ಜಿಲ್ಲಾಸೇವಕರು, ಸಮಿತಿಸೇವಕರು ಹಾಗೂ ಪ್ರಸಾರಸೇವಕರಿಗೆ ಸೂಚನೆ

(ಸದ್ಗುರು) ಸೌ. ಬಿಂದಾ ಸಿಂಗಬಾಳ

ಹಿಂದುತ್ವನಿಷ್ಠರು ಅಥವಾ ಧರ್ಮಪ್ರೇಮಿಗಳ ಮುಖದಲ್ಲಿ ಆವರಣ ಕಂಡುಬಂದಲ್ಲಿ ಅವರಿಗೆ ಆಧ್ಯಾತ್ಮಿಕ ಉಪಾಯಗಳ ಕುರಿತು ಮಾಹಿತಿಯನ್ನು ತಿಳಿಸಿರಿ !

‘ಅನೇಕ ಸಲ ಕಾರ್ಯಾಗಾರ, ಅಧಿವೇಶನ ಅಥವಾ ಆಶ್ರಮ ದರ್ಶನದ ನಿಮಿತ್ತ ಸಮಾಜದ ಹಿಂದುತ್ವನಿಷ್ಠರು, ಧರ್ಮಪ್ರೇಮಿಗಳು ಹಾಗೂ ಹಿತಚಿಂತಕರು ರಾಮನಾಥಿ ಆಶ್ರಮಕ್ಕೆ ಬರುತ್ತಾರೆ. ಅವರಲ್ಲಿ ಕೆಲವರನ್ನು ನೋಡಿದಾಗ ಅವರ ಮುಖದಲ್ಲಿ ಆವರಣವಿರುವುದು ಅರಿವಾಗುತ್ತದೆ ಮತ್ತು ಅದರಿಂದ ಅವರ ಮುಖ ಸ್ವಲ್ಪ ಅಸ್ಪಷ್ಟವಾಗಿ ಕಾಣಿಸುತ್ತದೆ. ಆವರಣವಿರುವುದರಿಂದ ಅವರಿಗೆ ಕಾರ್ಯಾಗಾರ ಹಾಗೂ ಅಧಿವೇಶನದ ವಿಷಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ‘ಈ ಸಂದರ್ಭದಲ್ಲಿ ಆಧ್ಯಾತ್ಮಿಕ ಉಪಾಯವನ್ನು ಮಾಡಬೇಕು ಎಂಬ ಕಲ್ಪನೆಯೂ ಅವರಿಗೆ ಇರುವುದಿಲ್ಲ.

ಸಾಧಕರು ವೈಯಕ್ತಿಕ ಸಂಪರ್ಕಕ್ಕಾಗಿ ಹಿಂದುತ್ವನಿಷ್ಠರ ಅಥವಾ ಧರ್ಮಪ್ರೇಮಿಗಳ ಬಳಿಗೆ ಹೋಗುತ್ತಾರೆ. ಆಗ ಸಾಧಕರಿಗೆ ಅವರ ಮುಖದಲ್ಲಿ ಆವರಣ ಬಂದಿರುವುದು ಅರಿವಾದರೆ ಆ ಕುರಿತು ಸಂಬಂಧಿತರಿಗೆ ಕಲ್ಪನೆಯನ್ನು ನೀಡಬೇಕು. ಆವರಣದಿಂದಾಗುವ ಹಾನಿಯನ್ನು ತಿಳಿಸಿ, ಅದನ್ನು ಕಡಿಮೆ ಮಾಡಲು ಮಾಡಬೇಕಾದ ಆಧ್ಯಾತ್ಮಿಕ ಉಪಾಯಗಳನ್ನು ಹಾಗೂ ಸಾಧನೆಯನ್ನು ತಿಳಿಸಬೇಕು, ಅಲ್ಲದೇ ‘ಅವರು ಉಪಾಯಗಳನ್ನು ಮಾಡುತ್ತಿರುವ ಬಗ್ಗೆ ಆಗಾಗ ವರದಿಯನ್ನು ತೆಗೆದುಕೊಳ್ಳಬೇಕು. – (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.(೩೦.೧.೨೦೧೯)