‘ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರ ಭಾಷಣ ಸಂವಿಧಾನ ವಿರೋಧಿ(ಯಂತೆ) !- ಎಸ್.ಎಮ್. ಪಾಟೀಲ ಗಣಿಹಾರ, ಮುಖ್ಯಸ್ಥರು, ಅಹಿಂದ ಸಂಘಟನೆ.

ಶ್ರೀ. ಗುರುಪ್ರಸಾದ ಗೌಡ

೧೫ ನಿಮಿಷಗಳಲ್ಲಿ ೭೫ ಕೋಟಿ ಹಿಂದೂಗಳನ್ನು ಮುಗಿಸುವ ಮಾತುಗಳನ್ನಾಡುವ ಅಕ್ಬರುದ್ದೀನ್ ಓವೈಸಿಯ ಆಕ್ಷೇಪಾರ್ಹ ಮತ್ತು ಸಂವಿಧಾನ ವಿರೋಧಿ ಹೇಳಿಕೆ ಬಗ್ಗೆ ಇವರಂತಹವರು ಎಂದಾದರೂ ಧ್ವನಿ ಎತ್ತಿದ್ದಾರೆಯೇ ?

ಹಿಂದುತ್ವನಿಷ್ಠರ ಭಾಷಣಗಳಿಗೆ ಇತರ ಪಂಥೀಯರಲ್ಲ ತಥಾಕಥಿತ ಹಿಂದೂಗಳೇ ಆಕ್ಷೇಪವೆತ್ತುತ್ತಾರೆ !

ವಿಜಯಪುರ – ಹಿಂದೂ ಜನಜಾಗೃತಿ ಸಮಿತಿಯವತಿಯಿಂದ ಇಲ್ಲಿ ಇತ್ತೀಚಿಗೆ ನಡೆದ ‘ಪ್ರಾಂತೀಯ ಹಿಂದೂ ಅಧಿವೇಶನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ‘ಭಾರತವನ್ನು ಇಸ್ಲಾಮೀಕರಣ ಮಾಡುವ ಪ್ರಯತ್ನಗಳಾಗುತ್ತಿವೆ, ಎಂಬ ಹೇಳಿಕೆಯನ್ನು ನೀಡಿದ್ದರು. ಅವರ ಈ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ, ಎಂದು ‘ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಇವರು ನುಡಿಮುತ್ತು ಉದುರಿಸಿದ್ದಾರೆ.(ಜನಗಣತಿಯ ಅಂಕಿಅಂಶಗಳನ್ನು ನೋಡಿದರೆ, ಹಿಂದೂಗಳ ಜನರ ಸಂಖ್ಯೆ ಕಡಿಮೆಯಾಗಿ ಮುಸಲ್ಮಾನರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್‌ನಂತಹ ಘಟನೆಗಳು ಹೆಚ್ಚಾಗುತ್ತಿವೆ. ಕೈರಾನಾರದಂತಹ ಸ್ಥಳಗಳಲ್ಲಿ ಮತಾಂಧರ ಭಯದಿಂದ ಹಿಂದೂಗಳು ಪಲಾಯನರಾಗಬೇಕಾಯಿತು. ಹೀಗಿರುವಾಗ ಶ್ರೀ. ಗುರುಪ್ರಸಾದ ಇವರು ನೀಡಿದ ಈ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ ಎಂದು ಹೇಳುವುದೇ ಮೂಲದಲ್ಲಿ ಹಾಸ್ಯಾಸ್ಪದವಾಗಿದೆ ! – ಸಂಪಾದಕರು) ಅವರು ಒಂದು ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಸಂಘಟನೆಯ ಪ್ರಮುಖ ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು ಮತ್ತು ಅಲ್ಪಸಂಖ್ಯಾತ ಪ್ರಮುಖ ಎಂ ಸಿ. ಮುಲ್ಲಾ ಇವರು ಉಪಸ್ಥಿತರಿದ್ದರು.

