ಎಲ್ಲ ವಿದ್ಯಾರ್ಥಿ ಸಾಧಕರಿಗೆ ಸನಾತನದ ಆಶ್ರಮದಲ್ಲಿರುವ ಅಮೂಲ್ಯ ಅವಕಾಶ

(ಸದ್ಗುರು) ಸೌ. ಬಿಂದಾ ಸಿಂಗಬಾಳ

ಬೇಸಿಗೆ ರಜೆಯ ಸಮಯದಲ್ಲಿ ಚೈತನ್ಯದಾಯಕ ಆಶ್ರಮ ಜೀವನವನ್ನು ಅನುಭವಿಸಿ ಮತ್ತು ಸಾಧನೆಯ ಬೀಜವನ್ನು ಅಂತರಂಗದಲ್ಲಿ ನೆಟ್ಟು ಹಿಂದೂ ರಾಷ್ಟ್ರಕ್ಕಾಗಿ ಸಮರ್ಥರಾಗಿ !

೧. ಭಾವೀ ಪೀಳಿಗೆಯ ಮೇಲೆ ಸಾಧನೆಯ ಸಂಸ್ಕಾರವಾಗಲು ಸಾಧಕ-ಪೋಷಕರು ತಮ್ಮ ಮಕ್ಕಳನ್ನು ರಜಾದಿನಗಳಲ್ಲಿ ಸನಾತನದ ಆಶ್ರಮಕ್ಕೆ ಕಳುಹಿಸಿ !

‘ಸಾಧಕ-ಪೋಷಕರೆ, ತಮ್ಮ ಮಕ್ಕಳೆಂದರೆ ಭಾವಿ ಹಿಂದೂರಾಷ್ಟ್ರದ ಪೀಳಿಗೆಯಾಗಿದೆ ! ಈ ಪೀಳಿಗೆಯನ್ನು ಸುಸಂಸ್ಕೃತವನ್ನಾಗಿ ಮಾಡುವುದು ಮತ್ತು ಅವರ ಮನಸ್ಸಿನ ಮೇಲೆ ಸಾಧನೆಯ ಬೀಜವನ್ನು ಬಿತ್ತುವುದು ಆವಶ್ಯಕವಾಗಿದೆ. ಮುಂದಿನ ಪೀಳಿಗೆಯನ್ನು ಈಗಿನಿಂದಲೇ ರೂಪಿಸಿದರೆ ಈ ಮಕ್ಕಳು ಹಿಂದೂರಾಷ್ಟ್ರದ ಪ್ರಜ್ಞಾವಂತ ನಾಗರಿಕರಾಗಬಹುದು. ಸ್ವಲ್ಪ ದಿನಗಳಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಬೇಸಿಗೆಯ ನಿಮಿತ್ತ ರಜೆ ಆರಂಭವಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿ ಸಾಧಕರು ರಾಮನಾಥಿ, ದೇವದ್ ಅಥವಾ ಮಂಗಳೂರು ಮುಂತಾದ ಆಶ್ರಮಗಳಲ್ಲಿದ್ದು ಆಶ್ರಮ ಜೀವನವನ್ನು ಅನುಭವಿಸಲು ಒಳ್ಳೆಯ ಅವಕಾಶವಿದೆ. ೧೩ ವರ್ಷಕ್ಕಿಂತ ಮೇಲ್ಪಟ್ಟ ತಮ್ಮ ಮಕ್ಕಳನ್ನು ಆಶ್ರಮ ಜೀವನವನ್ನು ಅನುಭವಿಸಲು ಹತ್ತಿರದ ಆಶ್ರಮಕ್ಕೆ ಕಳುಹಿಸಬಹುದು. ಆಶ್ರಮದಲ್ಲಿನ ವಿವಿಧ ಪ್ರಕಾರದ ಸೇವೆಯಲ್ಲಿ ಸಹಭಾಗಿಯಾಗುವುದರಿಂದ ಅವರಿಗೆ ಅನೇಕ ವಿಷಯಗಳನ್ನು ಕಲಿಯಲು ಸಾಧ್ಯವಾಗುವುದು ಹಾಗೂ ಅವರಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಒಲವು ನಿರ್ಮಾಣವಾಗುವುದು.

