ಬರಗಾಲದ ಕಾರಣ ನೀಡಿ ಹಂಪಿ ಉತ್ಸವವನ್ನು ರದ್ದುಗೊಳಿಸುವ ರಾಜ್ಯದ ಹಿಂದೂದ್ವೇಷಿ ಕಾಂಗ್ರೆಸ್ ಮತ್ತು ಜನತಾ ದಳ (ಜಾ) ಸರಕಾರವು ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸುತ್ತದೆ, ಎಂಬುದನ್ನು ಗಮನದಲ್ಲಿಡಿ !

ಬರಗಾಲದ ನೆಪ ಹೇಳಿ ರಾಜ್ಯಸರಕಾರದಿಂದ ಹಂಪಿ ಉತ್ಸವ ರದ್ದು !

ಬೆಂಗಳೂರು – ಕೇವಲ ಓಲೈಕೆಗಾಗಿ ಮತ್ತು ಪ್ರತಿಷ್ಠೆಗಾಗಿ ಟಿಪ್ಪು ಸುಲ್ತಾನನ ಜಯಂತಿಯನ್ನು ಉತ್ಸಾಹದಿಂದ ಆಚರಿಸಿದ್ದ ರಾಜ್ಯ ಸರಕಾರವು ಹಂಪಿ ಉತ್ಸವವನ್ನು ಮಾತ್ರ ಆಚರಿಸಲು ನಿರುತ್ಸಾಹ ತೋರಿದೆ. ಬರ ಹಿನ್ನೆಲೆಯಲ್ಲಿ ಈ ಬಾರಿ ಹಂಪಿ ಉತ್ಸವ ಆಚರಿಸದಿರಲು ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿದ, ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಇವರು, “ರಾಜ್ಯದ ೧೦೦ ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದೆ; ಹಾಗಾಗಿ ಹಂಪಿ ಉತ್ಸವವನ್ನು ಆಚರಿಸದಿರಲು ಸರಕಾರ ನಿರ್ಧರಿಸಿದೆ ಎಂದು ಹೇಳಿದರು. ಈ ಉತ್ಸವದಲ್ಲಿ ಕ್ರೀಡೆ, ಸಾಹಸ ಚಟುವಟಿಕೆಗಳು, ವಿವಿಧ ಪಾರಂಪರಿಕ ವಸ್ತುಗಳ ಪ್ರದರ್ಶನ, ಕಲೆ-ಸಂಸ್ಕೃತಿ ಪ್ರದರ್ಶನ, ಮಹಿಳಾ ಕೇಂದ್ರಿತ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಉತ್ಸವದಲ್ಲಿ ಇತರ ರಾಜ್ಯಗಳಲ್ಲಿನ ಕಲಾವಿದರು ಸಹ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಸರಕಾರದ ನಿರ್ಣಯದಿಂದಾಗಿ ಅವರಿಗೂ ನಿರಾಶೆಯಾಗಿದೆ.