ಸಿಂಧೂ ನದಿ ನೀರನ್ನು ಬೇರೆ ರಾಜ್ಯಗಳಿಗೆ ನೀಡಲ್ಲ! – ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

ಅಮೃತಸರ (ಪಂಜಾಬ) – ಭಾರತವು ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಹಂಚಿಕೆ ಒಪ್ಪಂದವನ್ನು ರದ್ದುಪಡಿಸಿದ ನಂತರ ಪಾಕಿಸ್ತಾನದ ಕೃಷಿಗೆ ಹಾನಿಯಾಗುತ್ತಿರುವಾಗ, ಇನ್ನೊಂದೆಡೆ ಭಾರತದಲ್ಲೇ ಅಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಯತ್ನಿಸುತ್ತಿದ್ದಾರೆ. ಒಮರ್ ಅಬ್ದುಲ್ಲಾ ಅವರು ಪಂಜಾಬ್ ಸೇರಿದಂತೆ ಇತರ ರಾಜ್ಯಗಳಿಗೆ ಸಿಂಧೂ ನದಿಯ ನೀರನ್ನು ನೀಡಲು ನಿರಾಕರಿಸಿದ್ದಾರೆ.

೧. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಮಾಧ್ಯಮಗಳಿಗೆ, ಜಮ್ಮು-ಕಾಶ್ಮೀರದಲ್ಲಿರುವ ಸಿಂಧೂ, ಝೇಲಂ ಮತ್ತು ಚಿನಾಬ್ ನದಿಗಳ ನೀರನ್ನು ಮೊದಲು ರಾಜ್ಯದ ಜನರ ಉಪಯೋಗಕ್ಕೆ ಬಳಸಲಾಗುವುದು ಮತ್ತು ನಂತರವೇ ಅದನ್ನು ಬೇರೆಯವರಿಗೆ ನೀಡುವ ಬಗ್ಗೆ ಆಲೋಚಿಸಲಾಗುವುದು ಎಂದು ಹೇಳಿದ್ದಾರೆ.

೨. ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳಿಗೆ ನೀರು ಸಾಗಿಸಲು ಉದ್ದೇಶಿಸಿರುವ 113 ಕಿ.ಮೀ. ಉದ್ದದ ಕಾಲುವೆಗೆ ವಿರೋಧ ವ್ಯಕ್ತಪಡಿಸಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನಮಗೆ ಉಝ್ ಮತ್ತು ಶಾಹಪುರ್ ಖಾಂಡಿ ಯೋಜನೆಗಳಿಗೆ ಸಹಾಯ ಬೇಕಿದ್ದಾಗ ಪಂಜಾಬ ನಮ್ಮನ್ನು ಕಾಯುವಂತೆ ಮಾಡಿತು. ಈಗ ನಾವು ಅವರಿಗೆ ನೀರು ಏಕೆ ಕೊಡಬೇಕು?

ನೀರು ರಾಷ್ಟ್ರೀಯ ಸಂಪತ್ತು ಮತ್ತು ಅದರ ಮೇಲೆ ಪಂಜಾಬ್‌ಗೆ ಸಮಾನ ಹಕ್ಕಿದೆ! – ಆಮ್ ಆದ್ಮಿ ಪಕ್ಷದ ಟೀಕೆ

ಆಮ್ ಆದ್ಮಿ ಪಕ್ಷದ (ಆಪ್) ವಕ್ತಾರ ನೀಲ್ ಗರ್ಗ್

ಆಮ್ ಆದ್ಮಿ ಪಕ್ಷದ (ಆಪ್) ವಕ್ತಾರ ನೀಲ್ ಗರ್ಗ್ ಈ ಬಗ್ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿ, ಸಿಂಧೂ ನದಿ ನೀರಿನ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಒಮರ್ ಅಬ್ದುಲ್ಲಾ ಅವರಿಗೆ ಇಲ್ಲ ಎಂದು ಹೇಳಿದ್ದಾರೆ. ಈ ನೀರು ರಾಷ್ಟ್ರೀಯ ಸಂಪತ್ತು ಮತ್ತು ಅದರ ಮೇಲೆ ಪಂಜಾಬ್‌ಗೆ ಸಮಾನ ಹಕ್ಕಿದೆ. ನದಿ ನೀರು ಹಂಚಿಕೆಯಂತಹ ಪ್ರಮುಖ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರ ಇದೆ. ಪಂಜಾಬ್ ಗಡಿ ರಾಜ್ಯವಾಗಿದ್ದು, ಪ್ರತಿಯೊಂದು ಯುದ್ಧದಲ್ಲೂ ದೇಶವನ್ನು ರಕ್ಷಿಸುವಲ್ಲಿ ಮುಂಚೂಣಿಯಲ್ಲಿದೆ. ಈ ರಾಜ್ಯವು ದೇಶದ ಆಹಾರ ಸಂಗ್ರಹವನ್ನು ತುಂಬುತ್ತದೆ; ಆದರೆ ಈ ಪ್ರಯತ್ನದಲ್ಲಿ ಪಂಜಾಬ್‌ನ ಅಂತರ್ಜಲವು ಸಂಕಷ್ಟಕ್ಕೆ ಸಿಲುಕಿದೆ. ಭಾರತವು ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ ಸಿಂಧೂ ನದಿ ನೀರಿನ ಸಮಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಪಂಜಾಬ್‌ಗೆ ಅದರ ಹಕ್ಕನ್ನು ನೀಡುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಮರ್ ಅಬ್ದುಲ್ಲಾ ಅವರಿಗೆ ಇಂತಹ ಅಧಿಕಾರವನ್ನು ಯಾರು ನೀಡಿದರು? ಕೇಂದ್ರ ಸರಕಾರದ ಜವಾಬ್ದಾರಿ ಇರುವಾಗ ಅಬ್ದುಲ್ಲಾ ಇಂತಹ ಹೇಳಿಕೆ ನೀಡುತ್ತಿದ್ದರೆ, ಅವರ ಮೇಲೆ ದೇಶದ್ರೋಹದ ದೂರು  ದಾಖಲಿಸಬೇಕು!