ಕುಮಟದಲ್ಲಿ ಹಿಂದೂ ಅಧಿವೇಶನ ಸಂಪನ್ನ !

ಹಿಂದೂಗಳು ಅಸುರಕ್ಷತೆಯಿಂದ ಕಾರ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ ! – ನ್ಯಾಯವಾದಿ ಶ್ರೀ ದತ್ತಾತ್ರೇಯ ನಾಯ್ಕ, ಭಟ್ಕಳ

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಗಳು ಶ್ಲಾಘನೀಯ – ಶ್ರೀ. ಕೃಷ್ಣ ಬಾಬಾ ಪೈ , ಧರ್ಮದರ್ಶಿಗಳು, ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ, ಕುಮಟ

ಹಿಂದೂ ಜನಜಾಗೃತಿ ಸಮಿತಿಯು ಕಳೆದ ಹಲವಾರು ವರ್ಷಗಳಿಂದ ಅನೇಕ ಧರ್ಮ ಮತ್ತು ರಾಷ್ಟ್ರ ರಕ್ಷಣೆ ಕಾರ್ಯವನ್ನು ಮಾಡುತ್ತಿದೆ. ಸಮಾಜದವರನ್ನು ಧರ್ಮಾಚರಣೆಯ ಕಡೆಗೆ ಮತ್ತು ರಾಷ್ಟ್ರದ ಏಳಿಗೆಯ ಕಡೆಗೆ ಕರೆದುಕೊಂಡು ಹೋಗುತ್ತಿರುವ ಅವರ ಪ್ರಯತ್ನ ಶ್ಲಾಘನೀಯವಾಗಿದೆ. ಇಂದು ಇವರು ಹಿಂದೂ ಸಮಾಜದವರನ್ನು ಮತ್ತು ಹಿಂದೂ ಧರ್ಮಪ್ರೇಮಿಗಳನ್ನು ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಜೋಡಣೆ ಮಾಡಿಕೊಳ್ಳುತ್ತಿರುವುದನ್ನು ನೋಡಿ ತುಂಬಾ ಖುಷಿಯಾಯಿತು.

ಕುಮಟ – ಸಮಾಜದಲ್ಲಿನ ಅನೇಕ ಹಿಂದೂ ಸಂಘಟನೆಗಳು ಹಿಂದುತ್ವದ ಕಾರ್ಯವನ್ನು ಮಾಡುತ್ತಿವೆ. ಅದರೆ ಇಂದಿನ ಹಿಂದೂ ವಿರೋಧಿ ಸರಕಾರಗಳು ನಿರಪೇಕ್ಷವಾಗಿ ಧರ್ಮಕಾರ್ಯ ಮಾಡುವಂತಹ ಇಂತಹ ಕಾರ್ಯಕರ್ತರಿಗೆ ಸೂಕ್ತ ಸುರಕ್ಷಿತತೆಯನ್ನು ನೀಡಲು ವಿಫಲವಾಗಿವೆ. ಇದರಿಂದಾಗಿ ಧರ್ಮಕಾರ್ಯವನ್ನು ಮಾಡುತ್ತಿದ್ದ ಅನೇಕ ಹಿಂದೂ ನಾಯಕರ ಹತ್ಯೆಗಳಾಗುತ್ತಿವೆ. ಹಾಗಾಗಿ ಹಿಂದೂ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಕ್ತ ಸುರಕ್ಷೆ ನೀಡುವುದರ ಬಗ್ಗೆ ಸರಕಾರಗಳು ಗಮನ ವಹಿಸುವುದು ಅವಶ್ಯಕವಾಗಿದೆ, ಎಂದು ನ್ಯಾಯವಾದಿ ದತ್ತಾತ್ರೇಯ ನಾಯ್ಕರವರು ಪ್ರತಿಪಾದಿಸಿದ್ದಾರೆ. ಅವರು ೨.೧೨.೨೦೧೮ ರಂದು ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ೧ ದಿನಗಳ ಹಿಂದೂ ಅಧಿವೇಶನದಲ್ಲಿ ಮಾತನಾಡುತ್ತಿದ್ದರು.

ಗೋ ತಳಿಗಳ ನಿರ್ಲಕ್ಷಕ್ಕೆ ಮುಂದೆ ಬೆಲೆ ತೆರಬೇಕಾಗುವುದು ! – ಶ್ರೀ. ಮಂಜುನಾಥ ಭಟ್, ಶ್ರೀರಾಮಚಂದ್ರಪುರ ಮಠ, ಕುಮಟ

ಕೇವಲ ಕಲಿಯುಗ ಮಾತ್ರವಲ್ಲದೇ ಸತ್ಯಯುಗದಿಂದಲೂ ಗೋವಿನ ಉಲ್ಲೇಖವಿದೆ. ಅಲ್ಲದೇ ಅದಕ್ಕೆ ಪೂಜನೀಯ ಸ್ಥಾನವನ್ನು ಸಹ ನೀಡಿದ್ದಾರೆ. ವಿಪರ್ಯಸವೆಂದರೆ ನಾವು ಈ ಉಲ್ಲೇಖಗಳನ್ನು ಪುರಾಣ ಎನ್ನುತ್ತಿದ್ದೇವೆ. ಇಂದು ಜನರು ಹೈಬ್ರಿಡ್ ಗೋ ತಳಿಗಳಿಗೆ ಮಾರು ಹೋಗಿ ಸಾಂಪ್ರದಾಯಿಕ ಗೋತಳಿಗಳನ್ನು ನಿರ್ಲಕ್ಷ ಮಾಡುತ್ತಿರುವುದು ತುಂಬಾ ಅಘಾತವಾಗಿದೆ. ಮುಂದೆ ಜನರು ಇದರ ಬೆಲೆ ತೆರಬೇಕಾಗಬಹುದು.

