Language Controversy : ಮಂಗಳೂರು ಕನ್ನಡ ಭಾಷೆ ಕಡ್ಡಾಯ ಮಾಡಿದ್ದಕ್ಕೆ ತುಳುಪರ ಹೋರಾಟಗಾರರಲ್ಲಿ ಆಕ್ರೋಶ !

ಮಂಗಳೂರು – ರಾಜ್ಯ ಸರಕಾರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಸುತ್ತೋಲೆಯನ್ನು ಹೊರಡಿಸಿದೆ. ಇದರಿಂದ ಇಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ತುಳು ಭಾಷಿಕರು ಆಕ್ರೋಶಗೊಂಡಿದ್ದಾರೆ. ನೈಋತ್ಯ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರದೇಶವನ್ನು ‘ತುಳುನಾಡು’ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿ ತುಳು ಭಾಷೆ ಮಾತನಾಡುವ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಸುಮಾರು 20 ಲಕ್ಷ ಜನರ ಮಾತೃಭಾಷೆ ತುಳು ಆಗಿದೆ. ಇದರಿಂದ ಈ ಎರಡೂ ಜಿಲ್ಲೆಗಳಲ್ಲಿ ಈ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಏನು ಈ ಪ್ರಕರಣ ?

ಇಲ್ಲಿನ ಗ್ರಾಮ ಪಂಚಾಯಿತಿಗಳ ಸಾಮಾನ್ಯ ಸಭೆಗಳಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲು ಆದೇಶಿಸಲಾಗಿದೆ. ‘ಕಾರ್ಕಳ ಯಶಸ್ವಿ ನಾಗರಿಕ ಸೇವಾ ಸಂಘ’ದ ಸಂಚಾಲಕ ಮುರಳೀಧರ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವಂತೆ ಮತ್ತು ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಚರ್ಚಿಸುವಾಗ ತುಳುವನ್ನು ಬಳಸಬಾರದು ಎಂದು ಮನವಿ ಮಾಡಿದ್ದರು. ಇದಕ್ಕೆ ‘ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ ಅರ್ಜಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ಇದರಿಂದ ಈ ಭಾಷಾ ವಿವಾದ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ.

ಹಾಗಾದರೆ ಸರಕಾರಿ ದಾಖಲೆಗಳಲ್ಲಿ ಉರ್ದು ಭಾಷೆ ಬಳಸಬೇಕೇ? – ಭಾಜಪ

ಮಾಜಿ ಮುಖ್ಯಮಂತ್ರಿ ಮತ್ತು ಭಾಜಪ ನಾಯಕ ಸದಾನಂದ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿ, ತುಳು ಈ ಮಣ್ಣಿನ ಭಾಷೆಯಾಗಿದೆ. ಕರ್ನಾಟಕದಲ್ಲಿ ತುಳು ಮಾತನಾಡಬಾರದು ಎಂದು ಸರಕಾರಿ ಆದೇಶವಿದ್ದರೆ, ಸರಕಾರಿ ದಾಖಲೆಗಳಲ್ಲಿ ಉರ್ದು ಭಾಷೆ ಬಳಸಬೇಕೇ? ಎಂದು ಪ್ರಶ್ನಿಸಿದ್ದಾರೆ.

ಪ್ರಾದೇಶಿಕ ಭಾಷೆಗಳ ಬಗ್ಗೆ ಮಾರ್ಗಸೂಚಿಗಳು ಅಸ್ತಿತ್ವದಲ್ಲಿಲ್ಲ! – ಆಡಳಿತ

ಒಬ್ಬ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸುತ್ತಾ, ಅಧಿಕೃತ ಬಳಕೆಗಾಗಿ ಕನ್ನಡ ಭಾಷೆ ಕಡ್ಡಾಯವಾಗಿದ್ದರೂ, ಸಭೆಗಳಲ್ಲಿ ಪ್ರಾದೇಶಿಕ ಭಾಷೆಗಳ ಸ್ಥಿತಿಗತಿಗಳ ಬಗ್ಗೆ ಯಾವುದೇ ಸ್ಪಷ್ಟ ಮಾರ್ಗಸೂಚಿಗಳು ಅಸ್ತಿತ್ವದಲ್ಲಿಲ್ಲ, ಎಂದು ಹೇಳಿದ್ದಾರೆ.

ಆಡಳಿತಾತ್ಮಕ ಅಧಿಕಾರಿಗಳು ತುಳು ಕಲಿಯಲು ಪ್ರಯತ್ನಿಸಬೇಕು! – ತುಳು ಸಂಘಟನೆ

ಈ ಪ್ರಕರಣದಲ್ಲಿ ‘ತುಳು ಸಾಹಿತ್ಯ ಅಕಾಡೆಮಿ’ ಅಧ್ಯಕ್ಷ ತಾರಾನಾಥ ಗಟ್ಟಿ ಕಪಿಕ್ಕಾಡ್ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದರು. ಅವರು, ಇಲ್ಲಿನ ಅನೇಕ ಜನರು ಕೇವಲ ತುಳು ಮಾತನಾಡುತ್ತಾರೆ. ಬೆಳಗಾವಿ ಮತ್ತು ಬೀದರ ಪ್ರದೇಶಗಳಲ್ಲಿ ಕ್ರಮವಾಗಿ ಮರಾಠಿ ಮತ್ತು ಉರ್ದು ಭಾಷೆಗಳಿಗೆ ಪ್ರಾಮುಖ್ಯತೆ ದೊರೆತಂತೆ ತುಳು ಈ ಪ್ರದೇಶದಲ್ಲಿ ಪಡೆಯಬೇಕು. ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ (ಐಎಎಸ್ ಮತ್ತು ಐಪಿಎಸ್) ಅಧಿಕಾರಿಗಳಂತೆಯೇ ಇತರ ಅಧಿಕಾರಿಗಳು ಸ್ಥಳೀಯ ಭಾಷೆ ಕಲಿಯಲು ಪ್ರಯತ್ನಿಸಬೇಕು. ಜಿಲ್ಲಾ ಪಂಚಾಯತ್ ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಹೇಳಿದರು.