‘ಕೇದಾರನಾಥ ಚಲನಚಿತ್ರದ ವಿರುದ್ಧ ‘ಅಂತರರಾಷ್ಟ್ರೀಯ ಹಿಂದೂ ಸೇನೆಯಿಂದ ಖಟ್ಲೆ ದಾಖಲು

ಒಂದರ ಹಿಂದೆ ಒಂದು ಹಿಂದೂ ವಿರೋಧಿ ಚಲನಚಿತ್ರಗಳಿಗೆ ಅನುಮತಿ ನೀಡುವ ಕೇಂದ್ರೀಯ ಚಲನಚಿತ್ರ ಪರಿವೀಕ್ಷಣ ಮಂಡಳಿದ ಹಿಂದೂದ್ವೇಷವನ್ನು ತಿಳಿದುಕೊಳ್ಳಿ !

ಕೇಂದ್ರೀಯ ಚಲನಚಿತ್ರ ಪರಿವೀಕ್ಷಣ ಮಂಡಳಿ ಕೋಟಿಗಟ್ಟಲೆ ಹಿಂದೂಗಳ ವಿರೋಧವನ್ನು ಕಡೆಗಣಿಸಿ ‘ಪದ್ಮಾವತ್, ‘ಕೇದಾರನಾಥ ಇಂತಹ ಹಿಂದೂ ವಿರೋಧಿ ಚಲನಚಿತ್ರಗಳಿಗೆ ಅನುಮತಿ ನೀಡುತ್ತದೆ ಹಾಗೂ ಕೇಂದ್ರ ಸರಕಾರ ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಹಿಂದೂಗಳಿಗೆ ಧರ್ಮಹಿತದ ರಕ್ಷಣೆಗಾಗಿ ಇಂತಹ ಖಟ್ಲೆಗಳನ್ನು ಕಾಂಗ್ರೆಸ್ಸಿನ ಕಾಲದಲ್ಲಿಯೂ ದಾಖಲಿಸ ಬೇಕಾಗುತ್ತಿತ್ತು, ಈಗ ಭಾಜಪ ಸರಕಾರದ ಕಾಲದಲ್ಲಿಯೂ ಮಾಡಬೇಕಾಗುತ್ತಿದೆ. ಇದರಿಂದ ಭಾಜಪ ಮತ್ತು ಕಾಂಗ್ರೆಸ್‌ನಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲ, ಎಂಬುದು ಸಿದ್ಧವಾಗುತ್ತದೆ !

ಕರ್ಣಾವತಿ (ಗುಜರಾತ್) – ಲವ್ ಜಿಹಾದ್‌ಗೆ ಪ್ರೋತ್ಸಾಹ ನೀಡುವ ಮುಂಬರುವ ‘ಕೇದಾರನಾಥ ಚಲನಚಿತ್ರದ ವಿರುದ್ಧ ‘ಅಂತರರಾಷ್ಟ್ರೀಯ ಹಿಂದೂ ಸೇನೆ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಖಟ್ಲೆ ದಾಖಲಿಸಿದೆ. (ಹೀಗೆ ಖಟ್ಲೆ ದಾಖಲಿಸ ಬೇಕಾಗುವುದು ಭಾಜಪ ಸರಕಾರಕ್ಕೆ ಲಜ್ಜಾಸ್ಪದವಾಗಿದೆ ! – ಸಂಪಾದಕರು) ಈ ಖಟ್ಲೆಯ ಆಲಿಕೆ ಮುಂದಿನವಾರ ಆಗಲಿಕ್ಕಿದೆ. ಈ ಖಟ್ಲೆಯಲ್ಲಿ ‘ಅಂತರರಾಷ್ಟ್ರೀಯ ಹಿಂದೂ ಸೇನೆ ಮುಂದಿನಂತೆ ಹೇಳಿದೆ, ಈ ಚಲನಚಿತ್ರ ‘ಲವ್ ಜಿಹಾದ್ ಗೆ ಪ್ರೋತ್ಸಾಹ ನೀಡುತ್ತದೆ. ಕೇದಾರನಾಥ ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗಿದೆ. ಇಂತಹ ಪವಿತ್ರ ಸ್ಥಳದಲ್ಲಿ ಚಲನಚಿತ್ರದ ನಟ-ನಟಿಯರು ಚುಂಬಿಸುವ ದೃಶ್ಯವನ್ನು ತೋರಿಸುವುದು ತಪ್ಪು. ಈ ಚಲನಚಿತ್ರದಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವಾಗಿದೆ. ಈ ಚಲನಚಿತ್ರದಲ್ಲಿ ಸೈಫ್ ಅಲೀ ಖಾನ್ ಮತ್ತು ಅಮೃತಾ ಸಿಂಹ ಇವರ ಮಗಳು ಸಾರಾ ಅಲೀ ಖಾನ್ ಮತ್ತು ಸುಶಾಂತಸಿಂಹ ರಜಪೂತ ಇವರ ಮುಖ್ಯ ಪಾತ್ರವಿದೆ. ‘ಕೇದಾರನಾಥ ಚಲನಚಿತ್ರದ ಪ್ರಸಿದ್ಧವಾದ ಜಾಹೀರಾತನ್ನು ನೋಡಿದನಂತರ ಉತ್ತರಾಖಂಡದ ಕೇದಾರನಾಥ ದೇವಸ್ಥಾನದ ಪುರೋಹಿತರು ಈ ಚಲನಚಿತ್ರಕ್ಕೆ ಆಕ್ಷೇಪವೆತ್ತಿದರು. ಈ ಚಲನಚಿತ್ರ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವುದಾಗಿದ್ದು ‘ಸರಕಾರ ಅದಕ್ಕೆ ನಿರ್ಬಂಧ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅನಂತರ ಭಾಜಪದ ಮುಖಂಡ ಅಜೇಂದ್ರ ಅಜಯ ಇವರು ಸಹ ಈ ಚಲನಚಿತ್ರಕ್ಕೆ ನಿರ್ಬಂಧ ಹೇರಬೇಕೆಂದು ಆಗ್ರಹಿಸಿದ್ದರು.