ಬಿಜಾಪುರ (ಛತ್ತೀಸ್‌ಗಢ) – ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಚಕಮಕಿಯಲ್ಲಿ 7 ನಕ್ಸಲೀಯರು ಹತರಾಗಿದ್ದಾರೆ. ಮೃತಪಟ್ಟವರಲ್ಲಿ ನಕ್ಸಲೀಯರ ಪ್ರಮುಖ ನಾಯಕರು ಸಹ ಸೇರಿದ್ದಾರೆ. ಹತರಾದ 7 ಜನರಲ್ಲಿ, ಗೌತಮ್ ಅಲಿಯಾಸ್ ಸುಧಾಕರ್ ಮತ್ತು ಭಾಸ್ಕರ್ ರಾವ್ ಎಂಬ ಇಬ್ಬರನ್ನು ಗುರುತಿಸಲಾಗಿದೆ.