ಪಂಜಾಬ್‌ದಿಂದ ಪಾಕಿಸ್ತಾನಕ್ಕಾಗಿ ಬೇಹೂಗಾರಕೆ ಮಾಡುತ್ತಿದ್ದ ಇಬ್ಬರ ಬಂಧನ

ಅಮೃತಸರ (ಪಂಜಾಬ) – ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ನ ದೊಡ್ಡ ಜಾಲವನ್ನು ಪಂಜಾಬ ಪೊಲೀಸರು ಭೇದಿಸಿದ್ದಾರೆ. ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಗುರಪ್ರೀತ ಸಿಂಗ ಅಲಿಯಾಸ್ ಗೋಪಿ ಫೌಜಿ ಮತ್ತು ಸಾಹಿಲ ಮಸಿಹ್ ಅಲಿಯಾಸ್ ಶಾಲಿ ಬಂಧಿತರು.

ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪಾಕಿಸ್ತಾನಕ್ಕೆ ಯಾವ ರೀತಿಯ ಮಾಹಿತಿ ನೀಡಿದ್ದಾರೆ ಮತ್ತು ಅದು ಎಷ್ಟು ಗಂಭೀರವಾಗಿದೆ, ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಈ ಜಾಲದಲ್ಲಿ ಇನ್ನೂ ಎಷ್ಟು ಜನರು ಭಾಗಿಯಾಗಿದ್ದಾರೆ ಎಂಬುದರ ಕುರಿತು ಸಹ ತನಿಖೆ ನಡೆಯುತ್ತಿದೆ.

ಪೊಲೀಸ್ ಮಹಾನಿರ್ದೇಶಕ ಗೌರವ ಯಾದವ ಮಾತನಾಡಿ, ಗುರಪ್ರೀತ ಐಎಸ್‌ಐ ಜೊತೆ ನೇರ ಸಂಪರ್ಕದಲ್ಲಿದ್ದ. ಪೆನ್ ಡ್ರೈವ್ ಮೂಲಕ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು ಒದಗಿಸುತ್ತಿದ್ದ ಎಂದು ಶಂಕಿಸಲಾಗಿದೆ. ಐಎಸ್‌ಐ ಕಡೆಯಿಂದ ರಾಣಾ ಜಾವೇದ್ ಎಂಬಾತನೊಂದಿಗೆ ಈ ಇಬ್ಬರ ಸಂಪರ್ಕದಲ್ಲಿದ್ದ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಇಂಥವರನ್ನು ಪೋಷಿಸುವ ಬದಲು ತ್ವರಿತಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆಗೆ ಪ್ರಯತ್ನಿಸಬೇಕು !