೨. ಆಶ್ರಮದಲ್ಲಿ ಉಪಲಬ್ಧವಿರುವ ಸೇವೆ

೨ ಅ. ಸನಾತನ-ನಿರ್ಮಿತ ಗ್ರಂಥಗಳಿಗೆ ಸಂಬಂಧಿಸಿದ ಸೇವೆ : ಕನ್ನಡ / ಮರಾಠಿ ಭಾಷೆಯಲ್ಲಿ ಬೆರಳಚ್ಚು ಮಾಡುವುದು, ಅನುವಾದ ಮತ್ತು ಭಾಷಾಶುದ್ಧಿ ಮಾಡುವುದು, ಗ್ರಂಥ ಸಂರಚನೆ ಮಾಡುವುದು, ಗ್ರಂಥಕ್ಕಾಗಿ ಮುಖಪುಟ ತಯಾರಿಸಲು ಗಣಕೀಯ ಛಾಯಾಚಿತ್ರಗಳನ್ನು ಸರಿಪಡಿಸುವುದು, ರೇಖಾಚಿತ್ರ (ಔಟ್‌ಲೈನ್ಸ್) ತಯಾರಿಸುವುದು, ಸಾತ್ತ್ವಿಕ ಕಲಾಕೃತಿ ಸಿದ್ಧಗೊಳಿಸುವುದು

೨ ಆ. ನಿಯತಕಾಲಿಕೆಗಳ ವಿಷಯದಲ್ಲಿ : ವಾರ್ತೆಗಳ ಸಂಕಲನ ಮಾಡುವುದು, ಜಾಹೀರಾತುಗಳ ಸಂರಚನೆ ಮಾಡುವುದು

೨ ಇ. ಧ್ವನಿಚಿತ್ರೀಕರಣದ ವಿಷಯದಲ್ಲಿ : ಚಿತ್ರೀಕರಣ ಮಾಡುವುದು, ಛಾಯಾಚಿತ್ರ ತೆಗೆಯುವುದು, ಧ್ವನಿಮುದ್ರಣ (ರೆಕಾರ್ಡಿಂಗ್) ಮಾಡುವುದು ಮತ್ತು ಚಿತ್ರೀಕರಣದ ಸಂಕಲನ ಮಾಡುವುದು, ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಮಾಡುವುದು ಮತ್ತು ಸ್ಕ್ಯಾನಿಂಗ್ ಮಾಡುವುದು

೨ ಈ. ವಸ್ತುಸಂಗ್ರಹ ಮಾಡುವ ವಿಷಯದಲ್ಲಿ : ಸಂಗ್ರಹ ಮಾಡಲು ಯೋಗ್ಯವಿರುವ ವಸ್ತುಗಳ ನೋಂದಣಿ ಹಾಗೂ ಪ್ಯಾಕಿಂಗ್ ಮಾಡುವುದು

೨ ಉ. ಸನಾತನದ ಉತ್ಪಾದನೆಗಳ ವಿಷಯದಲ್ಲಿ : ಉತ್ಪಾದನೆಗಳನ್ನು ಎಣಿಸುವುದು ಮತ್ತು ಪ್ಯಾಕಿಂಗ್ ಮಾಡುವುದು, ಇದರೊಂದಿಗೆ ಗಣಕಯಂತ್ರ-ದುರಸ್ತಿ, ಗ್ರಂಥಾಲಯ, ಅಡುಗೆಮನೆ, ಕಟ್ಟಡ ಕಾಮಗಾರಿ, ವ್ಯವಸ್ಥಾಪನೆ ಮುಂತಾದವುಗಳಿಗೆ ಸಂಬಂಧಿಸಿದ ಸೇವೆಯು ಉಪಲಬ್ಧವಿದೆ.

ವಿದ್ಯಾರ್ಥಿ-ಸಾಧಕರ ಆಸಕ್ತಿ, ಕೌಶಲ್ಯ, ಸೇವೆ ಕಲಿಯುವ ಕ್ಷಮತೆ ಮತ್ತು ಮನೆಗೆ ಹೋದನಂತರ ಸೇವೆಗಾಗಿ ನೀಡಬಹುದಾದ ಸಮಯ ಈ ಅಂಶಗಳನ್ನು ವಿಚಾರ ಮಾಡಿ ಅವರಿಗೆ ಸೇವೆ ಕಲಿಸಲಾಗುವುದು. ಈ ಸೇವೆ ಕಲಿಯಲು ಎಷ್ಟು ದಿನ ಆಶ್ರಮದಲ್ಲಿರುಲು ಸಾಧ್ಯವಿದೆ, ಅಷ್ಟು ದಿನ ಇರಬಹುದು.

ಮೇಲಿನ ಸೇವೆಯ ಮೂಲಕ ಧರ್ಮಕಾರ್ಯದಲ್ಲಿ ಅಳಿಲು ಸೇವೆ ಮಾಡಲು ಇಚ್ಛಿಸುವ ವಿದ್ಯಾರ್ಥಿ-ಸಾಧಕರು ಜಿಲ್ಲಾಸೇವಕರ ಮಾಧ್ಯಮದಿಂದ ಆಶ್ರಮಸೇವಕರನ್ನು ಸಂಪರ್ಕಿಸಬೇಕು.

