|
(‘ಸೆಪ್ಟಿಕ ಟ್ಯಾಂಕ್’ ಎಂದರೆ ತ್ಯಾಜ್ಯ ನೀರು ಸಂಗ್ರಹಿಸುವ ಸ್ಥಳ)
ಡಬ್ಲಿನ (ಐರ್ಲೆಂಡ್) – ಐರ್ಲೆಂಡ್‌ನಲ್ಲಿ ‘ಚರ್ಚ್ ಆಫ್ ಐರ್ಲೆಂಡ್’ ವತಿಯಿಂದ ನಡೆಸಲಾಗುತ್ತಿದ್ದ ‘ಬಾನ್ ಸೆಕೋರ್ಸ್ ಮದರ್ ಅಂಡ್ ಬೇಬಿ ಹೋಮ್’ ಆಶ್ರಮದ ‘ಸೆಪ್ಟಿಕ್ ಟ್ಯಾಂಕ್’ನಲ್ಲಿ 2014ರಲ್ಲಿ 796 ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದವು. ಈಗ 11 ವರ್ಷಗಳ ನಂತರ ಈ ‘ಸೆಪ್ಟಿಕ್ ಟ್ಯಾಂಕ್’ನಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ. ‘ನ್ಯೂಯಾರ್ಕ್ ಪೋಸ್ಟ್’ ವರದಿಯ ಪ್ರಕಾರ, ಈ ಆಶ್ರಮದಲ್ಲಿ ಮಕ್ಕಳನ್ನು ಕೊಂದು ಹೂಳಲಾಗಿತ್ತು. ಈಗ ನಡೆಯುತ್ತಿರುವ ಉತ್ಖನನದಿಂದ ಅಲ್ಲಿನ ಅತ್ಯಂತ ಪ್ರಭಾವಶಾಲಿ ಚರ್ಚ್ ಎಂದು ಪರಿಗಣಿಸಲಾಗುವ ‘ಚರ್ಚ್ ಆಫ್ ಐರ್ಲೆಂಡ್’ನ ಇನ್ನಷ್ಟು ಕರಾಳ ಕೃತ್ಯಗಳು ಬಯಲಾಗಲಿವೆ.
1.ಐರ್ಲೆಂಡ್‌ನಲ್ಲಿ ‘ಚರ್ಚ್ ಆಫ್ ಐರ್ಲೆಂಡ್’ ವತಿಯಿಂದ ‘ಬಾನ್ ಸೆಕೋರ್ಸ್ ಮದರ್ ಅಂಡ್ ಬೇಬಿ ಹೋಮ್’ ಎಂಬ ಆಶ್ರಮವನ್ನು ಅವಿವಾಹಿತ ತಾಯಂದಿರಿಗೆ ಪ್ರಾರಂಭಿಸಲಾಗಿತ್ತು. ಈ ಆಶ್ರಮದಲ್ಲಿ ಸನ್ಯಾಸಿನಿಯರಾಗಿದ್ದ ಅವಿವಾಹಿತ ಮಹಿಳೆಯರಿಗೆ ಜನಿಸಿದ ನವಜಾತ ಶಿಶುಗಳನ್ನು ಈ ‘ಸೆಪ್ಟಿಕ್ ಟ್ಯಾಂಕ್’ಗೆ ಎಸೆಯಲಾಗುತ್ತಿತ್ತು. 1925ರಿಂದ 1961ರವರೆಗೆ, ಅಂದರೆ 36 ವರ್ಷಗಳ ಕಾಲ, ಈ ಅಮಾನವೀಯ ಕೃತ್ಯವನ್ನು ನಡೆಸಲಾಯಿತು. ಈ ಭಯಾನಕ ಹತ್ಯಾಕಾಂಡವನ್ನು ಇತಿಹಾಸಕಾರ ಕ್ಯಾಥರೀನ್ ಕಾರ್ಲೆಸ್ ಅವರು ಮೊಟ್ಟಮೊದಲ ಬಾರಿಗೆ ಬಹಿರಂಗಪಡಿಸಿದರು.