ಹಿಂದೂ ಸಂಘಟನೆಗಳು ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯೇಯವನ್ನಿಟ್ಟುಕೊಂಡು ಕಾರ್ಯ ಮಾಡಬೇಕಿದೆ –  ಶ್ರೀ. ಗುರುಪ್ರಸಾದ ಗೌಡ

ಸಮಾಜದಲ್ಲಿ ಪ್ರಸ್ತುತ ಹಲವಾರು ಹಿಂದೂ ಸಂಘಟನೆಗಳು ರಾಷ್ಟ್ರ ಮತ್ತು ಧರ್ಮ ರಕ್ಷಣೆಯ ಕಾರ್ಯವನ್ನು ಮಾಡುತ್ತಿವೆ. ಹೇಗೆ ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಧ್ಯೇಯವನ್ನಿಟ್ಟುಕೊಂಡು ಹೋರಾಡಿದರೋ ಹಾಗೇ ನಾವು ಸಹ ಆ ದಿಶೆಯಲ್ಲಿ ಪ್ರತಿಯೊಂದು ಹಿಂದೂ ಸಂಘಟನೆಗಳು ಮತ್ತು ಹಿಂದೂ ಕಾರ್ಯಕರ್ತರು ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯೇಯವನ್ನಿಟ್ಟುಕೊಂಡು ಧ್ಯೇಯಪ್ರೇರಿತರಾಗಿ ಹಿಂದೂರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಯಾಗುವುದು ಆವಶ್ಯಕವಾಗಿದೆ.

೨೦೧೯ ರ ಸನಾತನ ಪಂಚಾಂಗದ ಆಂಡ್ರಾಯ್ಡ ಆವೃತ್ತಿಯ ಲೋಕಾರ್ಪಣೆ !

ಎಡದಿಂದ ಶ್ರೀ. ಕಾಶಿನಾಥ ಪ್ರಭು, ಪಂಚಾಂಗದ ಆಂಡ್ರಾಯ್ಡ ಆವೃತ್ತಿಯಲೋಕಾರ್ಪಣೆ ಮಾಡುತ್ತಿರುವ ಶ್ರೀ. ಕೃಷ್ಣ ಬಾಬಾ ಪೈ, ಶ್ರೀ. ಗುರುಪ್ರಸಾದ ಗೌಡ

೨.೧೨.೨೦೧೮ ರಂದು ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಶ್ರೀ. ಕೃಷ್ಣ ಬಾಬಾ ಪೈ ಅವರು ಹಿಂದೂ ಅಧಿವೇಶನದಲ್ಲಿ ಕನ್ನಡ ಸನಾತನ ಪಂಚಾಂಗದ ಆಂಡ್ರಾಯ್ಡ ಆವೃತ್ತಿಯ ಲೋಕಾರ್ಪಣೆ ಮಾಡಿದರು.

‘ಸನಾತನ ಪಂಚಾಂಗ ೨೦೧೯ ಆಪ್ನ ವೈಶಿಷ್ಟ್ಯಗಳು

ಅ. ಕನ್ನಡ, ಮರಾಠಿ, ಹಿಂದಿ, ಗುಜರಾತಿ, ಆಂಗ್ಲ, ತಮಿಳು ಮತ್ತು ತೆಲುಗು ಈ ಭಾಷೆಗಳಲ್ಲಿ ಲಭ್ಯವಿದೆ

ಆ. ಸಂತರ, ರಾಷ್ಟ್ರಪುರುಷರ ಮತ್ತು ಕ್ರಾಂತಿಕಾರರ ಸ್ಮೃತಿದಿನ

ಇ. ಜಾತ್ರೆ, ಉತ್ಸವ ಇತ್ಯಾದಿ ದಿನವಿಶೇಷ, ತಿಥಿ, ಪಂಚಾಂಗ ಮತ್ತು ಮುಹೂರ್ತಗಳ ಮಾಹಿತಿ

ಈ. ಹಬ್ಬ-ವ್ರತ, ಧರ್ಮಶಿಕ್ಷಣ, ಆಯುರ್ವೇದ, ಉಪಚಾರ ಪದ್ದತಿ, ಅಧ್ಯಾತ್ಮಗಳ ಮಾಹಿತಿ

ಈ ಮೇಲಿನ ಆಪನ್ನು ಡೌನಲೋಡ್ ಮಾಡಲು ಲಿಂಕ್ : https://play.google.com/store/apps/developer?id=Anit+Pimple