ಪುಣೆ: ಮಾವುಲಿ ಪಲ್ಲಕ್ಕಿ ತಂಗುದಾಣದ ಬಳಿ ‘ಅಲ್ಲಾಹನ ಹೊರತು ಬೇರೆ ಯಾರೂ ದೇವರಲ್ಲ’ ಎಂಬ ಬೃಹತ್ ಫಲಕ!

ಭವಾನಿ ಪೇಟೆಯಲ್ಲಿ ಶ್ರೀ ಜ್ಞಾನೇಶ್ವರ ಮಾವುಲಿ ಪಲ್ಲಕ್ಕಿ ತಂಗುದಾಣದ ಬಳಿ ಮುಸ್ಲಿಮರಿಂದ ಬ್ಯಾನರ್‌

ಪುಣೆ, ಜೂನ್ 22 (ವಾರ್ತೆ) – ಶ್ರೀ ಜ್ಞಾನೇಶ್ವರ ಮಾವುಲಿ ಪಲ್ಲಕ್ಕಿಯು ತಂಗಿದ್ದ ಭವಾನಿ ಪೇಟೆಯಲ್ಲಿ ಸಾವಿರಾರು ಭಕ್ತರು ಮಾವುಲಿಯ ದರ್ಶನ ಪಡೆಯಲು ಬರುತ್ತಿದ್ದರು. ಆಗ ಅಲ್ಲಿನ ಪ್ರಮುಖ ಸ್ಥಳದಲ್ಲಿ ‘ಅಲ್ಲಾಹ್ ಕೆ ಸಿವಾ ಕೋಯಿ ಮಾಬೂದ್ ನಹೀ’ (ಅಲ್ಲಾಹನ ಹೊರತು ಬೇರೆ ಯಾರೂ ದೇವರಲ್ಲ) ಎಂದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಬರಹಗಳಿರುವ ಬೃಹತ್ ಫಲಕವನ್ನು ಅಳವಡಿಸಲಾಗಿದೆ.

‘ಈದ್-ಉಲ್-ಫಿತರ್’ ನಿಮಿತ್ತ ಎಲ್ಲಾ ಮುಸ್ಲಿಮರಿಗೆ ಶುಭಾಶಯ ಕೋರಲು ಈ ಫಲಕವನ್ನು ಅಳವಡಿಸಲಾಗಿತ್ತು; ಆದರೆ ಶ್ರೀ ಜ್ಞಾನೇಶ್ವರ ಮಾವುಲಿ ಪಲ್ಲಕ್ಕಿ ಬರುತ್ತಿದ್ದರೂ, ಮುಸ್ಲಿಮರು ಈ ಫಲಕವನ್ನು ತೆಗೆದುಹಾಕುವ ಸೌಜನ್ಯವನ್ನೂ ತೋರಿಸಿಲ್ಲ. ‘ಮದರಸಾ ಅನ್ವರುಲ್ ಇಸ್ಲಾಂ, ಅಂದರೆ ಸಾಮಾಜಿಕ ಉದ್ಧಾರ ಸಂಸ್ಥೆ’ಯಿಂದ ಈ ಬ್ಯಾನರ್ ಹಾಕಲಾಗಿದೆ.

ಮುಖ್ಯವಾಗಿ, ಸಣ್ಣ-ಪುಟ್ಟ ಕಾರಣಗಳಿಗಾಗಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಹೇಳಿ ಹಿಂದೂಗಳ ಹಬ್ಬಗಳ ಮೇಲೆ ನಿರ್ಬಂಧಗಳನ್ನು ಹೇರುವ ಪೊಲೀಸರು ಸಹ ಈ ಬ್ಯಾನರಗಳನ್ನು ತೆಗೆದುಹಾಕಲು ಆದೇಶಿಸಿಲ್ಲ. (ಇದು ಪುಣೆ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ! – ಸಂಪಾದಕರು).

ಸಂಪಾದಕೀಯ ನಿಲುವು

  • ಈ ಘಟನೆಯ ಬಳಿಕ ನಾಳೆ ಮುಂಬಯಿಯ ಹಾಜಿ ಅಲಿ ದರ್ಗಾ ಮತ್ತು ದೆಹಲಿಯ ಜಾಮಾ ಮಸೀದಿಯ ಹೊರಗೆ ಹಿಂದೂಗಳು ‘ಮೂರು ಲೋಕಗಳಲ್ಲಿ ಭಗವಾನ್ ಶ್ರೀಕೃಷ್ಣನ ಹೊರತು ಬೇರೆ ದೇವರಿಲ್ಲ’ ಎಂದು ಫಲಕಗಳನ್ನು ಹಾಕಲು ಪ್ರಾರಂಭಿಸಿದರೆ ಆಶ್ಚರ್ಯವೇನಿದೆ?
  • ಮಕ್ಕಾ ಪ್ರದೇಶದಲ್ಲಿ ಮುಸ್ಲಿಮೇತರರಿಗೆ ನಿರ್ಬಂಧಗಳಿದ್ದರೂ, ಆ ಪ್ರದೇಶದ ಹೊರಗೆ ಹಿಂದೂಗಳು ತಮ್ಮ ಧರ್ಮವನ್ನು ಪ್ರಚಾರ ಮಾಡಲು ಯೋಚಿಸಿದರೂ ಸಹ ವಿಶ್ವದ 50 ಮುಸ್ಲಿಂ ದೇಶಗಳು ಭಾರತದ ವಿರುದ್ಧ ನಿಲ್ಲುತ್ತವೆ ಎಂಬುದನ್ನು ಮರೆಯಬೇಡಿ!