Forced Hindu Conversion Islam : ಪಾಕಿಸ್ತಾನದಲ್ಲಿ ನಾಲ್ಕು ಹಿಂದೂ ಸಹೋದರ-ಸಹೋದರಿಯರ ಅಪಹರಣ ಮತ್ತು ಮತಾಂತರ!

ನ್ಯಾಯಕ್ಕಾಗಿ ಅಂಗಲಾಚಿದ ತಾಯಿ!

ಇಸ್ಲಾಮಾಬಾದ – ಸಿಂಧ್ ಪ್ರಾಂತ್ಯದ ಶಹದಾದ್‌ಪುರದಲ್ಲಿ ನಾಲ್ಕು ಹಿಂದೂ ಸಹೋದರ- ಸಹೋದರಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದೆ. ಜಿಯಾ ಬಾಯಿ (22 ವರ್ಷ), ದಿಯಾ ಬಾಯಿ (20 ವರ್ಷ) ಮತ್ತು ದಿಶಾ ಬಾಯಿ (16 ವರ್ಷ) ಎಂಬ ಮೂವರು ಸಹೋದರಿಯರು ಹಾಗೂ ಅವರ ಕಿರಿಯ ಸಹೋದರ ಹರಜಿತ್ ಕುಮಾರ್ (13 ವರ್ಷ) ಎಂಬ ನಾಲ್ವರು ಸಹೋದರ-ಸಹೋದರಿಯರನ್ನು ಅಪಹರಿಸಲಾಗಿದೆ. ಈ ಘಟನೆಯಿಂದ ಸ್ಥಳೀಯ ಹಿಂದೂ ಸಮುದಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಮಕ್ಕಳ ತಾಯಿ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ. ತಾಯಿ, “ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಧರ್ಮ ಅರ್ಥವಾಗುವುದಿಲ್ಲ” ಎಂದು ಹೇಳಿದ್ದಾರೆ.

ಅವರು ‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ’ಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಝರ್ದಾರಿ ಅವರಿಗೆ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ವಿನಂತಿಸಿದ್ದಾರೆ. ಸ್ಥಳೀಯ ಕಂಪ್ಯೂಟರ್ ಶಿಕ್ಷಕ ಫರಹಾನ್ ಖಾಸಖೇಲಿ ಎಂಬಾತನು ಮಕ್ಕಳನ್ನು ಆಮಿಷವೊಡ್ಡಿ ಅಪಹರಿಸಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ.

ಪಾಕಿಸ್ತಾನಿ ಮಾಧ್ಯಮಗಳ ವರದಿಗಳ ಪ್ರಕಾರ, ಕುಟುಂಬದ ಪ್ರತಿಭಟನೆಯ ನಂತರ ಪೊಲೀಸರು ಈ ಮಕ್ಕಳನ್ನು ಶಹದಾದಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವರಲ್ಲಿ ಇಬ್ಬರು ವಯಸ್ಕ ಸಹೋದರಿಯರನ್ನು ಆಶ್ರಯ ಗೃಹಕ್ಕೆ ಕಳುಹಿಸಲಾಗಿದೆ, ಆದರೆ ಒಬ್ಬ ಅಪ್ರಾಪ್ತ ಸಹೋದರಿ ಮತ್ತು ಒಬ್ಬ ಸಹೋದರನನ್ನು ಅವರ ಪೋಷಕರಿಗೆ ಒಪ್ಪಿಸಲಾಯಿತು. ಪಾಕಿಸ್ತಾನದ ಮಾಧ್ಯಮಗಳು “ಈ ನಾಲ್ಕು ಸಹೋದರ-ಸಹೋದರಿಯರು ಯಾವುದೇ ಒತ್ತಡವಿಲ್ಲದೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ” ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿವೆ. ಇನ್ನೊಂದೆಡೆ, ಮಕ್ಕಳ ಕುಟುಂಬದವರು “ಪೊಲೀಸರ ಒತ್ತಡದಿಂದ ಮಕ್ಕಳು ಹೆದರಿದ್ದಾರೆ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಈ ಜಗತ್ತಿನಲ್ಲಿ ಹಿಂದೂಗಳಿಗೆ ಯಾರೂ ದಿಕ್ಕಿಲ್ಲ ಎಂಬುದನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳ ಮೇಲೆ ಮತ್ತು ಭಾರತದ ಹಿಂದೂಗಳ ಮೇಲೂ ಪ್ರತಿದಿನ ನಡೆಯುತ್ತಿರುವ ದೌರ್ಜನ್ಯಗಳು ತೋರಿಸುತ್ತವೆ. ಇದು 115 ಕೋಟಿ ಹಿಂದೂಗಳಿಗೆ ಅತ್ಯಂತ ನಾಚಿಕೆಗೇಡಿನ ಸಂಗತಿ! ಈ ಚಿತ್ರಣವನ್ನು ಬದಲಿಸಲು ಹಿಂದೂ ರಾಷ್ಟ್ರವೇ ಬೇಕು!