ಇತರ ಮಹತ್ವದ ಸೂಚನೆ

೧. ‘ಆಶ್ರಮದಲ್ಲಿದ್ದು ವಿದ್ಯಾರ್ಥಿ-ಸಾಧಕರ ದುರಭ್ಯಾಸ, ಅವರ ಸ್ವಭಾವದೋಷ ಕಡಿಮೆಯಾಗಿ ಅವರಲ್ಲಿ ಸಾಧಕತ್ವ ನಿರ್ಮಾಣವಾಗುವುದು, ಎಂಬ ವಿಚಾರದಿಂದ ಸಾಧನೆ, ಸೇವೆ ಮಾಡಲು ಇಚ್ಛೆ ಇಲ್ಲದವರನ್ನು ಆಶ್ರಮಕ್ಕೆ ಕಳುಹಿಸಬಾರದು.

೨. ಆಶ್ರಮದಲ್ಲಿರಲು ಬರುವ ವಿದ್ಯಾರ್ಥಿ-ಸಾಧಕರು ತಮ್ಮದೇ ಹಾಸಲು ಮತ್ತು ಹೊದಿಯಲು ಹಾಗೆಯೇ ಯಾವುದಾದರು ಔಷಧಿ ತೆಗೆದುಕೊಳ್ಳುತ್ತಿದ್ದರೆ ಅದನ್ನು ಜೊತೆಯಲ್ಲಿ ತರಬೇಕು.

೩. ರಜೆಯ ಕಾಲಾವಧಿಯಲ್ಲಿ ವಾಹನಗಳಲ್ಲಿ ಪ್ರವಾಸಿಗರು ತುಂಬಿರುವುದರಿಂದ ವಿದ್ಯಾರ್ಥಿ ಸಾಧಕರನ್ನು ಆಶ್ರಮಕ್ಕೆ ಕಳುಹಿಸಲು ವಾಹನದ ಟಿಕೇಟ್ ಕಾಯ್ದಿರಿಸುವಾಗ ಅವರು ಹಿಂತಿರುಗುವ ಟಿಕೇಟನ್ನು ಸಹ ಕಾಯ್ದಿರಿಸಿ ಕಳುಹಿಸಬೇಕು. ಇಲ್ಲವಾದರೆ ಕೊನೆಯ ಸಮಯದಲ್ಲಿ ಟಿಕೇಟ್ ದೊರೆಯಲು ಅಡಚಣೆಯಾಗಬಹುದು.

೪. ಆಶ್ರಮಕ್ಕೆ ಬರುವ ವಿಷಯದಲ್ಲಿ ಆಶ್ರಮದಿಂದ ನಿರ್ಣಯ ಬಂದ ನಂತರವೇ ಟೀಕೇಟ್ ಕಾಯ್ದಿರಿಸಬೇಕು.

ಜಿಲ್ಲಾಸೇವಕರೇ, ವಿದ್ಯಾರ್ಥಿ-ಸಾಧಕರನ್ನು ಆಶ್ರಮಕ್ಕೆ ಕಳುಹಿಸುವ ಮೊದಲು ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿರಿ !

ಆಶ್ರಮಜೀವನದ, ಕಲಿಸಿದ ಸೇವೆಯ ಲಾಭ ಪಡೆದು ಸೇವೆಗಾಗಿ ಸಮಯ ನೀಡಬಹುದಾದ ವಿದ್ಯಾರ್ಥಿ ಸಾಧಕರನ್ನೇ ಆರಿಸಿ ಜಿಲ್ಲಾಸೇವಕರು ಅವರನ್ನು ಆಶ್ರಮಕ್ಕೆ ಕಳುಹಿಸುವ ಆಯೋಜನೆ ಮಾಡಬೇಕು. ಆ ಸಾಧಕರು ಆಶ್ರಮಕ್ಕೆ ಬರುವುದು ನಿಶ್ಚಿತವಾದ ನಂತರ ಇತರ ಮಾಹಿತಿಗಳೊಂದಿಗೆ ಅವರ ಗುಣ-ಸ್ವಭಾವದೋಷಗಳನ್ನು ಸಹ ತಿಳಿಸಬೇಕು. ಇದರಿಂದ ಸ್ವಭಾವದೋಷಗಳ ಮೇಲೆ ಹೇಗೆ ಪ್ರಯತ್ನ ಮಾಡಬೇಕು, ಈ ಬಗ್ಗೆ ಮಾರ್ಗದರ್ಶನ ಮಾಡಿ ಅವರ ಸಾಧನೆಯಲ್ಲಿ ಸಹಾಯ ಮಾಡಲು ಸಾಧ್ಯವಾಗುವುದು. – (ಸದ್ಗುರು) ಸೌ. ಬಿಂಸಾ ಸಿಂಗಬಾಳ, ಸನಾತನ ಆಶ್ರಮ, ಗೋವಾ. (೧.೩.೨೦೧೯)

Kannada Weekly | Offline reading | PDF