ರುದ್ರಪುರ (ಉತ್ತರಾಖಂಡ) ಇಲ್ಲಿಯ ಘಟನೆ
ಉಧಮ ಸಿಂಹ ನಗರ (ಉತ್ತರಾಖಂಡ) – ಜಿಲ್ಲೆಯ ರುದ್ರಪುರದಲ್ಲಿ ಅತಿಕ್ರಮಣಗಳ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಯುತ್ತಿದ್ದು, ಜೂನ್ 17 ರಂದು ಆಡಳಿತವು ಪಹಾಡಗಂಜ ಪ್ರದೇಶದ ಅಕ್ರಮ ಮದರಸಾಗೆ ಬೀಗ ಜಡಿದಿದೆ. ಇದರಿಂದ ಕೆರಳಿದ ಮತಾಂಧ ಮುಸ್ಲಿಮರ ಗುಂಪೊಂದು ದೊಣ್ಣೆಗಳನ್ನು ಹಿಡಿದು, ಸ್ಥಳೀಯ ಭಾಜಪ ಕಾರ್ಪೊರೇಟರ್ ನುರುದ್ದೀನ್ ಅವರ ಮನೆ ಮೇಲೆ ದಾಳಿ ಮಾಡಿದೆ. ಗುಂಪು ನುರುದ್ದೀನ್ ಅವರ ಕುಟುಂಬದೊಂದಿಗೆ ದುರ್ವರ್ತನೆ ತೋರಿದ್ದಲ್ಲದೆ, ಜೀವ ಬೆದರಿಕೆ ಹಾಕಿದೆ. ಈ ವೇಳೆ ನುರುದ್ದೀನ್ ಮನೆಯಲ್ಲಿ ಇರಲಿಲ್ಲ. ಈ ಸಂಬಂಧ ಪೊಲೀಸರು 12 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
1. ಕಾರ್ಪೊರೇಟರ್ ನುರುದ್ದೀನ್ ಮಾತನಾಡಿ, “ಕೆಲವರಿಗೆ ನನ್ನ ವಿರುದ್ಧ ವೈಯಕ್ತಿಕ ದ್ವೇಷವಿದೆ. ಭಾಜಪ ಸೇರಿದಾಗಿನಿಂದ ಮತ್ತು ಚುನಾವಣೆ ಗೆದ್ದಾಗಿನಿಂದ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಮದರಸಾಗೆ ಬೀಗ ಜಡಿದ ಕಾರಣ ನೀಡಿ ಅವರು ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ,” ಎಂದರು.
2. ನಝುಲ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಈ ಮದರಸಾ ವಿರುದ್ಧದ ಕ್ರಮವನ್ನು ಉಪಜಿಲ್ಲಾಧಿಕಾರಿ ಪಂಕಜ ಉಪಾಧ್ಯಾಯ, ಉಪನಗರ ಆಯುಕ್ತ ಶಿಪ್ರಾ ಜೋಶಿ ಮತ್ತು ತಹಸೀಲ್ದಾರ್ ದಿನೇಶ ಕುಟೌಲಾ ಅವರ ತಂಡ ಕೈಗೊಂಡಿದೆ.
3. ತಂಡವು ಪ್ರದೇಶದಲ್ಲಿರುವ ಇತರ 50 ಅಕ್ರಮ ಮತ್ತು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಗುರುತಿಸಿದೆ.
ಸಂಪಾದಕೀಯ ನಿಲುವು
|