ಅಖಂಡ ಭಾರತ ನಿರ್ಮಾಣದ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನಿಂದ ವಿರೋಧ ಹಾಗೂ ಪೊಲೀಸರಿಂದ ನೋಟಿಸ್ ಜಾರಿ !

  • ಕುಂದಾಪುರದಲ್ಲಿ ನಡೆದ ಘಟನೆ

  • ಕಾಂಗ್ರೆಸ್ ದೂರಿನ ಮೇರೆಗೆ ಪೊಲೀಸರಿಂದ ಆಯೋಜಕರಿಗೆ ನೋಟಿಸ್!

  • ಚಕ್ರವರ್ತಿ ಸೂಲಿಬೆಲೆ ಭಾಷಣ ನಡೆಯಲಿದೆ!

ಮಂಗಳೂರು – ಇಲ್ಲಿ ಜೂನ್ 20 ರಿಂದ 22 ರವರೆಗೆ ಪ್ರಖರ ಹಿಂದುತ್ವನಿಷ್ಠ ನಾಯಕ ಚಕ್ರವರ್ತಿ ಸೂಲಿಬೆಲೆ ಅವರ ‘ಇನಿಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂಬಂಧ ಕಾರ್ಯಕ್ರಮದ ಆಯೋಜಕರಿಗೆ ಕುಂದಾಪುರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಅದರಲ್ಲಿ ‘ಕಾರ್ಯಕ್ರಮದ ವಿವರಗಳನ್ನು ಮುಂಚಿತವಾಗಿ ನೀಡಬೇಕು’, ‘ಕಾರ್ಯಕ್ರಮಕ್ಕೆ ಹಾಜರಾಗುವ ಗಣ್ಯರು ಮತ್ತು ವೇದಿಕೆಯಲ್ಲಿರುವವರ ಮಾಹಿತಿ ನೀಡಬೇಕು’, ‘ಯಾವುದೇ ಧರ್ಮವನ್ನು ನೋಯಿಸುವ ಅಥವಾ ರಾಜಕೀಯ ನಾಯಕರನ್ನು ಅವಮಾನಿಸುವ’ ಉಪನ್ಯಾಸ ನೀಡಬಾರದು, ಹಾಗೂ ‘ಹಾಜರಾಗುವವರ ಸಂಖ್ಯೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಕುರಿತು ಮಾಹಿತಿ ನೀಡಬೇಕು’ ಎಂದು ಮಾಹಿತಿ ಕೇಳಲಾಗಿದೆ.

ಕಾನೂನಿನ ಉಲ್ಲಂಘನೆಯಾದರೆ ಆಯೋಜಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಈ ನೋಟಿಸ್ ಮೂಲಕ ಎಚ್ಚರಿಕೆ ನೀಡಲಾಗಿದೆ. ಕಾಂಗ್ರೆಸ್ ಸೂಲಿಬೆಲೆ ಅವರ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ನೋಟಿಸ್ ಜಾರಿ ಮಾಡಿದ್ದಾರೆ. (ಆಡಳಿತಾರೂಢ ಕಾಂಗ್ರೆಸ್‌ನ ತಾಳಕ್ಕೆ ತಕ್ಕಂತೆ ಕುಣಿಯುವ ಕರ್ನಾಟಕ ಪೊಲೀಸರು, ಹೀಗೆ ಯಾರಿಗಾದರೂ ಅನಿಸಿದರೆ ತಪ್ಪೇನು? – ಸಂಪಾದಕರು)

ಕುಂದಾಪುರ ವಿಭಾಗದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಅವರು ಪೊಲೀಸರಿಗೆ ಪತ್ರ ಬರೆದು, ಸೂಲಿಬೆಲೆ ಅವರ ಮೇಲೆ ದ್ವೇಷ ಭಾಷಣದ ಆರೋಪಗಳಿವೆ. ಅವರ ಭಾಷಣಗಳಿಂದ ಧರ್ಮಗಳ ನಡುವಿನ ಸಾಮರಸ್ಯ ಕೆಡಿಸಿದ್ದು, ರಾಜ್ಯದ ವಿವಿಧ ಪೊಲೀಸ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಇದರಿಂದ ಈ ಕಾರ್ಯಕ್ರಮದ ಬಗ್ಗೆ ತನಿಖೆ ನಡೆಸಬೇಕು ಮತ್ತು ಉಪನ್ಯಾಸದಲ್ಲಿ ಕೋಮುವಾದಿ ಭಾಷಣದ ಮೂಲಕ ಕುಂದಾಪುರ ಪ್ರದೇಶದಲ್ಲಿ ಸಾಮರಸ್ಯ ಕೆಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು, ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದು ನನ್ನ ಮೇಲಿನ ಅಘೋಷಿತ ಗಡಿಪಾರು ಪ್ರಯತ್ನ ! – ಚಕ್ರವರ್ತಿ ಸೂಲಿಬೆಲೆ

ಈ ನೋಟಿಸ್‌ಗೆ ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ ಇವರು, ‘ಪ್ರಚೋದನಕಾರಿ ಭಾಷಣ ಮಾಡಬೇಡಿ’ ಎಂದು ನನಗೆ ಹಲವು ಬಾರಿ ಹೇಳಲಾಗಿದೆ; ಆದರೆ ಈ ಬಾರಿ ‘ರಾಜಕೀಯ ವಿಷಯಗಳ ಬಗ್ಗೆ ಮಾತನಾಡಬೇಡಿ’ ಮತ್ತು ‘ಯಾವುದೇ ನಾಯಕನನ್ನು ಅವಮಾನಿಸಬೇಡಿ’ ಎಂದು (ಕಾಂಗ್ರೆಸ್‌ನ) ಬೇಡಿಕೆಯಲ್ಲಿ ಸೇರಿಸಲಾಗಿದೆ. ಇದರರ್ಥ ನೆಹರು, ಇಂದಿರಾ ಗಾಂಧಿ, ರಾಜೀವ ಗಾಂಧಿ ಬಗ್ಗೆ ಮಾತನಾಡಬಾರದು ಎಂದೇ? ಅಥವಾ ಮಹಮೂದ್ ಘಜ್ನಿ, ಮೊಹಮ್ಮದ್ ಘೋರಿ, ಔರಂಗಜೇಬ್‌ನಂತಹ ಕ್ರೂರ ಆಡಳಿತಗಾರರನ್ನು ಅವಮಾನಿಸಬಾರದು ಎಂದೇ? ಎಂದು ಕೇಳಿದ್ದಾರೆ.

ಸಂಪಾದಕೀಯ ನಿಲುವು

ಅಖಂಡ ಭಾರತದ ಬದಲು ಭಾರತವನ್ನು ಒಡೆಯಲು ಕಾರ್ಯನಿರ್ವಹಿಸುತ್ತಿರುವ ಜಿಹಾದಿ ಮತ್ತು ಖಲಿಸ್ತಾನಿ ಶಕ್ತಿಗಳ ಕಾರ್ಯಕ್ರಮಗಳಿಂದ ಕಾಂಗ್ರೆಸ್‌ಗೆ ಎಂದಿಗೂ ಅಜೀರ್ಣವಾಗುವುದಿಲ್ಲ. ‘ಬ್ರೇಕಿಂಗ್ ಇಂಡಿಯಾ ಫೋರ್ಸಸ್’, ಅಂದರೆ ಭಾರತವನ್ನು ವಿಭಜಿಸುವವರಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿರುವುದರಿಂದಲೇ ಹೀಗಾಗುತ್ತಿದೆ ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನು?