ಆಧ್ಯಾತ್ಮಿಕ ಉಪಾಯಗಳಿಗಾಗಿ ದೇವತೆಗಳ ಚಿತ್ರಗಳನ್ನು (ಉಪಾಯದ-ಚಿತ್ರಗಳನ್ನು) ಶರೀರದ ಮೇಲೆ ಹಾಕಿಕೊಳ್ಳದೇ ನಿಮ್ಮ ಸಾಧನೆಯ ಹಾನಿಯನ್ನು ಮಾಡಿಕೊಳ್ಳಬೇಡಿರಿ !

(ಪೂ.) ಶ್ರೀ. ಸಂದೀಪ ಆಳಶಿ

೧. ಸಾಧಕರು ಉಪಾಯದ-ಚಿತ್ರಗಳನ್ನು ಹಾಕಿಕೊಳ್ಳದಿರುವುದರಿಂದ ಅವರ ತೊಂದರೆಯು ಹೆಚ್ಚಾಗುವುದರೊಂದಿಗೆ ಹೆಚ್ಚಾದ ತೊಂದರೆಯಿಂದಾಗಿ ಅವರಿಗೆ ಸಾಧನೆ ಅಥವಾ ಸೇವೆ ಇವುಗಳಲ್ಲಿನ ಚೈತನ್ಯವನ್ನೂ ಸಂಪೂರ್ಣವಾಗಿ ಗ್ರಹಣ ಮಾಡಲು ಆಗುವುದಿಲ್ಲ. ಪರಾತ್ಪರ ಗುರು ಡಾಕ್ಟರರಿಗೆ ‘ಸಾಧಕರು ತಮ್ಮ ಪ್ರಾಣಕ್ಕಿಂತಲೂ ಪ್ರಿಯವಿರುವುದರಿಂದ ಸಾಧಕರು ಹೇಗೆ ವರ್ತಿಸಿದರೂ, ಪರಾತ್ಪರ ಗುರು ಡಾಕ್ಟರರು ಸಾಧಕರನ್ನು ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆ ಮಾಡಲು ಸದಾ ಸಿದ್ಧರಿರುತ್ತಾರೆ. ಆದರೆ ಸಾಧಕರು ಉಪಾಯದ-ಚಿತ್ರಗಳನ್ನು ಹಾಕಿಕೊಳ್ಳದಿರುವುದರಿಂದ ಮತ್ತು ಸತತ ನಾಮಜಪ ಮಾಡದಿರುವುದರಿಂದ ಸಾಧಕರಿಗಾಗುವ ತೊಂದರೆಗಳಿಂದ ಅವರ ರಕ್ಷಣೆ ಮಾಡಲು ಆ ತೊಂದರೆಯನ್ನು ಪರೋಕ್ಷವಾಗಿ ಪರಾತ್ಪರ ಗುರು ಡಾಕ್ಟರರಿಗೆ ಸಹಿಸಬೇಕಾಗುತ್ತದೆ. ಉಪಾಯದ-ಚಿತ್ರಗಳನ್ನು ಹಾಕಿಕೊಳ್ಳದಿರುವ ಸಾಧಕರು ಒಂದು ರೀತಿಯಲ್ಲಿ ಪರಾತ್ಪರ ಗುರು ಡಾಕ್ಟರರ ಆಜ್ಞಾಪಾಲನೆಯನ್ನೇ ಮಾಡುವುದಿಲ್ಲ. ಸಾಧಕರು ಇಷ್ಟು ಕೃತಘ್ನರಾಗಬೇಕು ಮತ್ತು ಪಾಪವನ್ನು ಮಾಡಬೇಕು ? ‘ನನಗೆ ಕೆಟ್ಟ ಶಕ್ತಿಗಳ ತೊಂದರೆಯಿಲ್ಲ; ಹಾಗಾದರೆ ನಾನು ಉಪಾಯದ-ಚಿತ್ರಗಳನ್ನು ಏಕೆ ಹಾಕಿಕೊಳ್ಳಬೇಕು ?, ಎಂಬ ಭ್ರಮೆಯಲ್ಲಿ ಯಾರೂ ಇರಬೇಡಿರಿ; ಏಕೆಂದರೆ ಸದ್ಯದ ಆಪತ್ಕಾಲದಲ್ಲಿ ‘ತೊಂದರೆ ಇಲ್ಲದವರು ಯಾರೂ ಇರಲು ಸಾಧ್ಯವಿಲ್ಲ ! ‘ಕೆಟ್ಟ ಶಕ್ತಿಗಳ ತೊಂದರೆಗಳಿಂದಾಗಿ ಕೆಲವು ಸಾಧಕರ ಆಧ್ಯಾತ್ಮಿಕ ಮಟ್ಟ ಕಡಿಮೆಯಾಯಿತು ಎಂಬ ಉದಾಹರಣೆಗಳೂ ಇವೆ.