ಎಸ್. ಎಮ್. ಪಾಟೀಲ ಗಣಿಹಾರ ಇವರು ಮುಂದೆ ಮಾತನಾಡುತ್ತಾ ಹೀಗೆಂದರು,

೧. ಹಿಂದೂ ಅಧಿವೇಶನದಲ್ಲಿ ಶ್ರೀ. ಗುರುಪ್ರಸಾದ ಇವರು ‘ಈ ದೇಶದಲ್ಲಿ ಹಸಿರು ಧ್ವಜ ಹಾರಾಡುತ್ತಿದೆ. ಇದನ್ನು ಇಸ್ಲಾಮೀಕರಣ ಮಾಡುವ ಯತ್ನಗಳಾಗುತ್ತಿವೆ, ಹೀಗೆ ಹೇಳಿಕೆ ನೀಡಿದರು. ಹೀಗೆ ಹೇಳುವುದು ಮೂರ್ಖತನವಾಗಿದೆ. ಭಾರತ ಭಾವೈಕ್ಯತೆಯ ರಾಷ್ಟ್ರವಾಗಿದ್ದು ಇಲ್ಲಿ ಸರ್ವಧರ್ಮಿಯರು ಕೂಡಿ ಬಾಳುತ್ತಾರೆ. (ಮನೋರಾಜ್ಯದಲ್ಲಿ ವಿಹರಿಸುವ ಪಾಟೀಲಗಣಿಹಾರ ! ಕರ್ನಾಟಕ ರಾಜ್ಯದ್ದೇ ವಿಚಾರ ಮಾಡಿದರೆ ಕಳೆದ ಕೆಲವು ವರ್ಷದಲ್ಲಿ ಇಲ್ಲಿ ಅನೇಕ ಹಿಂದುತ್ವನಿಷ್ಠರ ಹತ್ಯೆಯಾಗಿದ್ದು ಅದನ್ನು ಮತಾಂಧರು ಮಾಡಿದ್ದಾರೆ. ಬಂಗಾಲದಲ್ಲಿ ಮತಾಂಧರಿಂದ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡಿದರೆ ಅದು ಬಾಂಗ್ಲಾದೇಶವಾಗಿ ರೂಪಾಂತರವಾಗುತ್ತಿದೆ. ಇದರಿಂದ ‘ಭಾರತದಲ್ಲಿ ಎಲ್ಲ ಭಾವೈಕ್ಯತೆಯಿಂದ ಇರುತ್ತಾರೆ ಎಂದು ಹೇಳುವುದು ಎಂದರೆ ಹಾಸ್ಯಾಸ್ಪದವಾಗಿದೆ !- ಸಂಪಾದಕರು) ಹೀಗಾಗಿ ಇಸ್ಲಾಮೀಕರಣ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಮುಸಲ್ಮಾನರು ಈ ದೇಶವನ್ನು ೮೦೦ ವರ್ಷ ಆಳಿದ್ದಾರೆ; ಆಗಲೇ ಇಸ್ಲಾಮೀಕರಣಮಾಡಿಲ್ಲ. (ಹಿಂದೂ ರಾಜರು ತೀವ್ರ ಪ್ರತಿಕಾರ ಮಾಡಿದ್ದರಿಂದ ಭಾರತದಲ್ಲಿ ಹಿಂದುತ್ವ ಉಳಿದಿದೆ. ಅಲ್ಲದೇ ಅ ಕಾಲದಲ್ಲಿ ಮುಸಲ್ಮಾನ ಆಕ್ರಮಣಕಾರರು ಹಿಂದೂಗಳ ನೂರಾರು ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಿದರು. ಕರ್ನಾಟಕದಲ್ಲಿ ಯಾವ ಟಿಪ್ಪುವಿನ ಜಯಂತಿ ಆಚರಿಸಲಾಗುತ್ತಿದೆಯೋ, ಅವನು ದಕ್ಷಿಣ ಭಾರತದಲ್ಲಿ ಹಿಂದೂಗಳ ಮೇಲೆ ಹೇಗೆ ದೌರ್ಜನ್ಯ ನಡೆಸಿದನು, ಇದರ ಐತಿಹಾಸಿಕ ದಾಖಲೆ ಇಂದೂ ಉಪಲಬ್ಧವಿದೆ. ಜಾತ್ಯತೀತವನ್ನು ತಲೆಮೇಲೆ ಕೂರಿಸಿದ್ದರಿಂದ ಪಾಟೀಲ ಗಣಿಹಾರ ಇವರು ಸತ್ಯವನ್ನು ಸ್ವೀಕರಿಸಲು ಸಿದ್ಧರಿಲ್ಲ, ಹೀಗೆ ಹೇಳಬೇಕಾಗುತ್ತದೆ ! – ಸಂಪಾದಕರು) ಆಗ ಹಿಂದೂಗಳು ಯಾವ ಆತಂಕ ಇಲ್ಲದೆಯೇ ಬದುಕಿದ್ದರು. (ಹೀಗೆ ಸುಳ್ಳು ಇತಿಹಾಸವನ್ನು ಹೇಳುವವರಿಗೆ ‘ಭಾರತರತ್ನ ನೀಡಿ ಗೌರವಿಸಬೇಕು ! – ಸಂಪಾದಕರು) ನಂತರ ಈಗ ‘ಹಿಂದೂಗಳು ಸಂಕಟದಲ್ಲಿದ್ದಾರೆ, ಎಂದು ಹೇಳುವುದು ಯೋಗ್ಯವಾಗಿದೆಯೇ ?

