ಸಾಧಕರೇ, ಸದ್ಯ ಆಗುತ್ತಿರುವ ತೊಂದರೆಗಳ ಬಗ್ಗೆಯೂ ಕೃತಜ್ಞತೆಯನ್ನು ಸಲ್ಲಿಸಿ !

(ಪೂ.) ಶ್ರೀ. ಸಂದೀಪ ಆಳಶಿ

‘ಸದ್ಯ ಕೆಟ್ಟ ಶಕ್ತಿಗಳ ತೊಂದರೆಯ ತೀವ್ರತೆಯು ತುಂಬಾ ಹೆಚ್ಚಾಗಿದೆ. ಆದುದರಿಂದ ಸಾಧಕರಿಗೆ ವಿವಿಧ ರೀತಿಯ ತೊಂದರೆಗಳು ಪುನಃ ಪುನಃ ಆಗುತ್ತಿವೆ. ಆರಂಭದಲ್ಲಿ ಈ ತೊಂದರೆಗಳಿಂದಾಗಿ ಬೇಸರವಾಗುತ್ತದೆ, ಸೇವೆ ಮತ್ತು ಸಾಧನೆಗಳಲ್ಲಿ ಉತ್ಸಾಹ ಕಡಿಮೆಯಾಗುತ್ತದೆ, ಮನಸ್ಸಿಗೆ ದುಃಖವಾಗುತ್ತದೆ ಮತ್ತು ಮನಸ್ಸಿಗೆ ನಕಾರಾತ್ಮಕ ಅಥವಾ ನಿರಾಶೆ ಬರುತ್ತದೆ. ಎಂದಾದರೂ ಒಮ್ಮೆ ತೊಂದರೆಯಾದರೆ ಮನಸ್ಸಿಗೆ ತಕ್ಷಣ ದುಃಖವಾಗುತ್ತದೆ; ಆದರೆ ಅದೇ ಅದೇ ತೊಂದರೆ ಪುನಃ ಪುನಃ ಆಗತೊಡಗಿದರೆ, ಮನಸ್ಸಿಗೆ ನಿಧಾನವಾಗಿ ಆ ತೊಂದರೆಯ ಅಭ್ಯಾಸವಾಗುತ್ತದೆ. ಆದುದರಿಂದ ಆ ತೊಂದರೆಗಳಿಂದಾಗಿ ಮನಸ್ಸಿಗಾಗುವ ದುಃಖದ ಸಂವೇದನೆಯು ನಿಧಾನವಾಗಿ ಕಡಿಮೆಯಾಗುತ್ತದೆ ಅಥವಾ ನಾಶವಾಗುತ್ತದೆ. ಸ್ವಲ್ಪದರಲ್ಲಿ ಮನಸ್ಸು ತೊಂದರೆಯೆಡೆಗೆ ಸಾಕ್ಷಿಭಾವದಿಂದ ನೋಡಲು ಕಲಿಯುತ್ತದೆ. ಸಾಧನೆಯಲ್ಲಿ ಸಾಕ್ಷಿಭಾವದ ಹಂತ ಶೇ. ೮೦ ರಷ್ಟು ಆಧ್ಯಾತ್ಮಿಕ ಮಟ್ಟದ ತಲುಪಿದಾಗ ಸಾಧ್ಯವಾಗುತ್ತದೆ. ತೊಂದರೆಯಿರುವ ಸಾಧಕರಲ್ಲಿ ಮಾತ್ರ ಕಡಿಮೆ ಮಟ್ಟದಲ್ಲಿಯೇ ‘ತೊಂದರೆಗಳೆಡೆಗೆ ಸಾಕ್ಷೀಭಾವದಿಂದ ನೋಡುವ ವೃತ್ತಿ’ ನಿರ್ಮಾಣವಾಗುವುದರಿಂದ ಮುಂದೆ ಅವರಿಗೆ ಸಾಧನೆಯಲ್ಲಿ ಸಾಕ್ಷಿಭಾವದ ಹಂತವು ಬೇಗನೆ ತಲುಪಲು ಸುಲಭವಾಗುವುದು. ಇದಕ್ಕಾಗಿ ಸಾಧಕರು ತೊಂದರೆಯೆದುರು ದುರ್ಬಲರಾಗದೇ ತೊಂದರೆಗಳ ಬಗ್ಗೆ ಕೃತಜ್ಞತೆಯನ್ನೇ ಬೆಳೆಸಿಕೊಳ್ಳಬೇಕು. ಸಾಧಕರ ಮೇಲೆ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆ ಇರುವುದರಿಂದ ಸಾಧಕರಿಗೆ ತೊಂದರೆಗಳ ಹೆಚ್ಚು ಬಿಸಿ ತಾಗುವುದಿಲ್ಲ ಮತ್ತು ತೊಂದರೆಯನ್ನು ಸಹಿಸಿಕೊಳ್ಳಲು ಸಹಾಯವೂ ಆಗುತ್ತದೆ. ಇದಕ್ಕಾಗಿ ಸಾಧಕರು ಪರಾತ್ಪರ ಗುರು ಡಾಕ್ಟರರ ಬಗ್ಗೆ ಅನನ್ಯಭಾವದಿಂದ ಕೃತಜ್ಞರಾಗಿರಬೇಕು. ೨೦೧೯ ರಿಂದ ತೊಂದರೆಗಳ ತೀವ್ರತೆ ಕಡಿಮೆಯಾಗಲಿದ್ದು ತೊಂದರೆಗಳ ಪ್ರಮಾಣವೂ ಕಡಿಮೆಯಾಗಲು ಪ್ರಾರಂಭವಾಗಲಿದೆ. ಆದುದರಿಂದ ‘ಮುಂದೆ ಖಂಡಿತವಾಗಿ ಶೀಘ್ರವಾಗಿ ಆಧ್ಯಾತ್ಮಿಕ ಪ್ರಗತಿ ಆಗುವುದು, ಎಂಬ ದೃಢಶ್ರದ್ಧೆಯನ್ನಿಟ್ಟು ಹೆಚ್ಚೆಚ್ಚು ಆನಂದದಿಂದ ಸಾಧನೆ ಯನ್ನು ಮಾಡಬೇಕು.’ – (ಪೂ.) ಶ್ರೀ. ಸಂದೀಪ ಆಳಶಿ (೨.೧೧.೨೦೧೮)