Pakistan Munir Trump Nobel Prize : ನನಗೆ ಎಂದಿಗೂ ನೊಬೆಲ್ ಪ್ರಶಸ್ತಿ ನೀಡಲಾಗುವುದಿಲ್ಲ! – ಡೊನಾಲ್ಡ್ ಟ್ರಂಪ್

ಕೇವಲ ಲಿಬರಲ್ ಗಳಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಆರೋಪ

ವಾಷಿಂಗ್ಟನ್ (ಅಮೆರಿಕ) – ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರು ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷವನ್ನು ತಡೆಗಟ್ಟಿದ ಶ್ರೇಯಸ್ಸನ್ನು ಡೊನಾಲ್ಡ್ ಟ್ರಂಪ್‌ಗೆ ನೀಡುತ್ತಾ ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ನೀಡಬೇಕೆಂದು ಬೇಡಿಕೆ ಮಾಡಿದರು. ಈ ಬಗ್ಗೆ ಸಾಕಷ್ಟು ಚರ್ಚೆಯಾದ ನಂತರ, ಈಗ ಸ್ವತಃ ಟ್ರಂಪ್ ಅವರು ನೊಬೆಲ್ ಪ್ರಶಸ್ತಿಯ ಬಗ್ಗೆ ಮಾತನಾಡಿದ್ದಾರೆ. ಅವರು, “ವಾಸ್ತವವಾಗಿ ರುವಾಂಡಾ-ಕಾಂಗೋ, ಇವರ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು. ಇದರೊಂದಿಗೆ, ಸರ್ಬಿಯಾ-ಕೊಸೊವೊ ನಡುವಿನ ಸಂಘರ್ಷವನ್ನು ನಿಲ್ಲಿಸುವಲ್ಲಿ ನನ್ನ ಪಾತ್ರ ಮಹತ್ವದ್ದಾಗಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವು ದೊಡ್ಡದಾಗಿತ್ತು. ಅದನ್ನೂ ನಾನು ನಿಲ್ಲಿಸಿದೆ. ಆದ್ದರಿಂದ ನನಗೆ 4-5 ಬಾರಿ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು. ಆದರೆ ನನಗೆ ಎಂದಿಗೂ ಈ ಪ್ರಶಸ್ತಿ ಸಿಗುವುದಿಲ್ಲ; ಏಕೆಂದರೆ ಅವರು (ನೊಬೆಲ್ ಪ್ರಶಸ್ತಿಗಾಗಿ ವ್ಯಕ್ತಿಗಳನ್ನು ಆಯ್ಕೆ ಮಾಡುವವರು) ಕೇವಲ ಲಿಬರಲ್ ಜನರಿಗೆ ಪ್ರಶಸ್ತಿ ನೀಡುತ್ತಾರೆ”, ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತೀಯರ ದೃಷ್ಟಿಯಲ್ಲಿ ಕ್ಷಣಕ್ಷಣಕ್ಕೂ ಗೋಸುಂಬಿಯಂತೆ ಬಣ್ಣ ಬದಲಿಸುವ ಟ್ರಂಪ್ ಮತ್ತು ಅನೇಕ ವಿವಾದಿತ ವ್ಯಕ್ತಿಗಳಿಗೆ ನೀಡಲಾಗುವ ನೊಬೆಲ್ ಪ್ರಶಸ್ತಿ, ಇವರಿಬ್ಬರದೂ ವಿಶ್ವಾಸಾರ್ಹತೆಯಲ್ಲಿ ಶೂನ್ಯ!