4 ವರ್ಷದ ಬಾಲಕಿಯ ಮೇಲೆ 20 ವರ್ಷದ ಯುವಕನಿಂದ ಅತ್ಯಾಚಾರದ ಪ್ರಕರಣ
ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶ ಉಚ್ಚ ನ್ಯಾಯಾಲಯ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ 20 ವರ್ಷದ ಯುವಕನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿದೆ. ಬಾಲಕಿ ಅಂಗವಿಕಲಳಾಗಿದ್ದರಿಂದ ಕೆಳ ನ್ಯಾಯಾಲಯವು ದೋಷಿ ಯುವಕನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿವೇಕ ಅಗರ್ವಾಲ ಮತ್ತು ನ್ಯಾಯಮೂರ್ತಿ ದೇವನಾರಾಯಣ ಮಿಶ್ರಾ ಅವರ ವಿಭಾಗೀಯ ಪೀಠವು ತೀರ್ಪಿನಲ್ಲಿ, “ಆರೋಪಿಯು 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ, ನಂತರ ಅವಳ ಕತ್ತು ಹಿಸುಕಿದ್ದಾನೆ ಮತ್ತು ‘ಅವಳು ಸತ್ತಿದ್ದಾಳೆ’ ಎಂದು ಭಾವಿಸಿ ಯಾರೂ ಅವಳನ್ನು ಹುಡುಕಲು ಸಾಧ್ಯವಾಗದ ಸ್ಥಳದಲ್ಲಿ ಎಸೆದಿದ್ದಾನೆ; ಆದರೆ ಅವನು ಈ ಅಪರಾಧವನ್ನು ಕ್ರೂರವಾಗಿ ಮಾಡಿಲ್ಲ ಎಂಬುದು ಸಹ ಸ್ಪಷ್ಟವಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಯಾವುದೇ ಅತ್ಯಾಚಾರ ಅಥವಾ ಕೊಲೆ ಪ್ರಕರಣ ದಾಖಲಾಗಿಲ್ಲ. ಆರೋಪಿ ಅನಕ್ಷರಸ್ಥನಾಗಿದ್ದಾನೆ. ಆರೋಪಿ ಆದಿವಾಸಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಹಾಗೆಯೇ, ಸಂತ್ರಸ್ತ ಬಾಲಕಿ ಶಾಶ್ವತವಾಗಿ ಅಂಗವಿಕಲಳು ಎಂಬುದಕ್ಕೆ ಯಾವುದೇ ದೃಢವಾದ ವೈದ್ಯಕೀಯ ಪುರಾವೆ ಲಭ್ಯವಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಉಚ್ಚ ನ್ಯಾಯಾಲಯ ಆರೋಪಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಬದಲಾಯಿಸಿ, 25 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದೆ.
ಈ ಘಟನೆ ಅಕ್ಟೋಬರ್ 2022ರಲ್ಲಿ ನಡೆದಿದೆ. ಆರೋಪಿಯು ಸಂತ್ರಸ್ತ ಬಾಲಕಿಯ ಗುಡಿಸಲಿಗೆ ನುಗ್ಗಿ ಅಪಹರಿಸಿ ಅತ್ಯಾಚಾರ ಎಸಗಿದ್ದ. ಬಳಿಕ ಆರೋಪಿಯು ಬಾಲಕಿಯ ಕತ್ತು ಹಿಸುಕಿ ಅವಳನ್ನು ಕೊಲ್ಲಲು ಪ್ರಯತ್ನಿಸಿದ್ದ. ಬಾಲಕಿ ಸತ್ತಿದ್ದಾಳೆ ಎಂದು ಭಾವಿಸಿ ಮಾವಿನ ತೋಟದಲ್ಲಿ ಎಸೆದ್ದಿದ್ದನು.