Fake Rape Case Women Jailed : ಸಾಮೂಹಿಕ ಅತ್ಯಾಚಾರದ ಸುಳ್ಳು ಆರೋಪ ಮಾಡಿದ ಮಹಿಳೆಗೆ ಏಳೂವರೆ ವರ್ಷಗಳ ಜೈಲು ಶಿಕ್ಷೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿನ ನ್ಯಾಯಾಲಯವು ಸಾಮೂಹಿಕ ಅತ್ಯಾಚಾರದ ಸುಳ್ಳು ದೂರು ದಾಖಲಿಸಿದ್ದ ಮಹಿಳೆಯೊಬ್ಬರಿಗೆ ಏಳೂವರೆ ವರ್ಷಗಳ ಶಿಕ್ಷೆ ಮತ್ತು 2 ಲಕ್ಷ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ರೇಖಾ ದೇವಿ ಎಂಬ ಮಹಿಳೆ ಮಾಡಿದ್ದ ಸಾಮೂಹಿಕ ಅತ್ಯಾಚಾರ ಆರೋಪದ ಮತ್ತು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಕಾಯ್ದೆಯ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ. ವಿರೋಧಿಗಳನ್ನು ಸಿಲುಕಿಸಲು ರೇಖಾ ದೇವಿಯು ರಾಜೇಶ ಮತ್ತು ಭೂಪೇಂದ್ರ ವಿರುದ್ಧ ಸಾಮೂಹಿಕ ಅತ್ಯಾಚಾರದ ಸುಳ್ಳು ದೂರು ದಾಖಲಿಸಿದ್ದರು. ಪೊಲೀಸರ ತನಿಖೆಯಲ್ಲೂ ಈ ಆರೋಪಗಳು ಸುಳ್ಳು ಎಂದು ಸಾಬೀತಾಗಿದೆ.

೧. ಈ ವಿಚಾರಣೆಯಲ್ಲಿ ನ್ಯಾಯಾಲಯವು, ‘ಇಂತಹ ಪ್ರಕರಣಗಳಲ್ಲಿ ಸಿಗುವ ಪರಿಹಾರದ ಹಣದಿಂದ ಸುಳ್ಳು ದೂರುಗಳನ್ನು ದಾಖಲಿಸುವ ಪ್ರಮಾಣ ಹೆಚ್ಚುತ್ತಿದೆ’ ಎಂದೂ ಹೇಳಿದೆ. ಪೊಲೀಸ್ ತನಿಖೆ ಪೂರ್ಣಗೊಂಡು ಆರೋಪಪಟ್ಟಿ ಸಲ್ಲಿಸಿದ ನಂತರವೇ ಪರಿಹಾರದ ಹಣವನ್ನು ನೀಡುವಂತೆ ನ್ಯಾಯಾಲಯವು ಲಕ್ಷ್ಮಣಪುರಿ ಜಿಲ್ಲಾಧಿಕಾರಿಗೆ ಆದೇಶಿಸಿದೆ.

೨. ನ್ಯಾಯಾಲಯವು ರೇಖಾ ದೇವಿಗೆ ವಿಧಿಸಿದ ದಂಡದ ಅರ್ಧದಷ್ಟು ಹಣವನ್ನು ರಾಜೇಶ ಮತ್ತು ಭೂಪೇಂದ್ರ ಅವರಿಗೆ ನೀಡುವಂತೆ ಆದೇಶಿಸಿದೆ. ವಿಚಾರಣೆ ವೇಳೆ ಭೂಪೇಂದ್ರ ನಿಧನರಾಗಿದ್ದರಿಂದ, ಪರಿಹಾರದ ಮೊತ್ತವನ್ನು ಅವರ ಕುಟುಂಬಕ್ಕೆ ನೀಡಲಾಗುವುದು.

ಸಂಪಾದಕೀಯ ನಿಲುವು

ಅತ್ಯಾಚಾರದ ಸುಳ್ಳು ಆರೋಪ ಮಾಡುವವರಿಗೆ ಇಂತಹ ಶಿಕ್ಷೆ ಆಗಲೇಬೇಕು!