.

೪. ವ್ಯಾಯಾಮಶಾಲೆ, ಗಣೇಶೋತ್ಸವ ಹಾಗೂ ನವರಾತ್ರೋತ್ಸವ ಮಂಡಳಿ ಇತ್ಯಾದಿ ಸ್ಥಳಗಳಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಕಾರ್ಯವನ್ನು ಮಾಡುವಂತಹ ಯುವಕರು ಸಂಘಟಿತರಾಗಿರುತ್ತಾರೆ. ಅವರನ್ನು ಸನಾತನ ಪ್ರಭಾತದ ವಾಚಕರನ್ನಾಗಿ ಮಾಡಬೇಕು.

೫. ಯುವಕರು, ಹಿರಿಯ ನಾಗರಿಕರು, ಅದೇ ರೀತಿ ವಿವಿಧ ಮಹಿಳಾ ಸಂಘಟನೆಯ ಮಾಧ್ಯಮದಿಂದ (ಪ್ರತಿದಿನ) ಪರಸ್ಪರರ ಸಂಪರ್ಕದಲ್ಲಿರುತ್ತಾರೆ. ಅವರನ್ನೂ ವಾಚಕರನ್ನಾಗಿಸಲು ವಿನಂತಿಯನ್ನು ಮಾಡಬಹುದು.

೨ ಇ. ‘ಸನಾತನ ಪ್ರಭಾತದ ಕಕ್ಷೆಯನ್ನು ನಿರ್ಮಿಸುವ ಆಯೋಜನೆಯನ್ನು ಮಾಡಿ !

ಸನಾತನ ಪ್ರಭಾತದ ವೈಶಿಷ್ಟ್ಯವನ್ನು ಹೇಳುವ, ಜಿಜ್ಞಾಸುಗಳಿಗೆ ವಾಚಕರನ್ನಾಗಿಸಲು ಕರೆಯನ್ನು ನೀಡುವಂತಹ ‘ಸನಾತನ ಪ್ರಭಾತ ಕಕ್ಷೆಯನ್ನು ಎಲ್ಲಿ ಸಾಧ್ಯವಿದೆಯೋ ಅಲ್ಲಿ ಹಾಕಬೇಕು. ಸಾಧ್ಯವಿದ್ದಲ್ಲಿ ಕಕ್ಷೆಯಲ್ಲಿ ಸನಾತನ ಪ್ರಭಾತದ ಫಲಕವನ್ನು ಹಾಕಬೇಕು. ಕೆಲವು ಸಂಚಿಕೆಯನ್ನು ‘ಡಿಸ್ಪ್ಲೆಮಾಡಿ ನಿಯತಕಾಲಿಕೆಯ ಮಹತ್ವವನ್ನು ಹೇಳಬೇಕು.

ಈ ರೀತಿಯ ಕಕ್ಷೆಯನ್ನು ಹಾಕಬಹುದಾದಂತಹ ಸ್ಥಳವು ಈ ಮುಂದೆ ನೀಡಲಾಗಿದೆ.

೧. ಜನದಟ್ಟಣೆ ಇರುವ ದೇವಸ್ಥಾನದ ಪರಿಸರ, ಬಸ್ ನಿಲ್ದಾಣ, ಪಟ್ಟಣದ ಮುಖ್ಯ ಸರ್ಕಲ್, ದೊಡ್ಡ ಉದ್ಯಾನವನ ಇತ್ಯಾದಿ ಸಾರ್ವಜನಿಕ ಸ್ಥಳ

೨. ಯುಗಾದಿ, ಶ್ರೀರಾಮನವಮಿ ಮತ್ತು ಹನುಮಾನ ಜಯಂತಿ, ಅದೇರೀತಿ ಇತರ ಹಬ್ಬ-ಉತ್ಸವದ ದಿನಗಳಲ್ಲಿ ನಿಯಮಿತವಾಗಿ ಹಾಕುವ ಗ್ರಂಥ ಪ್ರದರ್ಶನದ ಸ್ಥಳಗಳಲ್ಲಿ

೩. ಸಾಧಕರು, ಹಿತಚಿಂತಕರು, ಧರ್ಮಪ್ರೇಮಿ, ಅದೇರೀತಿ ಸಂಪರ್ಕದಲ್ಲಿರುವ ಹಿಂದುತ್ವನಿಷ್ಠ, ಅರ್ಪಣೆದಾರರು, ಅವರಲ್ಲಿ ಆಗುವಂತಹ ಶುಭಕಾರ್ಯ

೨ ಈ. ಧರ್ಮಪ್ರಸಾರದ ಅಂತರ್ಗತದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ನಿಯತಕಾಲಿಕೆಯ ವಿಷಯದಲ್ಲಿ ಜಾಗೃತಿಯನ್ನು ಮೂಡಿಸುವುದು

