ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿಕೆ
ಮಧುರೈ (ತಮಿಳುನಾಡು) – “ಕ್ರೈಸ್ತರಿಗೆ ಕ್ರೈಸ್ತರಾಗಿ ಉಳಿಯುವ ಸ್ವಾತಂತ್ರ್ಯವಿದೆ ಮತ್ತು ಮುಸಲ್ಮಾನರಿಗೆ ಮುಸಲ್ಮಾನರಾಗಿ ಉಳಿಯುವ ಸ್ವಾತಂತ್ರ್ಯವಿದೆ; ಆದರೆ ಒಬ್ಬ ಹಿಂದೂ ತನ್ನ ಧರ್ಮದ ಬಗ್ಗೆ ಮಾತನಾಡುವಾಗ, ಅವನನ್ನು ‘ಮತಾಂಧ’ ಎಂದು ಕರೆಯಲಾಗುತ್ತದೆ. ಇದು ನಕಲಿ ಜಾತ್ಯತೀತತೆ” ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ್ ಇಲ್ಲಿ ಟೀಕಿಸಿದರು. ಅವರು ಹಿಂದೂ ಮುನ್ನಾನಿ (ಹಿಂದೂ ಮಂಚೂಣಿ) ಸಂಘಟನೆಯು ಆಯೋಜಿಸಿದ್ದ ‘ಮುರುಗಾ ಭಕ್ತರಾಗಲ ಮನಡೂ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಭಾಜಪ ನಾಯಕ ಕೆ. ಅಣ್ಣಾಮಲೈ ಮತ್ತು ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಕಾರ್ಯಕರ್ತರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪವನ ಕಲ್ಯಾಣ್ ಅವರು, ‘ಕಾಂಡ ಷಷ್ಠಿ ಕವಚಂ’ನಂತಹ ಪವಿತ್ರ ಸ್ತೋತ್ರಗಳನ್ನು ಅಪಹಾಸ್ಯ ಮಾಡಲಾಗುತ್ತಿದೆ ಎಂದು ದುಃಖ ವ್ಯಕ್ತಪಡಿಸಿದರು. ಎಲ್ಲರೂ ಒಗ್ಗೂಡಿ ಹಿಂದೂ ಧರ್ಮವನ್ನು ರಕ್ಷಿಸಲು ಅವರು ಕರೆ ನೀಡಿದರು.
ಪವನ್ ಕಲ್ಯಾಣ್ ಅವರು ತಮ್ಮ ಮಾತು ಮುಂದುವರಿಸಿ,
1. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳನ್ನೇ ಗುರಿ ಮಾಡಲಾಗುತ್ತಿದೆ!
ಜಾತ್ಯತೀತತೆ ಎಂದರೆ ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಸಿಗಬೇಕು; ಆದರೆ ಇತ್ತೀಚೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳನ್ನು ಪದೇ ಪದೇ ಗುರಿ ಮಾಡಲಾಗುತ್ತಿದೆ, ಇದು ಗಂಭೀರ ಸಮಸ್ಯೆಯಾಗಿದೆ.
2. ‘ಜಾತ್ಯತೀತತೆ’ ಮತ್ತು ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಪದಗಳು ಕೆಲವರಿಗೆ ಅಸ್ತ್ರಗಳು!
ಈ ಪ್ರವೃತ್ತಿ ನಿಲ್ಲದಿದ್ದರೆ, ನಮ್ಮ ಧರ್ಮ ಮತ್ತು ಶ್ರದ್ಧೆಗಳನ್ನು ಉಳಿಸುವುದು ಕಷ್ಟವಾಗುತ್ತದೆ. ‘ಜಾತ್ಯತೀತತೆ’ ಮತ್ತು ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಪದಗಳು ಕೆಲವರಿಗೆ ಅನುಕೂಲಕರ ಅಸ್ತ್ರಗಳಾಗಿವೆ.
3. ಹಿಂದೂಗಳ ಸಹನೆಯನ್ನು ಅವರ ದೌರ್ಬಲ್ಯವೆಂದು ಭಾವಿಸಬಾರದು!
ಹಿಂದೂಗಳ ಸಹನೆಯನ್ನು ಅವರ ದೌರ್ಬಲ್ಯವೆಂದು ಭಾವಿಸಬಾರದು. ನನ್ನ ಶ್ರದ್ಧೆಯನ್ನು ನೀವು ಗೌರವಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅದನ್ನು ಅಪಮಾನಿಸಬೇಡಿ.
4. ನನ್ನ ಶ್ರದ್ಧೆಗೂ ಗೌರವ ಸಿಗಬೇಕು!
ನಾನು ಕಟ್ಟರವಾದಿ ಅಲ್ಲ. ನಾನು ಸಮರ್ಪಿತ ಹಿಂದೂ ಆಗಿದ್ದೇನೆ. ನಾನು ಕ್ರೈಸ್ತ ಪಂಥ ಮತ್ತು ಇಸ್ಲಾಂ ಪಂಥಗಳನ್ನು ಗೌರವಿಸುತ್ತೇನೆ, ಮತ್ತು ನನ್ನ ಶ್ರದ್ಧೆಗೂ ಗೌರವ ಸಿಗಬೇಕು.
5. ತಮಿಳುನಾಡಿನಲ್ಲಿ ಹಿಂದೂ ಸಮಾವೇಶಗಳ ಬಗ್ಗೆ ಪ್ರಶ್ನಿಸುತ್ತಿರುವುದು ಬಹಳ ಅಪಾಯಕಾರಿಯಾಗಿದೆ ಮತ್ತು ಇದರಿಂದ ಸಮಾಜದಲ್ಲಿ ಅನಗತ್ಯ ವಿಭಜನೆ ನಿರ್ಮಾಣವಾಗುತ್ತಿದೆ.
ಸಂಪಾದಕೀಯ ನಿಲುವುಪವನ ಕಲ್ಯಾಣ್ ಅವರು ಸತ್ಯವನ್ನೇ ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಖರ ಹಿಂದುತ್ವನಿಷ್ಠ ಆಡಳಿತಗಾರರು ಹಿಂದೂ ವಿರೋಧಿಗಳನ್ನು ನಿಯಂತ್ರಣದಲ್ಲಿಡಬೇಕು! |