
ಪುಣೆ, ಜೂನ್ 22 (ವಾರ್ತೆ) – ಶ್ರೀ ವಿಠ್ಠಲನ ನಾಮಘೋಷ ಮಾಡುತ್ತಾ, ಪಂಢರಪುರಕ್ಕೆ ವಿಠುಮಾವುಲಿಯ(ವಿಠ್ಠಲನ) ದರ್ಶನಕ್ಕೆ ಹೋಗುತ್ತಿರುವ ವಾರಕರಿಗಳನ್ನು ಮತಾಂತರಿಸಲು ಕ್ರೈಸ್ತ ಮಿಷನರಿಗಳ ಕೆಲ ಏಜೆಂಟರು ವಾರಿಯಲ್ಲಿ ಸಕ್ರಿಯರಾಗಿದ್ದಾರೆ. ಮುಗ್ಧ ವಾರಕರಿಗಳಿಗೆ ಬೈಬಲ್ ನಲ್ಲಿನ ಬರಹಗಳ ಕರಪತ್ರಗಳನ್ನು ನೀಡಿ, ಅವರನ್ನು ಯೇಸುವನ್ನು ಆರಾಧಿಸುವಂತೆ ಆಹ್ವಾನಿಸುತ್ತಿರುವುದು ಬೆಳಕಿಗೆ ಬಂದಿದೆ. ಜೂನ್ 22 ರಂದು ಪುಣೆಯಿಂದ ಪಲ್ಲಕ್ಕಿಗಳು ಪಂಢರಪುರದ ಕಡೆಗೆ ಹೋಗುತ್ತಿದ್ದಾಗ, ಇಲ್ಲಿನ ಫಾತಿಮಾ ನಗರದಲ್ಲಿ ಬೆಳಿಗ್ಗೆ ಒಬ್ಬ ಮಹಿಳೆ ಅಂತಹ ಪ್ರಕಾರದ ಕರಪತ್ರಗಳನ್ನು ಮೆರವಣಿಗೆಯಲ್ಲಿ ಹಂಚುತ್ತಿದ್ದಳು. ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನದ ಜಾಗೃತ ಕಾರ್ಯಕರ್ತರ ಗಮನಕ್ಕೆ ಬಂದಾಗ, ಅವರು ಮೆರವಣಿಗೆಯಲ್ಲಿ ಈ ಕರಪತ್ರಗಳನ್ನು ಹಂಚುತ್ತಿದ್ದ ಮಹಿಳೆಯನ್ನು ತಡೆದರು.
ಕರಪತ್ರಗಳನ್ನು ಹಂಚುವುದಕ್ಕಾಗಿ ಕ್ರೈಸ್ತ ಮಿಷನರಿಗಳು ಮಹಿಳೆಯರನ್ನು ಮುಂದಿಟ್ಟಿದ್ದಾರೆ, ಮತ್ತು ತಾವು ವ್ಯಸನಮುಕ್ತಿಯ ಕರಪತ್ರಗಳನ್ನು ಹಂಚುತ್ತಿದ್ದೇವೆ, ಹೀಗೆ ತೋರಿಸುವುದಕ್ಕಾಗಿ ವ್ಯಸನಮುಕ್ತಿಗಾಗಿ ಸಂಪರ್ಕಿಸಲು ಮನವಿ ಮಾಡಿದ್ದಾರೆ. ಇದಕ್ಕಾಗಿ ಅದರ ಮೇಲೆ ಸಂಪರ್ಕ ಸಂಖ್ಯೆಗಳನ್ನು ಸಹ ನೀಡಲಾಗಿದೆ. ಈ ಕರಪತ್ರಗಳಲ್ಲಿ, ‘ದೇವರು ಪ್ರಪಂಚವನ್ನು (ಜಗತ್ತನ್ನು) ಎಷ್ಟೊಂದು ಪ್ರೀತಿ ಮಾಡಿದನು, ಆತನು ತನ್ನ ಒಬ್ಬನೇ ಒಬ್ಬ ಮಗನನ್ನು ಕೊಟ್ಟನು. ಅದಕ್ಕಾಗಿ, ಯಾರು ಅವರ ಮೇಲೆ ವಿಶ್ವಾಸವಿಡುತ್ತಾನೋ ಅವರು ನಾಶವಾಗುವುದಿಲ್ಲ’, ಹೀಗೆ ಬೈಬಲ್ ನಲ್ಲಿನ ಬರಹವನ್ನು ಉಲ್ಲೇಖದೊಂದಿಗೆ ನೀಡಲಾಗಿದೆ.
ಸಂಪಾದಕೀಯ ನಿಲುವುಕ್ರೈಸ್ತ ಮಿಷನರಿಗಳ ಕುತಂತ್ರವನ್ನು ಗುರುತಿಸಿ! ಇಂತಹ ಹಿಂದೂ ವಿರೋಧಿ ಕೃತ್ಯಗಳ ವಿರುದ್ಧ ಸಮಸ್ತ ಹಿಂದೂಗಳು ಒಗ್ಗಟ್ಟಾಗಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗುವುದಕ್ಕಾಗಿ ಪ್ರಯತ್ನಿಸಬೇಕು! |