ಕ್ಯಾಥೊಲಿಕ್ ಕ್ರಿಶ್ಚಿಯನ್ ಪಂಥದ ಘನತೆಯನ್ನು ಕಾಪಾಡಿಕೊಳ್ಳಲು ಅವಿವಾಹಿತ ಗರ್ಭಿಣಿ ಮಹಿಳೆಯರನ್ನು ಪ್ರಸವಕ್ಕಾಗಿ ‘ಬಾನ್ ಸೆಕೋರ್ಸ್ ಮದರ್ ಅಂಡ್ ಬೇಬಿ ಹೋಮ್’ ಆಶ್ರಮಕ್ಕೆ ಕಳುಹಿಸಲಾಗುತ್ತಿತ್ತು. ಆ ಸ್ಥಿತಿಯಲ್ಲಿ ಅವರನ್ನು ಒಂದು ವರ್ಷದವರೆಗೆ ವೇತನವಿಲ್ಲದೆ ಕೆಲಸ ಮಾಡಲು ಒತ್ತಾಯಿಸಲಾಗುತ್ತಿತ್ತು. ಅವರನ್ನು ಗೃಹಬಂಧನದಲ್ಲಿ ಇಡಲಾಗುತ್ತಿತ್ತು. ಈ ಮಹಿಳೆಯರು ಅಲ್ಲೇ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಹುಟ್ಟಿದ ತಕ್ಷಣ ತಾಯಂದಿರನ್ನು ಅವರ ನವಜಾತ ಶಿಶುಗಳಿಂದ ಪ್ರತ್ಯೇಕಿಸಲಾಗುತ್ತಿತ್ತು. ಈ ಮಕ್ಕಳನ್ನು ಯಾರಾದರೂ ದತ್ತು ತೆಗೆದುಕೊಳ್ಳುವವರೆಗೆ ಇತರ ಸನ್ಯಾಸಿನಿಯರು ಅವರನ್ನು ನೋಡಿಕೊಳ್ಳುತ್ತಿದ್ದರು. ಮಗುವನ್ನು ದತ್ತು ತೆಗೆದುಕೊಂಡ ನಂತರವೂ, ಯಾರು ದತ್ತು ತೆಗೆದುಕೊಂಡರು? ಯಾವಾಗ ತೆಗೆದುಕೊಂಡರು? ಇತ್ಯಾದಿ ಯಾವುದೇ ಮಾಹಿತಿಯನ್ನು ತಾಯಂದಿರಿಗೆ ನೀಡಲಾಗುತ್ತಿರಲಿಲ್ಲ. ಇದರ ನಂತರ ಈ ತಾಯಂದಿರನ್ನು ವೇಶ್ಯಾವೃತ್ತಿಗೆ ತಳ್ಳಲಾಗುತ್ತಿತ್ತು.
3. 1971ರಲ್ಲಿ ಈ ಆಶ್ರಮವನ್ನು ಕೆಡವಲಾಯಿತು ಮತ್ತು ಅದನ್ನು ನಡೆಸುತ್ತಿದ್ದ ಸಂಸ್ಥೆಯ ಮಾನ್ಯತೆಯನ್ನು 1972ರಲ್ಲಿ ರದ್ದುಪಡಿಸಲಾಯಿತು.
4. 2014 ರಲ್ಲಿ ‘ಚರ್ಚ್ ಆಫ್ ಐರ್ಲೆಂಡ್’ನ ಕರಾಳ ಸತ್ಯ ಬಯಲಾಗಿತ್ತು. ನಂತರ ಅಲ್ಲಿನ ಸರಕಾರವು ಈ ಅಮಾನವೀಯ ಘಟನೆಗಾಗಿ ಅಧಿಕೃತವಾಗಿ ಕ್ಷಮೆಯಾಚಿಸಿತು. ಆ ಬಳಿಕ ಐರ್ಲೆಂಡ್ ಸಂಸತ್ತು 2022 ರಲ್ಲಿ ಒಂದು ಕಾನೂನನ್ನು ಅಂಗೀಕರಿಸಿ ಅಲ್ಲಿ ಉತ್ಖನನ ಕಾರ್ಯವನ್ನು ಪ್ರಾರಂಭಿಸಿತು. ಈಗ ಇದೇ ಕೆಲಸವನ್ನು ಮತ್ತೆ ಪ್ರಾರಂಭಿಸಲಾಗುವುದು. ನವಜಾತ ಶಿಶುಗಳ ಅವಶೇಷಗಳು ಇನ್ನೂ ‘ಬಾನ್ ಸೆಕೋರ್ಸ್ ಮದರ್ ಅಂಡ್ ಬೇಬಿ ಹೋಮ್’ ನ ಭೂಗರ್ಭದಲ್ಲಿವೆ ಎಂದು ನಂಬಲಾಗಿದೆ. ಅವುಗಳನ್ನು ಹುಡುಕಲು ಈ ಉತ್ಖನನವನ್ನು ನಡೆಸಲಾಗುತ್ತಿದೆ.
ಸಂಪಾದಕೀಯ ನಿಲುವು
|