Hindu God Insult : ಕೆನಡಾದ ಭಾರತೀಯ ಮೂಲದ ಗಾಯಕಿ ಕಾಳಿ ಮಾತೆಯ ವೇಷತೊಟ್ಟು ಕೈಯಲ್ಲಿ ಶಿಲುಬೆ ಹಿಡಿದು ಅವಮಾನ

ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ವ್ಯಕ್ತ

ನವ ದೆಹಲಿ – ಕೆನಡಾದ ಭಾರತೀಯ ಮೂಲದ ‘ರಾಪರ್’ ಟಾಮಿ ಜೆನೆಸಿಸ್ ಉರ್ಫ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಅವರ ‘ಟ್ರೂ ಬ್ಲೂ’ ಈ ಹೊಸ ಹಾಡುಗಳ ವಿಡಿಯೋ ಆಲ್ಬಂ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರಲ್ಲಿ ಅವರು ಕಾಳಿ ಮಾತೆಯ ರೂಪವನ್ನು ಧರಿಸಿ, ಕ್ರೈಸ್ತರ ಧಾರ್ಮಿಕ ಚಿಹ್ನೆಯಾದ ‘ಶಿಲುಬೆ’ಯನ್ನು ಬಳಸಿದ್ದಾರೆ. ಇದರಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.

1. ಟಾಮಿ ಜೆನೆಸಿಸ್ ತನ್ನನ್ನು ಕಾಳಿ ಮಾತೆಯ ರೂಪದಲ್ಲಿ ಕಾಣಿಸಿಕೊಳ್ಳಲು ತಮ್ಮ ಇಡೀ ದೇಹಕ್ಕೆ ನೀಲಿ ಬಣ್ಣ ಹಚ್ಚಿಕೊಂಡಿದ್ದಾರೆ. ಅದರ ಮೇಲೆ ಚಿನ್ನದ ಆಭರಣಗಳು ಮತ್ತು ಕಡು ಕೆಂಪು ಬಣ್ಣದ ಕುಂಕುಮವನ್ನು ಹಚ್ಚಿಕೊಂಡಿದ್ದಾರೆ. ಅಲ್ಲದೆ, ಕೈಯಲ್ಲಿ ‘ಶಿಲುಬೆ’ಯನ್ನು ಹಿಡಿದಿದ್ದಾರೆ. ಇದರಲ್ಲಿ ಅವರು ಶಿಲುಬೆಯನ್ನು ನೆಕ್ಕುತ್ತಿರುವುದು ಕಂಡುಬರುತ್ತದೆ. ಈ ಶಿಲುಬೆಯನ್ನು ದೇಹದ ವಿವಿಧ ಭಾಗಗಳಲ್ಲಿ ಇಟ್ಟು ವಿಚಿತ್ರ ರೀತಿಯಲ್ಲಿ ‘ಪೋಸ್’ ನೀಡುತ್ತಿರುವುದು ಕಂಡುಬರುತ್ತದೆ.

2. ಈ ವಿಷಯದಲ್ಲಿ ಜನರು ಟೀಕಿಸುತ್ತಾ, ‘ಪ್ರಚಾರಕ್ಕಾಗಿ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’ ಎಂದು ಹೇಳಿದ್ದಾರೆ. ಕೆಲವರು ‘ಯೂಟ್ಯೂಬ್’ ನಲ್ಲಿ ಅವರ ವಿಡಿಯೋ ವಿರುದ್ಧ ದೂರುಗಳನ್ನು ದಾಖಲಿಸಲು ಪ್ರಾರಂಭಿಸಿದ್ದಾರೆ. ಈ ಹಾಡನ್ನು ಆದಷ್ಟು ಬೇಗ ತೆಗೆದುಹಾಕಬೇಕೆಂದು ಬೇಡಿಕೆ ಇಡಲಾಗಿದೆ.

ಯಾರು ಈ ಟಾಮಿ ಜೆನೆಸಿಸ್?

ಟಾಮಿ ಜೆನೆಸಿಸ್ ಅವರ ನಿಜವಾದ ಹೆಸರು ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಆಗಿದೆ. ಅವರು ಕೆನಡಾದ ವ್ಯಾಂಕೋವರ್ನಲ್ಲಿ ಜನಿಸಿದ್ದಾರೆ. ಅವರು ತಮಿಳು ಮತ್ತು ಸ್ವೀಡಿಷ್ ಹಿನ್ನೆಲೆಯನ್ನು ಹೊಂದಿದ್ದಾರೆ. ಜೆನೆಸಿಸ್ ತಮ್ಮ ಅಶ್ಲೀಲ ಶೈಲಿಯ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ. ಇದಕ್ಕೂ ಮೊದಲು ಸಹ ಅವರು ಇಂತಹ ಹಾಡುಗಳ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಅವರಿಗೆ ವಿರೋಧ ವ್ಯಕ್ತವಾಗಿತ್ತು.

ನಮ್ಮ ಉದ್ದೇಶವು ಯಾರಿಗಾದರೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದಲ್ಲ, ಆದರೆ ಹಿಂದೂ ವಿರೋಧಿಗಳು ಮಾಡಿದ ವಿಡಂಬನೆಗಳನ್ನು ಗೊತ್ತಾಗಲು ಈ ಚಿತ್ರಗಳನ್ನು ಪ್ರಕಟಿಸಲಾಗಿದೆ. – ಸಂಪಾದಕರು

 

ಸಂಪಾದಕೀಯ ನಿಲುವು

ಹಿಂದೂ ದೇವರುಗಳನ್ನು ಅವಮಾನಿಸುವವರಿಗೆ ಭಾರತದಲ್ಲಿಯೇ ಶಿಕ್ಷೆಯಾಗುವುದಿಲ್ಲ, ಇನ್ನು ಕೆನಡಾದಲ್ಲಿ ಆಗುವುದೇ?