S Jaishankar Statement : ನೆರೆಯ ರಾಷ್ಟ್ರಗಳೊಂದಿಗೆ ಭಾರತ ಯಾವಾಗಲೂ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು ಎಂದು ಯಾರೂ ನಿರೀಕ್ಷಿಸಬಾರದು!

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಅವರ ಸ್ಪಷ್ಟೀಕರಣ!

ನವದೆಹಲಿ – ಈಗ ಭಾರತ ಕೇವಲ ಪ್ರತಿದಾಳಿ ಮಾಡುವುದಷ್ಟೇ ಅಲ್ಲ, ಅಗತ್ಯವಿದ್ದರೆ ಮುಂದಾಳತ್ವವನ್ನೂ ವಹಿಸುತ್ತದೆ. ಪಾಕಿಸ್ತಾನಕ್ಕೆ ಈಗ, ತಾನು ಏನು ಬೇಕಾದರೂ ಮಾಡಬಹುದು ಮತ್ತು ಶಿಕ್ಷೆಯಾಗುವುದಿಲ್ಲ ಎಂದು ಅನ್ನಿಸುತ್ತಿಲ್ಲ. ಭಾರತವು ಯಾವಾಗಲೂ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು ಎಂದು ಯಾರೂ ನಿರೀಕ್ಷಿಸಬಾರದು. ಭಾರತವು ಇಷ್ಟು ಜಾಣತನದ ನೀತಿಯನ್ನು ರೂಪಿಸಿದೆ ಎಂದರೆ, ಯಾವುದೇ ದೇಶದಲ್ಲಿ ಸರಕಾರ ಬದಲಾದರೂ ಸಂಬಂಧಗಳು ಉತ್ತಮವಾಗಿ ಉಳಿಯುತ್ತವೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಅವರು ಭಾರತದ ವಿದೇಶಾಂಗ ನೀತಿಯ ಕುರಿತು ಮಾತನಾಡುತ್ತಾ ಹೇಳಿದರು.

ಜೈಶಂಕರ ಅವರು ಮಂಡಿಸಿದ ಅಂಶಗಳು

೧. ನಮ್ಮ ಪ್ರತಿಯೊಬ್ಬ ನೆರೆಯ ರಾಷ್ಟ್ರವೂ ಭಾರತದೊಂದಿಗೆ ಕೆಲಸ ಮಾಡುವುದರಿಂದ ಅವರಿಗೆ ಲಾಭವಾಗುತ್ತದೆ ಮತ್ತು ಹಾಗೆ ಮಾಡದಿರುವುದರಿಂದ ನಷ್ಟವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕೆಲವು ದೇಶಗಳಿಗೆ ಇದನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಪಾಕಿಸ್ತಾನ ಇದಕ್ಕೆ ಹೊರತಾಗಿದೆ; ಏಕೆಂದರೆ ಅದರ ಗುರುತು ಸೇನೆಯ ಸುತ್ತಲೂ ನಿರ್ಮಿಸಲ್ಪಟ್ಟಿದೆ ಮತ್ತು ಅದು ಮೊದಲಿನಿಂದಲೂ ಭಾರತದ ವಿರುದ್ಧ ದ್ವೇಷದಿಂದ ವರ್ತಿಸುತ್ತಿದೆ.

೨. ಹಿಂದಿನ ಸರಕಾರಗಳ ಪಾಕಿಸ್ತಾನ ನೀತಿಯು ಸೌಮ್ಯವಾಗಿತ್ತು; ಆದರೆ ಮೋದಿ ಸರಕಾರ ಅದನ್ನು ಬದಲಾಯಿಸಿದೆ.

೩. ಅಮೆರಿಕದೊಂದಿಗಿನ ಸಂಬಂಧಗಳಲ್ಲಿ ಕೆಲವೊಮ್ಮೆ ಅನಿಶ್ಚಿತತೆ ಇರುತ್ತದೆ, ಆದ್ದರಿಂದ ಭಾರತವು ಅದರೊಂದಿಗೆ ಹೆಚ್ಚಿನ ಸಂಬಂಧಗಳನ್ನು ಇಟ್ಟುಕೊಳ್ಳಬೇಕು, ಇದರಿಂದ ಸಂಬಂಧಗಳು ಸಮತೋಲವಾಗಿರುತ್ತವೆ.

೪. ಗಾಲ್ವಾನ್ ಸಂಘರ್ಷದ ನಂತರ ಚೀನಾ ಗಡಿಯಲ್ಲಿನ ಪರಿಸ್ಥಿತಿ ಬಹಳ ಕಷ್ಟಕರವಾಗಿತ್ತು. ಆದ್ದರಿಂದ ನಾವು ಗಡಿಯಲ್ಲಿ ರಸ್ತೆಗಳು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಾಯಿತು, ಹಿಂದಿನ ಸರಕಾರಗಳು ಇದನ್ನು ನಿರ್ಲಕ್ಷಿಸಿದ್ದವು. ಹಿಂದಿನ ಸರಕಾರಗಳು ಗಡಿ ಅಭಿವೃದ್ಧಿಪಡಿಸಲಿಲ್ಲ. ಅದು ಒಂದು ದೊಡ್ಡ ತಪ್ಪು. ಇಂದು ನಾವು ಚೀನಾ ವಿರುದ್ಧ ದೃಢವಾಗಿ ನಿಂತಿದ್ದೇವೆ; ಏಕೆಂದರೆ ನಾವು ಅಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಿದ್ದೇವೆ.

೫. ಕಳೆದ ೧೧ ವರ್ಷಗಳಲ್ಲಿ ಮೋದಿ ಸರಕಾರವು ನೆರೆಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧಗಳನ್ನು ಬಲಪಡಿಸಲು ವಿಶೇಷ ಗಮನ ಹರಿಸಿದೆ.

೬. ಆರಂಭದಲ್ಲಿ ಮಾಲ್ಡೀವ್ಸ್‌ನೊಂದಿಗೆ ಕೆಲವು ಸಮಸ್ಯೆಗಳಿದ್ದವು; ಆದರೆ ಈಗ ಸಂಬಂಧಗಳು ಸುಧಾರಿಸಿವೆ.

೭. ನೇಪಾಳದ ರಾಜಕೀಯದಲ್ಲಿ ಭಾರತವನ್ನು ಹಲವು ಬಾರಿ ಎಳೆಯಲಾಗುತ್ತದೆ; ಆದರೆ ನಾವು ಅದರ ಬಗ್ಗೆ ಚಿಂತಿಸಬಾರದು.

೮. ಸಂಬಂಧಗಳಲ್ಲಿ ಏರಿಳಿತಗಳು ಬರುತ್ತವೆ; ಆದರೆ ನಾವು ಬುದ್ಧಿವಂತಿಕೆಯಿಂದ ವರ್ತಿಸಬೇಕು. ಕಷ್ಟದ ಸಮಯದಲ್ಲಿ ನಾವು ಸೋಲನ್ನು ಒಪ್ಪಿಕೊಳ್ಳಬಾರದು; ಏಕೆಂದರೆ ಅದು ದುರ್ಬಲ ಯೋಜನೆಯ ಸಂಕೇತವಾಗಿದೆ.