ಕಟ್ಟಡದ ಮಹಡಿಯಿಂದ ಕೆಳಗೆ ತಳ್ಳಿದ !
ನವದೆಹಲಿ – ಈಶಾನ್ಯ ದೆಹಲಿಯ ಜ್ಯೋತಿ ನಗರ ಪ್ರದೇಶದಲ್ಲಿ ಹಿಂದೂ ಯುವತಿ ಪ್ರೀತಿ ನಿರಾಕರಿಸಿದಳೆಂದು ಮುಸಲ್ಮಾನ ಯುವಕ ಆಕೆಯನ್ನು ಮನೆಯ ಮಹಡಿಯ ಬಾಲ್ಕನಿಯಿಂದ ಕೆಳಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ದೆಹಲಿ ಪೊಲೀಸರ ಪ್ರಕಾರ, 19 ವರ್ಷದ ನೇಹಾ ಹೆಸರಿನ ಯುವತಿ ಜ್ಯೋತಿನಗರ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಕುಟುಂಬದಲ್ಲಿ ಆಕೆಯ ಪೋಷಕರು, 3 ಸಹೋದರಿಯರು ಮತ್ತು 2 ಸಹೋದರರಿದ್ದಾರೆ. ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಸಂತ್ರಸ್ತೆಯ ಮನೆಯ ಎದುರು ತೌಫಿಕ್ ಎಂಬ ಯುವಕ ವಾಸಿಸುತ್ತಿದ್ದನು. ನೇಹಾ ತೌಫಿಕನನ್ನು ಸಹೋದರ ಎಂದು ಭಾವಿಸಿದ್ದಳು ಮತ್ತು ಅವನಿಗೆ ರಾಖಿ ಕಟ್ಟುತ್ತಿದ್ದಳು; ಆದರೆ ತೌಫಿಕ್ ನೇಹಾನನ್ನು ಪ್ರೀತಿಯ ಜಾಲಕ್ಕೆ ಬೀಳಿಸಲು ಪ್ರಯತ್ನಿಸುತ್ತಿದ್ದನು. ನೇಹಾ ಅವನನ್ನು ನಿರಾಕರಿಸುತ್ತಿದ್ದಳು. ಅವಳು ತೌಫಿಕ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದೇ ಕೋಪದಿಂದ ತೌಫಿಕ್ ಬುರ್ಖಾ ಧರಿಸಿ ಬೆಳಿಗ್ಗೆ ಆರೂವರೆ ಗಂಟೆಯ ಸುಮಾರಿಗೆ ನೇಹಾಳ ಮನೆಗೆ ನುಗ್ಗಿ, 5 ನೇ ಮಹಡಿಯಲ್ಲಿರುವ ಅವರ ಮನೆಯ ಬಾಲ್ಕನಿಯಿಂದ ನೇಹಾಳನ್ನು ಕೆಳಗೆ ತಳ್ಳಿ ಪರಾರಿಯಾಗಿದ್ದಾನೆ. (ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ಈಗ ನಿಷೇಧಿಸಬೇಕು ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ! – ಸಂಪಾದಕರು) ನೇಹಾಳನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಆಕೆಯನ್ನು ಮೃತಪಟ್ಟಿರುವಳೆಂದು ಘೋಷಿಸಲಾಯಿತು. ಪೊಲೀಸರು ತೌಫಿಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುದೇಶದಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಆದರೂ, ಈ ಬಗ್ಗೆ ಮುಸಲ್ಮಾನರಪ್ರೇಮಿ ಜಾತ್ಯತೀತ ರಾಜಕೀಯ ಪಕ್ಷಗಳು ಬಾಯಿ ತೆರೆಯುತ್ತಿಲ್ಲ. ಆದ್ದರಿಂದ ಹಿಂದೂಗಳು ತಮ್ಮ ಹೆಣ್ಣುಮಕ್ಕಳ ರಕ್ಷಣೆಗಾಗಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕ್ರಿಯಾಶೀಲರಾಗಬೇಕು! |