ಹಿಂದೂಗಳು, ಯಹೂದಿಗಳು ಮತ್ತು ಕ್ರೈಸ್ತರ ನರಮೇಧಕ್ಕೆ ಬೆಂಬಲ
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಸಂಸತ್ತಿನಲ್ಲಿ ಸಂಸದ ಮುಜಾಹಿದ ಅಲಿ ಅವರು ಸಂಸತ್ತಿನಲ್ಲಿ ಹಿಂದೂಗಳು, ಕ್ರೈಸ್ತರು ಮತ್ತು ಯಹೂದಿಗಳ ನರಮೇಧವನ್ನು ಬೆಂಬಲಿಸಿದ್ದಾರೆ. ಈ ವೇಳೆ ಸಂಸತ್ತಿನ ಎಲ್ಲಾ ಸದಸ್ಯರು ಅಲಿ ಅವರ ಹೇಳಿಕೆಯನ್ನು ಚಪ್ಪಾಳೆ ತಟ್ಟಿ ಬೆಂಬಲಿಸಿದರು. ಅಲಿ ಈ ಸಮಯದಲ್ಲಿ ಭಾರತದ ವಿರುದ್ಧ ‘ಘಜ್ವಾ-ಎ-ಹಿಂದ್’ (ನಾಸ್ತಿಕರನ್ನು ಕೊಲ್ಲುವ ಯುದ್ಧ) ನಡೆಸುವ ಬಗ್ಗೆಯೂ ಉಲ್ಲೇಖಿಸಿದರು.
ಮುಸಲ್ಮಾನರು ಯಹೂದಿಗಳು ಮತ್ತು ಕ್ರೈಸ್ತರನ್ನು ಸೋಲಿಸುವರು!
ಮುಜಾಹಿದ ಅಲಿ ಮಾತು ಮುಂದುವರೆಸಿ, ಮುಸ್ಲಿಮೇತರರು ಮುಸಲ್ಮಾನರ ವಿರುದ್ಧ ‘ಒಡೆದು ಆಳುವ’ ನೀತಿಯನ್ನು ಅನುಸರಿಸುತ್ತಿದ್ದಾರೆ. ಅವರು ನಿರಂತರವಾಗಿ ಈ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ಅದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಇಸ್ಲಾಂ ಧರ್ಮವನ್ನು ರಕ್ಷಿಸಲು ಹೇಳಲಾಗಿದೆ. ಇದಕ್ಕಾಗಿ ಮುಸಲ್ಮಾನರ ಸಭೆಯು ಇರಾನನಲ್ಲಿರುವ ಒಂದು ನಗರದ ಹೆಸರಾದ ಮತ್ತು ಅಫ್ಘಾನಿಸ್ತಾನದ ಹಳೆಯ ಹೆಸರಾದ ‘ಖುರಾಸಾನ್’ ನಲ್ಲಿ ನಡೆಯಲಿದೆ. ಅಲ್ಲಿಂದ ಕಪ್ಪು ತಲೆಪಟ್ಟಿಗಳನ್ನು ಧರಿಸಿದ ಜನರು ಎದ್ದು ಧರ್ಮವನ್ನು ರಕ್ಷಿಸುತ್ತಾರೆ. ‘ಹದೀಸ್’ನಲ್ಲಿಯೂ (ನಿರ್ದಿಷ್ಟ ಪರಿಸ್ಥಿತಿಯಲ್ಲಿ ಪ್ರವಾದಿ ಮುಹಮ್ಮದ ಹೇಗೆ ವರ್ತಿಸಿದರು, ಹೇಗೆ ಮಾತನಾಡಿದರು ಎಂಬುದರ ಸಂಗ್ರಹ) ಇದಕ್ಕೆ ಪುರಾವೆಗಳಿವೆ. ಅದರಲ್ಲಿ, ಮುಸಲ್ಮಾನರು ಮುಸ್ಲಿಮೇತರ ಯಹೂದಿಗಳು ಮತ್ತು ಕ್ರೈಸ್ತರನ್ನು ಸೋಲಿಸುತ್ತಾರೆ ಎಂದೂ ಹೇಳಲಾಗಿದೆ.
ಪಾಕಿಸ್ತಾನವು ಇಸ್ಲಾಮಿಕ ಜಗತ್ತಿನ ‘ಮುಖ್ಯ ಕಚೇರಿ’!
ಸಂಸದ ಮುಜಾಹಿದ ಅಲಿ ಮಾತು ಮುಂದುವರೆಸಿ, ಪಾಕಿಸ್ತಾನವು ಇಸ್ಲಾಮಿಕ ಜಗತ್ತಿನ ‘ಮುಖ್ಯ ಕಚೇರಿ’ ಆಗಿದೆ. ಇಲ್ಲಿ ಅತ್ಯುತ್ತಮ ನೆಲೆಗಳಿವೆ. ನಮ್ಮ ವಾಯುಪಡೆ ಭಾರತಕ್ಕೆ ಪ್ರತಿಕ್ರಿಯಿಸಿದ ರೀತಿ ಶ್ಲಾಘನೀಯವಾಗಿತ್ತು. ಆದರೆ ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ, ಶಕ್ತಿಯ ವಿಷಯದಲ್ಲಿ ನಮಗೆ ಭಾರತದೊಂದಿಗೆ ಯಾವುದೇ ಸ್ಪರ್ಧೆ ಇಲ್ಲ. ಆದರೆ ‘ಕಲ್ಮಾ’ (ಅಲ್ಲಾಹನನ್ನು ಸ್ತುತಿಸುವ ಹೇಳಿಕೆಗಳು) ಶಕ್ತಿ ಅಣುಬಾಂಬಗಿಂತಲೂ ಹೆಚ್ಚು ತೂಕವನ್ನು ಹೊಂದಿದೆ.
ನಮ್ಮ ಸೈನ್ಯವು ಶತ್ರುವಾದ ಹಿಂದೂಗಳ ಮುಂದೆ ನಿಂತಾಗ, ಸೈನ್ಯದ ಆತ್ಮವಿಶ್ವಾಸ ವಿಭಿನ್ನವಾಗಿರುತ್ತದೆ!
ನಮ್ಮ ಸೈನ್ಯವು ಶತ್ರುವಿನ ಮುಂದೆ ನಿಂತಾಗ, ಅದು ಹಿಂದೂ ಶತ್ರುವಾಗಿದ್ದಾಗ, ಸೈನ್ಯದ ಆತ್ಮವಿಶ್ವಾಸವು ವಿಭಿನ್ನವಾಗಿರುತ್ತದೆ ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವುಪಾಕಿಸ್ತಾನವನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸಲು ಮತ್ತು ಅದರ ಮೇಲೆ ನಿರ್ಬಂಧಗಳನ್ನು ವಿಧಿಸಲು ಜಗತ್ತು ಪ್ರಯತ್ನಿಸುವುದು ಎಷ್ಟು ಅವಶ್ಯಕ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ! |