೧. ಧರ್ಮಪ್ರಸಾರದ ಅಂತರ್ಗತದಲ್ಲಿ ವಿವಿಧ ಉಪಕ್ರಮದಲ್ಲಿ (ಉದಾ. ಧರ್ಮಶಿಕ್ಷಣವರ್ಗ, ಧರ್ಮಪ್ರೇಮಿಗಳ ಸಭೆಯಲ್ಲಿ) ಸನಾತನ ಪ್ರಭಾತದ ಮಹತ್ವವನ್ನು ಹೇಳುವ ವಿಷಯವನ್ನು ಮಂಡಿಸಿ ಧರ್ಮಾಭಿಮಾನಿಗಳಿಗೆ ವಾಚಕರಾಗಲು ಪ್ರೇರೇಪಿಸುವುದು.

೨. ಹಿಂದೂ ಸಂಘಟನಾ ಮೇಳ, ಹಿಂದೂ ರಾಷ್ಟ್ರಜಾಗೃತಿ ಸಭೆ, ಅಧಿವೇಶನ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸನಾತನ ಪ್ರಭಾತದ ಮಹತ್ವವನ್ನು ತಿಳಿಸಿ ಉಪಸ್ಥಿತರಿರುವವರಿಗೆ ವಾಚಕರಾಗಲು ಪ್ರೇರೇಪಿಸುವುದು ಮತ್ತು ನಿಯತಕಾಲಿಕೆಯ ಕಕ್ಷೆಯನ್ನು ನಿರ್ಮಿಸಬೇಕು.

೨ ಉ. ಸಾಮಾಜಿಕ ಜಾಲತಾಣಗಳಲ್ಲಿ (‘ಸೋಶಿಯಲ್ ಮೀಡಿಯಾದ) ಮಾಧ್ಯಮದಿಂದ ಸನಾತನ ಪ್ರಭಾತದ ಮಹತ್ವವನ್ನು ಬಿಂಬಿಸುವುದು

www.SanatanPrabhat.org ನ ‘ಫೇಸ್‌ಬುಕ್, ಅದೇರೀತಿ ‘ಟ್ವಿಟರ್ ಈ ಅಕೌಂಟ್‌ಗಳ ಮಾಧ್ಯಮದಿಂದ ಸನಾತನ ಪ್ರಭಾತದ ನಿಯತಕಾಲಿಕೆಯ ಪ್ರಸಾರವನ್ನು ಮಾಡುವ ‘ಪೋಸ್ಟ್ ಶೇರ್ ಮಾಡಲಾಗುತ್ತದೆ. ಅದನ್ನು ‘ವಾಟ್ಸ್‌ಅಪ್, ‘ಫೇಸ್ ಬುಕ್ ಮತ್ತು ‘ಟ್ವಿಟರ್ಗಳ ಮೂಲಕ ಹೆಚ್ಚೆಚ್ಚು ಜನರಿಗೆ ‘ಶೇರ್ ಮಾಡಬೇಕು. ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ಪೋಸ್ಟ್‌ಅನ್ನು ಕಳುಹಿಸಿ ಅವರ ಸಂಬಂಧಪಟ್ಟ ಗುಂಪಿಗೆ, ಅದೇರೀತಿ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ತಲುಪಿಸುವ ಬಗ್ಗೆ ಕರೆಯನ್ನು ನೀಡಬೇಕು.

೩. ಜಿಜ್ಞಾಸುಗಳು ವಾಚಕರಾದ ಮೇಲೆ ‘ಅವರಿಗೆ ಸಂಚಿಕೆಯು ಸಮಯಕ್ಕೆ ಸರಿಯಾಗಿ ಆರಂಭಿಸಿ ಅವರಿಗೆ ಸಂಚಿಕೆಯು ವಿತರಣೆ ಆಗುತ್ತಿದೆಯೇ ಅದರ ಆಯೋಜನೆಯಾಗಿದೆಯೇ ? ಎಂಬುದರ ಬಗ್ಗೆ ಜವಾಬ್ದಾರ ಸಾಧಕರು ಖಚಿತಪಡಿಸಿಕೊಳ್ಳಿರಿ.

ಸಾಧಕರೇ, ಕಲಿಯುಗದಲ್ಲಿ ಭಗವದ್ಗೀತೆಯಂತಿರುವ ನಿಯತಕಾಲಿಕೆ ‘ಸನಾತನ ಪ್ರಭಾತಕ್ಕೆ ಸಂಬಂಧಪಟ್ಟ ಪ್ರತಿಯೊಂದು ಸೇವೆ ಪರಿಪೂರ್ಣ ರೀತಿಯಲ್ಲಿ ಮಾಡಿ ಗುರುಕೃಪೆಯನ್ನು ಸಂಪಾದನೆಯನ್ನು ಮಾಡಿರಿ !