೨. ‘ದೇಶದಲ್ಲಿ ಹಸಿರು ದ್ವಜ ಹಾರಾಡುತ್ತಿದೆ, ಎಂದು ಹೇಳುವ ಗುರುಪ್ರಸಾದ ಇವರು ಈ ರಾಷ್ಟ್ರದ ತ್ರಿವರ್ಣ ಧ್ವಜ ತಯಾರಿಸಿದ್ದೂ ‘ಸುರಯ್ಯಾ ಎಂಬ ಮುಸಲ್ಮಾನ ಮಹಿಳೆ ಎಂಬುದು ಗೊತ್ತಿದೆಯೇ ? ಸುಖಾ ಸುಮ್ಮನೆ ಪ್ರಚೋದನಕಾರಿ ಭಾಷಣ ಮಾಡುವುದು ನಿಲ್ಲಿಸಬೇಕು. (ಭಾರತದ ರಾಷ್ಟ್ರಧ್ವಜ ಪಿಂಗಲಿ ವೆಂಕಯ್ಯ ಇವರು ತಯಾರಿಸಿದರೋ ಅಥವಾ ಸುರಯ್ಯಾ ಇದು ಐತಿಹಾಸಿಕ ವಾದವಾಗಿದೆ. ಇದರಿಂದ ಕೇವಲ ಮುಸಲ್ಮಾನರ ವೈಭವೀಕರಣ ಮಾಡಲು ಸುರಯ್ಯಾ ಇವರ ಹೆಸರು ಉಲ್ಲೇಖಿಸಿ ಹಿಂದುತ್ವನಿಷ್ಠರನ್ನು ತೆಗಳುವುದನ್ನು ಪಾಟೀಲ ಗಣಿಹಾರ ಇವರು ಮೊದಲು ನಿಲ್ಲಿಸಬೇಕು ! – ಸಂಪಾದಕರು)

೩. ಗುರುಪ್ರಸಾದ ಇವರು ‘ಲವ್ ಜಿಹಾದ್, ‘ಮತಾಂತರ, ಇಂತಹ ಪದ ಬಳಸಿದ್ದಾರೆ. ಅವರಿಗೆ ‘ಲವ್ ಜಿಹಾದ್ ಎಂದರೇನು ? ಇದು ಗೊತ್ತಿದೆಯಾ ? ‘ಲವ್ ಎಂದರೆ ‘ಪ್ರೇಮ, ‘ಜಿಹಾದ್, ಎಂದರೆ ‘ತ್ಯಾಗ ! ಇಂತಹ ಶ್ರೇಷ್ಠ ಪದಗಳ ಬಗ್ಗೆ ಅರಿಯದೇ ಮಾತನಾಡುವುದು ಯೋಗ್ಯವಲ್ಲ. (ಜಿಹಾದ್ ಎಂದರೆ ತ್ಯಾಗ ಎಂದು ‘ಜಿಹಾದ್ನ ಹೊಸ ಅರ್ಥ ಕಲ್ಪಿಸುವುದು, ಇದು ಬೌದ್ಧಿಕ ದಿವಾಳಿತನವಾಗಿದೆ ! ಲವ್‌ಜಿಹಾದ್ ಅಸ್ತಿತ್ವದಲ್ಲಿದೆ, ಇದನ್ನು ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದವಿ. ಎಸ್. ಅಚ್ಯುತಾನಂದ ಇವರು ಹೇಳಿದ್ದರು, ಈ ಬಗ್ಗೆ ಪಾಟೀಲ ಗಣಿಹಾರ ಇವರಿಗೆ ಏನು ಹೇಳಲಿಕ್ಕಿದೆ ? ಸೆಕ್ಯುಲರ್‌ವಾದದ ಹೆಸರಿನಲ್ಲಿ ಅದರ ಅಸ್ತಿತ್ವ ಅಲ್ಲಗಳೆಯುವುದು ಇದು ಶಹಮೃಗಿ ಮಾನಸಿಕತೆಯಾಗಿದೆ !- ಸಂಪಾದಕರು) ಹಿಂದೂ ಹುಡುಗಿಯನ್ನು ಮುಸಲ್ಮಾನ ಯುವಕನು ಪ್ರೀತಿಸಿದರೆ ಅದು ಲವ್ ಜಿಹಾದ್ ಹಾಗಾದರೆ ಮುಸ್ಲಿಂ ಯುವತಿಯನ್ನು ಪ್ರೀತಿಸುವ ಹಿಂದೂ ಯುವಕನನ್ನು ಕರೆದು ಮದುವೆ ಮಾಡಿಸುವ ಹಿಂದು ಸಂಘಟನೆ ಕಾರ್ಯಕ್ಕೆ ಏನೆನ್ನುವಿರಿ ?