೨. ಉಪಾಯದ-ಚಿತ್ರಗಳ ಶುದ್ಧಿ ಮಾಡಿ ಅವುಗಳನ್ನು ಹಾಕಿಕೊಳ್ಳಲು ೨ ನಿಮಿಷಗಳಿಗಿಂತಲೂ ಹೆಚ್ಚು ಸಮಯ ತಗಲುವುದಿಲ್ಲ. ಸಾಧಕರಲ್ಲಿರುವ ಆಲಸ್ಯ, ಗಾಂಭೀರ್ಯತೆಯ ಅಭಾವ, ಆಜ್ಞಾಪಾಲನೆ ಮಾಡದಿರುವುದು ಮನಸ್ಸಿನಂತೆ ಮಾಡುವುದು ಇಂತಹ ಸ್ವಭಾವದೋಷಗಳಿಂದಾಗಿ ಅವರು ಉಪಾಯದ-ಚಿತ್ರಗಳನ್ನು ಹಾಕಿಕೊಳ್ಳಲು ತಪ್ಪಿಸಿಕೊಳ್ಳುತ್ತಾರೆ.

೩. ಕೆಲವೊಮ್ಮೆ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಮನಸ್ಸಿನಲ್ಲಿ ಕೆಟ್ಟ ಶಕ್ತಿಗಳು ‘ಉಪಾಯದ-ಚಿತ್ರಗಳನ್ನು ಹಾಕಿಕೊಳ್ಳಬಾರದು, ಎಂಬ ವಿಚಾರ ಹಾಕುತ್ತವೆ. ಆದುದರಿಂದ ಇಂತಹ ಸಾಧಕರು ಉಪಾಯದ-ಚಿತ್ರಗಳನ್ನು ಹಾಕಿಕೊಳ್ಳಲು ತಪ್ಪಿಸುತ್ತಾರೆ. ಇಂತಹ ಸಾಧಕರಿಗೆ ಇತರ ಸಾಧಕರು ಉಪಾಯದ-ಚಿತ್ರಗಳನ್ನು ಹಾಕಿಕೊಳ್ಳಲು ನೆನಪಿಸಬೇಕು.

೪. ಕೆಲವು ಕಾರಣಗಳಿಂದ (ಉದಾ. ಅಧ್ಯಾತ್ಮ ಪ್ರಸಾರಕ್ಕಾಗಿ ಮನೆಯ ಹೊರಗೆ ಹೋಗುವಾಗ) ಶರೀರದ ಎದುರು ಭಾಗದಲ್ಲಿನ ಚಿತ್ರಗಳನ್ನು ಹಾಕಿಕೊಳ್ಳಲು ಸಾಧ್ಯವಾಗದಿದ್ದರೆ, ತಮ್ಮ ಛಾಯಾಚಿತ್ರದ ಮೇಲೆಯಾದರೂ ಅದನ್ನು ಹಾಕಿಕೊಳ್ಳಬೇಕು. ಆದರೆ ಮನೆಗೆ ಬಂದ ನಂತರ ‘ಛಾಯಾಚಿತ್ರದ ಮೇಲೆ ಉಪಾಯದ-ಚಿತ್ರಗಳನ್ನು ಹಾಕಿರುವುದರಿಂದ ಈಗ ಪ್ರತ್ಯಕ್ಷ ಶರೀರದ ಮೇಲೆ ಹಾಕಿಕೊಳ್ಳುವುದು ಬೇಡ, ಎಂಬ ಮಾನಸಿಕತೆಯನ್ನು ಇಟ್ಟುಕೊಳ್ಳಬೇಡಿರಿ. ಇದಕ್ಕೆ ಕಾರಣವೇನೆಂದರೆ ಛಾಯಾಚಿತ್ರಕ್ಕಿಂತ ಪ್ರತ್ಯಕ್ಷ ಶರೀರದ ಮೇಲೆ ಉಪಾಯದ-ಚಿತ್ರಗಳನ್ನು ಹಾಕಿಕೊಳ್ಳುವುದು ಹೆಚ್ಚು ಲಾಭದಾಯಕವಾಗಿದೆ.

೫. ಜವಾಬ್ದಾರ ಸಾಧಕರು ‘ಎಲ್ಲ ಸಾಧಕರಿಂದ ಮೇಲಿನ ಸೂಚನೆಗಳ ಪಾಲನೆಯಾಗುತ್ತಿದೆಯಲ್ಲವೇ ?, ಎಂದು ನಿಯಮಿತವಾಗಿ ವರದಿ ತೆಗೆದುಕೊಳ್ಳಬೇಕು. ಸಾಧಕರಿಗೆ ಹೇಳಿಯೂ ಅವರು ಸೂಚನೆಯ ಪಾಲನೆ ಮಾಡದಿದ್ದರೆ, ಅವರಿಗೆ ಪ್ರಾಯಶ್ಚಿತ್ತ ತೆಗೆದುಕೊಳ್ಳಲು ಹೇಳಬೇಕು.

‘ಎಲ್ಲ ಸಾಧಕರಲ್ಲಿ ಉಪಾಯದ-ಚಿತ್ರಗಳನ್ನು ಹಾಕಿಕೊಳ್ಳುವ ಗಾಂಭೀರ್ಯತೆ ಹೆಚ್ಚಾಗಲಿ, ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ ! – (ಪೂ.) ಶ್ರೀ. ಸಂದೀಪ ಆಳಶಿ (೨೪.೨.೨೦೧೯)

Kannada Weekly | Offline reading | PDF