ನಟ ದಿಲ್ಜಿತ ದೋಸಾಂಜ್ ಅವರ ಚಲನ ಚಿತ್ರವನ್ನು ನಿಷೇಧಿಸಿ ಅವರನ್ನು ಜೈಲಿಗೆ ಅಟ್ಟಿರಿ ! – Protest Ban Sardarji 3

ಪಾಕಿಸ್ತಾನಿ ನಟಿ ಜೊತೆ ಸಿನಿಮಾ ಮಾಡಿದಕ್ಕೆ ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲವಿ ಇವರ ಆಗ್ರಹ

ಬರೇಲಿ (ಉತ್ತರಪ್ರದೇಶ) – ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲವಿ ಅವರು ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ ದೋಸಾಂಜ್ ಅವರ ಮುಂದಿನ ಚಿತ್ರ ‘ಸರ್ದಾರ್ ಜಿ 3’ ಅನ್ನು ನಿಷೇಧಿಸಿ, ಅವರನ್ನು ಬಂಧಿಸಿ ಜೈಲಿಗಟ್ಟಬೇಕೆಂದು ಆಗ್ರಹಿಸಿದ್ದಾರೆ. ಈ ಚಿತ್ರದಲ್ಲಿ ದಿಲ್ಜಿತ ದೋಸಾಂಜ್ ಪಾಕಿಸ್ತಾನಿ ನಟಿ ಹಾನಿಯಾ ಆಮಿರ್ ಅವರೊಂದಿಗೆ ನಟಿಸಿದ್ದಾರೆ.

ಮೌಲಾನಾ ಶಹಾಬುದ್ದೀನ ರಝ್ವಿ ಅವರು ಮಾತನಾಡಿ, “ಕಾಶ್ಮೀರದ ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರವೂ ದಿಲ್ಜಿತ ದೋಸಾಂಜ್ ತಮ್ಮ ಲಾಭಕ್ಕಾಗಿ ಭಾರತದ ಶತ್ರು ದೇಶದೊಂದಿಗೆ ಸಂಬಂಧ ಏಕೆ ಇಟ್ಟುಕೊಂಡರು? ಅವರಿಗೆ ಭಾರತದಲ್ಲಿ ಯಾವುದೇ ನಟಿ ಸಿಗಲಿಲ್ಲವೇ? ಅವರು ಪಾಕಿಸ್ತಾನದ ಭಯೋತ್ಪಾದಕ ವಿಚಾರಧಾರೆಯ ಜನರನ್ನು ಏಕೆ ಬೆಂಬಲಿಸಿದರು? ದಿಲ್ಜಿತ ದೋಸಾಂಜ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಚಲನ ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಹೇಗೆ ಪ್ರಮಾಣಪತ್ರ ನೀಡಿದೆ? ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು!
(ಮೌಲಾನಾ ಎಂದರೆ ಇಸ್ಲಾಂ ವಿದ್ವಾಂಸರು)