ಕರ್ಣಾವತಿಯಲ್ಲಿ ಅಪಘಾತಕ್ಕೀಡಾದ ವಿಮಾನದ ‘ಬ್ಲಾಕ್ ಬಾಕ್ಸ್’ನಲ್ಲಿ ತಾಂತ್ರಿಕ ದೋಷ

ಅಮೆರಿಕಾಗೆ ಕಳುಹಿಸಲು ಸಿದ್ಧತೆ

ಕರ್ಣಾವತಿ (ಗುಜರಾತ್) – ಇಲ್ಲಿ ಏರ್ ಇಂಡಿಯಾದ ‘ಬೋಯಿಂಗ್ 878 ಡ್ರೀಮ್‌ಲೈನರ್’ ವಿಮಾನ ಅಪಘಾತಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ವಿಮಾನದ ‘ಬ್ಲಾಕ್ ಬಾಕ್ಸ್’ ಪತ್ತೆಯಾಗಿದ್ದರೂ, ಅದಕ್ಕೆ ಹಾನಿಯಾಗಿರುವುದರಿಂದ ಅದರಲ್ಲಿನ ಮಾಹಿತಿ ಪಡೆಯಲು ತೊಂದರೆಗಳು ಎದುರಾಗಿವೆ. ಇದರಿಂದ ಅಪಘಾತ ಹೇಗೆ ಸಂಭವಿಸಿತು ಎಂಬುದು ಸ್ಪಷ್ಟವಾಗಲು ಅಡೆತಡೆಗಳು ಉಂಟಾಗಿವೆ. ಆದ್ದರಿಂದ ಈಗ ಈ ಬ್ಲಾಕ್ ಬಾಕ್ಸ್‌ನಿಂದ ಮಾಹಿತಿ ಪಡೆಯಲು ಅದನ್ನು ಅಮೆರಿಕಾಗೆ ಕಳುಹಿಸಲಾಗುವುದು. ವಿಮಾನ ಅಪಘಾತದ ಕಾರಣಗಳನ್ನು ಕಂಡುಹಿಡಿಯಲು ‘ಬ್ಲಾಕ್ ಬಾಕ್ಸ್’ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಬಾಕ್ಸ್‌ನಲ್ಲಿ ವಿಮಾನದಲ್ಲಿನ ಎಲ್ಲಾ ಘಟನೆಗಳು ದಾಖಲಾಗಿರುತ್ತವೆ.